Asianet Suvarna News

ಈ ರಾಶಿಯ ಜೋಡಿಗಳು ಲೈಫ್‌ಲಾಂಗ್‌ ರೊಮ್ಯಾಂಟಿಕ್‌ ಆಗಿರ್ತಾರೆ!

ಕೆಲವರು ಗಂಡ ಹೆಂಡತಿ ಅತ್ಯಂತ ಅನ್ಯೋನ್ಯವಾಗಿ, ರಸಿಕತನದಿಂದ ಜೀವನವಿಡೀ ಬಾಳುತ್ತಾರೆ. ಇನ್ನು ಕೆಲವರು ನಾಯಿ- ಮುಂಗುಸಿಗಳಂತೆ ಕಚ್ಚಾಡುತ್ತಾ ಇರುತ್ತಾರೆ. ಇದಕ್ಕೆ ಗಂಡ- ಹೆಂಡತಿ ಹುಟ್ಟಿದ ಗಳಿಗೆ, ಅವರ ನಕ್ಷತ್ರ, ರಾಶಿ ಎಲ್ಲವೂ ಕಾರಣವಾಗಿರುತ್ತದೆ. ಹಾಗಾದ್ರೆ ಯಾವ ರಾಶಿಯ ದಂಪತಿ ಸದಾ ರೊಮ್ಯಾಂಟಿಕ್‌ ಆಗಿ ಜೀವನ ನಡೆಸ್ತಾರೆ?

 

These zodiac born are romantic life long
Author
Bengaluru, First Published May 3, 2020, 5:42 PM IST
  • Facebook
  • Twitter
  • Whatsapp

ಕೆಲವರು ಗಂಡ ಹೆಂಡತಿ ಅತ್ಯಂತ ಅನ್ಯೋನ್ಯವಾಗಿ, ರಸಿಕತನದಿಂದ ಜೀವನವಿಡೀ ಬಾಳುತ್ತಾರೆ. ಇನ್ನು ಕೆಲವರು ನಾಯಿ- ಮುಂಗುಸಿಗಳಂತೆ ಕಚ್ಚಾಡುತ್ತಾ ಇರುತ್ತಾರೆ. ಇದಕ್ಕೆ ಕಾರಣ ಅವರ ಸ್ವಭಾವದಲ್ಲಿ ಇದೆ ಎಂಬುದು ಮಾತ್ರ ಸತ್ಯವಲ್ಲ. ಗಂಡ- ಹೆಂಡತಿ ಹುಟ್ಟಿದ ಗಳಿಗೆ, ಅವರ ನಕ್ಷತ್ರ, ರಾಶಿ ಎಲ್ಲವೂ ಕಾರಣವಾಗಿರುತ್ತದೆ. ಯಾಕೆಂದರೆ ಇವೆಲ್ಲವೂ ಒಬ್ಬ ವ್ಯಕ್ತಿಯ ಸ್ವಭಾವದ ಮೇಲೆ ತುಂಬಾ ಪರಿಣಾಮ ಬೀರಿರುತ್ತದೆ. ಇದರಿಂದಾಗಿಯೇ ದಾಂಪತ್ಯ ಹಾಗಿರೋದು. ಹಾಗಾದ್ರೆ ಯಾವ ರಾಶಿಯ ದಂಪತಿ ಸದಾ ರೊಮ್ಯಾಂಟಿಕ್‌ ಆಗಿ ಜೀವನ ನಡೆಸ್ತಾರೆ?

ಮೀನ- ಕನ್ಯಾ
ಈ ರಾಶಿಗಳ ಗಂಡ ಅಥವಾ ಹೆಂಡತಿ ಜೀವನ ಪೂರ್ತಿ ನಗುನಗುತ್ತಾ ಇರುತ್ತಾರೆ. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸ್ಪಂದಿಸುತ್ತಾ, ಒಬ್ಬರ ಸುಖವನ್ನು ಇನ್ನೊಬ್ಬರು ಹಂಚಿಕೊಳ್ಳುತ್ತಾ ಇರುತ್ತಾರೆ. ಇವರ ಮ್ಯಾಚಿಂಗ್‌ ಡ್ರೆಸ್‌ ಸೆನ್ಸ್‌ ಅದ್ಭುತವಾಗಿರುತ್ತದೆ. ಇಬ್ಬರೂ ಮಾತಾಡದೆಯೇ ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಪರಸ್ಪರರ ದೈಹಿಕ ಅಗತ್ಯಗಳನ್ನೂ ಅರ್ಥ ಮಾಡಿಕೊಂಡಿರುವುದರಿಂದ ಸಾಕಷ್ಟು ರೊಮ್ಯಾಂಟಿಕ್‌ ಆಗಿಯೂ ಇರುತ್ತಾರೆ.

ರಾಶಿ ಪ್ರಕಾರ, ನೀವು ವೃಥಾ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಹೇಗೆ?

ವೃಶ್ಚಿಕ- ಕಟಕ
ಇದರಲ್ಲಿ ಒಂದು ಚಂದ್ರನ ಸ್ವಭಾವ ಹಾಗೂ ಇನ್ನೊಂದು ಸೂರ್ಯನ ಸ್ವಭಾವವನ್ನು ಹೊಂದಿರುವ ರಾಶಿಗಳು. ಆದರೆ ದಾಂಪತ್ಯದ ವಿಚಾರಕ್ಕೆ ಬಂದರೆ ಇವರಲ್ಲಿ ವಿಶಿಷ್ಟವಾದ ಹೊಂದಾಣಿಕೆ ಇರುತ್ತದೆ. ಸಣ್ಣಪುಟ್ಟ ಜಗಳಗಳು ಆದರೂ ಅದನ್ನೂ ರಸಿಕತೆಯತ್ತ ತಿರುಗಿಸಿಕೊಳ್ಳುವ ಜಾಣ್ಮೆ ಇಬ್ಬರಲ್ಲೂ ಇರುತ್ತದೆ. ಇವರ ಬೆಡ್‌ರೂಮ್‌ ಬದುಕು ರಸಮಯವಾಗಿರುತ್ತದೆ. ಮನೆಯಲ್ಲೂ ಹೊರಗೂ ಪ್ರವಾಸ ಹೋದಲ್ಲೂ ತಮ್ಮದೇ ರೀತಿಯಲ್ಲಿ ಸುಖ ಸವಿಯುವುದನ್ನು ಇವರು ಅಭ್ಯಾಸ ಮಾಡಿಕೊಂಡಿರುತ್ತಾರೆ. 

ಧನು- ಸಿಂಹ
ಈ ರಾಶಿಯವರು ಕಸದಲ್ಲಿ ರಸ ಹುಡುಕುವ ನಿಷ್ಣಾತರು. ಆದ್ದರಿಂದ ತಮ್ಮ ಸಂಗಾತಿ ಹೇಗೇ ಇರಲಿ, ಅವರಿಂದ ಅತ್ಯುತ್ತಮವಾದ ಸಾಂಗತ್ಯ ಪಡೆಯುವ ಕಲೆಯನ್ನು ರೂಢಿಸಿಕೊಳ್ಳುತ್ತಾರೆ. ಲಾಕ್‌ಡೌನ್‌ ಸಂದರ್ಭವನ್ನು ಇವರಷ್ಟು ಚೆನ್ನಾಗಿ ಸೃಜನಶೀಲವಾಗಿ ಬಳಸಿಕೊಂಡವರು ವಿರಳ ಎಂದೇ ಹೇಳಬೇಕು. ಮನೆಯೊಳಗಿದ್ದೇ ಇವರು ಸ್ವರ್ಗವನ್ನು ಸೃಷ್ಟಿಸಬಲ್ಲರು, ಇವರಲ್ಲಿ ಇಬ್ಬರೂ ಕಲಾವಿದರಾಗಿದ್ದರೆ ಅದು ತುಂಬಾ ಸೊಗಸು ನೀಡುತ್ತದೆ. ಅಲ್ಲದೆ ಹೋದರೂ ಸಾಕಷ್ಟು ಹಾಸ್ಯಪ್ರಜ್ಞೆ ಇವರ ಬದುಕಿಗೆ ಮುದ ನೀಡುತ್ತದೆ.

ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು .

ಮೇಷ- ತುಲಾ
ಇಬ್ಬರೂ ಮನೆಯನ್ನು ಚೊಕ್ಕವಾಗಿಡುವ ಕಲೆಯನ್ನು ಅರಿತವರು. ಇವರು ಇದ್ದಲ್ಲಿ ನೀಟ್‌ನೆಸ್ ಎದ್ದುಕಾಣುತ್ತದೆ. ಹೀಗಾಗಿ ಇವರ ಸೆಕ್ಸ್‌ಲೈಫ್ ಕೂಡ ಸ್ವಚ್ಛ- ಶುಭ್ರ. ದಿನದಿನವೂ ಹೊಸ ಹೊಸತನ್ನು ಅನ್ವೇಷಿಸುವುದು ಇವರಿಗೆ ರಕ್ತಗತವಾಗಿ ಬಂದಿದೆ. ಹಳೇ ಶೈಲಿಯನ್ನು ಸ್ವಲ್ಪ ಬದಲಾಯಿಸಿ, ಇದ್ದುದನ್ನೇ ಹೊಸತಾಗಿ ಮಾಡಿ ಆನಂದ ಹೊಂದಬಲ್ಲವರು. ಹೀಗಾಗಿ ಇವರ ರೊಮ್ಯಾನ್ಸ್ ಕೂಡ ಹಳತಾಗುವುದಿಲ್ಲ. ಪ್ರೀತಿ ಮಾಡಲು ದಿನಾ ಏನಾದರೊಂದು ಕಾರಣ ಇವರಿಗೆ ಸಿಗುತ್ತಲೇ ಇರುತ್ತದೆ. 

ಕುಂಭ- ಮೀನ
ಇಬ್ಬರ ದೇಹವೂ ಸುಪುಷ್ಟವಾಗಿ, ಆರೋಗ್ಯಕರವಾಗಿ ಇರುವುದರಿಂದ, ಕೆಲಸದ ಒತ್ತಡ ಇಲ್ಲದೆ ಹೋದರೆ ದಿನನಿತ್ಯವೂ ರೊಮ್ಯಾನ್ಸ್‌ನ ಆನಂದವನ್ನು ಇವರು ಹೊಂದಬಲ್ಲರು. ಇವರ ಆರೋಗ್ಯ ಹಾಗೂ ಮಾನಸಿಕ ಸಂತೃಪ್ತಿಯೇ ಇವರಿಗೆ ಶ್ರೀರಕ್ಷೆ. ಸಾಮಾನ್ಯ ಜೀವನವನ್ನು ತಮ್ಮ ಕ್ರಿಯೇಟಿವಿಟಿಯಿಂದ ರೊಮ್ಯಾಂಟಿಕ್‌ ಆಗಿ ಬದಲಾಯಿಸಿಕೊಂಡಿರುತ್ತಾರೆ. ಇಬ್ಬರೂ ಸಾಕಷ್ಟು ದುಡಿಯುವುದರಿಂದ, ದುಬಾರಿ ಪ್ರವಾಸ ಹಾಗೂ ಐಷಾರಾಮಿ ಸ್ಥಳಗಳಲ್ಲಿ ತಮ್ಮ ಸುಖದ ಕ್ಷಣಗಳನ್ನು ಕಳೆಯುವ ಕನಸನ್ನು ಸಾಕಾರ ಮಾಡಿಕೊಳ್ಳಬಲ್ಲರು.

ಮಿಥುನ- ಕಟಕ
ಇವರು ಇದ್ದುದರಲ್ಲಿ ಸಂತೃಪ್ತಿಯನ್ನು ಹೊಂದುವ ಸ್ವಭಾವದವರು. ಹೀಗಾಗಿ ತಮ್ಮ ಸಂಗಾತಿಯಲ್ಲೇ ಜಗತ್ತಿನ ಸುಂದರಾಂಗನನ್ನೂ ಸುಂದರಾಂಗಿಯನ್ನೂ ಕಂಡು ಖುಷಿ ಕಾಣುತ್ತಾರೆ. ಇವರಿಂದ ಸಂಗಾತಿಗೆ ಸದಾ ಸುಖವಲ್ಲದೆ ದುಃಖದ ಕ್ಷಣಗಳು ಬರಲಾರವು. ಇಬ್ಬರೂ ಸೆಕ್ಸ್‌ನಲ್ಲೂ ಇನ್ನೊಬ್ಬರನ್ನು ಖುಷಿಪಡಿಸುತ್ತಾರೆ. 

Follow Us:
Download App:
  • android
  • ios