ವಂಚನೆಗೆ ಒಳಗಾದಾಗ ಯಾವ ರಾಶಿ ಹೇಗೆ ಪ್ರತಿಕ್ರಿಯಿಸುತ್ತೆ?

ನಂಬಿದವರಿಂದ ಮೋಸ ಹೋಗುವುದು, ದ್ರೋಹಕ್ಕೆ ಒಳಗಾಗುವುದು ತುಂಬಾ ಕೆಟ್ಟ ಅನುಭವ. ಹೀಗಾದಾಗ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಬಹುದು. ರಾಶಿಗನುಗುಣವಾಗಿ ಯಾರು ಹೇಗೆ ಪ್ರತಿಕ್ರಿಯಿಸುತ್ತಾರೆ ನೋಡೋಣ. 

Here is how all zodiac signs respond to betrayal skr

ದ್ರೋಹಕ್ಕೆ ಒಳಗಾಗುವುದು(betrayal) ಒಬ್ಬ ವ್ಯಕ್ತಿಯು ಹೊಂದಬಹುದಾದ ಕೆಟ್ಟ ಅನುಭವಗಳಲ್ಲಿ ಒಂದಾಗಿದೆ. ಕೆಲವೊಮ್ಮೆ ವ್ಯಾಪಾರ ಮಾಡುವಾಗ ವ್ಯಾಪಾರಿಗಳಿಂದ ಮೋಸ ಹೋಗಬಹುದು. ಮನೆಗೆ ಬಂದ ನಂತರ ಕೈ ಕೈ ಹಿಸುಕಿಕೊಳ್ಳುವಂತಾಗುತ್ತದೆ. ಇನ್ನೂ ಹಲವು ಬಾರಿ ಹತ್ತಿರದವರು, ನಂಬಿದವರೇ ಮೋಸ ಎಸಗುತ್ತಾರೆ. ಈ ದ್ರೋಹ ಹೊಂದಿದ ಭಾವನೆ ಮಾತ್ರ ಅತಿ ದೊಡ್ಡ ಪೆಟ್ಟು ನೀಡುತ್ತದೆ. ಏಕೆಂದರೆ ನಮ್ಮ ಬದುಕು ನಡೆಯುವುದೇ ನಂಬಿಕೆಯ ತಳಹದಿಯ ಮೇಲೆ. ಸುಳ್ಳುಗಳು, ತಪ್ಪು ಸಂವಹನಗಳು, ಹಣಕಾಸಿನ ವಂಚನೆ, ಸಂಬಂಧದಲ್ಲಿ ಮೋಸ ಇಂಥವು ವ್ಯಕ್ತಿಯ ಬದುಕನ್ನೇ ಬದಲಿಸಬಲ್ಲವು. ಯಾವ ರಾಶಿಚಕ್ರಗಳು(zodiac signs) ದ್ರೋಹಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಇಲ್ಲಿ ನೋಡೋಣ.

ಮೇಷ (ಮಾರ್ಚ್ 21- ಏಪ್ರಿಲ್ 19)
ಮೇಷ ರಾಶಿ(Aries)ಯು ಪ್ರಾಮಾಣಿಕ ಮತ್ತು ಅತ್ಯಂತ ಭಾವೋದ್ರಿಕ್ತ ಚಿಹ್ನೆ. ಅವರು ಪ್ರಾಮಾಣಿಕತೆ ಮತ್ತು ಗುಣಮಟ್ಟದ ಪರಿಸರವನ್ನು ಬಯಸುತ್ತಾರೆ. ಅವರು ಭಾವನೆಗಳನ್ನು ಗೌರವಿಸುತ್ತಾರೆ. ಹೀಗಾಗಿ ಅವರ ನಂಬಿಕೆಯನ್ನು ಒಮ್ಮೆ ಮುರಿದರೆ, ಅದನ್ನು ಮರಳಿ ಪಡೆಯುವುದು ಸುಲಭವಲ್ಲ. ಆದಾಗ್ಯೂ, ತಪ್ಪೊಪ್ಪಿಗೆಯ ಸಮಯದಲ್ಲಿ ಸಂಪೂರ್ಣ ಸ್ಫಟಿಕ ಪ್ರಾಮಾಣಿಕತೆ ಇದ್ದರೆ ಮೇಷ ರಾಶಿಯು ಕ್ಷಮಿಸುವ ಒಂದು ಸಣ್ಣ ಅವಕಾಶವಿದೆ.

ವೃಷಭ ರಾಶಿ (ಏಪ್ರಿಲ್ 20- ಮೇ 20)
ಎತ್ತಿನ ಚಿಹ್ನೆಯಾಗಿರುವುದರಿಂದ, ವೃಷಭ ರಾಶಿ(Taurus)ಯವರು ದ್ರೋಹ ಎಸಗಿದವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಇವರು ಅತ್ಯಂತ ಮೊಂಡುತನದವರಾಗಿದ್ದಾರೆ. ದ್ರೋಹದ ವಿಷಯಕ್ಕೆ ಬಂದಾಗ ಅವರು ಮೇಷ ರಾಶಿಗೆ ನಿಖರವಾಗಿ ವಿರುದ್ಧವಾಗಿ ವರ್ತಿಸುತ್ತಾರೆ. ಅಪನಂಬಿಕೆ ಮತ್ತು ವಂಚನೆ ಎಂದರೆ ಭಯಭೀತರಾಗುತ್ತಾರೆ. ದ್ರೋಹಕ್ಕೊಳಗಾದಾಗ ಸಂಕಟ, ಅವಮಾನ ಮತ್ತು ನಿರಾಶೆಯಲ್ಲಿ ಮುಳುಗುತ್ತಾರೆ. 

ಮಿಥುನ (ಮೇ 21- ಜೂನ್ 20)
ಮಿಥುನದವರು (Gemini) ತಮ್ಮ ವ್ಯಕ್ತಿತ್ವದಲ್ಲಿ ವಿಪರೀತದ ತುದಿಗಳನ್ನು ಹೊಂದಿದ್ದಾರೆ. ಮತ್ತೊಬ್ಬರ ಕ್ರಿಯೆಯನ್ನು ದ್ರೋಹವೆಂದು ಭಾವಿಸಿದರೆ ಅವರು ತಾತ್ಕಾಲಿಕವಾಗಿ ಕ್ಷಮೆ ಇಲ್ಲದಂತೆ ವರ್ತಿಸುತ್ತಾರೆ. ಕೆಲ ಸಮಯವಾದ ಮೇಲೆ ಕೊಂಚ ಮನಸ್ಸು ಹತೋಟಿಗೆ ಬಂದ ಮೇಲೆ ತೀರಾ ಹತ್ತಿರದವರಾದರೆ ಅವರ ಕ್ರಿಯೆ ಕುರಿತ ವಿವರಣೆ ಕೇಳಲು ಬಯಸಬಹುದು. ಸಂಬಂಧದ ಸ್ವರೂಪವನ್ನು ಅವಲಂಬಿಸಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೋ ಬೇಡವೋ ನಿರ್ಧರಿಸುತ್ತಾರೆ.

ಕರ್ಕಾಟಕ (ಜೂನ್ 21- ಜುಲೈ 22)
ಕರ್ಕಾಟಕ(Cancer) ರಾಶಿಯನ್ನುನ್ನು ಹೆಚ್ಚು ಸೂಕ್ಷ್ಮ ಮತ್ತು ಭಾವನಾತ್ಮಕ ಎಂದು ಕರೆಯಲಾಗುತ್ತದೆ. ಮೋಸಕ್ಕೊಳಗಾದಾಗ ಅವರು ಬಹಳ ನೋವು ಮತ್ತು ದುಃಖವನ್ನು ಅನುಭವಿಸುತ್ತಾರೆ. ಮೋಸ ಮಾಡಿದವರೂ ನಿಜವಾಗಿಯೂ ಪಶ್ಚಾತ್ತಾಪ ಅನುಭವಿಸಿ ಕ್ಷಮೆ ಕೋರಿದರೆ ಕೆಲವೊಮ್ಮೆ ಕ್ಷಮಿಸಬಹುದು. ಆದರೆ, ಮನಸ್ಸಿನಲ್ಲಿ ಆ ನೋವು ಸದಾ ಉಳಿದಿರುತ್ತದೆ. 

Jyeshtha Purnima 2022: ಚಂದ್ರದೋಷದಿಂದ ದೂರಾಗಲು, ಲಕ್ಷ್ಮೀ ಕಟಾಕ್ಷಕ್ಕಾಗಿ ಹೀಗೆ ಮಾಡಿ

ಸಿಂಹ (ಜುಲೈ 23- ಆಗಸ್ಟ್ 22)
ಆತ್ಮವಿಶ್ವಾಸದ ಸಂಕೇತವಾಗಿರುವುದರಿಂದ, ಸಿಂಹ(Leo)ವು ದ್ರೋಹಗಳನ್ನು ಬಹಳ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತದೆ. ಒಮ್ಮೆ ಅವರ ನಂಬಿಕೆ ಮುರಿದುಬಿದ್ದರೆ, ಆ ವ್ಯಕ್ತಿಯನ್ನು ತಮ್ಮ ಜೀವನದಿಂದ ಶಾಶ್ವತವಾಗಿ ತ್ಯಜಿಸಲು ಅವರು ನಿರ್ಧರಿಸುತ್ತಾರೆ. ತಪ್ಪಾದ ವ್ಯಕ್ತಿಯೊಂದಿಗೆ ವ್ಯವಹರಿಸಿದ್ದಕ್ಕಾಗಿ ತಮ್ಮ ಮೇಲೆಯೇ ಕೋಪ ಬರುತ್ತದೆ ಮತ್ತು ಮುಂದೆ ಸಂಬಂಧಗಳಲ್ಲಿ ಹೆಚ್ಚು ಎಚ್ಚರವಾಗಿರುತ್ತಾರೆ. 

ಕನ್ಯಾ (ಆಗಸ್ಟ್ 23- ಸೆಪ್ಟೆಂಬರ್ 22)
ಕನ್ಯಾ ರಾಶಿ(Virgo)ಯವರು ಎಲ್ಲಾ ವಿಭಿನ್ನ ಸಾಧ್ಯತೆಗಳನ್ನು ನೋಡಲು ಮತ್ತು ಸ್ವಾಗತಿಸಲು ಮುಕ್ತ ಮನಸ್ಥಿತಿಯನ್ನು ಹೊಂದಿರುವ ಸ್ಥಿರತೆಯೊಂದಿಗೆ ಕಾರ್ಯ ನಿರ್ವಹಿಸುತ್ತಾರೆ. ಆದಾಗ್ಯೂ, ಅವರು ದ್ರೋಹಕ್ಕೊಳಗಾದಾಗ ಆಘಾತ ಅನುಭವಿಸಬಹುದು.  ಇವರು ಯಾವುದೇ ಸಂಬಂಧಕ್ಕೆ ಜಿಗಿಯುವ ಮೊದಲು ಹೆಚ್ಚು ಜಾಗರೂಕರಾಗಿರುತ್ತಾರೆ ಮತ್ತು ಲೆಕ್ಕಾಚಾರ ಮಾಡುತ್ತಾರೆ. ಆಳವಾದ ವಿಶ್ಲೇಷಣೆಯಿಲ್ಲದೆ ಅವರು ಸುಲಭವಾಗಿ ಜನರನ್ನು ಒಳಗೆ ಬಿಡುವುದಿಲ್ಲ, ಆದ್ದರಿಂದ, ದ್ರೋಹ ಮಾಡಿದಾಗ, ಕನ್ಯಾ ರಾಶಿಯವರು ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಾರೆ. ಮತ್ತು ಮುಂದೆಂದೂ ದ್ರೋಹಿಯನ್ನು ಜೀವನದಲ್ಲಿ ಬಿಟ್ಟುಕೊಳ್ಳುವುದಿಲ್ಲ. 

ತುಲಾ (ಸೆಪ್ಟೆಂಬರ್ 23- ಅಕ್ಟೋಬರ್ 22)
ಅಪನಂಬಿಕೆ ಮತ್ತು ವಿಶ್ವಾಸಘಾತುಕತನ ಇವರಿಗೆ ದೊಡ್ಡ ಹೊಡೆತವಾಗಿರುತ್ತದೆ. ಆದರೂ ತುಲಾ(Libra) ರಾಶಿಯವರು ಸಾಮಾನ್ಯವಾಗಿ ಹೆಚ್ಚು ಕ್ಷಮಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಏಕೆಂದರೆ ಅವರು ನಕಾರಾತ್ಮಕತೆಯನ್ನು ತಮ್ಮ ಜೀವನದಲ್ಲಿ ಹಿಡಿದಿಡಲು ಬಿಡುವುದಿಲ್ಲ. ಹಾಗಿದ್ದೂ, ತಮ್ಮ ಭಾವನೆಗಳನ್ನು ನೋಯಿಸಿದವರಿಂದ ದೂರವಿರಲು ಬಯಸುತ್ತಾರೆ. ಕೆಲ ವರ್ಷದ ನಂತರ ಅವರನ್ನು ಕ್ಷಮಿಸುತ್ತಾರೆ. 

ಈ ನಾಲ್ಕು ರಾಶಿಗಳನ್ನು ವಂಚಿಸೋದು ಬಹಳ ಸುಲಭ!

ವೃಶ್ಚಿಕ (ಅಕ್ಟೋಬರ್ 23- ನವೆಂಬರ್ 21)
ವೃಶ್ಚಿಕ ರಾಶಿ(Scorpio)ಯವರು ಒಮ್ಮೆ ಹೃದಯಾಘಾತ ಮತ್ತು ದ್ರೋಹಕ್ಕೆ ಒಳಗಾಗಿದ್ದರೆ, ದೀರ್ಘಕಾಲದವರೆಗೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತಾರೆ. ಒಮ್ಮೆ ನೀವು ವೃಶ್ಚಿಕ ರಾಶಿಯವರಿಗೆ ದ್ರೋಹ ಮಾಡಿದರೆ, ಅವರ ಜೀವನದಲ್ಲಿ ಶಾಶ್ವತವಾಗಿ ನಿಮಗೆ ಅಸ್ತಿತ್ವವಿಲ್ಲ. ಹಾಗೊಂದು ವೇಳೆ ಅಸ್ತಿತ್ವವಿದ್ದರೆ, ಪ್ರತೀಕಾರ ಎದುರಿಸಲು ಸಿದ್ಧರಾಗಿರಿ. 

ಧನು ರಾಶಿ (ನವೆಂಬರ್ 22- ಡಿಸೆಂಬರ್ 21)
ಹೃದಯದಲ್ಲಿ ಆಶಾವಾದಿಯಾಗಿರುವುದರಿಂದ, ಧನು(Sagittarius) ರಾಶಿಯವರು ಜೀವನದಲ್ಲಿ ದ್ರೋಹವನ್ನು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಕ್ಷಮಿಸಿ ಮುಂದುವರೆಯಲು ಮನಸ್ಸು ಹೇಳಿದರೂ ದ್ರೋಹ ಮಾಡಿದವರ ಮೇಲಿನ ಕೋಪ ಉಳಿದಿರುತ್ತದೆ. ಅವರು ತಮಗೇನೂ ಆಗೇ ಇಲ್ಲವೆಂಬಂತೆ ವರ್ತಿಸುತ್ತಲೇ, ವಂಚಕರನ್ನು ದೂರವಿಡುತ್ತಾರೆ. 

ಮಕರ(ಡಿಸೆಂಬರ್ 22- ಜನವರಿ 19)
ಮಕರ ರಾಶಿ(Capricorn)ಯವರು ಅತ್ಯಂತ ಶಿಸ್ತು ಮತ್ತು ಏಕರೂಪದ ಸ್ವಭಾವದವರು. ಸ್ವಯಂ ನಿಯಂತ್ರಣವನ್ನು ಅಭ್ಯಾಸ ಮಾಡುವ ಬಗ್ಗೆ ಅವರಿಗೆ ತಿಳಿದಿರುತ್ತದೆ. ಆದ್ದರಿಂದ, ಯಾರಾದರೂ ತಮ್ಮ ನಂಬಿಕೆಯನ್ನು ಮುರಿದಾಗ ಅವರು ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ, ಹೊಸ ಯೋಜನೆಗಳನ್ನು ತೆಗೆದುಕೊಳ್ಳುತ್ತಾರೆ. ದ್ರೋಹಕ್ಕೆ ನೇರ ಉತ್ತರ ನೀಡದೆ ಬೆಳೆದು ತೋರಿಸುವ ಮನಸ್ಥಿತಿ ಇವರದು. 

ಕುಂಭ (ಜನವರಿ 20- ಫೆಬ್ರುವರಿ 18)
ಕುಂಭ ರಾಶಿ(Aquarius)ಯ ಮನಸ್ಸು ಆಗಾಗ ಬದಲಾಗುತ್ತಿರುತ್ತದೆ. ಸ್ಥಿರವಾಗಿರುವುದಿಲ್ಲ. ತಮ್ಮನ್ನು ನೋಯಿಸಿದವರನ್ನು ಒಮ್ಮೆ ಕ್ಷಮಿಸಿದರೆ, ಮತ್ತೊಮ್ಮೆ ಅದನ್ನೇ ನೆನಸಿಕೊಂಡು ಅವರ ಬಗ್ಗೆ ಕೋಪಗೊಳ್ಳುತ್ತಾರೆ. ಅವರ ಮೂಡಿತನ ಹೆಚ್ಚುತ್ತದೆ. 

ಜ್ಯೇಷ್ಠ ಮಾಸದ ಸೂಪರ್ ಮೂನ್; ಈ ಖಗೋಳ ಕೌತುಕ ನೋಡಿ ಸಂತೋಷಪಡಿ

ಮೀನ (ಫೆಬ್ರವರಿ 19-ಮಾರ್ಚ್ 20)
ಗುಣಲಕ್ಷಣಗಳಲ್ಲಿ ಅತ್ಯಂತ ಸಹಾನುಭೂತಿ ಮತ್ತು ಮುಕ್ತ ಮನಸ್ಸಿನವರಲ್ಲಿ ಒಬ್ಬರು ಮೀನ ರಾಶಿಯವರು(Pisces). ದ್ರೋಹಕ್ಕೊಳಗಾದಾಗ ಬಹಳ ನೋಯುತ್ತಾರೆ. ಆದರೆ ಮೀನವು ಹಿಂದಿನದನ್ನು ಮರೆತು ಪ್ರಬುದ್ಧವಾಗಿ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತದೆ. ಅವರು ಸಾಮಾನ್ಯವಾಗಿ ತಮ್ಮ ಭಾವನೆಗಳಿಗಿಂತ ಇತರರ ಭಾವನೆಗಳನ್ನು ಗೌರವಿಸುತ್ತಾರೆ. ಅವರು ತಮ್ಮ ಭಾವನೆಗಳಿಂದ ಹೊರಬರುತ್ತಾರೆ ಮತ್ತು ವ್ಯಕ್ತಿಯನ್ನು ತಮ್ಮ ಜೀವನಕ್ಕೆ ಮರಳಿ ಸ್ವಾಗತಿಸುತ್ತಾರೆ. 

Latest Videos
Follow Us:
Download App:
  • android
  • ios