Asianet Suvarna News Asianet Suvarna News

ಮೂಗಿನ ಎಡಬದಿಗೇ ಮೂಗುತಿ ಧರಿಸಬೇಕು ಅಂತಾರಲ್ಲ, ಯಾಕೆ ಗೊತ್ತೆ? ನಾಚಿಕೊಳ್ಳಬೇಡಿ!

ಭಾರತೀಯ ಸ್ತ್ರೀ ದೇವತೆಗಳು ಸಾಮಾನ್ಯವಾಗಿ ಹೊಳೆಯುವ ಮೂಗುತಿಯನ್ನು ಧರಿಸಿರುತ್ತಾರೆ. ಈ ದೇವತಾ ವಿಗ್ರಹಗಳು ಎಡಭಾಗದ ಮೂಗಿಗೇ ಮೂಗುತಿ ಧರಿಸಿರುತ್ತವೆ ಗಮನಿಸಿದ್ದೀರಾ? ಅದ್ಯಾಕೆ ಗೊತ್ತೆ?

 

Why women should pierce nose pin to the left side nostril bni
Author
First Published Jul 5, 2024, 3:02 PM IST

ಇಂದು ಹೆಣ್ಣುಮಕ್ಕಳು ಸಣ್ಣ ಪ್ರಾಯದಲ್ಲೇ ಮೂಗು ಚುಚ್ಚಿಸಿಕೊಂಡು ಉರುಟುರುಟಾದ ಮೂಗುತಿ ಸಿಕ್ಕಿಸಿಕೊಂಡು ಓಡಾಡುವುದನ್ನು ನೀವು ನೋಡಬಹುದು. ಹಲವು ಮಂದಿ ಮೂಗಿನ ಎರಡೂ ಹೊಳ್ಳೆಗಳಿಗೂ ತೂತು ಮಾಡಿಸಿಕೊಂಡು ಎರಡೂ ಕಡೆಗೂ ಒಂದೊಂದು ನತ್ತು ಸಿಕ್ಕಿಸಿಕೊಳ್ಳುವುದು ಕೂಡ ಟ್ರೆಂಡ್ ಆಗಿದೆ. ಅಂದದ ಮುಖ ಹೊಂದಿದವರಿಗೆ ಇದೆಲ್ಲಾ ಒಪ್ಪುತ್ತದೆ; ಇಲ್ಲದಿದ್ದರೂ ಒಂದು ಮೂಗುತಿಯಿಂದ ಹೆಣ್ಣಿನ ಮುಖ ಫಳಫಳ ಮಿನುಗುತ್ತದೆ. ಅಂಥ ಪ್ರಭಾವಳಿ ಮೂಗುತಿಗಿದೆ.  

ಮೂಗುತಿ ಹಿಂದೂ ಧರ್ಮೀಯ ಸ್ತ್ರೀಯರಿಗೆ ಮಹತ್ವದ್ದು ಹಾಗೂ ಪವಿತ್ರ. ಕೆಲವು ಕಡೆ ಮುಸ್ಲಿಮರು ಮತ್ತು ಕೆಲವು ಆಫ್ರಿಕನ್‌ ಸಂಸ್ಕೃತಿಗಳಲ್ಲಿಯೂ ಇದು ಇದೆ. ಭಾರತದಲ್ಲಿ ಮೂಗುತಿ ಧರಿಸುವುದಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಇಲ್ಲಿ ಮಹಿಳೆಯರು ಮೂಗು ಚುಚ್ಚಿಸಿಕೊಳ್ಳುವುದು ಸಂಸ್ಕಾರವೇ ಆಗಿದೆ. ಹಿಂದೂ ಧರ್ಮದಲ್ಲಿ ಮಂಗಳಸೂತ್ರ, ಮೂಗುತಿ, ಕಾಲುಂಗುರ, ಕಿವಿಯೋಲೆ ಮತ್ತು ಕುಂಕುಮ ಮುತ್ತೈದೆಯರ ಲಕ್ಷಣಗಳು ಹೇಳಲಾಗುತ್ತದೆ. ಆದರೆ ಮದುವೆಯಾಗದಿದ್ದವರೂ ಮೂಗುತಿ ಧರಿಸುತ್ತಾರೆ.

ಹಿಂದೂ ಸಂಪ್ರದಾಯವಾಗಿದ್ದ ಮೂಗುತಿ ಧರಿಸುವುದು ದಿನಗಳು ಕಳೆದಂತೆ ಅಲಂಕಾರಿಕ ವಸ್ತುವಾಯಿತು. ಹಿಂದೆ ಹಿಂದೂಗಳಲ್ಲಿ ಒಂದು ಹೆಣ್ಣು ಮಗುವಿಗೆ 12 ಇಲ್ಲ 13 ವರ್ಷವಾಗುತ್ತಿದ್ದಂತೆ ಮೂಗು ಚುಚ್ಚಿಸುತ್ತಿದ್ದರು. ಇದರರ್ಥ ಆ ಮಗು ಮದುವೆ ವಯಸ್ಸಿಗೆ ಬರುತ್ತಿದ್ದಾಳೆ ಎನ್ನುವುದನ್ನು ಸೂಚಿಸುವುದಕ್ಕಾಗಿ. ಹಿಂದೂ ಧರ್ಮದಲ್ಲಿ ಕಿವಿ ಚುಚ್ಚುವಿಕೆಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿತ್ತೋ ಅಷ್ಟೇ ಪ್ರಾಮುಖ್ಯತೆಯನ್ನು ಮೂಗು ಚುಚ್ಚಿಸುವಿಕೆಗೂ ಕೂಡ ನೀಡಲಾಗಿತ್ತು. ತಜ್ಞರು ಮೂಗುತಿ ಧರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಕೂಡ ಎಂದು ಹೇಳುತ್ತಾರೆ.

ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳಲ್ಲಿ ಮೂಗು ಪಿನ್‌ಗಳನ್ನು ಧರಿಸಬಹುದಾದರೂ, ಚಿನ್ನವನ್ನು ಬಳಸುವುದು ಉತ್ತಮ. ಚಿನ್ನವು ಗುರುಗ್ರಹದ ಪ್ರಭಾವವನ್ನು ಹೊಂದಿದೆ. ಅದು ಅದೃಷ್ಟಕಾರಕವಾದ ಮಂಗಳ ಮತ್ತು ರವಿ ಗ್ರಹಕ್ಕೂ ನೆಲೆ. ಇದಲ್ಲದೆ, ಚಿನ್ನವು ಅದೃಷ್ಟದ ದೇವತೆಯಾದ ಲಕ್ಷ್ಮಿಯಿಂದ ಆಶೀರ್ವದಿಸಲ್ಪಟ್ಟಿದೆ. ಡೈಮಂಡ್ ಮೂಗುತಿ ಪಿನ್‌ಗಳು ಸರಳ ಮತ್ತು ಕ್ಲಾಸಿಯಾಗಿ ಕಾಣುತ್ತವೆ. ಆದರೆ ಶುಕ್ರಗ್ರಹವು ಜಾತಕದ ಅನಪೇಕ್ಷಿತ ಸ್ಥಾನಗಳಲ್ಲಿ ಇರುವವರು ವಜ್ರವನ್ನು ಧರಿಸಬಾರದು. ಶುಕ್ರಗ್ರಹವು ಅನುಕೂಲಕರವಾಗಿರುವವರಿಗೆ ವಜ್ರಗಳು ಅದೃಷ್ಟವನ್ನು ತರಬಹುದು.

ದೇವಸ್ಥಾನಕ್ಕೆ ಹೋದ್ರೆ ಅಳು ಬರುತ್ತಾ? ದೇವರಿದ್ದಾನೋ ಇಲ್ಲವೋ ಕಂಡು ಹಿಡಿಯೋದು ಹೀಗೆ!

ಅದೆಲ್ಲ ಸರಿ. ಆಯುರ್ವೇದ ಪದ್ಧತಿಯಲ್ಲಿ ಮೂಗುತಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆಯೆಂದು ಹೇಳಲಾಗಿದೆ. ಆದರೆ ಎಡಹೊಳ್ಳೆಗೇ ಮೂಗುತಿ ಧರಿಸುವುದಕ್ಕೂ ವೈದ್ಯಕೀಯ ಕಾರಣಗಳಿವೆ. ಎಡಹೊಳ್ಳೆಯ ಬಳಿ ಮೂಗುತಿ ಧರಿಸುವುದರಿಂದ ಮಹಿಳೆಯರಲ್ಲಿ ಕಂಡುಬರುವ ಮುಟ್ಟಿನ ನೋವು ಕಡಿಮೆಯಾಗುತ್ತದೆ. ಎಡ ಮೂಗಿನ ಹೊಳ್ಳೆಯಿಂದ ಹಾದುಹೋಗುವ ನಿರ್ದಿಷ್ಟ ನರಗಳು ಸ್ತ್ರೀ ಸಂತಾನೋತ್ಪತ್ತಿ ಅಂಗಗಳೊಂದಿಗೆ ಸಂಬಂಧವನ್ನು ಹೊಂದಿದ್ದು, ಇದು ಸ್ತ್ರೀಗೆ ಹೆರಿಗೆಗೆ ಸಹಕಾರಿ ಎನ್ನಲಾಗಿದೆ. ಇದು ಗರ್ಭಾಶಯವನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ ಅಂತ ಕೂಡ ನಂಬಲಾಗಿದೆ. 

ಉಂಗುರದಾಕಾರದ ಮೂಗುತಿ ಧರಿಸುವುದನ್ನು ಕೆಲವು ಹಳೆಯ ಹಸ್ತಪ್ರತಿಗಳಲ್ಲಿ, ವೈದಿಕ ಲಿಪಿಗಳಲ್ಲಿ ಉಲ್ಲೇಖಿಸಲಾಗಿದೆ. ಮೂಗುತಿ ಧಾರಣೆಯು ಸುಮಾರು 6000 ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಒಳಗೊಂಡಿದೆ. ರಿಂಗ್ ಮೂಗುತಿ ವಿದೇಶದಿಂದ ಬಂದದ್ದು. ಹಿಪ್ಪಿಗಳು ಭಾರತಕ್ಕೆ ವಲಸೆ ಬಂದ ನಂತರ ಅವರ ಈ ಸಂಪ್ರದಾಯವನ್ನು ಕಂಡು ಭಾರತೀಯರು ಆಕರ್ಷಿತರಾದರು ಹಾಗೂ ಭಾರತದಲ್ಲೂ ಅದು ರೂಢಿಗೆ ಬರಲು ಆರಂಭವಾಯಿತು.

ಒಂದೇ ಜನ್ಮರಾಶಿಗೆ ಸೇರಿದವರಿಬ್ಬರು ಮದ್ವೆಯಾಗ್ಬಾರದು ಎನ್ನೋದ್ಯಾಕೆ, ಹೇಗಿರುತ್ತೆ ಲೈಫ್?
 

Latest Videos
Follow Us:
Download App:
  • android
  • ios