ಆಫೀಸ್ ಒಳಗಿರಿ ಅಥವಾ ಮಾರ್ಕೆಟ್‌ಗೆ ಬನ್ನಿ, ಮನೆಯಿಂದ ಆಚೆ ಅಡಿಯಿಡೋ ಮುಂಚೆ ಮಾಸ್ಕ್ ಮುಟ್ಟಿ ನೋಡ್ಕೊಳ್ಳುವ ರೂಢಿ. ಈ ಫೇಸ್‌ ಮಾಸ್ಕ್ ಧರಿಸಿ ಹೊರಗೆ ಬಂದರೆ ಒಂಥರಾ ಶಸ್ತ್ರ ಸಜ್ಜಿತರಾಗಿ ಯುದ್ಧಕ್ಕೆ ಹೊರಟ ಫೀಲ್. ಆಳದಲ್ಲಿ ಕೊರೋನಾ ಭಯ ಇದ್ದರೂ ಮಾಸ್ಕ್ ಹಾಕ್ಕೊಂಡಿದ್ದೀನಲ್ಲಾ, ನಂಗೇನಾಗಲ್ಲ ಅನ್ನೋ ನೆಮ್ಮದಿ. ಹೀಗೆ ಕೊರೋನಾ ವಿರುದ್ಧದ ಹೋರಾಟಕ್ಕೆ ಅಸ್ತ್ರವಾಗಿ ಕಾಣಿಸಿಕೊಂಡ ಈ ಮಾಸ್ಕ್ ಈಗ ಪ್ಯಾಶನ್ ಸ್ಟೇಟ್ ಮೆಂಟ್ ಆಗ್ತಿದೆ ಗೊತ್ತಾ.. ಎಂತೆಂಥಾ ಮಾಸ್ಕ್ ಗಳಿವೆ ಅನ್ನೋದನ್ನ ನೋಡಿದ್ರೆ ನಿಮ್ಗೆ ಶಾಕ್ ಆಗ್ದೇ ಇರೋದಕ್ಕೇ ಸಾಧ್ಯವಿಲ್ಲ. ಶುರು ಶುರುವಲ್ಲಿ ಎಲ್ಲ ಕಡೆ ಸರ್ಜಿಕಲ್ ಮಾಸ್ಕ್ ಧರಿಸಿದವರೇ ಕಾಣುತ್ತಿದ್ದರು. ನಿಧಾನಕ್ಕೆ ಹೆಚ್ಚಿನವರು ಎನ್‌ ೯೦ ಮಾಸ್ಕ್‌ ಗಳಿಗೆ ಶಿಫ್ಟ್ ಆದರು. ಈಗ ಎಲ್ರಿಗೂ ಈ ಮಾಸ್ಕ್ ಧರಿಸಿ ಬೋರ್ ಬಂದಿದೆ. ಅವರೆಲ್ಲ ಶಿಸ್ತಾಗಿ ಬಟ್ಟೆಯ ಮಾಸ್ಕ್ ಗಳನ್ನು ಧರಿಸಿ ಹೊರಬೀಳುತ್ತಿದ್ದಾರೆ. ನಿಧಾನಕ್ಕೆ ಈ ಬಟ್ಟೆ ಮಾಸ್ಕ್‌ಗಳಲ್ಲಿ ಏನೇನೆಲ್ಲ ವೖವಿಧ್ಯತೆಗಳು ಕಂಡು ಧರಿಸಿರುವವರ ವ್ಯಕ್ತಿತ್ವಕ್ಕೂ ಮಾಸ್ಕ್‌ಗೂ ಸಂಬಂಧ ಇದೆಯಾ ಅಂತ ಜಡ್ಜ್ ಮಾಡುವ ಲೆವೆಲ್‌ ಗೆ ಈ ಮಾಸ್ಕ್ ಗಳು ಹೋಗಿವೆ. 

ಬಟ್ಟೆ ಮಾಸ್ಕ್ ಗಳಲ್ಲೇ ಎಷ್ಟೊಂದು ವೆರೈಟಿ
ಎನ್ ೯೦ ಅಥವಾ ಸರ್ಜಿಕಲ್ ಮಾಸ್ಕ್‌ಗಳಲ್ಲಿ ಯುನಿಫಾರ್ಮಿಟಿ ಇರುತ್ತೆ. ಅದರ ಉದ್ದೇಶ ನಿಮ್ಮ ಆರೋಗ್ಯ ಕಾಯೋದಷ್ಟೇ. ಚೆಂದ ಹೆಚ್ಚಿಸೋದಲ್ಲ. ಆದರೆ ಬಟ್ಟೆ ಮಾಸ್ಕ್‌ಗಳು ಹಾಗಲ್ಲ. ತಕ್ಕಮಟ್ಟಿಗೆ ಕೊರೋನಾದಿಂದ ಸುರಕ್ಷತೆ ನೀಡೋ ಜೊತೆಗೆ ಅಂದ ಚೆಂದವನ್ನೂ ಹೆಚ್ಚಿಸುತ್ತವೆ. ಬಟ್ಟೆ ಮಾಸ್ಕ್ ಅಂದ ಕೂಡಲೇ ಮಾರ್ಕೆಟ್ ನಲ್ಲಿ ಸಿಗೋ ರೆಡಿಮೇಟ್ ಫೇಸ್ ಮಾಸ್ಕ್ ಅಂದುಕೊಳ್ಳಬೇಕಿಲ್ಲ. ರೆಡಿ ಮೇಡ್ ಮಾಸ್ಕ್ ಗಳಲ್ಲಿ ನಿಮಗೆ ಶುದ್ಧ ಹತ್ತಿ ಬಟ್ಟೆಯ ಮಾಸ್ಕ್ ಸಿಗೋದು ಅಪರೂಪ. ಶುದ್ಧ ಹತ್ತಿ ಬಟ್ಟೆಯ ಮೆಟೀರಿಯಲ್‌ಗಳಲ್ಲದಿದ್ದರೆ ದಿನದಲ್ಲಿ ಹೆಚ್ಚು ಕಾಲ ಬಳಸಿದಾಗ ಉಸಿರಾಟಕ್ಕೆ ಸಮಸ್ಯೆ ಆಗಬಹುದು.  ಅವು ನಿಮ್ಮ ಮುಖದ ಅಳತೆಗೆ ಸರಿಹೊಂದುವ ಗ್ಯಾರೆಂಟಿಯೂ ಇಲ್ಲ. ಇದರ ಬದಲಿಗೆ ನಿಮ್ಮಿಷ್ಟದ ಪ್ಲೇನ್ ಬಣ್ಣದ ಕಾಟನ್ ಮೆಟೀರಿಯಲ್ ಖರೀದಿಸಿ ನೀವೇ ಮಾಸ್ಕ್ ಗಳನ್ನು ಮನೆಯಲ್ಲಿ ಸಿದ್ಧಪಡಿಸಬಹುದು. ಅಥವಾ ಟೖಲರ್ ಹತ್ರ ನಿಮಗೆ ಬೇಕಾದ ಡಿಸೖನ್ ಹೇಳಿ ಮಾಸ್ಕ್ ರೆಡಿ ಮಾಡಿಸಬಹುದು. 

ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಸೆಲೆಬ್ರಿಟಿಗಳೇನು ಮಾಡ್ತಾರೆ? 

ಈ ಥರ ಡಿಸೈನ್‌ಗಳಿರಲಿ
- ಪ್ಲೇನ್ ಬಣ್ಣದ ಮೃದುವಾದ ಶುದ್ಧ ಹತ್ತಿಯ ಬಟ್ಟೆ ಖರೀದಿಸಿ. 
- ಪ್ಲೇನ್ ಬಣ್ಣದ ಮಾಸ್ಕ್ ಮೇಲೆ ಬೇರೆ ಬೇರೆ ವಿನ್ಯಾಸದ ಪ್ಯಾಚ್‌ ವರ್ಕ್ ಮಾಡಿಸಿ. ಇವು ನಿಮ್ಮ ಉಡುಗೆಗೆ ಮ್ಯಾಚ್ ಆಗೋ ಹಾಗಿದ್ದರೆ ಸಖತ್ತಾಗಿರುತ್ತೆ. 
- ಸಿಂಗಲ್ ಲೇಯರ್ ಬೇಡವೇ ಬೇಡ. ಎರಡು ಲೇಯರ್ ಓಕೆ. ಮೂರು ಲೇಯರ್‌ಗಳಿದ್ದರೆ ಅತ್ಯುತ್ತಮ. 
- ಎಲ್ಯಾಸ್ಟಿಕ್‌ ಹಾಕಿದ್ರೆ ಜಾಸ್ತಿ ಹೊತ್ತು ಬಳಸಿದಾಗ ಕಿವಿ ನೋಯುತ್ತೆ. ಇರಿಟೇಶನ್‌ ಶುರುವಾಗಬಹುದು. ಅದರ ಬದಲಿಗೆ ಬಟ್ಟೆಯದ್ದೇ ಹಿಂದೆ ಟೖ ಮಾಡುವಂಥಾ ಮಾಸ್ಕ್ ವಿನ್ಯಾಸ ಮಾಡಬಹುದು. 
- ಇದರ ಮೇಲೆ ಎಂಬ್ರಾಯಿಡರಿ ಹಾಕೋದೂ ಈಗ ಫ್ಯಾಶನ್. ಸ್ಪೆಷಲ್ ಸಂದರ್ಭಗಳಲ್ಲಿ ನೀವು ಈ ಮಾಸ್ಕ್‌ಗಳನ್ನು ಬಳಸಬಹುದು. 

ತರಕಾರಿಗಳನ್ನು ಸೋಪ್‌ ನೀರಲ್ಲಿ ತೊಳೆದರೆ ಭಾರೀ ಡೇಂಜರ್! 

ಬಾಲಿವುಡ್‌ನಲ್ಲಿ ಸಾರಾ ಆಲಿ ಖಾನ್ ಚೆಂದದ ಬಟ್ಟೆ ಮಾಸ್ಕ್ ಧರಿಸುತ್ತಾರೆ. ಮ್ಯಾಚಿಂಗ್ ಮಾಸ್ಕ್ ಧರಿಸೋದೂ ಇದೆ. ಬಾಲಿವುಡ್‌ನ ಫೇಮಸ್‌ ಡ್ರೆಸ್‌ ಡಿಸೖನರ್ ಮಸಾಬಾ ಗುಪ್ತ ಇದೀಗ ತಮ್ಮ ಶಾಪ್‌ಗಳಲ್ಲಿ ಡ್ರೆಸ್‌ ಜೊತೆಗೆ ಮ್ಯಾಚಿಂಗ್‌ ಮಾಸ್ಕ್‌ಗಳನ್ನೂ ಸೇಲ್ ಮಾಡ್ತಿದ್ದಾರೆ. ಅಲ್ಲಿಗೆ ಮಾಸ್ಕ್ ಅನ್ನೋದು ಈ ಕೋವಿಡ್ ಕಾಲದ ಫ್ಯಾಶನ್‌ ಸ್ಟೇಟ್‌ಮೆಂಟೂ ಆಗ್ತಿದೆ. ನೀವೂ ಈ ಹೊಸ ಟ್ರೆಂಡ್ ಬಗ್ಗೆ ಕಣ್ಣು ಹಾಯಿಸಬಹುದು. 

ಮಾಸ್ಕ್‌ ಧರಿಸದಿದ್ರೆ 1ಲಕ್ಷ ದಂಡ, ಲಾಕ್ಡೌನ್‌ ಉಲ್ಲಂಘಿಸಿದರೆ 2 ವರ್ಷ ...