ಜನ್ಮರಾಶಿ ಹಾಗೂ ಜಾತಕ ನೋಡಿ ಫಲಾಫಲ ಹೇಳುವುದು ಸಾಮಾನ್ಯ. ಕೆಲವೊಮ್ಮೆ ನಿಮ್ಮ ಜನ್ಮಕುಂಡಲಿಯಲ್ಲಿ ಇಲ್ಲದ ಗುಣ ಅಥವಾ ದೋಷ, ನಿಮ್ಮ‌ ನಕ್ಷತ್ರ ಅಥವಾ ಹುಟ್ಟಿದ ದಿನದಲ್ಲಿ ಇರಬಹುದು. ಅಂದರೆ ನೀವು ಜನಿಸಿದ ವಾರ ಯಾವುದು ಎಂಬುದರ ಮೇಲೆ  ಸ್ಥೂಲವಾಗಿ  ನಿಮ್ಮ ಬದುಕಿನ ಪಥ ಹೇಗಿರುತ್ತದೆ ಅನ್ನೋದನ್ನು ಕಂಡುಹಿಡಿಯಬಹುದು. ಅದಕ್ಕೆ ತಕ್ಕ ಹಾಗೆ ಜನ್ಮಕುಂಡಲಿ ಇದ್ದರಂತೂ ಸೂಪರ್.

ಭಾನುವಾರ

ಎಲ್ರೂ ವಾರದ ರಜಾದಲ್ಲಿರುವಾಗ ನೀವು ಹುಟ್ಟಿ ಅಪ್ಪ- ಅಮ್ಮ ಹಾಗೂ ಕುಟುಂಬದವರನ್ನು ಬ್ಯುಸಿಯಾಗಿಸಿಬಿಟ್ಟಿರಿ! ಭಾನುವಾರ ಅಂದ್ರೆ ಸೂರ್ಯನ ದಿನ. ತಮ್ಮ ಸುತ್ತಮುತ್ತಲಿನವರಿಗೆಲ್ಲ ಬೆಳಕು ಕೊಡೋದು ನಿಮ್ಮ ಸ್ವಭಾವ. ನೀವೂ ಉತ್ತಮವಾಗಿ ಬದುಕುವುದಲ್ಲದೆ ಕುಟುಂಬವನ್ನೂ ಚೆನ್ನಾಗಿ ನೋಡಿಕೊಳ್ಳುವುದು ಸಾಧ್ಯವಾಗುತ್ತೆ.

 

ಸೋಮವಾರ

ಸೋಮ ಎಂಬುದು ಚಂದ್ರನ ಇನ್ನೊಂದು ಹೆಸರು. ಚಂದ್ರನ ಗುಣ ತಂಪು. ನೀವು ಎಲ್ಲವನ್ನೂ ಶಾಂತವಾಗಿ ಗ್ರಹಿಸುತ್ತೀರಿ ಹಾಗೂ ಜೀವನದಲ್ಲಿ ಶಾಂತವಾಗಿ ಮುಂದುವರಿಯುತ್ತೀರಿ. ನಿಮ್ಮ ವೃತ್ತಿಜೀವನ ನಿಧಾನವಾಗಿ ಉತ್ತಮವಾಗುತ್ತ ಹೋಗುತ್ತದೆ ಹಾಗೂ ಉತ್ತಮ ಫಲಗಳನ್ನು ಕೊಡುತ್ತದೆ. ಕೆಲವೊಮ್ಮೆ ಹುಣ್ಣಿಮೆಯಂತೆ ತುಂಬಾ ವೃದ್ಧಿಯ ಕ್ಷಣಗಳೂ, ಕೆಲವೊಮ್ಮೆ ಅಮಾವಾಸ್ಯೆಯ ಹಾಗೆ ಕತ್ತಲಿನ ಕ್ಷಣಗಳೂ ಎದುರಾಗಬಹುದು, ಇದಕ್ಕೆ ಅಂಜಬೇಕಾದ ಅಗತ್ಯವಿಲ್ಲ. ಜೀವನದಲ್ಲಿ ಅದು ಸಹಜ.

 

ದೇವಸ್ಥಾನದಲ್ಲಿ ಒಂದೇ ಬಾರಿ ಬೆತ್ತಲಾದ 10 ಸಾವಿರ ಮಂದಿ!

 

ಮಂಗಳವಾರ

ಮಂಗಳ ಗ್ರಹದ ಅನುಗ್ರಹ ನಿಮ್ಮ ಮೇಲಿರುತ್ತದೆ. ಮಂಗಳ ಕೆಂಪು ಗ್ರಹ. ಧನ ಧಾನ್ಯ ಸಂಗ್ರಹಕ್ಕೆ ನಿಮಗೆ ಜೀವನದಲ್ಲಿ ಏನೂ ತೊಂದರೆ ಆಗುವುದಿಲ್ಲ. ನಿಮ್ಮ ಬದುಕಿನ ಯಾವುದೇ ಶುಭ ಗಳಿಗೆ ಮಂಗಳವಾರವೇ ಆರಂಭವಾದರೆ ಅದರಲ್ಲಿ ಕಾಕತಾಳೀಯ ಇರಲ್ಲ. ಪ್ರೀತಿ ಪ್ರೇಮದ ವಿಷಯದಲ್ಲಿ ನಿಮ್ಮ ಸಾಮರ್ಥ್ಯವನ್ನು ಅಳೆಯೋದೇ ಸಾಧ್ಯವಿಲ್ಲ. ಅಷ್ಟೊಂದು ಭಾಗ್ಯಶಾಲಿಗಳು ನೀವು.

 

ಬುಧವಾರ

ಬುಧ ಗ್ರಹಕ್ಕೆ ಸ್ವಂತ ಸ್ವಭಾವ ಎಂಬುದಿಲ್ಲ. ಹೀಗಾಗಿ ನಿಮಗೂ ಜೀವನದಲ್ಲಿ ಸ್ವಂತ ಜಾಗ, ಮನೆ, ಆಸ್ತಿ ಮಾಡಲು ತುಂಬಾ ಕಷ್ಟಪಡಬೇಕಾಗುತ್ತದೆ. ಆದರೆ, ಒಮ್ಮೆ ನೀವು ಜೀವನದಲ್ಲಿ ಸ್ಥಿರವಾಗಿ ನಿಂತರೆ ಆಮೇಲೆ ನಿಮ್ಮನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟೊಂದು ದೃಢವಾದ ಸಾಧನೆ ನಿಮ್ಮದಾಗುತ್ತೆ. ನಿಧಾನವಾಗಿ ಒಂದೊಂದು ಇಟ್ಟಿಗೆ ಕಟ್ಟುತ್ತ ಮನೆ ಕಟ್ಟಬೇಕು ಇಂಥವರು. ಆದರೆ ಪಡೆದ ಹಣಕಾಸು ಅಥವಾ ಶ್ರೀಮಂತಿಕೆ ಜೀವಮಾನ ಪೂರ್ತಿ ನಿಮ್ಮನ್ನು ಪೊರೆಯುತ್ತದೆ.

 

ಈ ರಾಶಿಯವರಿಗೆ ಸ್ತ್ರೀಯರಿಂದ ಸಹಕಾರ: ಉಳಿದ ರಾಶಿಗೇನು ಫಲ..?

 

ಗುರುವಾರ

ಗುರು ಅಂದರೆ ದೇವಗುರುವಾದ ಬ್ರಹಸ್ಪತಿ. ಗುರುವಿನ ಸಾನಿಧ್ಯ ನಿಮ್ಮ ಜನ್ಮದಲ್ಲಿಯೇ ಇರುವುದರಿಂದ ವಿದ್ಯಾದೇವತೆಗಳಾದ ಸರಸ್ವತಿ ಹಾಗೂ ಗಣಪತಿಯರ ಆಶೀರ್ವಾದ ಸದಾ ಇರುತ್ತೆ. ಹೆಚ್ಚು ಉನ್ನತವಾದ ಕಲಿಕೆ ಮಾಡುತ್ತೀರಿ. ಕಲಿಕೆಯಿಂದ ಪಡೆದ ಸಂಪನ್ನತೆ ನಿಮ್ಮನ್ನು ಆಯಾ ಕ್ಷೇತ್ರದ ದಿಗ್ಗಜರನ್ನಾಗಿ ಮಾಡುತ್ತದೆ. ಆ ಮೂಲಕ ಶ್ರೀಮಂತಿಕೆ ದೊರೆಯುತ್ತದೆ. ವಿದ್ಯೆಯ ಮೂಲಕವೇ ದೊರೆಯುವ ನ್ಯಾಯವಾದ ಆಸ್ತಿ ಹಾಗೂ ಸಂಪತ್ತು ನಿಮ್ಮದು. ಬೇರೆಯವರಿಗೆ ದಾರಿ ತೋರುವ ಸ್ಥಾನ ಪಡೆಯುತ್ತೀರಿ.

 

ಶುಕ್ರವಾರ

ಶುಕ್ರನು ದೈಹಿಕ ಸಂಪತ್ತು, ಸೌಂದರ್ಯ, ಪೌರುಷ, ಸ್ತ್ರೀ ಸಾಮರ್ಥ್ಯ ಇತ್ಯಾದಿಗಳ ದೊರೆ. ಶುಕ್ರ ಎಂಬುದು ಪುರುಷನ ವೀರ್ಯವಂತಿಕೆಗೆ ಇನ್ನೊಂದು ಹೆಸರು. ಈ ವಾರ ಹುಟ್ಟಿದ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಸಹಜವಾಗಿ ಆಕರ್ಷಿತರಾಗುತ್ತಾರೆ. ಕುಟುಂಬ ಸುಖ ನಿಮಗೆ ತುಂಬಾ ಸಿಗುತ್ತದೆ. ಮಕ್ಕಳು ಸಂತೋಷ ನೀಡುತ್ತಾರೆ. ದೈಹಿಕ ಶಕ್ತಿ ಸಾಯುವವರೆಗೂ ಅದ್ಭುತವಾಗಿರುತ್ತದೆ.

 

ಧರ್ಮಸ್ಥಳದಲ್ಲಿ ಶ್ರೀ ಅಣ್ಣಪ್ಪ ದೈವದ ಗುಡಿಗೆ ಹೋಗೋದ ಮರೀಬೇಡಿ!

 

ಶನಿವಾರ

ಶನಿಯು ಉಗ್ರ ಸ್ವರೂಪದ ಗ್ರಹನು. ಈತನು ಕಾಪಾಡುವವನೂ ಆಗಿದ್ದಾನೆ. ನಿಮ್ಮ ಕುಟುಂಬದವರಿಗೆ ನಿಮ್ಮ ಶಿಸ್ತನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟ ಆಗಬಹುದು. ಆದರೆ ಅದರಿಂದ ಮುಂದೆ ಒಳ್ಳೆಯದೇ ಆಗುತ್ತದೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಸಂಪತ್ತಿನ ವಿಷಯದಲ್ಲಿ ನೀವು ಭಾಗ್ಯಶಾಲಿಗಳು. ಬೇಡವೆಂದರೂ ಶ್ರೀಮಂತಿಕೆ ನಿಮ್ಮನ್ನು ಅರಸಿ ಬರುತ್ತದೆ. ಬೇರೆ ಗ್ರಹಗಳ ಆಶೀರ್ವಾದ ನಿಮ್ಮ ಮೇಲಿದ್ದರೆ ನೀವು ದೇಶವನ್ನಾಳುವ ಸಾಧ್ಯತೆಯೂ ಇರುತ್ತದೆ.