Asianet Suvarna News Asianet Suvarna News

Jyeshtha Purnima 2022: ಚಂದ್ರದೋಷದಿಂದ ದೂರಾಗಲು, ಲಕ್ಷ್ಮೀ ಕಟಾಕ್ಷಕ್ಕಾಗಿ ಹೀಗೆ ಮಾಡಿ

ಹುಣ್ಣಿಮೆಯ ರಾತ್ರಿ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಸಂಪತ್ತು ಮತ್ತು ವೈಭವವನ್ನು ತರುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಚಂದ್ರನನ್ನು ಆರಾಧಿಸುವುದರಿಂದ ಚಂದ್ರದೋಷ ದೂರವಾಗುತ್ತದೆ. ಈ ದಿನ ಪೌರ್ಣಮಿ. ನೀವೇನು ಮಾಡಬೇಕು?

Know Puja Muhurta Yoga and Remedy for Jyeshtha Purnima skr
Author
Bangalore, First Published Jun 14, 2022, 10:39 AM IST

ಸನಾತನ ಸಂಪ್ರದಾಯದಲ್ಲಿ ಹುಣ್ಣಿಮೆ(Full moon)ಯ ದಿನಕ್ಕೆ ವಿಶೇಷ ಮಹತ್ವವಿದೆ. ಪ್ರತಿ ತಿಂಗಳ ಕೊನೆಯ ದಿನದಂದು ಪೂರ್ಣಿಮಾ ಉಪವಾಸ(fast)ವನ್ನು ಮಾಡಲಾಗುತ್ತದೆ. ಈ ಬಾರಿ ಜ್ಯೇಷ್ಠ ಮಾಸದ ಹುಣ್ಣಿಮೆ(Jyeshtha Purnima)ಯು ಜೂನ್ 14ರ ಮಂಗಳವಾರದಂದು ಬೀಳುತ್ತಿದ್ದು, ಈ ದಿನ ವಟ ಪೂರ್ಣಿಮಾ ವ್ರತವೂ ನಡೆಯಲಿದೆ. ವಟ ಪೂರ್ಣಿಮಾ ಉಪವಾಸವನ್ನು ಪತಿಯ ದೀರ್ಘಾಯುಷ್ಯ, ವೈವಾಹಿಕ ಸಂತೋಷ ಮತ್ತು ಮಗನ ಆಯಸ್ಸು ಆರೋಗ್ಯಕ್ಕಾಗಿ ಕೈಗೊಳ್ಳಲಾಗುತ್ತದೆ. 

ಹುಣ್ಣಿಮೆಯಂದು ಸ್ನಾನ ಮಾಡಿ ದಾನ ಮಾಡುವ ವಿಶೇಷ ಸಂಪ್ರದಾಯವಿದೆ. ಜ್ಯೇಷ್ಠ ಪೂರ್ಣಿಮೆಯ ದಿನದಂದು ಸತ್ಯನಾರಾಯಣ ದೇವರ ಕಥೆ ಮತ್ತು ಪೂಜೆಯನ್ನು ಮಾಡಲಾಗುತ್ತದೆ. ಹುಣ್ಣಿಮೆಯ ರಾತ್ರಿ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಸಂಪತ್ತು ಮತ್ತು ವೈಭವ ಹೆಚ್ಚುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಚಂದ್ರ(Moon)ನನ್ನು ಆರಾಧಿಸುವುದರಿಂದ ಚಂದ್ರದೋಷ ದೂರವಾಗುತ್ತದೆ. ಆದ್ದರಿಂದ ಪ್ರತಿ ಹುಣ್ಣಿಮೆಯ ದಿನ ಲಕ್ಷ್ಮಿಕಟಾಕ್ಷ ಪ್ರಾಪ್ತಿಯಾಗಲು ಕ್ರಮಗಳನ್ನು ಕೈಗೊಳ್ಳಬೇಕು. ಜ್ಯೇಷ್ಠ ಪೂರ್ಣಿಮೆಯ ದಿನಾಂಕ, ಶುಭ ಸಮಯ ಮತ್ತು ಚಂದ್ರೋದಯದ ಬಗ್ಗೆ ತಿಳಿಯೋಣ.

ಜ್ಯೇಷ್ಠ ಮಾಸದ ಹುಣ್ಣಿಮೆಯ ತಿಥಿ
ಪಂಚಾಗ ಪ್ರಕಾರ, ಹುಣ್ಣಿಮೆಯ ದಿನಾಂಕವು ಸೋಮವಾರ, ಜೂನ್ 13ರಂದು ರಾತ್ರಿ 9.02 ಕ್ಕೆ ಪ್ರಾರಂಭವಾಗಿ ಜೂನ್ 14, ಮಂಗಳವಾರ ಸಂಜೆ 5.21ಕ್ಕೆ ಕೊನೆಗೊಳ್ಳುತ್ತದೆ. ಯಾವುದೇ ಉಪವಾಸ ಮತ್ತು ಪೂಜೆಗೆ ತಿಥಿಯ ಉದಯ ತಿಥಿಯನ್ನು ಆಚರಿಸಲಾಗುತ್ತದೆ. ಜ್ಯೇಷ್ಠ ಪೂರ್ಣಿಮಾ ವ್ರತವನ್ನು ಜೂನ್ 14ರಂದು ಆಚರಿಸಲಾಗುತ್ತದೆ.

ಜ್ಯೇಷ್ಠ ಮಾಸದ ಸೂಪರ್ ಮೂನ್; ಈ ಖಗೋಳ ಕೌತುಕ ನೋಡಿ ಸಂತೋಷಪಡಿ

ಜ್ಯೇಷ್ಠ ಪೂರ್ಣಿಮಾ ಪೂಜೆ ಮುಹೂರ್ತ 2022
ಈ ಬಾರಿ, ಜ್ಯೇಷ್ಠ ಪೂರ್ಣಿಮೆಯಂದು, ಮಂಗಳಕರ ಯೋಗವು ರೂಪುಗೊಳ್ಳುತ್ತಿದೆ. ಬೆಳಗ್ಗೆ 9.40ರ ನಂತರ ಶುಭ ಯೋಗ ನಡೆಯಲಿದೆ. ಅದೇ ಸಮಯದಲ್ಲಿ, ಬೆಳಿಗ್ಗೆ 11.54ರಿಂದ 12.49ರವರೆಗೆ ಶುಭ ಮುಹೂರ್ತವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪೂರ್ಣಿಮಾ ಉಪವಾಸವನ್ನು ಬೆಳಿಗ್ಗೆಯಿಂದ ಕೈಗೊಂಡು ರಾತ್ರಿ ಚಂದ್ರನನ್ನು ನೋಡಿ ಪೂಜಿಸಿ ನಂತರ ಆಹಾರ ಸೇವನೆ ಮಾಡಲಾಗುತ್ತದೆ.

ಈ ನಾಲ್ಕು ರಾಶಿಗಳನ್ನು ವಂಚಿಸೋದು ಬಹಳ ಸುಲಭ!

ಜ್ಯೇಷ್ಠ ಪೂರ್ಣಿಮಾ ಪರಿಹಾರ ಕ್ರಮಗಳು(remedies)

  • ಜ್ಯೇಷ್ಠ ಪೂರ್ಣಿಮೆಯ ದಿನದಂದು ಅಶ್ವತ್ಥ ಮರ(Peepal tree)ವನ್ನು ಪೂಜಿಸುವುದು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಮರದಲ್ಲಿ ವಿಷ್ಣು(Lord Vishnu) ಮತ್ತು ಲಕ್ಷ್ಮಿ ದೇವತೆ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಆದ್ದರಿಂದ, ಈ ದಿನ ಸಂಜೆ ಚಂದ್ರದರ್ಶನದ ವೇಳೆ ಈ ಮರದ ಬಳಿ ದೀಪವನ್ನು ಬೆಳಗಿಸಿ.
  • ಜ್ಯೇಷ್ಠ ಪೂರ್ಣಿಮೆಯ ದಿನದಂದು ರಾತ್ರಿಯಲ್ಲಿ ಲಕ್ಷ್ಮಿ ದೇವಿಯ ಪೂಜೆ ಮಾಡಿ. ಲಕ್ಷ್ಮಿ ದೇವಿಗೆ ಪಾಯಸವನ್ನು ಅರ್ಪಿಸಿ ಮತ್ತು ಅದನ್ನು ಪ್ರಸಾದ ರೂಪದಲ್ಲಿ ಹುಡುಗಿಯರಿಗೆ ವಿತರಿಸಿ.  ಈ ದಿನ, ರಾತ್ರಿಯಲ್ಲಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸುವುದರಿಂದ, ವ್ಯಕ್ತಿಯ ಆರ್ಥಿಕ ಪ್ರಗತಿಯ ಮಾರ್ಗಗಳು ತೆರೆದುಕೊಳ್ಳುತ್ತವೆ.
  • ಜ್ಯೇಷ್ಠ ಪೂರ್ಣಿಮೆಯ ದಿನದಂದು ಭಗವಾನ್ ವಿಷ್ಣುವಿನ ಪೂಜೆಯ ಜೊತೆಗೆ, ಚಂದ್ರ ದೇವರ ಪೂಜೆ ಮತ್ತು ದರ್ಶನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ದಿನದಂದು ಶುಭ ಮುಹೂರ್ತದಲ್ಲಿ ಚಂದ್ರನನ್ನು ಪೂಜಿಸುವುದರಿಂದ ಜಾತಕದಲ್ಲಿನ ಚಂದ್ರನ ದೋಷ(Chandra dosh) ನಿವಾರಣೆಯಾಗುತ್ತದೆ ಹಾಗೂ ಜೀವನದ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಜ್ಯೇಷ್ಠ ಪೂರ್ಣಿಮೆಯ ದಿನದಂದು ಚಂದ್ರದೇವನಿಗೆ ಹಾಲಿನೊಂದಿಗೆ ಅರ್ಘ್ಯವನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.


ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios