ಮದುವೆ ಬೇಗ ಆಗ್ಬೇಕೆಂದ್ರೆ ಶ್ರಾವಣ ಮಾಸದಲ್ಲಿ ಮಾಡಿ ಈ ಕೆಲಸ
ಶ್ರಾವಣ ಮಾಸದಲ್ಲಿ ಶಿವನ ಭಕ್ತರು ಈಶ್ವರನ ಆರಾಧನೆ ಮಾಡ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಆದ್ರೆ ಈ ಮಾಸದಲ್ಲಿ ಇನ್ನೂ ಕೆಲ ಕೆಲಸ ಮಾಡಬೇಕು. ಅದ್ರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಶ್ರಾವಣ ಮಾಸ ಹತ್ತಿರ ಬರ್ತಿದೆ. ಶ್ರಾವಣ ಮಾಸ ಶುರುವಾಯ್ತು ಅಂದ್ರೆ ಹಬ್ಬಗಳು ಒಂದಾದ್ಮೇಲೆ ಒಂದು ಸಾಲು ಸಾಲಾಗಿ ಬರುತ್ತೆ. ಶ್ರಾವಣ ಮಾಸಕ್ಕೆ ತಯಾರಿ ಈಗಿನಿಂದಲೇ ಶುರುವಾಗಿದೆ. ಶ್ರಾವಣ ಮಾಸದಲ್ಲಿ ಭೋಲೆನಾಥನ ಆಶೀರ್ವಾದವನ್ನು ಪಡೆಯಲು ಭಕ್ತರು ಉಪವಾಸ, ವೃತಗಳನ್ನು ಮಾಡ್ತಾರೆ. ಈ ಮಾಸದಲ್ಲಿ ಶಿವನು ಅತ್ಯಂತ ಸಂತೋಷದ ಭಂಗಿಯಲ್ಲಿ ನೆಲೆಸುತ್ತಾನೆಂದು ನಂಬಲಾಗಿದೆ. ಆದ್ದರಿಂದ ಭಕ್ತರು ಶಿವನನ್ನು ಸಂತೋಷಪಡಿಸಲು ಅನೇಕ ಪ್ರಯತ್ನ ಮಾಡ್ತಾರೆ. ವಾಸ್ತು ಶಾಸ್ತ್ರದಲ್ಲಿಯೂ ಶ್ರಾವಣ ಮಾಸದ ಬಗ್ಗೆ ಹೇಳಲಾಗಿದೆ. ಶ್ರಾವಣ ಮಾಸದಲ್ಲಿ ಯಾವ ಸುಲಭ ಉಪಾಯಗಳನ್ನು ಮಾಡಿದ್ರೆ ಶಿವನನ್ನು ಮೆಚ್ಚಿಸಬಹುದು ಎನ್ನುವ ಬಗ್ಗೆ ವಿವರವಾಗಿ ಹೇಳಲಾಗಿದೆ. ಇಂದು ಶ್ರಾವಣ ಮಾಸದ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಏನಿದೆ ಎಂಬುದನ್ನು ನಾವು ಹೇಳ್ತೇವೆ.
ಶ್ರಾವಣ ಮಾಸದಲ್ಲಿ ಹೀಗಿರಲಿ ಮನೆ :
ಈ ದಿಕ್ಕಿನಲ್ಲಿ ಇರಲಿ ನೀರಿನ ಮೂಲ : ಶಿವ ( (Siva)) ನಿಗೆ ನೀರು (Water) ) ಎಂದರೆ ತುಂಬಾ ಇಷ್ಟ. ಈ ತಿಂಗಳಲ್ಲಿ ನೀವು ಉತ್ತರ ದಿಕ್ಕಿನಲ್ಲಿ ನೀರಿನ ಮೂಲವನ್ನು ಸ್ಥಾಪಿಸಬಹುದು. ಈ ದಿಕ್ಕಿನಲ್ಲಿ ನೀರಿನ ಮೂಲವಿರುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಮನೆಯಲ್ಲಿ ಸಕಾರಾತ್ಮಕತ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಹಣದ ಹರಿವು ಕೂಡ ಹೆಚ್ಚಾಗುತ್ತದೆ. ನೀವು ಉತ್ತರ ದಿಕ್ಕಿನಲ್ಲಿ ನೀರಿನ ಮೂಲವನ್ನು ಇರಿಸಲು ಸಾಧ್ಯವಾಗಿಲ್ಲ ಎಂದಾದ್ರೆ ಪೂರ್ವ ದಿಕ್ಕಿನಲ್ಲಿ ಕೃತಕ ನೀರಿನ ಕಾರಂಜಿ ಸ್ಥಾಪಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಇದು ನಿಮಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ.
ಮನಿ ಪ್ಲಾಂಟ್ ಎಲ್ಲಿ ಇಡುವುದು ? : ಮಳೆಯ ಮಾಸ ಶ್ರಾವಣ ಮಾಸ. ನೀವು ಈ ತಿಂಗಳು ಮನೆಯಲ್ಲಿ ಗಿಡಗಳನ್ನು ನೆಟ್ಟರೆ ಅದರ ಬೆಳವಣಿಗೆ ತುಂಬಾ ಉತ್ತಮವಾಗಿರುತ್ತದೆ. ಮನಿ ಪ್ಲಾಂಟ್ ಅನ್ನು ಉತ್ತರ ದಿಕ್ಕಿನಲ್ಲಿ ನೆಡುವುದರಿಂದ ನೀವು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು. ಮನೆಯಲ್ಲಿ ಮನಿ ಪ್ಲಾಂಟ್ ನೆಡಲು ಶ್ರಾವಣ ಮಾಸ ತುಂಬಾ ಒಳ್ಳೆಯದು. ನಂಬಿಕೆಗಳ ಪ್ರಕಾರ, ಮನಿ ಪ್ಲಾಂಟ್ ಬೆಳೆದಂತೆ ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.
ಶಿವಲಿಂಗ ಪೂಜೆ ಶುರುವಾಗಿದ್ದು ಹೇಗೆ? ಮೊದಲ ಪೂಜೆ ಮಾಡಿದವರಾರು?
ಮನೆಯಲ್ಲಿರಲಿ ಇಂಥ ಶಿವನ ವಿಗ್ರಹ : ಶ್ರಾವಣ ಮಾಸದಲ್ಲಿ ಶಿವನ ಅರ್ಧನಾರೀಶ್ವರ ರೂಪವನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಈ ಪ್ರತಿಮೆಯನ್ನು ಪೂರ್ವ ದಿಕ್ಕಿನಲ್ಲಿ ಇರಿಸಬಹುದು. ಇದರಿಂದ ವಿಶೇಷ ಲಾಭವನ್ನೂ ಪಡೆಯಬಹುದು. ಇದಲ್ಲದೇ ಪತಿ-ಪತ್ನಿಯರ ನಡುವೆ ಪ್ರೀತಿಯೂ ಹೆಚ್ಚುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದ್ದರೆ ನೀವು ಪೂರ್ವ ದಿಕ್ಕಿನಲ್ಲಿ ಅರ್ಥನಾರೀಶ್ವರನ ಫೋಟೋ ಇಟ್ಟರೆ ಶುಭ ಲಾಭಗಳು ಪ್ರಾಪ್ತಿಯಾಗಲಿವೆ.
ತುಳಸಿ ಗಿಡ : ಮನೆಯಲ್ಲಿ ತುಳಸಿ ಗಿಡವು ಸಂತೋಷ ಮತ್ತು ಅದೃಷ್ಟದ ಸಂಕೇತವಾಗಿದೆ. ನಿಮ್ಮ ಮನೆಯಲ್ಲಿ ತುಳಸಿ ಗಿಡವಿಲ್ಲದಿದ್ದರೆ ಶ್ರಾವಣ ಮಾಸದಲ್ಲಿ ಈ ಗಿಡವನ್ನು ನೆಡಬಹುದು. ಇದರಿಂದ ಸಂತೋಷ ಮತ್ತು ಸಮೃದ್ಧಿ ಲಭ್ಯವಾಗುತ್ತದೆ. ತುಳಸಿ ಗಿಡವನ್ನು ಉತ್ತರ ದಿಕ್ಕಿನಲ್ಲಿ ಬೆಳೆಸಬೇಕು. ಅವಿವಾಹಿತ ಹುಡುಗಿಯರು ಈ ಮಾಸದಲ್ಲಿ ತುಳಸಿ ಗಿಡ ನೆಟ್ಟರೆ ಶೀಘ್ರದಲ್ಲೇ ಅವರ ಮದುವೆ ನೆರವೇರುತ್ತದೆ ಎಂದು ನಂಬಲಾಗಿದೆ.
ನಾಗರ ಪಂಚಮಿ: ಹಾವುಗಳ ಕುರಿತ ಈ ವಿಷ್ಯ ಕೇಳಿದ್ರೆ ಅಚ್ಚರಿ ಪಡ್ತೀರಾ..
ಗಂಗಾಜಲ ಸಿಂಪಡಣೆ : ನಂಬಿಕೆಗಳ ಪ್ರಕಾರ, ಶ್ರಾವಣ ಮಾಸದಲ್ಲಿ ನಮ್ಮ ಪರಿಸರದ ಸುತ್ತಲೂ ಸಾಕಷ್ಟು ಶಕ್ತಿ ಇರುತ್ತದೆ. ಈ ಸಮಯದಲ್ಲಿ, ಮನೆಯ ಮೂಲೆ ಮೂಲೆಗೆ ಗಂಗಾಜಲವನ್ನು ಸಿಂಪಡಿಸಬೇಖು. ಇದ್ರಿಂದ ಮಂಗಳಕರ ಲಾಭ ಪ್ರಾಪ್ತಿಯಾಘುತ್ತದೆ. ಇದು ನಿಮ್ಮ ಮನೆಯ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ಗಂಗಾಜಲವನ್ನು ಮನೆಯ ಎಲ್ಲ ಕಡೆ ಹಾಕ್ಬೇಕು. ಇದ್ರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆ ನಿಲ್ಲುತ್ತದೆ.