ಅನಗತ್ಯ ಕೂದಲಿನ ಚಿಂತೆಯಾ? ಹ್ಯಾಪಿ ಶೇವಿಂಗ್ ನಿಮ್ಮದಾಗಲು ಇಲ್ಲಿವೆ ಟಿಪ್ಸ್
ಕೈ-ಕಾಲುಗಳ ಮೇಲಿನ ಕೂದಲು ನಿವಾರಣೆಗೆ ಈಗ ಮೊದಲಿನಂತೆ ಪಾರ್ಲರಿಗೆ ಹೋಗಲು ಭಯ.ಮನೆಯಲ್ಲಿ ವ್ಯಾಕ್ಸ್ ಮಾಡೋದು ಕಿರಿಕಿರಿ ಕೆಲ್ಸವಾದ ಕಾರಣ ಬಹುತೇಕರ ಮೆಚ್ಚಿನ ಆಯ್ಕೆ ಶೇವಿಂಗ್. ಆದ್ರೆ ಶೇವಿಂಗ್ ಸ್ಮೂಥ್ ಹಾಗೂ ಸೇಫ್ಆಗಿರಲು ಒಂದಿಷ್ಟು ಟಿಪ್ಸ್ ಅನುಸರಿಸೋದು ಅಗತ್ಯ.
ಲಾಕ್‍ಡೌನ್ ನಿರ್ಬಂಧಗಳು ಸಡಿಲಿಕೆಯಾಗಿದ್ರೂ ಬಹುತೇಕ ಮಹಿಳೆಯರು ಪಾರ್ಲರ್‍ಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.ಆದ್ರೆ ಪಾರ್ಲರ್‍ಗೆ ಹೋಗಲಾಗುತ್ತಿಲ್ಲ ಎಂಬ ಕಾರಣಕ್ಕೆ ಸೌಂದರ್ಯ ಪ್ರಜ್ಞೆಯನ್ನು ಮರೆಯಲು ಸಾಧ್ಯವೇ? ಇದೇಕಾರಣಕ್ಕೆ ಇಂದು ಮಹಿಳೆಯರು ಮನೆಯಲ್ಲೇ ಸಿದ್ಧಪಡಿಸಬಹುದಾದ ಸೌಂದರ್ಯವರ್ಧಕ ಫೇಸ್‍ಪ್ಯಾಕ್‍ಗಳು, ಮನೆಮದ್ದುಗಳ ಮೊರೆ ಹೋಗುತ್ತಿದ್ದಾರೆ. ತ್ವಚೆ, ಕೂದಲು, ಉಗುರುಗಳು, ಪಾದಗಳ ಸೌಂದರ್ಯವರ್ಧನೆಗೆ ಮನೆಯಲ್ಲೇ ಏನಾದ್ರು ಮಾಡ್ಬಹುದು. ಆದ್ರೆ ಕೈ-ಕಾಲುಗಳ ಮೇಲೆ ಬೆಳೆಯುವ ಕೂದಲುಗಳದ್ದೇ ದೊಡ್ಡ ಪ್ರಾಬ್ಲಂ. ವ್ಯಾಕ್ಸ್ ಮಾಡೋದು ಸಿಕ್ಕಾಪಟ್ಟೆ ಕಿರಿಕಿರಿ ಕೆಲ್ಸವಾದ ಕಾರಣ ಶೇವಿಂಗ್ ಮೊರೆ ಹೋಗುವವರೇ ಹೆಚ್ಚು.ಶೇವಿಂಗ್ ಮೂಲಕ ಕೂದಲು ತೆಗೆಯೋದೇನೋ ಸುಲಭ. ಆದ್ರೆ ಅದ್ರಿಂದ ಉಂಟಾಗೋ ಕೆಂಪು ಗುಳ್ಳೆಗಳು, ಗಾಯಗಳು ಅಥವಾ ಬೇರೆ ವಿಧದ ಅಲರ್ಜಿಗಳಿಂದ ಮುಕ್ತಿ ಪಡೆಯೋದು ಹೇಗೆ ಎಂಬುದೇ ಅನೇಕರ ಮುಂದಿರೋ ಪ್ರಶ್ನೆ. ಶೇವ್ ಮಾಡೋವಾಗ ಕೆಲವೊಂದು ಟ್ರಿಕ್ಸ್ ಅನುಸರಿಸಿದ್ರೆ ಸ್ಮೂಥ್ ಹಾಗೂ ಸೇಫ್ ಸೇವ್ ನಿಮ್ಮದಾಗುತ್ತೆ.
ಎಂತೆಂಥಾ ಮಾಸ್ಕುಗಳು ಬಂದಿವೆ ಗೊತ್ತಾ!
ಶೇವ್‍ಗೂ ಮುನ್ನ ಆ ಭಾಗವನ್ನು ತೊಳೆಯಿರಿ
ಕಾಲು ಅಥವಾ ಕೈಗಳನ್ನು ಶೇವ್ ಮಾಡೋ ಮುನ್ನ ನೀರಿನಿಂದ ತೊಳೆಯಿರಿ. ಇದ್ರಿಂದ ಆ ಭಾಗ ಕ್ಲೀನ್ ಆಗುತ್ತದೆ. ಅಲ್ಲದೆ, ಡೆಡ್ ಸ್ಕಿನ್ ಸೆಲ್‍ಗಳು ದೂರವಾಗೋದ್ರಿಂದ ಚರ್ಮ ನುಣುಪಾಗಿ ಶೇವಿಂಗ್ ಮಾಡೋದು ಸುಲಭವಾಗುತ್ತದೆ.
ಕೂದಲಿನ ಬೆಳವಣಿಗೆ ದಿಕ್ಕಿಗೆ ವಿರುದ್ಧವಾಗಿರಲಿ ಶೇವ್
ಪಾರ್ಲರ್‍ನಲ್ಲಿ ವ್ಯಾಕ್ಸ್ ಮಾಡೋವಾಗ ಸ್ಟ್ರಿಪ್ ಅನ್ನು ಕೂದಲಿನ ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ಎಳೆಯೋದನ್ನು ಗಮನಿಸಿರಬಹುದು. ಹೀಗೆ ಮಾಡೋದ್ರಿಂದ ಕೂದಲು ಚೆನ್ನಾಗಿ ಕಿತ್ತು ಬರುತ್ತದೆ. ಶೇವ್ ಮಾಡೋವಾಗ ಕೂಡ ಕೂದಲಿನ ಬೆಳವಣಿಗೆಯ ದಿಕ್ಕನ್ನು ಗಮನಿಸೋದು ಅಗತ್ಯ. ಉದಾಹರಣೆಗೆ ಕಾಲಿನ ಕೂದಲುಗಳು ಕೆಳಮುಖವಾಗಿ ಬೆಳೆದಿರುತ್ತವೆ. ಹೀಗಾಗಿ ಶೇವ್ ಮಾಡೋವಾಗ ರೇಝರ್ ಅನ್ನು ಕೆಳಭಾಗದಿಂದ ಮೇಲ್ಮುಖವಾಗಿ ಎಳೆಯಬೇಕು. ಒಮ್ಮೆ ಹೀಗೆ ಮಾಡಿದ ಬಳಿಕ ಇನ್ನೊಮ್ಮೆ ಮೇಲಿನಿಂದ ಕೆಳಗೆ ಎಳೆಯಬೇಕು. ಹೀಗೆ ಮಾಡೋದ್ರಿಂದ ಕೂದಲುಗಳು ಬೇರುಸಹಿತ ಕ್ಲೀನ್ ಆಗುತ್ತವೆ.ನೀವು ಕೂದಲು ಯಾವ ದಿಕ್ಕಿನಲ್ಲಿ ಬೆಳೆಯುತ್ತಿದೆಯೋ ಆ ಕಡೆಗೆ ರೇಝರ್ ಬಳಸಿದ್ರೆ ಬೇರುಗಳು ಹಾಗೆಯೇ ಉಳಿಯುತ್ತವೆ. ಅಲ್ಲದೆ, ಕೆಲವೇ ದಿನಗಳಲ್ಲಿ ಕೂದಲು ಬೆಳೆಯುತ್ತದೆ.
ಆಗಾಗ ರೇಝರ್ ಬದಲಾಯಿಸಿ
ಒಂದು ರೇಝರ್‍ನಿಂದ 10-12 ಬಾರಿ ಶೇವ್ ಮಾಡ್ಬಹುದು. ಆ ಬಳಿಕ ಅದನ್ನು ಎಸೆದು ಹೊಸ ರೇಝರ್ ಬಳಸಬೇಕು. ಅಲ್ಲದೆ, ಶೇವ್ ಮಾಡಿದ ಬಳಿಕ ರೇಝರ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ ನೀರಿನಂಶ ಉಳಿಯದಂತೆ ಎಚ್ಚರ ವಹಿಸಬೇಕು. ತುಕ್ಕು ಹಿಡಿದ ರೇಝರ್ ಅನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.ಇನ್ನು ರೇಝರ್ ಅನ್ನು ಗಾಳಿಗೆ ತೆರೆದಿಡೋದಕ್ಕಿಂತ ಗಾಳಿಯಾಡದ ಬಾಕ್ಸ್ನಲ್ಲಿ ಹಾಕಿಡೋದು ಒಳ್ಳೆಯದು. ಈಗಾಗಲೇ ಬಳಸಿರುವ ರೇಝರ್ ಬಳಕೆಗೂ ಮುನ್ನ ಡೆಂಟಾಲ್ ನೀರಿನಲ್ಲಿ ಅದ್ದಿ ಶುಚಿಗೊಳಿಸಿದ ಬಳಿಕವೇ ಬಳಸಿ. ಬ್ಲೇಡ್‍ಗಳನ್ನು ಬದಲಾಯಿಸಲು ಸಾಧ್ಯವಿರುವಂತಹ ರೇಝರ್ ಬಳಸಿ.
ಬಂತು ನೋಡಿ ಕೊರೋನಾ ಫ್ಯಾಷನ್ ಟ್ರೆಂಡ್!
ಸೋಪ್ ಬೇಡ, ಶೇವಿಂಗ್ ಜೆಲ್ ಬಳಸಿ
ಶೇವಿಂಗ್ ಮಾಡೋವಾಗ ಲುಬ್ರಿಕೆಂಟ್ ಅಗತ್ಯ.ಬಹುತೇಕರು ಸೋಪ್ ಅನ್ನೇ ಲುಬ್ರಿಕೆಂಟ್ ಆಗಿ ಬಳಸುತ್ತಾರೆ.ಆದ್ರೆ ಸೋಪ್‍ಗಿಂತ ಶೇವಿಂಗ್ ಜೆಲ್ ಬಳಸೋದು ಉತ್ತಮ.ಕೈಗಳು ಅಥವಾ ಕಾಲುಗಳನ್ನು ಒದ್ದೆ ಮಾಡಿಕೊಂಡು ಶೇವಿಂಗ್ ಜೆಲ್ ಹಚ್ಚಿ ಶೇವ್ ಮಾಡಿ. ಇದ್ರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಜೊತೆಗೆ ಗಾಯ ಅಥವಾ ಉರಿಯ ಅನುಭವ ಕೂಡ ಆಗೋದಿಲ್ಲ. ಶೇವ್ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ. ಇದ್ರಿಂದ ಚರ್ಮದಲ್ಲಿರುವ ರಂಧ್ರಗಳು ಮುಚ್ಚುತ್ತವೆ.
ಮಾಯಿಶ್ಚರೈಸರ್ ಬಳಸಿ
ಕೈಗಳು ಹಾಗೂ ಕಾಲುಗಳಲ್ಲಿರುವ ಕೂದಲುಗಳನ್ನು ರೇಝರ್‍ನಿಂದ ಶೇವ್ ಮಾಡಿದ ನಂತರ ಮಾಯಿಶ್ಚರೈಸರ್ ಬಳಸಲು ಮರೆಯಬೇಡಿ. ಇದ್ರಿಂದ ತ್ವಚೆಗೆ ತೇವಾಂಶ ಸಿಗುವ ಜೊತೆ ಉರಿ ಕಡಿಮೆಯಾಗುತ್ತದೆ.