Asianet Suvarna News Asianet Suvarna News

ದೇವಸ್ಥಾನಕ್ಕೆ ಹೋದ್ರೆ ಅಳು ಬರುತ್ತಾ? ದೇವರಿದ್ದಾನೋ ಇಲ್ಲವೋ ಕಂಡು ಹಿಡಿಯೋದು ಹೀಗೆ!

ಆ ದೇವಸ್ಥಾನದಲ್ಲಿ ಅದೇನೋ ಶಕ್ತಿ ಇದೆ. ಹೋದಾಗೆಲ್ಲ ಒಳ್ಳೆಯದಾಗಿದೆ ಅಂತಾ ಕೆಲವರು ಹೇಳ್ತಿರುತ್ತಾರೆ. ಅದು ಹೇಗೆ ದೇವರಿದ್ದಾನೆ ಎಂಬುದು ಗೊತ್ತಾಗುತ್ತೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ. 
 

positive vibes and Signs In Temple That You Experienced Presence Of God roo
Author
First Published Jul 4, 2024, 2:57 PM IST

ಪ್ರತಿಯೊಬ್ಬ ಭಕ್ತ ತನ್ನ ಕಷ್ಟಗಳ ಸರಮಾಲೆಯನ್ನೇ ಹಿಡಿದು ಹೋಗುವ ಒಂದೇ ಒಂದು ಜಾಗ ದೇವಸ್ಥಾನ. ಜಂಜಾಟದ ಬದುಕಿನ ಮಧ್ಯೆ ನಿಮ್ಮಿಷ್ಟದ ಪರಮಾತ್ಮ ನೆಲೆಸಿರುವ ದೇವಸ್ಥಾನಕ್ಕೆ ಹೋಗ್ತಿದ್ದಂತೆ ನೀವು ಎಲ್ಲವನ್ನೂ ಮರೆಯುತ್ತೀರಿ. ಹಾಗಂತ ಈ ಅನುಭವ ಎಲ್ಲ ದೇವಸ್ಥಾನ ಅಥವಾ ಎಲ್ಲ ಜಾಗದಲ್ಲಿ ಆಗಲು ಸಾಧ್ಯವಿಲ್ಲ. ಕೆಲ ದೇವಸ್ಥಾನದ ಒಳಗೆ ಹೋಗ್ತಿದ್ದಂತೆ ವಿಚಿತ್ರ ಅನುಭವಕ್ಕೆ ಭಕ್ತ ಒಳಗಾಗ್ತಾನೆ. ಸಕಾರಾತ್ಮಕತೆ ಇರುವ, ದೇವರು ನೆಲೆಸಿರುವ ಜಾಗದಲ್ಲಿ ಮಾತ್ರ ಈ ಅನುಭವ ಆಗಲು ಸಾಧ್ಯ. ನೀವು ಹೋಗುವ ದೇವಸ್ಥಾನದಲ್ಲೂ ದೇವರು ನೆಲೆಸಿದ್ದಾನೆ ಎಂಬುದನ್ನು ಹೇಗೆ ಪತ್ತೆ ಮಾಡಬೇಕು ಎಂಬುದನ್ನು ನಾವಿಂದು ಹೇಳ್ತೇವೆ. ದೇವಸ್ಥಾನದ ಪರಿಮಳವೇ ಎಲ್ಲ ನೋವು ಮರೆಸುವ ಶಕ್ತಿ ಹೊಂದಿದೆ. ಅಲ್ಲೊಂದು ಸಕಾರಾತ್ಮಕತೆಯ ವೈಬ್ರೇಷನ್ ಇರುತ್ತದೆ. ನೀವು ದೇವಸ್ಥಾನದ ಒಳಗೆ ಹೋಗ್ತಿದ್ದಂತೆ ನಿಮಗೆ ಈ ಐದು ಅನುಭವಗಳಾದ್ರೆ ದೇವಸ್ಥಾನದಲ್ಲಿ ದೇವರಿದ್ದಾನೆ ಎಂಬುದನ್ನು ನೀವು ತಿಳಿಯಬಹುದು. ಅದ್ರಲ್ಲೂ ಐದನೇ ಅನುಭವ ಅದ್ಭುತವಾಗಿದೆ. ಭಕ್ತನೊಬ್ಬನಿಗೆ ದೇವಸ್ಥಾನದಲ್ಲಿ ಐದನೇ ಅನುಭವವಾದ್ರೆ ಆತ ದೇವರನ್ನು ಕಂಡಂತೆ. 

ದೇವಸ್ಥಾನ (Temple) ಕ್ಕೆ ಹೋದಾಗ ಆಗುತ್ತಾ ಈ ಅನುಭವ ? : 

ಸಂಪೂರ್ಣ ಶಾಂತಿ (Peace of Mind) : ದೇವಸ್ಥಾನ ಅಂದ್ಮೇಲೆ ಅಲ್ಲಿ ಭಕ್ತರ ಓಡಾಟ, ಗಂಟೆ ನಾದ, ಮಂತ್ರಘೋಷ ಕೇಳಿಸ್ತಿರುತ್ತದೆ. ಭಕ್ತರ (Devotees) ದಂಡೇ ದೇವಸ್ಥಾನದಲ್ಲಿದ್ದು, ಗದ್ದಲ ಜೋರಾಗಿದ್ರೂ ನಿಮಗೆ ಅದ್ಯಾವುದರ ಪರಿವೆ ಇಲ್ಲ. ನಿಮ್ಮ ಮನಸ್ಸು ಸಂಪೂರ್ಣ ಶಾಂತವಾಗಿದೆ, ಎಲ್ಲೆಡೆ ಶಾಂತಿ ನೆಲೆಸಿರುವ ಅನುಭವ ಆಗ್ತಿದೆ ಎಂದಾದ್ರೆ ಆ ದೇವಸ್ಥಾನದಲ್ಲಿ ಪರಮಾತ್ಮ (Divine) ನ ಸಕಾರಾತ್ಮಕ ಶಕ್ತಿ ನೆಲೆಸಿದೆ ಎಂದೇ ಅರ್ಥ.  

ಜುಲೈ 9 ರ ಮಧ್ಯಾಹ್ನ ದಿಂದ ಶ್ರೀಮಂತಿಕೆ ಭಾಗ್ಯ, ಈ 5 ರಾಶಿಗೆ ರಾಜಯೋಗದಿಂದ ಜಾಕ್ ಪಾಟ್

ಎದ್ದು ನಿಲ್ಲುವ ರೋಮಗಳು, ವಿಚಿತ್ರ ಅನುಭವ : ಸಕಾರಾತ್ಮಕತೆ ಇದ್ದ ಜಾಗದಲ್ಲಿ ನೀವು ಹೋಗಿ ನಿಂತಾಗ ನಿಮ್ಮ ಇಡೀ ದೇಹ ಒಮ್ಮೆ ಕಂಪಿಸುತ್ತದೆ. ನಿಮ್ಮ ರೋಮಗಳು ಎದ್ದು ನಿಲ್ಲುತ್ತವೆ. ನಿಮಗೆ ಅರಿವಿಲ್ಲದೆ ನಿಮ್ಮ ಮನಸ್ಸಿನಲ್ಲೊಂದು ವಿಶೇಷ ಅನುಭವವಾಗುತ್ತದೆ. ದೇವಸ್ಥಾನಕ್ಕೆ ಹೋದಾಗ ಕೂಡ ಅನೇಕ ಭಕ್ತರಿಗೆ ಈ ಅನುಭವವಾಗುತ್ತೆ. 

ನಿರೀಕ್ಷಿಸದೆ ಸಿಗುವ ವಸ್ತು : ದೇವಸ್ಥಾನಕ್ಕೆ ಹೋದಾಗ ನಿಮ್ಮ ನಿರೀಕ್ಷೆ ಇಲ್ಲದೆ ನಿಮಗೆ ವಸ್ತುಗಳು ಸಿಗುತ್ತವೆ. ಅದು ಹೂ ಆಗಿರಲಿ ಇಲ್ಲ ಪ್ರಸಾದವಾಗಿರಲಿ ಇಲ್ಲ ಹಿರಿಯ ವ್ಯಕ್ತಿಗಳ ಆಶೀರ್ವಾದವಾಗಿರಲಿ. ಅಪರಿಚಿತ ವ್ಯಕ್ತಿಯೊಬ್ಬರು ನಿಮಗೆ ಹೂ ನೀಡಿ ಹೋಗ್ಬಹುದು. ಇದು ಕೂಡ ದೇವರು ನೆಲೆಸಿದ್ದಾನೆಂಬುದರ ಸೂಚನೆ. 

ಮರೆತು ಹೋಗುವ ಸುಸ್ತು : ದೇವಸ್ಥಾನಕ್ಕೆ ನೀವು ಎಷ್ಟೇ ದೂರದಿಂದ ಹೋಗಿರಿ, ಎಷ್ಟೇ ಕಷ್ಟಪಟ್ಟಿರಿ, ದಾರಿ ಮಧ್ಯೆ ಒಂದಿಷ್ಟು ಸಮಸ್ಯೆಗಳು ನಿಮ್ಮನ್ನು ಕಾಡಿರಲಿ ಆದ್ರೆ ದೇವಸ್ಥಾನದ ಒಳಗೆ ಹೋಗ್ತಿದ್ದಂತೆ ನೀವು ಎಲ್ಲವನ್ನೂ ಮರೆತಿರುತ್ತೀರಿ. ಯಾವ ದಣಿವು, ಸುಸ್ತು ನಿಮ್ಮನ್ನು ಕಾಡೋದಿಲ್ಲ. ದೇವರ ಪ್ರಾರ್ಥನೆ, ದೇವರ ಧ್ಯಾನದಲ್ಲಿ ನೀವು ತಲ್ಲೀನರಾಗ್ತೀರಿ. ಹಿಂದೆ ಕಾಡಿದ್ದ ಯಾವ ನೋವು, ಸಂಕಟವೂ ನಿಮಗಿರೋದಿಲ್ಲ. 

ನಾಗಮಲೆಗೆ ಭಕ್ತರಿಗೆ, ಚಾರಣಿಗರಿಗೆ ನಿಷೇಧ ಭಕ್ತಾಧಿಗಳ ನಂಬಿ ಬದುಕಿದ್ದ ಜನರ ಕೈ ಖಾಲಿ!

ಕಾರಣವಿಲ್ಲದೆ ಅಳು : ಐದನೇ ಮತ್ತು ಕೊನೆ ಅನುಭವ ನಿಮಗೆ ವಿಚಿತ್ರ ಎನ್ನಿಸಬಹುದು. ಆದ್ರೆ ಇದು ಸತ್ಯ. ಇದು ಅತ್ಯಂತ ಮಹತ್ವದ್ದು ಕೂಡ. ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುತ್ತಿದ್ದಂತೆ ನಿಮ್ಮ ಅರಿವಿಲ್ಲದೆ, ಯಾವುದೇ ಖುಷಿ, ದುಃಖದ ಕಾರಣವಿಲ್ಲದೆ ಕಣ್ಣಂಚಿನಲ್ಲಿ ನೀರು ಬಂದಿರುತ್ತದೆ. ತುಂಬಾ ಸುಸ್ತಾಗಿದ್ದ, ನೊಂದಿದ್ದ ನಿಮ್ಮನ್ನು ಯಾರೋ ನಿಮ್ಮವರು ಪ್ರೀತಿಯಿಂದ  ಅಪ್ಪಿಕೊಂಡ ಅನುಭವ ನಿಮಗಾಗುತ್ತದೆ. ಒಂಟಿತನ ನಿಮಗೆ ಕಾಡೋದಿಲ್ಲ. ಮನಸ್ಸು ಶಾಂತವಾಗುತ್ತದೆ. ದಣಿವು ದೂರವಾಗುತ್ತದೆ. ನೆಮ್ಮದಿ, ಆರಾಮದ ಅನುಭವವಾಗುತ್ತದೆ. ಇಡೀ ದೇಹ ಹಗುರವಾಗುತ್ತದೆ.   

Latest Videos
Follow Us:
Download App:
  • android
  • ios