Asianet Suvarna News Asianet Suvarna News

ಅಸ್ತಮಾ, ಒತ್ತಡ, ಖಿನ್ನತೆ, ಏಕಾಗ್ರತೆ ಸಮಸ್ಯೆಗೆ ಈ ಮಂತ್ರ ಪಠಣವೇ ಪರಿಹಾರ!

ಗಾಯತ್ರಿ ಮಂತ್ರವನ್ನು ಪ್ರತಿ ದಿನ ಜಪಿಸುವುದರಿಂದ ಬಹಳಷ್ಟು ಆರೋಗ್ಯ ಲಾಭಗಳಿವೆ. ಗಾಯತ್ರಿ ಮಂತ್ರವು ಸೂರ್ಯನ ಆರಾಧನೆಯಾಗಿದ್ದು, ಸೂರ್ಯನು ನಮಗೆ ಆರೋಗ್ಯ ಕರುಣಿಸುವವನಾಗಿದ್ದಾನೆ. ಗಾಯತ್ರಿ ಮಂತ್ರ ಪಠಣದಿಂದ ಅಸ್ತಮಾದಂಥ ಸಮಸ್ಯೆಗಳಿಂದಲೂ ಮುಕ್ತರಾಗಬಹುದು. 

Amazing Benefits of Gayatri Mantra Chanting skr
Author
Bangalore, First Published Jul 18, 2022, 4:19 PM IST

ಮಂತ್ರಗಳು ನಿಮ್ಮ ಅಭ್ಯಾಸವನ್ನು ಅಸಂಖ್ಯಾತ ರೀತಿಯಲ್ಲಿ ಹೆಚ್ಚಿಸಬಹುದು. ಪುನರಾವರ್ತಿತ ಪಠಣ ಅಥವಾ ಧ್ವನಿಯು ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ನಿರ್ದಿಷ್ಟ ಕಂಪನಗಳು ಅಥವಾ ಆವರ್ತನಗಳ ಮೂಲಕ ನಿಮ್ಮ ಪ್ರಜ್ಞೆಯನ್ನು ಹೆಚ್ಚಿಸಿ ನರಮಂಡಲವನ್ನು ಶಾಂತಗೊಳಿಸುತ್ತವೆ. 

ಗಾಯತ್ರಿ ಮಂತ್ರವು ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಮಂತ್ರಗಳಲ್ಲಿ ಒಂದಾಗಿದ್ದು, ಅದನ್ನು ನಿಷ್ಠೆಯಿಂದ ಪಠಿಸುವ, ಅವರ ಹೃದಯದಲ್ಲಿ ಹಿಡಿದಿಟ್ಟುಕೊಳ್ಳುವ ಯಾರಿಗಾದರೂ ಸಂತೋಷವನ್ನು ಖಚಿತಪಡಿಸುತ್ತದೆ. ಇದು ಮೊದಲು 1800 ಮತ್ತು 1500 BCE ನಡುವೆ ಬರೆಯಲಾದ ಆರಂಭಿಕ ವೈದಿಕ ಪಠ್ಯವಾದ ಋಗ್ವೇದದಲ್ಲಿ ಕಾಣಿಸಿಕೊಂಡಿತು. ಇದು ಉಪನಿಷತ್ತುಗಳಲ್ಲಿ ಪ್ರಮುಖ ಆಚರಣೆ ಎಂದೂ ಮತ್ತು ಭಗವದ್ಗೀತೆಯಲ್ಲಿ ದೈವಿಕ ಕಾವ್ಯವೆಂದೂ ಉಲ್ಲೇಖಿತವಾಗಿದೆ. ಈ ಮಂತ್ರವನ್ನು ಹಿಂದೂ ಧರ್ಮದಲ್ಲಿನ ಎಲ್ಲ ಇತರ ಮಂತ್ರಗಳಲ್ಲಿ ಅತ್ಯಂತ ಪವಿತ್ರವಾದ ಉಚ್ಚಾರಣೆಗಳಲ್ಲಿ ಒಂದಾಗಿ ಚಿತ್ರಿಸಲಾಗಿದೆ.

ಗಾಯತ್ರಿ ಮಂತ್ರ
ಓಂ ಭೂರ್ ಭುವಃ ಸ್ವಾಹಾ
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್
 
ಅರ್ಥ: ಓಂ ಭೂಮಿಯ ಹೃದಯದೊಳಗೆ, ಆಕಾಶದ ಜೀವದೊಳಗೆ ಮತ್ತು ಸ್ವರ್ಗದ ಆತ್ಮದೊಳಗೆ ಇರುವ ಪರಮಾತ್ಮನ ಅತೀಂದ್ರಿಯ ಮಹಿಮೆಯನ್ನು ನಾವು ಪೂಜಿಸುತ್ತೇವೆ. ಅವನು ನಮ್ಮ ಮನಸ್ಸನ್ನು ಉತ್ತೇಜಿಸಲಿ ಮತ್ತು ಬೆಳಗಿಸಲಿ.

ಗಾಯತ್ರಿ ಮಂತ್ರವನ್ನು ಹೇಗೆ ಪಠಿಸಬೇಕು?
108 ಬಾರಿ (ಅಂದರೆ ಒಂದು ಸುತ್ತಿನ) ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಒಬ್ಬರ ಆತ್ಮ ಮತ್ತು ಹೃದಯವನ್ನು ಶುದ್ಧೀಕರಿಸಬಹುದು ಮತ್ತು ಮನಸ್ಸಿನ ಮೇಲೆ ಶಾಂತ ಪರಿಣಾಮವನ್ನು ಬೀರಬಹುದು. ಇದಕ್ಕಾಗಿ ಜಪಮಣಿ ಬಳಸಬಹುದು. ಇದನ್ನು ಮೂರು ಸಮಯದ ಅವಧಿಯಲ್ಲಿ ಪಠಿಸಲಾಗುತ್ತದೆ - ಬೆಳಿಗ್ಗೆ (ಸೂರ್ಯೋದಯಕ್ಕೆ ಎರಡು ಗಂಟೆಗಳ ಮೊದಲು), ಮಧ್ಯಾಹ್ನ ಮತ್ತು ಸಂಜೆ (ಸೂರ್ಯಾಸ್ತದ ಒಂದು ಗಂಟೆಯ ನಂತರ).

ಮದುವೆ ಬೇಗ ಆಗ್ಬೇಕೆಂದ್ರೆ ಶ್ರಾವಣ ಮಾಸದಲ್ಲಿ ಮಾಡಿ ಈ ಕೆಲಸ

ಸಂಪೂರ್ಣ ಗಾಯತ್ರಿ ಮಂತ್ರದ ಅಭ್ಯಾಸದ ಸಮಯದಲ್ಲಿ ನಿಮಗೆ ಹೆಚ್ಚು ಸೂಕ್ತವಾದ ಒಂದು ಸಮಯವನ್ನು ಆರಿಸಿಕೊಳ್ಳಿ. ನೀವು ಬೆಳಿಗ್ಗೆ ಅಭ್ಯಾಸ ಮಾಡಿದರೆ, ಪೂರ್ವಕ್ಕೆ ಮುಖ ಮಾಡಿ, ಈ ಮಂತ್ರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಠಿಸಬಹುದು. ಸಂಜೆಯ ಜಪವನ್ನು ಆರಿಸಿದರೆ, ಪಶ್ಚಿಮಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು. 

ಗಾಯತ್ರಿ ಮಂತ್ರ ಪಠಣದ ಪ್ರಯೋಜನಗಳು(benefits)
1. ಏಕಾಗ್ರತೆ ಮತ್ತು ಕಲಿಕೆಯ ಸುಧಾರಣೆ
ಈ ಮಂತ್ರವನ್ನು ಪಠಿಸುವಾಗ ರಚಿಸಲಾದ ಕಂಪನಗಳು ಕೊನೆಯ ಮೂರು ಚಕ್ರಗಳನ್ನು ನೇರವಾಗಿ ಸಕ್ರಿಯಗೊಳಿಸುತ್ತದೆ - ಗಂಟಲು ಚಕ್ರ, 3ನೇ ಕಣ್ಣಿನ ಚಕ್ರ ಮತ್ತು ಕಿರೀಟ ಚಕ್ರ. ಈ ಚಕ್ರಗಳು ಗಮನವನ್ನು ಒದಗಿಸುವ ಮತ್ತು ಗೊಂದಲವನ್ನು ತೆಗೆದುಹಾಕುವಲ್ಲಿ ವ್ಯವಹರಿಸುತ್ತವೆ. ಆದ್ದರಿಂದ, ಏಕಾಗ್ರತೆ(Concentration) ಹೆಚ್ಚಾಗುತ್ತದೆ.

2. ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ
ಗಾಯಂತ್ರಿ ಮಂತ್ರ ಹೇಲುವಾಗ ರಚಿತವಾಗುವ ಕಂಪನಗಳು, ಉಸಿರಾಟ ಗತಿಯು ನಿಮ್ಮ ಚರ್ಮದ ಉದ್ದಕ್ಕೂ ಚಲಿಸುವ ರಕ್ತನಾಳಗಳಿಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತದೆ. ಇದು ಟಾಕ್ಸಿನ್‌ಗಳನ್ನು ಹೊರಹಾಕುತ್ತದೆ ಮತ್ತು ನಿಮ್ಮ ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

3. ಉಸಿರಾಟವನ್ನು ಸುಧಾರಿಸುತ್ತದೆ
ಉಸಿರಾಟದ ವಾಯುಮಾರ್ಗಗಳನ್ನು ತೆರೆಯಲು ಪಠಣ ಮಾಡುವ ಮೊದಲು ಪ್ರಾಣಾಯಾಮ(Meditation)ವನ್ನು ಅಭ್ಯಾಸ ಮಾಡಲು ಸಲಹೆ ನೀಡಲಾಗುತ್ತದೆ. ಜಪ ಮಾಡುವಾಗ, ಮತ್ತಷ್ಟು ನಿಯಂತ್ರಿತ ಆಳವಾದ ಉಸಿರಾಟವು  ಶ್ವಾಸಕೋಶವನ್ನು ಸಂಪೂರ್ಣವಾಗಿ ವಿಸ್ತರಿಸುತ್ತದೆ.

4. ಹೃದಯದ ಆರೋಗ್ಯ
ಜಪ ಮಾಡುವಾಗ ಬದಲಾಗುವ ಉಸಿರಾಟವು ಹೃದಯಕ್ಕೆ ರಕ್ತವನ್ನು ಪಂಪ್ ಮಾಡುವುದನ್ನು ಚೆನ್ನಾಗಿ ಸಿಂಕ್ ಮಾಡುತ್ತದೆ. ಹೀಗೆ ರಕ್ತದೊತ್ತಡವನ್ನು ಹತೋಟಿಯಲ್ಲಿಟ್ಟುಕೊಂಡು ಹೃದಯ(heart)ವು ಆರೋಗ್ಯವಾಗಿರುತ್ತದೆ.

5. ನಕಾರಾತ್ಮಕತೆಯನ್ನು ತೆಗೆದು ಹಾಕುತ್ತದೆ
ಮಂತ್ರವನ್ನು ನಿರಂತರವಾಗಿ ಪಠಿಸಲು ನಿಮ್ಮ ಮೆದುಳನ್ನು ಕೇಂದ್ರೀಕರಿಸಲು ನೀವು ಉತ್ತೇಜಿಸುತ್ತೀರಿ. ಈ ಮಟ್ಟದ ಏಕಾಗ್ರತೆಯು ಮನಸ್ಸನ್ನು ಶಾಂತವಾಗಿ ಮತ್ತು ಧನಾತ್ಮಕವಾಗಿರಿಸಲು ಸಹಾಯ ಮಾಡುತ್ತದೆ.

6. ನರಮಂಡಲದ ಕಾರ್ಯ ನಿರ್ವಹಣೆ
ನೀವು ಜಪವನ್ನು ಪ್ರಾರಂಭಿಸಿದಾಗ, ನಿಮ್ಮ ನಾಲಿಗೆ, ಗಂಟಲು, ಬಾಯಿ ಮತ್ತು ತುಟಿಗಳ ಮೇಲೆ ಒತ್ತಡವನ್ನು ಹಾಕುತ್ತೀರಿ. ಸಂಯೋಜಿತ ಒತ್ತಡವು ವಿಭಿನ್ನ ಕಂಪನಗಳನ್ನು ಸೃಷ್ಟಿಸುತ್ತದೆ. ಇದು ಪ್ರತಿಯಾಗಿ, ಈ ಕಂಪನಗಳ ಸರಿಯಾದ ಪ್ರಚೋದನೆಗಾಗಿ ನರಪ್ರೇಕ್ಷಕಗಳನ್ನು ಬಿಡುಗಡೆ ಮಾಡಲು ನಿಮ್ಮ ಮೆದುಳನ್ನು ಪ್ರೇರೇಪಿಸುತ್ತದೆ. ಇದರಿಂದ ನರಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.

ಈ ನಾಲ್ಕು ರಾಶಿಯ ಜನ ಹೆಚ್ಚಾಗಿ arranged marriage ಆಗ್ತಾರೆ

7. ಆಸ್ತಮಾ ಕಡಿಮೆ ಮಾಡುತ್ತದೆ
ಉಸಿರಾಡುವಾಗ, ನಿಮ್ಮ ಉಸಿರಾಟವನ್ನು ಸ್ವಲ್ಪ ಹಿಡಿದಿಟ್ಟುಕೊಳ್ಳುವುದು ನಿಮ್ಮ ಶ್ವಾಸಕೋಶವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ನಿಯಮಿತವಾಗಿ ಗಾಯತ್ರಿ ಮಂತ್ರ ಪಠಣವನ್ನು ಅಭ್ಯಾಸ ಮಾಡುವಾಗ ಆಸ್ತಮಾ ಲಕ್ಷಣಗಳು ನಿಧಾನವಾಗಿ ಕಡಿಮೆಯಾಗುತ್ತವೆ.

8. ಮನಸ್ಸನ್ನು ಶಾಂತಗೊಳಿಸುತ್ತದೆ
ಮಂತ್ರಪಠಣದಿಂದ ಏಕಾಗ್ರತೆ ಸಿದ್ಧಿಸುತ್ತದೆ. ಏಕಾಗ್ರತೆಯಿಂದ ಯೋಚನೆಗಳಲ್ಲಿ ಸ್ಪಷ್ಟತೆ ಸಾಧ್ಯ. ಸ್ಪಷ್ಟತೆಯು ನಿಮ್ಮ ಎಲ್ಲ ಒತ್ತಡವನ್ನು ತೆಗೆದು ಹಾಕುತ್ತದೆ. ಪಠಣಗಳ ಪುನರಾವರ್ತನೆಯು ಸಿರೊಟೋನಿನ್ ಮತ್ತು ಇತರ ಅನೇಕ ಉತ್ತಮ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ, ನೀವು ಸಂತೋಷ ಮತ್ತು ಶಾಂತತೆಯನ್ನು ಅನುಭವಿಸುತ್ತೀರಿ.

9. ರೋಗನಿರೋಧಕ ಶಕ್ತಿ ಸುಧಾರಣೆ
ಗಾಯತ್ರಿ ಮಂತ್ರ ಪಠಣವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಕಾರಣವಾದ ಹೈಪೋಥಾಲಮಸ್ ಅನ್ನು ಸಕ್ರಿಯಗೊಳಿಸುತ್ತದೆ. ನೀವು ಹೆಚ್ಚು ಆರೋಗ್ಯಯುತವಾಗಿಯೂ ಮತ್ತು ಫಿಟ್ ಆಗಿಯೂ ಇರುತ್ತೀರಿ. 

10. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
ಈ ಮಂತ್ರದ ಪಠಣವು ಖಿನ್ನತೆ, ಆತಂಕ ಮತ್ತು ಒತ್ತಡವನ್ನು ಸಹ ತೆಗೆದುಹಾಕುತ್ತದೆ. ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ, ಜನರು ಹೆಚ್ಚು ಆತಂಕಕ್ಕೆ ಒಳಗಾಗುತ್ತಿದ್ದಾರೆ ಮತ್ತು ನಿಮ್ಮ ಆತಂಕವನ್ನು ನಿಯಂತ್ರಣದಲ್ಲಿಡಲು ಪಠಣವು ಅತ್ಯಂತ ನೈಸರ್ಗಿಕ ಮಾರ್ಗವಾಗಿದೆ.

Follow Us:
Download App:
  • android
  • ios