Asianet Suvarna News Asianet Suvarna News

ಈ ನಾಲ್ಕು ರಾಶಿಗಳನ್ನು ವಂಚಿಸೋದು ಬಹಳ ಸುಲಭ!

ಕೆಲವರನ್ನು ಬೇಗ ಮಂಗ ಮಾಡಬಹುದು. ಅದಕ್ಕೆ ಅವರ ಮುಗ್ಧತೆಯೂ ಕಾರಣವಿರಬಹುದು, ದಡ್ಡತನವೂ ಕಾರಣವಿರಬಹುದು ಅಥವಾ ಪ್ರಾಮಾಣಿಕತೆ, ಎಲ್ಲರನ್ನೂ ನಂಬುವ ಒಳ್ಳೆಯ ಸ್ವಭಾವವೇ ಕಾರಣವಿರಬಹುದು. ಯಾವೆಲ್ಲ ರಾಶಿಗಳ ಜನರನ್ನು ಮೂರ್ಖರಾಗಿಸುವುದು ಸುಲಭ ನೋಡೋಣ. 

4 zodiac signs who can easily be fooled by others skr
Author
Bangalore, First Published Jun 13, 2022, 3:24 PM IST

ಇಂದು ನಮ್ಮ ಜಗತ್ತಿನಲ್ಲಿ, ಬುದ್ಧಿವಂತರು, ಸ್ಮಾರ್ಟ್ ಮತ್ತು ಕುಟಿಲ ಮತಿಗಳನ್ನು ಆಸ್ತಿಗಳಾಗಿ ನೋಡಲಾಗುತ್ತದೆ. ಏಕೆಂದರೆ ಈ ಗುಣಗಳು ಬದುಕಲು ಸಹಾಯ ಮಾಡುತ್ತವೆ. ಆದರೆ, ಕೆಲವರು ಅವರು ದಡ್ಡರಲ್ಲ. ಆದರೆ, ಎಲ್ಲರನ್ನೂ ನಂಬುವ ಶುದ್ಧ ಮನಸ್ಸಿನವರು. ಜಗತ್ತನ್ನು ಒಳ್ಳೆಯ ಕನ್ನಡಕದಲ್ಲಿ ನೋಡುವ ಗುಣದವರು. ಹೀಗಾಗಿ, ಅವರಿಗೆ ಮತ್ತೊಬ್ಬರ ಸುಳ್ಳು(lie), ವಂಚನೆ, ವ್ಯಂಗ್ಯಗಳು ಅಷ್ಟು ಬೇಗ ತಿಳಿಯುವುದಿಲ್ಲ. ಅದಕ್ಕೇ ಅವರು ಬೇಗ ಮೋಸ(deceive) ಹೋಗುತ್ತಾರೆ. ಸುಲಭವಾಗಿ ಮೂರ್ಖರಾಗುತ್ತಾರೆ. ಅವರ ಒಳ್ಳೆಯತನ, ಮುಗ್ಧತೆಯ ಲಾಭವನ್ನು ಬೇರೆಯವರು ಪಡೆಯುತ್ತಾರೆ. ಇದು ಅವರನ್ನು ನೋವು, ದುಃಖಕ್ಕೆ ತಳ್ಳುತ್ತದೆ. 
ಅಂಥ ನಾಲ್ಕು ರಾಶಿ ಚಕ್ರಗಳು(Zodiac signs) ಯಾವುವು ನೋಡೋಣ. 

ಹೌದು, ಈ ನಾಲ್ಕು ರಾಶಿಗಳು ಬೇಗ ಮೋಸ ಹೋಗುತ್ತವೆ. ಅವರು ಪರಿಚಿತರನ್ನೆಲ್ಲ ಪ್ರೀತಿಯಿಂದ ನೋಡುವುದೇ ಅವರ ತಪ್ಪಾಗುತ್ತದೆ. 

ಕುಂಭ ರಾಶಿ(Aquarius)
ಈ ರಾಶಿಚಕ್ರದ ಚಿಹ್ನೆಯು ಸುಲಭವಾಗಿ ಮೋಸ ಹೋಗುತ್ತಾರೆ. ತಮ್ಮೊಂದಿಗಿರುವವರ ಸುಳ್ಳುಗಳನ್ನು ಕೊಂಚವೂ ಅನುಮಾನಿಸದೆ ನಂಬಿ ಮಂಗವಾಗುತ್ತಾರೆ. ಅವರು ಯಾವುದೇ ವಿಷಯವನ್ನು ಕ್ರಾಸ್ ಚೆಕ್ ಮಾಡುವುದಿಲ್ಲ. ಹಾಗೆ ಒಬ್ಬರ ಮೇಲೆ ವ್ರತಾ ಅನುಮಾನ(doubt) ಪಡುವುದು ಸರಿಯಲ್ಲ ಎಂದು ಭಾವಿಸುತ್ತಾರೆ. ಅವರಲ್ಲಿ ಪ್ರಾಮಾಣಿಕತೆ ಜೊತೆಗೆ ಮುಗ್ಧತೆ(innocence)ಯೂ ಧಾರಾಳವಾಗಿರುತ್ತದೆ. ಮತ್ತೊಬ್ಬರ ಕಷ್ಟ ಕೇಳಿದಾಗ ಬೇಗ ಅಯ್ಯೋ ಎನಿಸುತ್ತದೆ. ಹೀಗಾಗಿ, ಜೊತೆಗಿರುವವರು ಇವರ ಸ್ವಭಾವದ ಲಾಭ ಪಡೆಯುತ್ತಾರೆ. 

ಯಾವಾಗಲೂ ಕಾಮಿಡಿ ಫಿಲಂಗಳನ್ನು ನೋಡುತ್ತೀರಾ? ಅದಕ್ಕೂ ನಿಮ್ಮ ಜನ್ಮರಾಶಿಗೂ ಸಂಬಂಧವಿದೆ!

ವೃಶ್ಚಿಕ ರಾಶಿ(Scorpio)
ಈ ರಾಶಿಚಕ್ರ ಚಿಹ್ನೆಯು ಅವರು ಬಿಂಬಿಸಿಕೊಳ್ಳುವುದು ಬಲು ಬುದ್ದಿವಂತರ ಹಾಗೆ. ಆದರೆ ಇವರು ಮೈಂಡ್ ಗೇಮ್‌ಗಳನ್ನು ಆಡುವಲ್ಲಿ ಮಂದವಾಗಿರುತ್ತಾರೆ. ಅವರು ಸುಲಭವಾಗಿ ಜನರಿಂದ ಮೋಸ ಹೋಗುತ್ತಾರೆ. ಅವರು ಸಾಮಾನ್ಯವಾಗಿ ಜನರನ್ನು ನಂಬುವುದಿಲ್ಲ. ಆದರೆ ಅವರು ನಂಬಿದ ಕೆಲವರೇ ಅವರನ್ನು ಹೆಚ್ಚು ಮೂರ್ಖ(fool)ರನ್ನಾಗಿ ಮಾಡುತ್ತಾರೆ. ಇದು ಅವರು ತಮ್ಮ ನಿರ್ಧಾರಗಳಿಗೆ ವಿಷಾದಿಸುವಂತೆ ಮಾಡುತ್ತದೆ. ಅದರಿಂದ ನಂಬಿಕೆಯ ಸಮಸ್ಯೆ ಉದ್ಭವಿಸುತ್ತದೆ. ಕಡೆ ಕಡೆಗೆ ಇವರು ತಮ್ಮನ್ನು ಯಾರು ಬಳಸಿಕೊಂಡರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದ ಮಟ್ಟಕ್ಕೆ ಹೋಗುತ್ತಾರೆ. 

ಕರ್ಕಾಟಕ(Cancer)
ಅವರು ತಮ್ಮ ಸ್ನೇಹಿತರು ಅಥವಾ ಶತ್ರುಗಳು ಎಲ್ಲರ ಜೊತೆ ಸುಲಭವಾಗಿ ಮೂರ್ಖರಾಗುತ್ತಾರೆ. ಈ ಸೂಕ್ಷ್ಮ ಮತ್ತು ಮೃದು ಹೃದಯದ ಆತ್ಮಗಳನ್ನು ಮೋಸ ಮಾಡುವುದು ತುಂಬಾ ಸುಲಭ. ಅವರು ದಡ್ಡರು ಅಥವಾ ಅವಿವೇಕಿಗಳಲ್ಲ, ಅವರು ನಿಮ್ಮನ್ನು ನಂಬುವ ತೆರೆದ ಹೃದಯವನ್ನು ಹೊಂದಿದ್ದಾರೆ ಅಷ್ಟೇ. ಅವರು ಯಾವಾಗಲೂ ಗುಲಾಬಿ ಗಾಜಿನಿಂದ ಜಗತ್ತನ್ನು ನೋಡುತ್ತಾರೆ, ಅವರ ನೋಟದಲ್ಲಿ ಯಾವುದೇ ದುಷ್ಟತನವಿರುವುದಿಲ್ಲ. ನಿಜ ಹೇಳಬೇಕೆಂದರೆ ಜಗತ್ತಿನಲ್ಲಿ ಇಂಥವರು ಹೆಚ್ಚಿರಬೇಕೆಂದು ಎಲ್ಲರೂ ಬಯಸುತ್ತೇವೆ. ಆದರೆ, ಹೀಗಿದ್ದವರನ್ನು ಬಳಸಿಕೊಳ್ಳುವುದೇ ಜಾಸ್ತಿ. 

Zodiac Sign: ಈ ರಾಶಿಗಳ ಜನ ಸಂಗಾತಿಯನ್ನ ಕೊಂಕಿಲ್ಲದೆ ಪ್ರೀತಿಸ್ತಾರೆ

ಧನು ರಾಶಿ(Sagittarius)
ಈ ಜನರು ಸಂಬಂಧಗಳಲ್ಲಿ ಅದ್ಭುತವಾಗಿದ್ದಾರೆ, ಅದಕ್ಕಾಗಿಯೇ ಅವರನ್ನು ಸಾಮಾನ್ಯವಾಗಿ ಲಘುವಾಗಿ ತೆಗೆದುಕೊಳ್ಳಲಾಗುತ್ತದೆ. ಅವರು ಸ್ನೇಹಿತರು ಮತ್ತು ಕುಟುಂಬದವರಿಂದ ಸುಲಭವಾಗಿ ಮೂರ್ಖರಾಗುತ್ತಾರೆ.  ಈ ರಾಶಿಚಕ್ರದ ಸಮಸ್ಯೆಯೆಂದರೆ ಅವರು ಕೊಳಕು ಅಥವಾ ದುಷ್ಟ ಮನಸ್ಸನ್ನು ಗುರುತಿಸುವುದಿಲ್ಲ. ಕೆಟ್ಟವರಲ್ಲೂ ಒಳ್ಳೆಯದನ್ನು ಹುಡುಕಿ ನೋಡಲು ಬಯಸುತ್ತಾರೆ. ವಂಚಿಸಿದವರಿಗೂ ಅನೇಕ ಅವಕಾಶಗಳನ್ನು ನೀಡುತ್ತಾರೆ. ಅವರು ಯಾವಾಗಲೂ ಮೋಸ ಮತ್ತು ದ್ರೋಹವನ್ನು ಅನುಭವಿಸಲು ಇದು ಒಂದು ಪ್ರಮುಖ ಕಾರಣವಾಗಿದೆ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios