ಇನ್ನೇನು ಕೆಲವು ದಿನ ಕಳೆದರೆ ಶಿವರಾತ್ರಿ. ಹೆಚ್ಚಿನ ಭಕ್ತಾದಿಗಳು ಶಿವರಾತ್ರಿಯಂದು ಆಹೋರಾತ್ರಿ ಜಾಗರಣೆ, ಉಪವಾಸ ಮಾಡುತ್ತಾರೆ. ಶಿವಭಕ್ತಿ ಮೆರೆಯುತ್ತಾರೆ. ಆದರೆ ಶಿವನನ್ನು ಅದಮ್ಯ ಭಕ್ತಿಯಿಂದ ಪೂಜಿಸುವ ಒಂದು ವಿಲಕ್ಷಣ ವರ್ಗ ನಮ್ಮಲ್ಲಿದೆ. ಅವರು ಅಘೋರಿಗಳು. ಕೈಯಲ್ಲಿ ಮನುಷ್ಯನ ತಲೆ ಬುರುಡೆ ಹಿಡಿದು ನೋಡಲು ಭಯಂಕರವಾಗಿರುವ ಅಘೋರಿಗಳು ಜನಸಾಮಾನ್ಯರ ಕಣ್ಣಿಗೆ ಬೀಳುವುದು ಬಹಳ ಅಪರೂಪ. ಜನ ಓಡಾಡಲು ಹೆದರುವ ನಿರ್ಜನ ಸ್ಮಶಾನದಲ್ಲೇ ದಿನ ಕಳೆಯುವ ಇವರು ಅಲ್ಲೇ ಸಾಧನೆಯನ್ನೂ ಮಾಡುತ್ತಾರೆ. ಇವರು ಶಿವನ ಹಾಗೂ ಶಕ್ತಿಯ ಆರಾಧಕರು. ಅಘೋರ ಎಂದರೆ ಜ್ಞಾನ ಎಂಬ ಅರ್ಥ ಇದೆ. ಸಾಮಾನ್ಯನ ಊಹೆಗೂ ನಿಲುಕದ ಅಗೋಚರ ಜ್ಞಾನವನ್ನು ಸಂಪಾದಿಸುವುದು ಇವರ ಸಾಧನೆಯ ಭಾಗವಾಗಿರುತ್ತದೆ.

ವಿಚಿತ್ರ ಅನಿಸಿದ್ರೂ ಇದು ನಿಮ್ಮ ರಾಶಿಗಳ ಇನ್ನೊಂದು ಮುಖ! 

 

ಸಾಮಾನ್ಯ ಮನುಷ್ಯನೊಬ್ಬ ಅಘೋರಿ ಆಗೋದು ಹೇಗೆ?

ಇದಕ್ಕೆ ಒಂದೇ ಉತ್ತರ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್‌ ಆಗಿದ್ದವರೂ ಕೆಲಸ ತೊರೆದು ಅಘೋರಿಗಳಾಗಿದ್ದಾರೆ. ಅನೇಕ ಇತರೇ ಉದ್ಯೋಗದಲ್ಲಿದ್ದವರೂ ಅದನ್ನು ತೊರೆದು ಅಘೋರತ್ವ ಸ್ವೀಕರಿಸಿದ ಉದಾಹರಣೆಗಳಿವೆ. ಹೆಚ್ಚಿನ ಸಲ ಮನಸ್ಸಲ್ಲಿ ತೀವ್ರವಾಗಿ ತಾನು ಅಘೋರಿ ಆಗಬೇಕು ಅನ್ನುವ ಯೋಚನೆ ಬಂದವರು ಈ ಮಾರ್ಗದ ಬೆನ್ನು ಹತ್ತಿ ಹೋಗುತ್ತಾರೆ. ಗುರುಸ್ಥಾನದಲ್ಲಿರುವ ಅಗೋಚರ ವ್ಯಕ್ತಿಯೊಬ್ಬ ಇವರ ಮನಸ್ಸಿನ ಮೇಲೆ ಪರಿಣಾಮ ಬೀರಿ ಆತ ಅಘೋರತ್ವದೆಡೆಗೆ ಚಲಿಸುವಂತೆ ಮಾಡುವುದೂ ಇದೆ. ಹೀಗೆ ಆಘೋರಿಯಾಗಲು ಬಯಸಿದವರಿಗೆ ಆರಂಭದಲ್ಲಿ ಕಠಿಣ ಸವಾಲುಗಳು ಎದುರಾಗುತ್ತವೆ. ಅವರನ್ನು ನಾನಾ ವಿಧದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮುಖ್ಯವಾಗಿ ನಾಗರಿಕ ಜಗತ್ತಿನ ಮುಖವಾಡಗಳನ್ನು ಕಳಚಿಹಾಕಲಾಗುತ್ತದೆ. ಭಯ, ಕಾಮ, ನಾಚಿಕೆ, ಲಜ್ಜೆ ಇತ್ಯಾದಿಗಳನ್ನು ಮೀರಿದ ಮೇಲೆ ಆತ ಅಥವಾ ಆಕೆ ಮೊದಲ ಹಂತದ ಸಾಧನೆಗೆ ತಯಾರಾಗುತ್ತಾರೆ. ಏಕೆಂದರೆ ಭಯ ಇದ್ದರೆ ಇಂಥಾ ಸಾಧನೆ ಮಾಡಲು ಸಾಧ್ಯವಿಲ್ಲ. ಮಧ್ಯರಾತ್ರಿ ಸ್ಮಶಾನದಲ್ಲಿ ಕೂತು ಶಿವಧ್ಯಾನ ಮಾಡಲು ನಿರ್ಭೀತ ಗುಂಡಿಗೆ ಬೇಕು. ಜೊತೆಗೆ ಮನಸ್ಸು ಪದೇ ಪದೇ ಕಾಮದತ್ತ ವಾಲಿದರೆ ಸಾಧನೆ ಮಾಡುವುದು ಅಸಾಧ್ಯ. ಹಾಗಂತ ಇಲ್ಲಿ ಕಾಮ ನಿಷಿದ್ಧವಲ್ಲ. ಕಾಮಕ್ಕೂ ಪ್ರಾಧಾನ್ಯತೆ ಇದೆ. ಆದರೆ ಕಾಮವನ್ನು ಸಪ್ರೆಸ್ ಮಾಡುವ ಅಥವಾ ದಮನಿಸುವ ಬದಲಿಗೆ ಅದನ್ನು ವಿಜೃಂಭಿಸಲಾಗುತ್ತದೆ. ಕೆಲವೊಮ್ಮೆ ಇದು ಅಮಾನವೀಯ ನೆಲೆಗೆ ಹೋಗುವುದೂ ಇದೆ ಎನ್ನಲಾಗುತ್ತದೆ.

 

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

 

ನರಮಾಂಸ ಭಕ್ಷಕರೇ?

ಅಘೋರಿಗಳು ನರಮಾಂಸ ಭಕ್ಷಿಸುತ್ತಾರೆ ಅನ್ನುವ ಮಾತು ಎಲ್ಲೆಡೆ ಇದೆ. ಈ ವಿಷಯವೇ ಅವರಿಗೆ ಭಯಾನಕತೆಯನ್ನೂ ತಂದುಕೊಟ್ಟಿದೆ. ಕಾಶಿ, ಕೊಲ್ಕೊತ್ತಾದ ತಾರಾಪೀಠದಂಥಾ ಜಾಗಗಳಲ್ಲಿ ಅಘೋರಿಗಳು ಕಾಣಸಿಗುತ್ತಾರೆ. ಇವರು ನರ ಮಾಂಸ ಭಕ್ಷಣೆ ಮಾಡುತ್ತಾರಂತೆ. ಆದರೆ ಜೀವಂತ ಮನುಷ್ಯನನ್ನು ಕೊಂದು ತಿನ್ನುವ ಜಾಯಮಾನ ಇವರದಲ್ಲ. ಸಾಮಾನ್ಯವಾಗಿ ಸ್ಮಶಾನದಲ್ಲೇ ಇರುವ ಇವರು ಅಲ್ಲಿಗೆ ಬರುವ ಹೆಣಗಳನ್ನು ಸೇವಿಸುತ್ತಾರೆ. ಇದಕ್ಕೂ ಕಾರಣವಿದೆ. ಇವರಿಗೆ ಈಶ್ವರ ಸೃಷ್ಟಿಯ ಎಲ್ಲವೂ ಮುಖ್ಯವೇ. ನಾಗರಿಕ ಜಗತ್ತಿನ ನಿರ್ಬಂಧಗಳನ್ನು ಇವರು ಒಪ್ಪುವುದಿಲ್ಲ. ಅದನ್ನು ಮೀರಿ ಬದುಕುತ್ತಾರೆ. ಕೊಳಕು, ಗಲೀಜು ಅನ್ನುವುದನ್ನೆಲ್ಲ ಇವರು ಒಪ್ಪುವುದಿಲ್ಲ. ಆಹಾರದಲ್ಲಿ ಭೇದ ಮಾಡುವುದು ಇವರ ತತ್ವಕ್ಕೆ ವಿರುದ್ಧ. ಹಾಗಾಗಿ ಇವರಿಗೆ ನರಮಾಂಸ ವರ್ಜ್ಯವಲ್ಲ. ಅದು ಸ್ವೀಕಾರಾರ್ಹ. ಹಾಗಾಗಿ ನಮ್ಮಂತೆ ಯಾವ ಮುಜುಗರ, ಹೇಸಿಗೆಯ ಭಾವವನ್ನೂ ಹೊಂದಿರದ ಅವರು ಹೆಣವನ್ನೂ ಪ್ರೀತಿಯಿಂದ ತಿನ್ನುತ್ತಾರೆ. ಹೆಣದ ಬುರುಡೆಯೇ ಅವರ ಕೈಯ ಕಪಾಲವಾಗುತ್ತದೆ. ಅದೇ ಇವರ ಐಡೆಂಟಿಟಿಯೂ ಆಗಿದೆ.

 

ಧರ್ಮಸ್ಥಳದಲ್ಲಿ ಶ್ರೀ ಅಣ್ಣಪ್ಪ ದೈವದ ಗುಡಿಗೆ ಹೋಗೋದ ಮರೀಬೇಡಿ!

 

ಕಾಮವೂ ಸಾಧನೆಯ ಒಂದು ಭಾಗ

ಅಘೋರಿಗಳು ನಡೆಸುವ ಅಧ್ಯಾತ್ಮ ಸಾಧನೆಯಲ್ಲಿ ಕಾಮವೂ ಒಂದು ಭಾಗ. ಇದರಲ್ಲಿ ಒಂದು ಭಾಗ ಕಾಮವನ್ನು ಉಗ್ರ ಬ್ರಹ್ಮಚರ್ಯ, ಕಠಿಣ ಸಾಧನೆಗಳ ಮೂಲಕ ಗೆಲ್ಲುವುದು. ಇನ್ನೊಂದು- ಶವದ ಜೊತೆ ಸಂಭೋಗವನ್ನೂ ಮಾಡಲು ಸಾಧ್ಯವಾಗುವಂತೆ ತಮ್ಮ ಜನನೇಂದ್ರಿಯಗಳನ್ನು ಹೇಳಿದಂತೆ ಕೇಳುವಂತೆ ನಿಯಂತ್ರಿಸಲು ಕಲಿಯುವುದು. ಅಲ್ಲಿಯೂ ಅವರಿಗೆ ಮುಜುಗರ, ಅಸಹ್ಯಗಳೆಲ್ಲ ನಿಷಿದ್ಧ. ಶವವೂ ಸಾಧನೆಯ ಒಂದು ಅಂಗವೇ. ಕಾಮವನ್ನು ಆತ ಪಳಗಿಸಿಕೊಂಡಿದ್ದರೆ. ಶವದ ಜೊತೆಗೂ ಸಂಭೋಗಿಸಲು ಅವನಿಗೆ ಸಾಧ್ಯವಾಗಬೇಕು.

ಕೆಲವೊಮ್ಮೆ ನಮ್ಮ ನಡುವೆಯೇ ಅಘೋರಿಗಳು ಇದ್ದರೂ ಇರಬಹುದು. ಇವರ ಇರುವಿಕೆ ನಮಗೆ ಗೊತ್ತಾಗುವುದೇ ಇಲ್ಲ. ನಮ್ಮ ನಡುವೆಯೇ ಲೋಕದಲ್ಲಿ ಎಲ್ಲ ಲೌಕಿಕರಂತೆಯೇ ಇದ್ದರೂ, ನಿಗೂಢವಾದ ಸಾಧನೆಯೂ ಇವರಿಂದ ಸಾಧ್ಯ. ಹೀಗಾಗಿ ನಿಮ್ಮೊಳಗೊಬ್ಬ ಅಘೋರಿ ಇದ್ದಾನೆ ಎಂಬುದು ಗೊತ್ತಾದರೆ ನಂಬದಿರಬೇಡಿ.