Asianet Suvarna News Asianet Suvarna News

ಸೂರ್ಯ ಚಂದ್ರರನ್ನೇಕೆ ಭಕ್ಷಿಸುತ್ತಾರೆ ರಾಹು- ಕೇತು?

ಇದೇ ಏಪ್ರಿಲ್ 30ರಂದು ಖಂಡಗ್ರಾಸ ಸೂರ್ಯಗ್ರಹಣವಿದೆ. ಸೂರ್ಯನನ್ನು ರಾಹು ನುಂಗುತ್ತಾನೆ ಎಂಬುದು ನಂಬಿಕೆ. ಈ ನಂಬಿಕೆಯ ಹಿಂದಿನ ಕತೆ ನಿಮಗೆ ಗೊತ್ತಾ?

Why does Rahu and Kethu eat Sun and Moon
Author
Bengaluru, First Published Apr 22, 2022, 1:34 PM IST | Last Updated Apr 22, 2022, 1:34 PM IST

ನಮಗೆ ನಿಮಗೆಲ್ಲಾ ಈಗ ಗೊತ್ತಿರುವಂತೆ, ಸೂರ್ಯ ಚಂದ್ರ ಗ್ರಹಣಗಳು (Sun lunar eclipses)  ಆಗುವುದು ನೆರಳಿನಿಂದಾಗಿ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ (Moon) ಬಂದರೆ ಸೂರ್ಯಗ್ರಹಣ (Solar eclipse). ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದರೆ ಚಂದ್ರಗ್ರಹಣ (Lunar eclipse).

ಆದರೆ ನಮ್ಮ ಪುರಾತನರು ಈ ನೆರಳುಗಳನ್ನೇ ರಾಹು ಕೇತು ಎಂಬ ಎರಡು ಭಯಂಕರ ದೈತ್ಯರಾಗಿ ಕಲ್ಪಿಸಿಕೊಂಡರು. ಅದಕ್ಕೆ ಸಮುದ್ರ ಮಥನದ ಕತೆಯನ್ನು ಜೋಡಿಸಿದರು. ಅದು ಹೀಗೆ:

ಸಮುದ್ರ ಮಂಥನದ ಸಂದರ್ಭದಲ್ಲಿ ಅಮೃತ ಕಲಶ ಹುಟ್ಟಿಕೊಂಡಿತು. ಅದನ್ನು ಪಡೆಯಲು ದೇವತೆಗಳು (Angels) ಮತ್ತು ರಾಕ್ಷಸರ (The demon) ನಡುವೆ ಕಲಹ ಉಂಟಾಯಿತು. ಆಗ ವಿಷ್ಣುವು ಮೋಹಿನಿ ರೂಪದಲ್ಲಿ ಬಂದು ಅಮೃತ ಕಲಶವನ್ನು ತನ್ನ ಕೈಯಲ್ಲಿ ತೆಗೆದುಕೊಂಡ. ನಾನು ಸಮವಾಗಿ ಹಂಚುತ್ತೇನೆ ಎಂದ. ಸರಿ ಎಂದು ದೈತ್ಯರು ಒಂದು ಕಡೆ, ದೇವತೆಗಳು ಒಂದು ಕಡೆ ಸಾಲಾಗಿ ಕುಳಿತುಕೊಂಡರು.

ಮೋಹಿನಿ (Mohini)ಯು ಮೊದಲು ದೇವತೆಗಳಿಗೆ ಅಮೃತವನ್ನು ಕುಡಿಸಲು ಪ್ರಾರಂಭಿಸಿದಳು. ಅಷ್ಟರಲ್ಲಿ ಸ್ವರ್ಭಾನು ಎಂಬ ರಾಕ್ಷಸನು ಮೋಹಿನಿಯನ್ನು ಶಂಕಿಸಿ ದೇವತೆಗಳ ಮಧ್ಯದಲ್ಲಿ ಕುಳಿತನು.

ಮೋಹಿನಿಯು ಅವನಿಗೆ ಅಮೃತಪಾನವನ್ನು ಕೊಟ್ಟಳು. ಆದರೆ ದೇವತೆಗಳ ಸಾಲಿನಲ್ಲಿ ಕುಳಿತಿದ್ದ ಚಂದ್ರ ಮತ್ತು ಸೂರ್ಯ ಅವನನ್ನು ನೋಡಿ ವಿಷ್ಣುವಿಗೆ ಹೇಳಿದರು. ಕೋಪಗೊಂಡ ವಿಷ್ಣುವು ಸುದರ್ಶನ ಚಕ್ರದಿಂದ ರಾಕ್ಷಸನ ಗಂಟಲನ್ನು ಕತ್ತರಿಸಿದನು. ಆದರೆ ಆ ರಾಕ್ಷಸನು ಅಷ್ಟೊತ್ತಿಗಾಗಲೇ ಕೆಲವು ಗುಟುಕು ಅಮೃತವನ್ನು ಕುಡಿದಿದ್ದರಿಂದ ಕತ್ತು ಸೀಳಿದರೂ ಸಾಯಲಿಲ್ಲ. ಆದರೆ ರುಂಡ ಮತ್ತು ಮುಂಡ ಬೇರೆ ಬೇರೆಯಾಗಿ ಬದುಕಿ ಉಳಿದವು. ರಾಕ್ಷಸನ ತಲೆ ಭಾಗವನ್ನು(The Head part)  ರಾಹು ಎಂದೂ ಮುಂಡ ಭಾಗವನ್ನು ಕೇತು ಎಂದೂ ಕರೆಯಲಾಯಿತು. ದೈತ್ಯರಾಗಿ ಹುಟ್ಟಿ ಅಮೃತ ಸೇವಿಸಿ ಚಿರಂಜೀವಿಗಳಾದ್ದರಿಂದ ಇವರು ಅರ್ಧ ರಾಕ್ಷಸರು, ಅರ್ಧ ದೇವತೆಗಳು.

ಯಾಕೆ ಕಾಡುತ್ತಾರೆ?

ಈ ರಾಹು-ಕೇತುಗೆ, ವಿಷ್ಣುವಿಗೆ ತಮ್ಮ ಬಗ್ಗೆ ಚಾಡಿ ಹೇಳಿದರು ಎಂದು ಸದಾ ಕೋಪ (Anger). ಹೀಗಾಗಿ ಸೂರ್ಯ ಚಂದ್ರರನ್ನು ಬೆಂಬಿಡದೇ ನೆರಳಾಗಿ ಕಾಡುತ್ತಾರೆ. ರಾಹು ಚಂದ್ರನ ನೆರಳಾಗಿ ಸೂರ್ಯನನ್ನು ಆವರಿಸುತ್ತಾನೆ. ಕೇತು ಭೂಮಿಯ ನೆರಳಾಗಿ ಚಂದ್ರನನ್ನು ಮರೆ ಮಾಡುತ್ತಾನೆ. ನೆರಳುಗಳನ್ನು ದೈತ್ಯರೆಂದು ಕಲ್ಪಿಸುವ ಈ ಕಲ್ಪನೆಯೇ ವಿಶಿಷ್ಟವಾಗಿದೆ ಅಲ್ವೇ?

ವಿಷ್ಣುವಿನ ದಶಾವತಾರ ಕಲಿಸುವ ಪಾಠಗಳು..
 

ಮನುಷ್ಯನ ಮೇಲೂ ವಕ್ರದೃಷ್ಟಿ

ಇಂತಹ ರಾಹು ಕೇತು ವಕ್ರದೃಷ್ಟಿ ಮನುಷ್ಯದ ಜಾತಕದ ಮೇಲೆ ಬಿದ್ದರೆ, ಆತನಿಗೆ ಒಂದರ ಮೇಲೆ ಒಂದು ಸಂಕಷ್ಟ ತಪ್ಪಿದ್ದಲ್ಲ.

ರಾಹು ಕಾತುವಿನ ದೃಷ್ಟಿಯಿಂದ ವ್ಯಕ್ತಿಯ ಆರ್ಥಿಕ ಮತ್ತು ಸಾಮಾಜಿಕ ಜೊತೆಗೆ ಮಾನಸಿಕವಾಗಿಯೂ ಸಂಕಷ್ಟಕ್ಕೆ ಒಳಗಾಗುತ್ತಾನೆ. ಇದೇ ಕಾರಣಕ್ಕೆ ಜಾತಕದಲ್ಲಿ ಈ ದೋಷ ಕಂಡು ಬಂದಾಕ್ಷಣ ಪರಿಹಾರ ಕ್ರಮ ನಡೆಸಬೇಕು ಎನ್ನಲಾಗುತ್ತದೆ. ಇದೇ ಕಾರಣಕ್ಕೆ ರಾಹು-ಕೇತು ಶಾಂತಿ ಮೊರೆ ಹೋಗುತ್ತಾರೆ. ಇಂತಹ ರಾಹು- ಕೇತುವಿನ ದೃಷ್ಟಿಯಿಂದ ಪಾರಾಗಲು ಈ ರೀತಿ ಮಾಡಿದರೆ ಶುಭ(bon)ವಾಗುತ್ತದೆ ಎನ್ನಲಾಗುತ್ತದೆ.

ರಾಹು ದೃಷ್ಟಿ ಪರಿಹಾರ

ನಿಮ್ಮ ಜಾತಕದಲ್ಲಿ ರಾಹುವಿನ ವಕ್ರ ದೃಷ್ಟಿ ಬಿದ್ದಿದೆಯೆಂದರೆ ನಿಯಮಿತವಾಗಿ ನೀವು ಶಿವಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ಆ ವೇಳೆ ಓಂ ನಮಃಶಿವಾಯ (Om Namah Shivaya) ಮಂತ್ರವನ್ನು ಜಪಿಸಬೇಕು. ದಿನಾ ಶಿವಲಿಂಗದ ಬಳಿ ಕುಳಿತು ಶಿವ ಚಾಲೀಸವನ್ನು ಪಠಿಸಬೇಕು. ಶಿವವನ್ನು ಜಪಿಸುವುದರಿಂದ ರಾಹುವಿನ ಪರಿಣಾಮ ಕಡಿಮೆಯಾಗಲಿದೆ. 
ಜ್ಯೋತಿಷಿಗಳ ಸಲಹೆ ಪಡೆದು ಗೋಮೇಧಿಕ ಹರಳನ್ನು ಧಾರಣೆ ಮಾಡಬೇಕು. ಇದರಿಂದ ರಾಹುವಿನ ಪ್ರಭಾವ ಕ್ಷೀಣಿಸುತ್ತದೆ ಎನ್ನಲಾಗಿದೆ.


ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಮಕ್ಕಳು ತಂದೆಯ ಪಾಲಿಗೆ ಅದೃಷ್ಟ ದೇವತೆಯರು!
 

ಕೇತು ದೃಷ್ಟಿ ಪರಿಹಾರ

ಕೇತುವಿನಿಂದ ಒದಗುವ ಅಶುಭ ಪ್ರಭಾವವನ್ನು ದೂರ ಮಾಡಲು ಕೇತುವಿನ ಬೀಜ ಮಂತ್ರ ಓಂ ಸ್ರಾಂ ಸ್ರೀಂ ಸ್ರೌ ಸಃ ಕೇತವೇ ನಮಃ ಮಂತ್ರವನ್ನು ಜಪಿಸಬೇಕು. ಶಿವಪೂಜೆ ಮಾಡಬೇಕು.
ಕೇತು ವಕ್ರ ದೆಸೆಯಿಂದ ಬಚಾವಾಗಲು ಎಳ್ಳು (Sesame), ಬಾವುಟ, ಕಣ್ಣು ಕಪ್ಪು, ಬೆಚ್ಚಗಿನ ಬಟ್ಟೆ, ನವ ಧಾನ್ಯಗಳು, ಮೂಲಂಗಿ ಇವೇ ಮುಂತಾದುವನ್ನು ದಾನ ಮಾಡಿದರೆ ಶುಭಪ್ರದವಾಗುತ್ತದೆ. ಭಾನುವಾರದಂದು (Sunday) ನಿಮ್ಮ ಸಾಮರ್ಥ್ಯದಂತೆ ದಾನ ಮಾಡುವುದು ಕ್ಷೇಮಕರ.

Rules ಫಾಲೋ ಮಾಡೋದು ಈ 5 ರಾಶಿಯವರ ಜಾಯಮಾನವಲ್ಲ!
 

Latest Videos
Follow Us:
Download App:
  • android
  • ios