Asianet Suvarna News Asianet Suvarna News

ಬಾಲಿವುಡ್‌ನಲ್ಲಿ ರಣ್‌ವೀರ್ ಸಿಂಗ್‌ ಫ್ಯಾಷನ್‌ ಸೆನ್ಸ್ ಬೆಸ್ಟ್ ಎಂದ ಸಲ್ಲು ಮಿಯಾ

ಬಿಟೌನ್‌ ಮಂದಿ ಫ್ಯಾಷನ್ ಪ್ರಿಯರು. ಯಾವಾಗಲೂ ಅಟ್ರ್ಯಾಕ್ಟಿವ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ನಟರ ವಿಷಯಕ್ಕೆ ಬಂದಾಗ ಬಾಲಿವುಡ್‌ನ ಫ್ಯಾಷನ್ ಐಕಾನ್ ರಣವೀರ್ ಸಿಂಗ್‌. ಹಲವೆಡೆ ಕಾಣಿಸಿಕೊಳ್ಳುವಾಗಲೂ ಚಿತ್ರ-ವಿಚಿತ್ರ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಸಲ್ಮಾನ್ ಖಾನ್ ಸಹ ನಟ ರಣವೀರ್ ಸಿಂಗ್ ಅವರ ರೋಮಾಂಚಕ ಫ್ಯಾಷನ್ ಆಯ್ಕೆಗಳನ್ನು ಹೊಗಳಿದ್ದಾರೆ.

Salman Khan says no one can follow Ranveer Singhs fashion sense Vin
Author
First Published Dec 21, 2022, 12:31 PM IST

ಬಾಲಿವುಡ್‌ ಅಂದ್ರೆ ಬ್ಯೂಟಿ. ಬಿಟೌನ್‌ನಲ್ಲಿ ಎಲ್ಲಾ ನಟ-ನಟಿಯರು ತಮ್ಮ ಸೌಂದರ್ಯದ (Beauty) ಬಗ್ಗೆ, ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದರ ಬಗ್ಗೆ ಹೆಚ್ಚು ಕಾಳಜಿ (Care) ಹೊಂದಿದ್ದಾರೆ. ಹೀಗಾಗಿಯೇ ಅವರು ಪ್ರತಿದಿನ ಜಿಮ್, ಯೋಗ, ಧ್ಯಾನ್, ಡಯೆಟ್ ಮೊದಲಾದವುಗಳನ್ನು ಮಾಡುತ್ತಿರುತ್ತಾರೆ. ಮಾತ್ರವಲ್ಲ ಬಿಟೌನ್‌ ಮಂದಿ ಫ್ಯಾಷನ್ ಪ್ರಿಯರು. ಯಾವಾಗಲೂ ಅಟ್ರ್ಯಾಕ್ಟಿವ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಹಿರಿಯ ನಟಿಯರಿಂದ ಹಿಡಿದು ಈಗಷ್ಟೇ ಬಾಲಿವುಡ್‌ಗೆ ಕಾಲಿಟ್ಟ ನಟಿಯರು ಸಹ ಪಬ್ಲಿಕ್ ಅಪಿಯರೆನ್ಸ್‌ಗೆ ಬಂದಾಗ ಸಖತ್ತಾಗಿ ಡ್ರೆಸ್ ಮಾಡಿಕೊಳ್ಳುತ್ತಾರೆ. ನಟಿಯರು ಎಲ್ಲರೂ ಕಾಂಪಿಟೇಶನ್‌ಗೆ ಬಿದ್ದಂತೆ ಸಖತ್ತಾಗಿ ಡ್ರೆಸ್ ಮಾಡುವವರೇ. ಆದರೆ ನಟರ ವಿಷಯಕ್ಕೆ ಬಂದಾಗ ಬಾಲಿವುಡ್‌ನ ಫ್ಯಾಷನ್ ಐಕಾನ್ ರಣವೀರ್ ಸಿಂಗ್‌.

ರಣವೀರ್ ಸಿಂಗ್ ಫ್ಯಾಷನ್ ಶೋ, ಇವೆಂಟ್‌, ಮೂವಿ ಪ್ರಮೋಷನ್ ಹೀಗೆ ಹಲವೆಡೆ ಕಾಣಿಸಿಕೊಳ್ಳುವಾಗಲೂ ಚಿತ್ರ-ವಿಚಿತ್ರ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ದೊಗಲೆ ಪ್ಯಾಟ್,‌ ಬಣ್ಣ ಬಣ್ಣದ ಡ್ರೆಸ್, ಹರಿದ ಡ್ರೆಸ್ ವಿಚಿತ್ರವೆನಿಸಿದರೂ ಎಲ್ಲರ ಗಮನ ಸೆಳೆಯುತ್ತದೆ. ಸದ್ಯ ಬಿಟೌನ್‌ನ ಸಲ್ಲು ಬಾಯ್‌ ಕೂಡಾ ರಣವೀರ್ ಸಿಂಗ್ ಫ್ಯಾಷನ್ ಸೆನ್ಸ್‌ ಮತ್ತು ವ್ಯಕ್ತಿತ್ವವನ್ನು (Personality) ಹೊಗಳಿದ್ದಾರೆ. 

ಪಿಂಕ್ ಟ್ಯೂಬ್ ಬಾಡಿಕಾನ್ ಡ್ರೆಸ್‌ನಲ್ಲಿ ಊರ್ವಶಿ ರೌಟೇಲಾ ಮಾದಕ ಲುಕ್‌ ವೈರಲ್‌

ರಣವೀರ್ ಸಿಂಗ್ ಡ್ರೆಸ್ ಆಯ್ಕೆಯನ್ನು ಹೊಗಳಿದ ಸಲ್ಮಾನ್
ನಟ ರಣವೀರ್ ಸಿಂಗ್ ಅವರ ರೋಮಾಂಚಕ ಫ್ಯಾಷನ್ ಆಯ್ಕೆಗಳು ಸಲ್ಮಾನ್ ಖಾನ್ ಅವರ ಗಮನಕ್ಕೆ ಬಂದಿದೆ. ತನ್ನ ಅತಿರೇಕದ ಮತ್ತು ದಿಟ್ಟ ಹೇಳಿಕೆಗಳಿಂದಾಗಿ ರಣವೀರ್, ಅವರ ಉಡುಪಿಗೆ ಹೆಚ್ಚು ಪ್ರಶಂಸೆ ಮತ್ತು ಟ್ರೋಲಿಂಗ್ ಅನ್ನು ಪಡೆಯುತ್ತಾರೆ, ಆದರೆ ಅವರ ವ್ಯಕ್ತಿತ್ವಕ್ಕೆ ನಿಜವಾಗಿದ್ದರೂ, ಅವರು ಯಾವುದೇ ಟೀಕೆಗಳಿಂದ ತಲೆಕೆಡಿಸಿಕೊಳ್ಳುವುದಿಲ್ಲ ಎಂದು  ಸಲ್ಮಾನ್ ಖಾನ್‌, ರಣವೀರ್‌ ಸಿಂಗ್‌ ಬಗ್ಗೆ ಹೇಳಿದ್ದಾರೆ. 'ರಣವೀರ್ ಸಿಂಗ್‌, ಫ್ಯಾಶನ್ ಸೆನ್ಸ್ ಅನ್ನು ಯಾರೂ ಅನುಸರಿಸಲು ಸಾಧ್ಯವಿಲ್ಲದ ಏಕೈಕ ಸ್ಟಾರ್. ಅವರು ಧರಿಸುವ ಬಟ್ಟೆಗಳು ಮತ್ತು ಅದನ್ನು ಕ್ಯಾರೀ ಮಾಡುವ ರೀತಿ ಅದ್ಭುತವಾಗಿದೆ' ಎಂದು ಸಲ್ಮಾನ್ ಬಿಗ್ ಬಾಸ್ 16 ರ ಇತ್ತೀಚಿನ ಸಂಚಿಕೆಯಲ್ಲಿ ಹೇಳಿದರು.

ತಮ್ಮ ಸಹೋದರಿ ಅರ್ಪಿತಾ ಅವರು ರಣವೀರ್ ಅವರನ್ನು ಚಿಕ್ಕಂದಿನಿಂದಲೂ ತಿಳಿದಿದ್ದಾರೆ ಮತ್ತು ನಟನಿಗೆ ಅವರ ಸುತ್ತಲೂ ಯಾವುದೇ ಸ್ಟಾರ್‌ಡಮ್ ಇಲ್ಲ ಎಂದು ಗಮನಿಸಿದ್ದಾರೆ ಎಂದು ಸಲ್ಮಾನ್ ಹೇಳಿದ್ದಾರೆ. ನನ್ನ ತಂಗಿ ಅರ್ಪಿತಾ ಶಾಲೆಯಿಂದಲೂ ಅವನನ್ನು ತಿಳಿದಿದ್ದಾಳೆ. ಅವನು ಬದಲಾಗಿದ್ದಾನೆಯೇ ಎಂದು ನಾನು ಅವಳನ್ನು ಕೇಳಿದೆ. ಅವಳು ನನಗೆ ಹೇಳಿದಳು, 'ಇಲ್ಲ ಭಾಯ್, ರಣವೀರ್ ಶಾಲೆಯಿಂದಲೂ ಹೀಗೆಯೇ ಇದ್ದಾನೆ. ಅವರು ನನಗಿಂತ ಹೆಚ್ಚು ನನ್ನ ಚಿತ್ರಗಳು ಮತ್ತು ಸಂಭಾಷಣೆಗಳನ್ನು ತಿಳಿದಿದ್ದಾನೆ. ನನಗಷ್ಟೇ ಅಲ್ಲ, ಸಂಜು (ಸಂಜಯ್ ದತ್), ಅಮೀರ್ (ಖಾನ್) ಮತ್ತು ಶಾರುಖ್ ಅವರನ್ನೂ ಅವರು ತಿಳಿದಿದ್ದಾನೆ. ಚಲನಚಿತ್ರಗಳ ದೊಡ್ಡ ಅಭಿಮಾನಿಯಾಗಿರುವುದರಿಂದ ಅವನು ಈ ಉದ್ಯಮದಲ್ಲಿ ಇರಲು ಅರ್ಹರು' ಎಂದು ತಂಗಿ ಹೇಳಿದ್ದಾಗಿ ಸಲ್ಮಾನ್‌ ಖಾನ್ ತಿಳಿಸಿದರು.

ಎದೆಯಿಂದ ಕೊಂಚ ಕೆಳಗಿರೋ ಮೆಣಸಿನ ಕಾಯಿ ಟ್ಯಾಟೂ ತೋರಿಸೋದು ಉರ್ಫಿಗೆಲ್ಲಿಲ್ಲದ ಖುಷಿ!

ರಣವೀರ್ ಮುಂದಿನ ರೋಹಿತ್ ಶೆಟ್ಟಿ ಅವರ ಸರ್ಕಸ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲೂ ನಟಿಸಲಿದ್ದು, ಅದು ಮುಂದಿನ ವರ್ಷ ಬಿಡುಗಡೆಯಾಗಲಿದೆ

Follow Us:
Download App:
  • android
  • ios