Astrology prediction in Kannada: ಚಿನ್ನ ಧರಿಸೋದಕ್ಕೂ ಅದೃಷ್ಟ ಬೇಕು ಅನ್ನೋ ಮಾತಿದೆ. ಆದರೆ ಸದ್ಯದ ಮಟ್ಟಿಗೆ ಈ 5 ರಾಶಿಯವರಿಗೆ ಚಿನ್ನ ಧರಿಸಿದ್ರೇ ಅದೃಷ್ಟ ಹರಿದುಬರುತ್ತಂದೆ. ಆ ಐದು ರಾಶಿಗಳು ಯಾವುವು?
ಮೇಷ ರಾಶಿ (Aries)
ಮೇಷ ರಾಶಿ ಭರಣಿ ನಕ್ಷತ್ರದವರು ನಾಯಕತ್ವ ಗುಣದವರು. ಜಗತ್ತನ್ನೇ ಆಳಬೇಕು ಅನ್ನುವಷ್ಟು ಮಹತ್ವಾಕಾಂಕ್ಷೆ ಹೊಂದಿರುವವರು. ಸದಾ ದರ್ಬಾರು ಮಾಡುವ ಇವರ ಕೈಯಲ್ಲಿ ಚಿನ್ನದ ಉಂಗುರವಿದ್ದರೆ (Gold ring) ಬಹಳ ಶುಭವಂತೆ. ಮೇಷ ರಾಶಿಯವರು(Aries) ಚಿನ್ನವನ್ನು ಧರಿಸುವುದು ಅದರಲ್ಲೂ ಚಿನ್ನದ ಉಂಗುರವನ್ನು ಧರಿಸುವುದರಿಂದ ಅವರ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಅದೃಷ್ಟ ಹೆಚ್ಚಾಗುತ್ತದೆ. ಸಂಬಂಧಗಳು ಬಲವಾಗಿರುತ್ತವೆ. ಸಾಲವಿದ್ದರೂ ಕೂಡಾ ಕೆಲವೇ ದಿನಗಳಲ್ಲಿ ಸಾಲದ ಸಮಸ್ಯೆ ಪರಿಹಾರವಾಗುತ್ತದೆ. ಕೈಗೆ ದುಡ್ಡು ಬರುತ್ತದೆ. ಈ ರಾಶಿಯವರು ಅಂದುಕೊಂಡಿರುವ ಸುಖ, ಸಂಪತ್ತು ಬರುತ್ತದೆ. ಹೀಗಾಗಿ ಮೇಷ ರಾಶಿಯವರು ಚಿನ್ನದ ಉಂಗುರ ಧರಿಸಿಕೊಳ್ಳಿ.
ಸಿಂಹ ರಾಶಿ (Leo):
ಸಿಂಹ ರಾಶಿ(Leo) ಯವರದೂ ಆಳುವ ಪ್ರವೃತ್ತಿ. ಸಿಂಹದಂಥಾ ರಾಜಯೋಗದ ಬದುಕು ಇವರದ್ದು ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಈ ರಾಶಿಯವರಿಗೆ ಚಿನ್ನವು ಅದೃಷ್ಟ ತರುತ್ತದೆ. ಈ ರಾಶಿಯವರು ಚಿನ್ನದ ಆಭರಣಗಳನ್ನು ಅದರಲ್ಲೂ ವಿಶೇಷವಾಗಿ ಚಿನ್ನದ ಉಂಗುರಗಳನ್ನು ಧರಿಸಬೇಕು. ಇದು ಅವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತದೆ. ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಹೆಚ್ಚಿನ ಪರಿಶ್ರಮವಿಲ್ಲದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಈ ರಾಶಿಯವರು ಬಂಗಾರವನ್ನು ಧರಿಸಿ ಅದೃಷ್ಟ (good luck) ಪಡೆಯಬಹುದು.
ರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ
ಕನ್ಯಾ ರಾಶಿ (Virgo):
ಕನ್ಯಾ (Virgo) ರಾಶಿಯವರದು ಚಂಚಲ ಚಿತ್ತ. ಅದು ಲಾಭದಾಯಕವಾ, ಇದು ಲಾಭ ಹೆಚ್ಚು ತರುತ್ತದಾ ಅಂತ ಸದಾ ಯೋಚನೆಯಲ್ಲಿರುತ್ತಾರೆ. ಸದಾ ಲಾಭದ ಯೋಚನೆಯಲ್ಲಿರುವ ಈ ರಾಶಿಯವರಿಗೆ ಚಿನ್ನದ ಸರ ಅಥವಾ ಬಳೆ ಧರಿಸುವುದು ತುಂಬಾ ಒಳ್ಳೆಯದು. ಇದರೊಂದಿಗೆ, ಜೀವನದ ಸಮಸ್ಯೆಗಳು ಒಂದೊಂದಾಗಿ ಕೊನೆಗೊಳ್ಳುತ್ತವೆ. ಮತ್ತು ಪ್ರತಿ ಕೆಲಸದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಜೀವನದಲ್ಲಿ ಸಂಪತ್ತು ಮತ್ತು ಐಶ್ವರ್ಯ ಹೆಚ್ಚಾಗುತ್ತದೆ. ನಿಮ್ಮ ರಾಶಿಗೆ ಬುಧ ಅಧಿಪತಿ. ಚಿನ್ನ ಧರಿಸಿದರೆ ಮೈ ಮಾತ್ರವಲ್ಲ ಬದುಕಿಗೂ ಹೊಳಪು ಬರುತ್ತದೆ. ಚಿನ್ನದ ಆಭರಣ (gold Jewellary) ನೀವು ಬಯಸುವ ಅದೃಷ್ಟ ತರುತ್ತದೆ.
ಇದನ್ನೂ ಓದಿ:ಸೂರ್ಯ ಚಂದ್ರರನ್ನೇಕೆ ಭಕ್ಷಿಸುತ್ತಾರೆ ರಾಹು- ಕೇತು?
ಧನು ರಾಶಿ (Sagittarius):
ಧನುಸ್ಸು ರಾಶಿಯವರದ್ದು ಸದಾ ವಿಜಯದತ್ತಲೇ ಚಿತ್ತ. ಸದಾ ಗೆಲ್ಲುವ, ಗೆದ್ದು ಪಡೆಯುವ ಮನಸ್ಥಿತಿ. ಇವರಿಗೆ ಚಿನ್ನ ಅದೃಷ್ಟ ತರುತ್ತದೆ. ಈ ರಾಶಿಯವರಿಗೆ ಗುರು ಅಧಿಪತಿ. ಗುರು (Jupiter)ವಿನ ಸಂಪ್ರೀತಿಯಿಂದ ಚಿನ್ನದ ಧಾತು ಧರಿಸಿದರೆ ಉತ್ತಮ ಫಲಗಳು ಸಿಗುತ್ತವೆ. ನಿಮಗೆ ಧಾತು ಚಿನ್ನವನ್ನು ಧರಿಸುವುದು ತುಂಬಾ ಮಂಗಳಕರ. ಇದು ನಿಮಗೆ ಎಲ್ಲ ಕೆಲಸ ಕಾರ್ಯಗಳಲ್ಲಿ, ಯೋಜನೆಗಳಲ್ಲಿ ಗೆಲುವು ನೀಡುತ್ತದೆ. ಇದರಿಂದಾಗಿ ನೀವು ಸಾಕಷ್ಟು ಸಂಪತ್ತಿನ ಜೊತೆಗೆ ಗೌರವ ಪ್ರಸಿದ್ಧಿಯನ್ನು ಪಡೆಯುವಿರಿ. ಅಪಾರ ಸಂಪತ್ತಿಗೆ ಒಡೆಯರಾಗುವಿರಿ. ಜೀವನದಲ್ಲಿ ಉನ್ನತ ಸ್ಥಾನಮಾನ ಮತ್ತು ಸಂತೋಷದ ಜೀವನವನ್ನು ಪಡೆಯುವಿರಿ. ಜೀವನದಲ್ಲಿ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಸದಾ ಸುಖಿಗಳಾಗಿರುತ್ತೀರಿ. ಹೀಗಾಗಿ ಚಿನ್ನವನ್ನು ಧರಿಸುವುದು ನಿಮಗೆ ಅತ್ಯುತ್ತಮ.
ಇದನ್ನೂ ಓದಿ:Camphor Remedies: ಸಮಸ್ಯೆಗಳಿಗೆ ಪರಿಹಾರ ತರುವ ಕರ್ಪೂರ
ಮೀನ ರಾಶಿ (Pisces):
ಮೀನರಾಶಿಯವರ ಬದುಕಿನಲ್ಲಿ ಜಿಗಿತಗಳು ಹೆಚ್ಚು. ಈ ಕೆಲಸದಲ್ಲಿರುವಾಗ ಆ ಕೆಲಸ ಚೆನ್ನಾಗಿದೆ ಅನಿಸೋದು, ಈ ಕೆಲಸ ಕಷ್ಟ ಅಂತ ಕಾಣೋದು. ಅಲ್ಲಿ ಹೋದಾಗ ಮತ್ತೊಂದು ಕೆಲಸ ಮಾಡಿದರೆ ಜೀವನದಲ್ಲಿ ಏಳಿಗೆ ಅಂತನಿಸೋದು ಇವರಲ್ಲಿ ಸಾಮಾನ್ಯ. ಕೊಂಚ ಚಂಚಲ, ಆದರೆ ಪ್ರಾಮಾಣಿಕರಾಗಿರುವ ನೀವು ಸಾಧ್ಯವಾದಷ್ಟರ ಮಟ್ಟಿಗೆ ಚಿನ್ನ ಧಾರಣೆ ಮಾಡಿ. ಆಗ ನಿಮಗೆ ಶುಭವಾಗತ್ತದೆ. ನಿಮ್ಮ ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳೂ ಪೂರ್ಣಗೊಳ್ಳುತ್ತವೆ. ಕೋಪ ಕಡಿಮೆಯಾಗುತ್ತದೆ. ಆಲೋಚನಾ ಲಹರಿ ಉತ್ತಮವಾಗಿರುತ್ತದೆ. ಕೈಯಲ್ಲಿ ಹಣ ಉಳಿಯುತ್ತದೆ. ಇನ್ನೊಬ್ಬರ ಮುಂದೆ ಕೈಚಾಚಬೇಕಾದ ಸ್ಥಿತಿ ಬರೋದಿಲ್ಲ.
