ರೋಮಲ್ಲಿ ಸಾರಿ ಉಟ್ಟು ಭಾರತೀಯ ನಾರಿಯ ಸವಾರಿ: ನೋಡಿಯೇ ಬಾಕಿಯಾದ ಜನ

ರೋಮ್‌ನಲ್ಲಿ ಭಾರತೀಯ ಮಹಿಳೆಯೊಬ್ಬರು ಭಾರತೀಯ ಧಿರಿಸಾದ ಸೀರೆ ಧರಿಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದು, ಇದನ್ನು ನೋಡಿದ ಅಲ್ಲಿನ ಜನ ಬಹಳ ಅಚ್ಚರಿಯಿಂದ ಅವರನ್ನು ನೋಡುತ್ತಿದ್ದಾರೆ.  ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ,

indian woman fires street of the Rome by wearing saree video goes viral akb

ನಮ್ಮದು ಬಹು ವಿಧದ ವೈವಿಧ್ಯದ ಸಂಸ್ಖೃತಿ, ವೈವಿಧ್ಯತೆಯಲ್ಲಿ ಏಕತೆ ಎಂಬ ನುಡಿಗೆ ತಕ್ಕಂತೆ ಇರುವ ದೇಶ ನಮ್ಮದು ರಾಜ್ಯದಿಂದ ರಾಜ್ಯಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ನಮ್ಮ ಭಾಷೆ ವೇಷ ಭೂಷಣ ಎಲ್ಲವೂ ವಿಭಿನ್ನ ವಿಶೇಷ ಆದರೆ. ವಿದೇಶಗಳಲ್ಲಿ ಹೀಗಿಲ್ಲ, ಎಲ್ಲಿಗೆ ಹೋಗಲಿ ಒಂದೇ ತರದ ವಸ್ತ್ರಸಂಹಿತೆ ಸಣ್ಣಪುಟ್ಟ ವ್ಯತ್ಯಾಸ ಬಿಟ್ಟರೆ ಅಲ್ಲಿ ಭಾರತದಂತೆ ದೊಡ್ಡ ರೀತಿಯ ವೈವಿಧ್ಯತೆ ಇಲ್ಲ. ಇದೇ ಕಾರಣಕ್ಕೆ ಸದಾ ಕಾಲ ವಿದೇಶಿಗರ ಪಾಲಿಗೆ ಭಾರತ ಹಾಗೂ ಇಲ್ಲಿನ ಜನರು ಒಂತರ ಕುತೂಹಲದ ಗೂಡಾಗುತ್ತಾರೆ. ಭಾರತೀಯ ವೇಷಭೂಷಣಗಳು ಅವರನ್ನು ಸದಾ ಆಕರ್ಷಿಸುತ್ತವೆ. ಹಾಗೆಯೇ ರೋಮ್‌ನಲ್ಲಿ ಭಾರತೀಯ ಮಹಿಳೆಯೊಬ್ಬರು ಭಾರತೀಯ ಧಿರಿಸಾದ ಸೀರೆ ಧರಿಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದು, ಇದನ್ನು ನೋಡಿದ ಅಲ್ಲಿನ ಜನ ಬಹಳ ಅಚ್ಚರಿಯಿಂದ ಅವರನ್ನು ನೋಡುತ್ತಿದ್ದಾರೆ. ಕೆಲವರು ದೂರದಿಂದ ಈ ಸಾರಿ ಉಟ್ಟ ಮಹಿಳೆಯ ವೀಡಿಯೋ ಮಾಡುತ್ತಿದ್ದರೆ, ಮತ್ತೆ ಕೆಲವರು ಚಪ್ಪಾಳೆ ತಟ್ಟುತ್ತಿದ್ದಾರೆ, ಇನ್ನು ಕೆಲವರು ಅಷ್ಟೇ ಕುತೂಹಲದಿಂದ ಅವನ್ನು ನೋಡುತ್ತಲೇ ಬಾಕಿಯಾಗಿದ್ದಾರೆ.

ಡಿಜಿಟಲ್ ಕ್ರಿಯೇಟರ್ ಆಗಿರುವ ಪಲ್ಲವಿ ರಾಜ್ ಎಂಬುವವರು ಈ ವೀಡಿಯೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಪಲ್ಲವಿ ಕೆಂಪು ಬಣ್ಣದ ಸೀರೆಯುಟ್ಟು ರಸ್ತೆಯಲ್ಲಿ ಗಾಂಭೀರ್ಯದಿಂದ ಸಾಗುತ್ತಿದ್ದರೆ, ರಸ್ತೆಯಲ್ಲಿ ಸಾಗುವ ಪ್ರತಿಯೊಬ್ಬರೂ ಅವರನ್ನು ಗಮನಿಸುತ್ತಿದ್ದಾರೆ. ಕೆಲವರ ಮುಖದಲ್ಲಿ ಸಂತೋಷ ನಗು ಕಾಣಿಸುತ್ತಿದ್ದರೆ ಮತ್ತೆ ಕೆಲವರು ದೂರದಿಂದಲೇ ಅವರ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. 

ಬಿಕಿನಿಗಳ ಮಧ್ಯೆ ಸಾರಿಧಾರಿ : ವಿದೇಶಿ ಬೀಚ್‌ನಲ್ಲಿ ಭಾರತೀಯ ನಾರಿ ವಿಡಿಯೋ ಫುಲ್ ವೈರಲ್‌

ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ.  ತಮ್ಮ ವಿವಾಹ ವಾರ್ಷಿಕೋತ್ಸವದ ಕಾರಣಕ್ಕೆ ಪಲ್ಲವಿ ಸೀರೆಯುಟ್ಟಿದ್ದು, ವಿದೇಶದಲ್ಲೂ ತಮ್ಮ ಮೂಲ ಸಂಸ್ಖೃತಿಯನ್ನು ವೇಷ ಭೂಷಣವನ್ನು ಎತ್ತಿ ಹಿಡಿಯುವ ಪ್ರಯತನ್ನ ಮಾಡಿದ್ದಾರೆ.  ಐತಿಹಾಸಿಕ ರೋಮ್‌ ನಗರದಲ್ಲಿ ಅವರು ನಡೆದು ಹೋಗುತ್ತಿದ್ದರೆ, ಅಲ್ಲಿಗೆ ಬಂದ ಇತರ ಪ್ರವಾಸಿಗರು ಇವರನ್ನು ಅಚ್ಚರಿ ಕುತೂಹಲದಿಂದ ನೋಡುತ್ತಿದ್ದಾರೆ. ಅವರುಟ್ಟ ಸೀರೆ ಎಲ್ಲರ ಗಮನವನ್ನು ಸೆಳೆದಿದೆ. 

ಬರೀ ಜೀನ್ಸ್ ಪ್ಯಾಂಟ್ ಚೆಡ್ಡಿ ಟೀಶರ್ಟಗಳು ಶರ್ಟ್‌ಗಳು ಮಾತ್ರ ಕಾಣಿಸುವ ಆ ರಸ್ತೆಯಲ್ಲಿ ಪಲ್ಲವಿ ನಡೆದು ಹೋಗುತ್ತಿದ್ದರೆ ಇವರೇ ಎದ್ದು ಕಾಣಿಸುತ್ತಿದ್ದಾರೆ. ನೋಡುಗರೆಲ್ಲಾ ತಿರುಗಿ ತಿರುಗಿ ಅವರನ್ನು ನೋಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇಡೀ ಜನಜಂಗುಳಿಯ ಮಧ್ಯೆ ಇಲ್ಲಿ ಸಾರಿ ಉಟ್ಟ ಪಲ್ಲವಿ ಎದ್ದು ಕಾಣಿಸುವುದರ ಜೊತೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವುದು ಸುಳ್ಳಲ್ಲ.  ಇನ್ನು ಪಲ್ಲವಿಯವರ ಈ ವೀಡಿಯೋ ನೋಡಿದ ಭಾರತೀಯರು ಫುಲ್ ಖುಷಿಯಾಗಿದ್ದು ಅನೇಕ ಕಾಮೆಂಟ್ ಮಾಡಿದ್ದಾರೆ. 

ಸಾಮಾನ್ಯವಾಗಿ ಬೇರೆ ಕಡೆಯ ನಮ್ಮದಲ್ಲದ ವೇಷ ಭೂಷಣಗಳು  ನಮ್ಮನ್ನು ಅತೀವವಾಗಿ ಸೆಳೆಯುತ್ತವೆ. ಇದೇ ಕಾರಣಕ್ಕೆ ಇಂದು ಭಾರತದ ವಸ್ತ್ರ ಮಾರುಕಟ್ಟೆಯಲ್ಲಿ ಅಗಾಧವಾದ ಬದಲಾವಣೆಯಾಗಿದ್ದು, ಬಹುತೇಕ ಭಾರತೀಯ ಸಂಸ್ಕೃತಿ ಮಿಶ್ರಿತ ವಿದೇಶಿ ಫ್ಯಾಷನ್ ಜನರನ್ನು ಸೆಳೆಯುತ್ತಿದೆ. ಇಂಡೋ ವೆಸ್ಟರ್ನ್‌ ಮಿಶ್ರಿತ ಧಿರಿಸು ಇತ್ತೀಚಿನ ಟ್ರೆಂಡ್. ಹೀಗಿರುವಾಗ ವಿದೇಶಿಗರು ನಮ್ಮ ವಸ್ತ್ರ ವೇಚಭೂಷಣ ನೋಡಿ ಅಚ್ಚರಿಗೊಂಡು ಆಕರ್ಷಿತರಾಗುವುದರಲ್ಲಿ ವಿಶೇಷವೇನು ಇಲ್ಲ. ಆದರೆ ಹೋದಲ್ಲೆಲ್ಲಾ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಹೋಗುವರು ತೀರಾ ವಿರಳ. 

ವೆನ್‌ ಇನ್‌ ರೋಮ್‌, ಡು ಎಸ್ ದ ರೋಮನ್ ಡು ಎಂಬುದು ಅಂಗ್ಲ ಭಾಷೆಯಲ್ಲಿ ತುಂಬಾ ಜನಪ್ರಿಯವಾಗಿರುವ ಮಾತು. ಇದರ ಅರ್ಥ ನೀವು ನಿಮ್ಮದಲ್ಲದ ಬೇರೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜೀವನಶೈಲಿಯನ್ನು ವೇಷಭೂಷಣವನ್ನು ಅಳವಡಿಸಿಕೊಳ್ಳಿ ಎಂಬುದು ಇದರ ಅರ್ಥ. ಅದರಂತೆ ತಮ್ಮದಲ್ಲದ ಸ್ಥಳಕ್ಕೆ ಪ್ರವಾಸಿ ತಾಣಗಳಿಗೆ ಹೋಗುವ ವೇಳೆ ತಮ್ಮ ಗುಣ ವೇಷ ಭೂಷಣಗಳನ್ನು ಜನ ಬದಲಿಸಿಕೊಳ್ಳುತ್ತಾರೆ. ಜೀವನಶೈಲಿಯನ್ನು ಬದಲಿಸಿಕೊಳ್ಳುತ್ತಾರೆ. ಇದರ ಉದ್ದೇಶ ಆ ಸಂಸ್ಕೃತಿಯೊಂದಿಗೆ ಬೆರೆಯುವುದರ ಜೊತೆ ಎಂಜಾಯ್ ಮಾಡುವುದು ಹಾಗೂ ವಿಭಿನ್ನವಾದ ಜೀವನಶೈಲಿಯನ್ನು ಆನಂದಿಸುವುದಾಗಿದೆ. 

 
 
 
 
 
 
 
 
 
 
 
 
 
 
 

A post shared by Pallavi Raj (@myshadowbeats)

 

Latest Videos
Follow Us:
Download App:
  • android
  • ios