Asianet Suvarna News Asianet Suvarna News

ಬಿಕಿನಿಗಳ ಮಧ್ಯೆ ಸಾರಿಧಾರಿ : ವಿದೇಶಿ ಬೀಚ್‌ನಲ್ಲಿ ಭಾರತೀಯ ನಾರಿ ವಿಡಿಯೋ ಫುಲ್ ವೈರಲ್‌

ಕೆಲವರು ತಾವು ಎಲ್ಲಿಗೆ ಹೋದರೂ ತಮ್ಮ ಸಂಸ್ಕೃತಿ ಸಂಪ್ರದಾಯ ವೇಷಭೂಷಣಗಳನ್ನು ಬದಲಿಸದೇ ತಮ್ಮತನವನ್ನು ಕಾಯ್ದುಕೊಳ್ಳುತ್ತಾರೆ. ಗುಂಪಿನೊಂದಿಗೆ ಬೆರೆತು ಹೋಗುವ ಬದಲು ಗುಂಪಿನಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾರೆ. ಅದೇ ರೀತಿ ತಮ್ಮತನದಲ್ಲೇ ಗುರುತಿಸಿಕೊಂಡ ಮಹಿಳೆಯ ವಿಡಿಯೋವೊಂದು ಈಗ ವೈರಲ್ ಆಗಿದೆ. 

Indian woman shows uniqueness in foreign beach with her traditional wear saree akb
Author
Bangalore, First Published Aug 23, 2022, 4:15 PM IST

ವೆನ್‌ ಇನ್‌ ರೋಮ್‌, ಡು ಎಸ್ ದ ರೋಮನ್ ಡು ಎಂಬುದು ಅಂಗ್ಲ ಭಾಷೆಯಲ್ಲಿ ತುಂಬಾ ಜನಪ್ರಿಯವಾಗಿರುವ ಮಾತು. ಇದರ ಅರ್ಥ ನೀವು ನಿಮ್ಮದಲ್ಲದ ಬೇರೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜೀವನಶೈಲಿಯನ್ನು ವೇಷಭೂಷಣವನ್ನು ಅಳವಡಿಸಿಕೊಳ್ಳಿ ಎಂಬುದು ಇದರ ಅರ್ಥ. ಅದರಂತೆ ತಮ್ಮದಲ್ಲದ ಸ್ಥಳಕ್ಕೆ ಪ್ರವಾಸಿ ತಾಣಗಳಿಗೆ ಹೋಗುವ ವೇಳೆ ತಮ್ಮ ಗುಣ ವೇಷ ಭೂಷಣಗಳನ್ನು ಜನ ಬದಲಿಸಿಕೊಳ್ಳುತ್ತಾರೆ. ಜೀವನಶೈಲಿಯನ್ನು ಬದಲಿಸಿಕೊಳ್ಳುತ್ತಾರೆ. ಇದರ ಉದ್ದೇಶ ಆ ಸಂಸ್ಕೃತಿಯೊಂದಿಗೆ ಬೆರೆಯುವುದರ ಜೊತೆ ಎಂಜಾಯ್ ಮಾಡುವುದು ಹಾಗೂ ವಿಭಿನ್ನವಾದ ಜೀವನಶೈಲಿಯನ್ನು ಆನಂದಿಸುವುದಾಗಿದೆ. 

ಅದಾಗ್ಯೂ ಕೆಲವರು ಎಲ್ಲೇ ಹೋದರೂ ನಮ್ಮತನ ನಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡಬಾರದು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ವರ್ಗಾಯಿಸಬೇಕು. ನಮ್ಮತನವನ್ನು ಉಳಿಸಿಕೊಂಡು ಬದುಕಬೇಕು ಎಂಬುದು ನಮ್ಮ ಬಹುತೇಕ ಭಾರತೀಯರ ಮಾತು ಹಾಗೂ ನಂಬಿಕೆ. ಇದಕ್ಕೆ ತಕ್ಕಂತೆ ಕೆಲವರು ತಾವು ಎಲ್ಲಿಗೆ ಹೋದರೂ ತಮ್ಮ ಸಂಸ್ಕೃತಿ ಸಂಪ್ರದಾಯ ವೇಷಭೂಷಣಗಳನ್ನು ಬದಲಿಸದೇ ತಮ್ಮತನವನ್ನು ಕಾಯ್ದುಕೊಳ್ಳುತ್ತಾರೆ. ಗುಂಪಿನೊಂದಿಗೆ ಬೆರೆತು ಹೋಗುವ ಬದಲು ಗುಂಪಿನಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾರೆ. ಜೊತೆಗೆ ಎಲ್ಲರ ಕುತೂಹಲಕ್ಕೆ ಪಾತ್ರರಾಗುತ್ತಾರೆ. ಅದೇ ರೀತಿ ತಮ್ಮತನದಲ್ಲೇ ಗುರುತಿಸಿಕೊಂಡ ಮಹಿಳೆಯ ವಿಡಿಯೋವೊಂದು ಈಗ ವೈರಲ್ ಆಗಿದೆ. 

 

ಬಿಕಿನಿ ತಂದ ಆಪತ್ತು: ಫೋಟೋ ನೋಡಿದ ವಿದ್ಯಾರ್ಥಿ: ಉಪನ್ಯಾಸಕಿಗೆ ಕಾಲೇಜಿನಿಂದ ಗೇಟ್‌ಪಾಸ್

ಸಾಮಾನ್ಯವಾಗಿ ಬೀಚ್‌ಗಳಿಗೆ ಹೋದಾಗ ನಮ್ಮ ಜನ ಸಾಮಾನ್ಯ ಭಾರತೀಯರು ಬಿಕಿನಿ ಧರಿಸದಿದ್ದರು, ಕನಿಷ್ಟ ನೀರಲ್ಲಿ ಆಟವಾಡುವಂತಹ ಲೂಸ್‌ ಲೂಸ್ ಆದ ಬಟ್ಟೆಗಳನ್ನು ಧರಿಸುತ್ತಾರೆ. ಕುಟುಂಬದ ಹಿರಿಯ ಮಹಿಳೆಯರು ಮಾತ್ರ ವೇಷ ಬದಲಾಯಿಸಲು ಮನಸಾಗದಿದ್ದರೆ, ಸಾರಿಯಲ್ಲೇ ಎಂಜಾಯ್ ಮಾಡುತ್ತಾರೆ. ಅದೇ ರೀತಿ ಬೀಚೊಂದಕ್ಕೆ ಭೇಟಿ ನೀಡಿದ ಮಹಿಳೆಯೊಬ್ಬರು, ಸಾರಿ ಧರಿಸಿದ್ದು, ತಮ್ಮ ತಲೆಗೆ ಸಾರಿಯ ಸೆರಗನ್ನು ಹೊದ್ದುಕೊಂಡಿದ್ದಾರೆ. ಇದರಲ್ಲೇನೂ ವಿಶೇಷ, ಇದು ಸಾಮಾನ್ಯ ಎಂದು ಯೋಚಿಸುತ್ತಿರಬಹುದು. ಆದರೆ ಇದು ಭಾರತದ ಬೀಚ್ ಅಲ್ಲ. ಇದೊಂದು ವಿದೇಶದ ಬೀಚೊಂದರ ವಿಡಿಯೋ. ಈ ಮಹಿಳೆಯ ಹಿಂದೆ ಮುಂದೆ ನಡೆದು ಹೋಗುತ್ತಿರುವ ಬಿಕಿನಿ ಧರಿಸಿದ ಮಹಿಳೆಯರನ್ನು ನೋಡಿದಾಗಲೇ ಇದು ಭಾರತದ ಬೀಚ್ ಅಲ್ಲ ಎಂಬುದನ್ನು ಮನಗಾಣಬಹುದು. 

ಪಿಂಕ್ ಬಿಕಿನಿಯಲ್ಲಿ ಮಿಂಚಿದ ಶಿವಲಿಂಗ ಬ್ಯೂಟಿ; ವೇದಿಕಾ ಹಾಟ್ ಲುಕ್ ವೈರಲ್

ಆದರೆ ಸಾಮಾನ್ಯವಾಗಿ ವಿದೇಶಗಳಿಗೆ ಹೋದಾಗ ಅಲ್ಲಿನ ವೇಷಭೂಷಣಕ್ಕೆ ಕೆಲವರು ಬೇಗ ಮಾರು ಹೋಗಿ ಅಲ್ಲಿನ ವೇಷ ಭೂಷಣಗಳನ್ನು ಧರಿಸಿ ಎಂಜಾಯ್ ಮಾಡಲು ಹಾತೊರೆಯುತ್ತಿರುತ್ತಾರೆ. ಅಂತಹದರಲ್ಲಿ ಈ ಮಹಿಳೆ ಆ ಎಲ್ಲಾ ಸಂಪ್ರದಾಯಗಳನ್ನು ಮುರಿದು ತಮ್ಮ ಎಂದಿನ ದೇಸಿ ಶೈಲಿಯಲ್ಲಿ ಎಲ್ಲರ ಮನ ಸೆಳೆದಿದ್ದಾರೆ ಸುಂದರವಾದ ಕೆಂಪು ಬಣ್ಣದ ಸೀರೆ ಉಟ್ಟಿರುವ ಇವರ ಸುತ್ತ ಬಿಕಿನಿ ಧರಿಸಿರುವ ಮಹಿಳೆಯರು ಕುತೂಹಲದಿಂದ ಇವರ ವೇಷಭೂಷಣವನ್ನು ನೋಡುತ್ತಿರುವುದು ಕಾಣುತ್ತಿದೆ. ಹೇಯ್ ಆಂಟಿ ನೀವು ಎಲ್ಲಿಗೆ ತಲುಪಿದ್ದೀರಾ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋ ನೋಡಿದ ಅನೇಕರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಎಲ್ಲೇ ಹೋದರೂ ತನ್ನ ಸಂಸ್ಕೃತಿ ವೇಷ ಭೂಷಣವನ್ನು ಬಿಡದ ಆಕೆಯನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋವನ್ನು 96 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು,  4,600 ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

Follow Us:
Download App:
  • android
  • ios