Asianet Suvarna News

ಜಾತಕದ ಪ್ರಕಾರ ನಿಮ್ಮ ರಾಶಿಗೆ ರಾಜಯೋಗವಿದೆಯಾ?

ನಿಮ್ಮ ಜನ್ಮ ಕುಂಡಲಿಯ ಒಂಭತ್ತು ಹಾಗೂ ಹತ್ತನೇ ಮನೆಯನ್ನು ಪರಿಶೀಲಿಸಿದರೆ ನಿಮಗೆ ರಾಜಯೋಗ ಇದೆಯಾ ಇಲ್ಲವಾ ಅನ್ನೋದು ತಿಳಿಯುತ್ತದೆ. ಸಾಮಾನ್ಯವಾಗಿ ೯ ನೇ ಮನೆ ಅದೃಷ್ಟಕ್ಕೆ, ದೈವಬಲಕ್ಕೆ ಕಾರಣವಾಗುತ್ತದೆ. ಹತ್ತನೇ ಮನೆ ಸ್ಥಾನಮಾನ, ಔದ್ಯೋಗಿಕತೆ, ಆರ್ಥಿಕತೆಯನ್ನೆಲ್ಲ ಒಳಗೊಂಡಿರುತ್ತದೆ. ಸದ್ಯ ನಾಲ್ಕು ರಾಶಿಯವರಿಗೆ ರಾಜಯೋಗವಿದೆ. ಅದರಲ್ಲಿ ನಿಮ್ಮ ರಾಶಿ ಇದೆಯಾ ಪರಿಶೀಲಿಸಿ.

 

Do you have Rajayoga to your Zodiac sign as per astrology
Author
Bengaluru, First Published May 5, 2020, 5:56 PM IST
  • Facebook
  • Twitter
  • Whatsapp

ನಿಮ್ಮ ಜನ್ಮ ಕುಂಡಲಿಯ ಒಂಭತ್ತು ಹಾಗೂ ಹತ್ತನೇ ಮನೆಯನ್ನು ಪರಿಶೀಲಿಸಿದರೆ ನಿಮಗೆ ರಾಜಯೋಗ ಇದೆಯಾ ಇಲ್ಲವಾ ಅನ್ನೋದು ತಿಳಿಯುತ್ತದೆ. ಸಾಮಾನ್ಯವಾಗಿ ೯ ನೇ ಮನೆ ಅದೃಷ್ಟಕ್ಕೆ, ದೈವಬಲಕ್ಕೆ ಕಾರಣವಾಗುತ್ತದೆ. ಹತ್ತನೇ ಮನೆ ಸ್ಥಾನಮಾನ, ಔದ್ಯೋಗಿಕತೆ, ಆರ್ಥಿಕತೆಯನ್ನೆಲ್ಲ ಒಳಗೊಂಡಿರುತ್ತದೆ. ಸದ್ಯ ನಾಲ್ಕು ರಾಶಿಯವರಿಗೆ ರಾಜಯೋಗವಿದೆ. ಅದರಲ್ಲಿ ನಿಮ್ಮ ರಾಶಿ ಇದೆಯಾ ಪರಿಶೀಲಿಸಿ.

*

ಕಟಕ

ನಿಮಗೆ ಇನ್ನೈದು ವರ್ಷ ಶುಭ ಫಲವಿದೆ. ಜಗತ್ತಿಗೆಲ್ಲ ಆರ್ಥಿಕ ಸಂಕಷ್ಟ ಬಂದಿದ್ದರೂ ನಿಮ್ಮ ಕೈಯಲ್ಲಿ ಹಣ ಖಾಲಿಯಾಗುವುದಿಲ್ಲ. ನಿಮ್ಮ ಕೆಲಸಕ್ಕೆ ಮಹತ್ವ ಸಿಗುತ್ತದೆ. ತುಸು ಸೋಮಾರಿಯಾದ ನೀವು ಈ ಸ್ವಭಾವವನ್ನು ಕೊಂಚ ಬದಲಾಯಿಸಿಕೊಳ್ಳುವುದು ಒಳಿತು. ಏಕೆಂದರೆ ಆಕಾಶದಿಂದ ಚಿನ್ನದ ಮಳೆ ಸುರಿಯುತ್ತಿರುವಾಗ ಕಣ್ಮುಚ್ಚಿ ಕೂರುವ ಪ್ರವೃತ್ತಿ ಈ ಕಾಲದಲ್ಲಿ ಮೂರ್ಖತನದ್ದು ಅಂತ ಅನಿಸಿಕೊಳ್ಳುತ್ತದೆ. ಹೊಸ ಹೊಸ ಅವಕಾಶಗಳು ಬರಬಹುದು. ಅವನ್ನು ನಿರ್ಲಕ್ಷಿಸಬೇಡಿ. ಎಷ್ಟೋ ಸಲ ನಮಗೆ ಉತ್ತಮ ಯೋಗವಿದ್ದರೂ ನಾವದನ್ನು ಸರಿಯಾಗಿ ಬಳಸಿಕೊಳ್ಳೋದಿಲ್ಲ. ಇದರಿಂದ ಎಷ್ಟೇ ಅದೃಷ್ಟ ಇದ್ದರೂ ಸ್ಥಿತಿ ಸುಧಾರಿಸದೇ ಹೋಗಬಹುದು. ಕೆಲವರು ಅದೃಷ್ಟ ಬಂದಾಗ ಅಹಂಕಾರದಿಂದ ಮೆರೆಯಲು ತೊಡಗುತ್ತಾರೆ. ಆದರೆ ಇಂಥ ಗುಣಗಳು ಇವರನ್ನು ಕೆಳ ತಳ್ಳುತ್ತವೆ. ನಿಮ್ಮ ಅದೃಷ್ಟ ಮತ್ತು ದೈವ ಬಲವನ್ನು ಬಳಸಿ ಉತ್ತಮ ಕಾರ್ಯ ಮಾಡಿ. ಒಳ್ಳೆಯ ಫಲ ಸಿಗುತ್ತದೆ.

ಶನಿ ನಿಮ್ಮ ಜಾತಕದ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ?

ಮಿಥುನ

ನೀವು ಇಷ್ಟಪಟ್ಟವರ ಜೊತೆಗೆ ವಿವಾಹಯೋಗವಿದೆ. ಪ್ರೇಮ ಸಾಕಾರಗೊಳ್ಳುವ ಕಾಲವಿದು. ಮನಸ್ಸನ್ನು ನಿಯಂತ್ರಣದಲ್ಲಿಡಬೇಕಾದದ್ದು ಬಹಳ ಮುಖ್ಯ. ನೀವೊಬ್ಬರೇ ಗ್ರೇಟ್, ಉಳಿದವರೆಲ್ಲ ನಾಲಾಯಕ್ಕು ಅನ್ನುವಂಥಾ ಮನೋಭಾವವೇ ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಬಹುದು. ಒಳ್ಳೆಯದನ್ನು ಯೋಚಿಸಿ. ಉತ್ತಮ ಕೆಲಸ ಮಾಡಿ. ಸಾಧ್ಯವಾದಷ್ಟು ಪುಣ್ಯದ ಕೆಲಸಗಳನ್ನು ಮಾಡುತ್ತಾ ಹೋಗಿ. ಸ್ವಾರ್ಥ ಪ್ರತಿಯೊಬ್ಬನಿಗೂ ಇದ್ದೇ ಇರುತ್ತದೆ. ಆದರೆ ಅತಿಯಾಗುವ ಸ್ವಾರ್ಥ ನಿಮ್ಮ ಏಳಿಗೆಗೆ ಕುತ್ತು ತರಬಲ್ಲದು ಎನ್ನುವುದು ನೆನಪಿರಲಿ. ಹಣ, ಅಧಿಕಾರ, ಹೆಸರು ಬಂದಾಗ ಖುಷಿ ಪಡಿ. ಇನ್ನಷ್ಟಕ್ಕೆ ಹಂಬಲಿಸುವುದಕ್ಕಿಂತ ಇದ್ದದ್ದರಲ್ಲಿ ಖುಷಿ ಪಡೋದು ಉತ್ತಮ. ಶಿವ ಸ್ಮರಣೆ ಮಾಡಿ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿ. ಶಿವ ಕೃಪೆ ನಿಮ್ಮ ಮೇಲಿರುತ್ತದೆ.

ನಿಮಗೆ ಗೊತ್ತಿಲ್ಲದ ಪುರಾಣ ಕಥೆ - ನಹುಷ ಹೆಬ್ಬಾವಾದ ಕತೆ ಗೊತ್ತಾ?

ಧನು

ನಿಮಗೀಗ ಉತ್ತಮ ಯೋಗವಿದೆ. ಆದರೆ ಎಷ್ಟೋ ಸಲ ಅತಿಬುದ್ಧಿವಂತಿಕೆಯಿಂದ ಅಹಂಕಾರದಿಂದ ಪಾಲಿಗೆ ಬಂದ ಸಂಪತ್ತನ್ನೂ ಆಚೆ ತಳ್ಳುವ ನಿಮ್ಮ ಪ್ರವೃತ್ತಿಯೇ ನಿಮಗೆ ಮುಳುವಾಗಬಹುದು. ಅಹಂಕಾರಕ್ಕೂ ನೇರವಂತಿಕೆಗೂ ಇರುವ ವ್ಯತ್ಯಾಸವನ್ನು ತಿಳಿಯಿರಿ. ವಿನಯದಿಂದ ಮುಂದುವರಿಯಿರಿ. ಗುರಿ ಇಟ್ಟು ಸಾಧನೆ ಮಾಡಿ. ಯಾಕೆ ಸಾಧನೆ ಮಾಡಬೇಕು, ಆರಾಮವಾಗಿ ಇರೋಣ ಅನ್ನೋದೇನೋ ಒಳ್ಳೆಯದೇ. ಆದರೆ ಅದೇ ಮನಸ್ಥಿತಿ ನಿಮ್ಮ ಬೆಳವಣಿಗೆಗೆ ಅಡ್ಡಿಯಾಗದ ಹಾಗೆ ನೋಡಿಕೊಳ್ಳಿ. ನಿಮ್ಮ ರಾಶಿಯವರಿಗಿರುವ ಪ್ರತಿಭೆ. ಈಗ ಒದಗಿಬಂದಿರುವ ಅದೃಷ್ಟದಿಂದ ಬಹಳ ಎತ್ತರಕ್ಕೆ ಏರುವ ಸಾಧ್ಯತೆ ಇದೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಿ. ವಿವಾಹಯೋಗವಿದೆ. ಹಣ ಕೈಯಲ್ಲಿ ಓಡಾಡಲಿದೆ. ಆದರೆ ಬೇಕಾಬಿಟ್ಟಿ ಖರ್ಚು ಮಾಡಬೇಡಿ. ಉತ್ತಮ ಕಾರ್ಯಗಳಿಗೆ ಹಣ ವಿನಿಯೋಗಿಸಿ.

ಈ ರಾಶಿಯ ಜೋಡಿಗಳು ಲೈಫ್‌ಲಾಂಗ್‌ ರೊಮ್ಯಾಂಟಿಕ್‌ ಆಗಿರ್ತಾರೆ! 

ಮೀನ

ಭವಿಷ್ಯದ ಆತಂಕಗಳಿಗೆ ಭಗವಂತನೇ ತೆರೆ ಎಳೆಯಲಿದ್ದಾನೆ. ಖುಷಿ ಎಷ್ಟು ಕ್ಷಣಿಕವೋ, ನೋವು, ದುಃಖವೂ ಅಷ್ಟೇ ಕ್ಷಣಿಕ ಅನ್ನುವುದು ನಿಮ್ಮ ಮನಸ್ಸಿಗೆ ಬರಲಿದೆ. ಚೇತೋಹಾರಿ ದಿನಗಳು ಮುಂದಿವೆ. ನಿಮ್ಮ ಕಷ್ಟಗಳು ಹಂತ ಹಂತವಾಗಿ ಪರಿಹಾರವಾಗಿ ಸಂತೋಷ, ನೆಮ್ಮದಿ, ಆರ್ಥಿಕ ಚೈತನ್ಯಗಳು ನಿಮ್ಮನ್ನು ಮುನ್ನಡೆಸುತ್ತವೆ. ಆದರೆ ಅತಿಯಾದ ಮುಗ್ಧತೆ, ನೇರತನಗಳಿಂದ ತುಸು ಏಟು ಬೀಳಬಹುದು. ಹುಷಾರಾಗಿ ಮುಂದಡಿ ಇದೆ. ನಿಮಗೆ ಅತಿ ಆಸೆ ಇಲ್ಲ. ಕೈಯಲ್ಲಿ ಕಾಸಿದ್ದರೆ ಬೇಕಾಬಿಟ್ಟಿ ಖರ್ಚು ಮಾಡುತ್ತೀರಿ. ಈಗೇನೋ ದಿನ ಚೆನ್ನಾಗಿದೆ, ಎಲ್ಲವೂ ಸರಿ ಇರುತ್ತೆ. ಆದರೆ ಮುಂದೆಯೂ ಹೀಗೇ ಇರುತ್ತೆ ಅನ್ನಲಿಕ್ಕಾಗುವುದಿಲ್ಲ. ನಿಮ್ಮ ಎಚ್ಚರಲ್ಲಿ ನೀವಿರುವುದು ಉತ್ತಮ.

Follow Us:
Download App:
  • android
  • ios