ಈ ನಾಲ್ಕು ರಾಶಿಯ ಜನ ಹೆಚ್ಚಾಗಿ arranged marriage ಆಗ್ತಾರೆ

ನಿಮ್ಮದು ಅರೇಂಜ್ಡ್ ಮ್ಯಾರೇಜಾ ಅಥವಾ ಲವ್ ಮ್ಯಾರೇಜಾ ಎಂಬ ಕುತೂಹಲಾನಾ? ಕಂಡುಹಿಡಿಯಲು ಒಂದು ಮಾರ್ಗ ಇಲ್ಲಿದೆ!

Zodiac signs who likely to have an arranged marriage skr

ಮದುವೆ  ಅನ್ನೋದು ಎಲ್ಲರಿಗೂ ವಿಶೇಷ. ಬಹುತೇಕ ಯುವಜನತೆ ತಮ್ಮ ಮದುವೆ ಹೇಗಾಗಬಹುದು ಎಂದು ಕನಸು ಕಾಣುತ್ತಿರುತ್ತಾರೆ. ಅದ್ರಲ್ಲೂ ಲವ್ ಮ್ಯಾರೇಜ್ ಆಗುತ್ತಾ, ಆರೇಂಜ್ಡ್ ಮ್ಯಾರೇಜ್ ಆಗುತ್ತಾ ಅನ್ನೋ ಕುತೂಹಲ ಬಹುತೇಕರಿಗಿರುತ್ತೆ. ಲವ್ ಮ್ಯಾರೇಜ್ ಆಗ್ಲಿ ಅನ್ನೋ ಆಸೆನೂ ಗುಟ್ಟಾಗಿರುತ್ತೆ. ಆದ್ರೆ ಎಲ್ಲರಿಗೂ ಲವ್ ಆಗೋಲ್ಲ,  ಲವ್ ಆದೋರ್ಗೆಲ್ಲ ಅವ್ರ್ ಜೊತೆನೇ ಮದ್ವೆ ಆಗಲ್ಲ.. ಒಟ್ನಲ್ಲಿ ಒಂದ್ ಮದ್ವೆ ಅಂದ್ರೆ ನೂರಾರ್ ಅಡ್ಡಿ ಆತಂಕ ದಾಟಿ ಆಗೋಷ್ಟರಲ್ಲಿ ಲವ್ವೋ, ಆರೇಂಜ್ಡೋ, ಮದ್ವೆ ಆದ್ರೆ ಸಾಕು ಅನ್ನೋ ಸ್ಥಿತಿಗ್ ಬಂದಿರ್ತಾರೆ ಹೆಚ್ಚಿನವ್ರು. ಏಕಂದ್ರೆ ತಮ್ಮನ್ನ ಅರ್ಥ ಮಾಡ್ಕೊಂಡು ತಮ್ ಜೊತೆನೇ ಕಷ್ಟ ಸುಖಗಳಲ್ಲಿ ನಿಲ್ಲೋರೊಬ್ರು ಬೇಕಂಥ ಎಲ್ಲರ್ಗೂ ಅನ್ಸತ್ತೆ.. ಆರೇಂಜ್ಡ್ ಮ್ಯಾರೇಜಾಗಲೀ, ಲವ್ ಮ್ಯಾರೇಜಾಗಲೀ- ಎರಡಕ್ಕೂ ಅದರದೇ ಆದ ಪ್ಲಸ್ಸು, ಮೈನಸ್ಸು ಇದ್ದೇ ಇರುತ್ತದೆ. ಯಾವುದು ಬೆಸ್ಟ್ ಎಂದು ಹೇಳಲಾಗದು.

ಅಂದ ಹಾಗೆ, ಜ್ಯೋತಿಷ್ಯದ ಆಧಾರದಲ್ಲಿ ನೋಡಿದ್ರೆ ಈ ನಾಲ್ಕು ರಾಶಿಗಳದು ಆರೇಂಜ್ಡ್ ಮ್ಯಾರೇಜ್ ಆಗೋದೇ ಹೆಚ್ಚು. ನಿಮ್ಮ ರಾಶಿ ಇದ್ರಲ್ಲಿ ಇದ್ಯಾ ಇಲ್ವಾ ನೋಡ್ಕೊಳ್ಳಿ..

ತುಲಾ ರಾಶಿ(Libra)
ತುಲಾ ರಾಶಿಯವರು ಭಾವನಾತ್ಮಕವಾಗಿ ಸಮತೋಲಿತ ಜನರು, ನಿಷ್ಠಾವಂತರು. ಅವರು ಬದ್ಧತೆಗಳಿಗೆ ಹೆದರುವುದಿಲ್ಲ ಮತ್ತು ಒಮ್ಮೆ ಅವರು ಬದ್ಧರಾದರೆ ಅದಕ್ಕೆ ಸಂಪೂರ್ಣ ನಿಷ್ಠೆ ತೋರುತ್ತಾರೆ. ತುಲಾ ಆಳವಾದ ಕಾಳಜಿ ಹೊಂದಿರುವ ಮತ್ತು ಪೋಷಿಸುವ ಆತ್ಮವಾಗಿದ್ದು, ಅವರು ಯಾವಾಗಲೂ ಇತರರನ್ನು ಹುಡುಕುತ್ತಿರುತ್ತಾರೆ. ಈ ರಾಶಿಚಕ್ರದವರು ಅರೇಂಜ್ಡ್ ಮ್ಯಾರೇಜ್ ಹೊಂದುವ ಸಾಧ್ಯತೆ ಹೆಚ್ಚು.

Weekly Love Horoscope: ಒಂದು ರಾಶಿಗೆ ಬ್ರೇಕಪ್ ಸಂಕಟ, ಮತ್ತೊಂದಕ್ಕೆ ವಿವಾಹ ಬಾಹಿರ ಸಂಬಂಧ ಮಾರಕ

ಮೀನ ರಾಶಿ(Pisces)
ಮೀನವು ಸಂವೇದನಾಶೀಲ, ಕಾಳಜಿಯುಳ್ಳ ಮತ್ತು ಆದರ್ಶ ಪಾಲುದಾರರನ್ನು ಪ್ರೀತಿಸುವ ಜನರು. ಅವರು ವ್ಯವಸ್ಥಿತ ಮದುವೆಯಲ್ಲಿ ಪ್ರವರ್ಧಮಾನಕ್ಕೆ ಬರಲಿದ್ದಾರೆ ಮತ್ತು ಅವರು ಬೇಷರತ್ತಾಗಿ ಪ್ರೀತಿಸುವ ಆತ್ಮ ಸಂಗಾತಿಯನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಇವರು ಎಷ್ಟು ಭಾವುಕರು ಹಾಗೂ ಹಗಲುಗನಸು ಕಾಣುವವರೆಂದರೆ ವಾಸ್ತವ ಪ್ರೀತಿ ಇವರಿಗೆ ತಮ್ಮ ಕಲ್ಪನೆಗಿಂತ ತುಂಬಾ ವಿಭಿನ್ನವೂ, ನೀರಸವೂ ಎನಿಸುತ್ತದೆ. ಹೀಗಾಗಿ ಬ್ರೇಕಪ್ ಆಗುವುದು ಹೆಚ್ಚು. ಕಡೆಗೆ ಎಲ್ಲ ಬಿಟ್ಟು ಆರೇಂಜ್ಡ್ ಮ್ಯಾರೇಜ್‌ಗೆ ಕೊರಳೊಡ್ಡುತ್ತಾರೆ. 

ಕರ್ಕಾಟಕ ರಾಶಿ(Cancer)
ಆಳವಾದ ಕಾಳಜಿ ಮತ್ತು ಸೂಕ್ಷ್ಮ ಸ್ವಭಾವದ ಕರ್ಕಾಟಕ ರಾಶಿಚಕ್ರದವರು ಪ್ರೀತಿ ಮತ್ತು ಬದ್ಧತೆಯನ್ನು ಗೌರವಿಸುವವರು. ಅವರು ಪ್ರೀತಿಯ ನಿರಂತರ ಅಗತ್ಯವನ್ನು ಹೊಂದಿರುತ್ತಾರೆ. ಸದಾ ತಮ್ಮನ್ನು ಪ್ರೀತಿಸುವ ಜೀವಕ್ಕಾಗಿ ಹಂಬಲಿಸುತ್ತಲೇ ಇರುತ್ತಾರೆ. ಮತ್ತು ಅವರು ಉತ್ತಮ ಮಟ್ಟದ ತಿಳುವಳಿಕೆಯನ್ನು ಹೊಂದಿದ್ದಾರೆ. ಪ್ರೇಮ ವಿವಾಹಕ್ಕಿಂತ ಅರೇಂಜ್ಡ್ ಮ್ಯಾರೇಜ್‌ನಲ್ಲಿ ಅವರು ಹೆಚ್ಚು ಸಂತೋಷವಾಗಿರುತ್ತಾರೆ. ಒಂದು ವೇಳೆ ಹಟಕ್ಕೆ ಬಿದ್ದು ಪ್ರೇಮ ವಿವಾಹವಾದರೂ ಹೆಚ್ಚಿನ ಬಾರಿ ತಮ್ಮ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡುತ್ತಾರೆ. 

Baba Vanga Prediction: ನಿಜವಾಯ್ತು 2022ರ ಕುರಿತಾಗಿ ಬಾಬಾ ವಂಗಾ ಹೇಳಿದ್ದ ಎರಡೂ ಭವಿಷ್ಯ!

ವೃಶ್ಚಿಕ ರಾಶಿ(Scorpio)
ಈ ರಾಶಿಚಕ್ರ ಚಿಹ್ನೆಯು ರಹಸ್ಯವನ್ನು ಪ್ರೀತಿಸುತ್ತದೆ ಮತ್ತು ನಿಷ್ಠೆಯನ್ನು ಗೌರವಿಸುತ್ತದೆ. ಹೀಗಾಗಿ, ಇವರು ಯಾರನ್ನಾದರೂ ಪ್ರೀತಿಸಿದರೂ ಅದು ಗುಟ್ಟಾಗಿ ಉಳಿಯುವ ಸಾಧ್ಯತೆಯೇ ಹೆಚ್ಚು. ಈ ಎರಡೂ ವಿಷಯಗಳು ಅರೇಂಜ್ಡ್ ಮ್ಯಾರೇಜ್ ಅನ್ನು ಮಾತ್ರ ಆಧರಿಸಿವೆ. ಈ ರಾಶಿಚಕ್ರ ಚಿಹ್ನೆಗೆ ಸೇರಿದ ಜನರು ಹೆಚ್ಚಾಗಿ ಅರೇಂಜ್ಡ್ ಮ್ಯಾರೇಜ್ ಹೊಂದುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios