ಮುಖದ ಸಮಸ್ಯೆಗಳಾದ ಮೊಡವೆ, ಕಲೆ ಮತ್ತು ಸುಕ್ಕುಗಳನ್ನು ನಿವಾರಿಸಲು ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಫೇಸ್ ಪ್ಯಾಕ್ ತಯಾರಿಸುವ ವಿಧಾನ ಇಲ್ಲಿದೆ. ಈ ಮನೆಮದ್ದನ್ನು ಪ್ರಸಿದ್ಧ ಆಯುರ್ವೇದ ವೈದ್ಯ ರಾಬಿನ್ ಶರ್ಮಾ ಶಿಫಾರಸು ಮಾಡಿದ್ದಾರೆ.
ಮುಖ ಸಾಫ್ಟ್ ಆಗಿರಬೇಕು. ನ್ಯಾಚುರಲ್ ಆಗಿ ಹೊಳೆಯಬೇಕೆಂದು ಯಾರು ತಾನೇ ಬಯಸುವುದಿಲ್ಲ ಹೇಳಿ?. ಆದರೆ ಅನೇಕರು ಇದಕ್ಕಾಗಿ ಹಲವು ರೀತಿಯ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಅಷ್ಟೇ ಅಲ್ಲ, ಈ ಉತ್ಪನ್ನಗಳನ್ನು ಕೊಳ್ಳಲು ಸಾಕಷ್ಟು ಹಣವನ್ನು ಸಹ ಖರ್ಚು ಮಾಡುತ್ತಾರೆ. ಇನ್ನು ಇದರ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದಿದ್ದರೆ ಬೇರೆಯವರು ಹೇಳಿದರೆಂಬ ಶಿಫಾರಸ್ಸಿನ ಮೇರೆಗೆ ಈ ದುಬಾರಿ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇವುಗಳನ್ನು ಬಳಸುವುದರಿಂದ ಆರಂಭದಲ್ಲಿ ಮುಖದ ಮೇಲೆ ಏನೋ ಒಂದು ರೀತಿಯಲ್ಲಿ ಬದಲಾವಣೆಯಾದಂತೆ ಕಂಡರೂ ಕ್ರಮೇಣ ಕಾಲಾನಂತರದಲ್ಲಿ ಮುಖದ ಮೇಲೆ ಅದರ ಪರಿಣಾಮ ಕಡಿಮೆಯಾಗುತ್ತಾ ಹೋಗುತ್ತದೆ. ನೀವು ಸಹ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಮತ್ತು ತ್ವಚೆಯ ಆರೈಕೆ ಉತ್ಪನ್ನಗಳಿಗೆ ಹಣವನ್ನು ವ್ಯರ್ಥ ಮಾಡುತ್ತಿರುವುದಕ್ಕೆ ವಿಷಾದಿಸುತ್ತಿದ್ದರೆ ಈ ಲೇಖನ ನಿಮಗೆ ಸಹಕಾರಿಯಾಗಬಹುದು.
ಈ ಲೇಖನದಲ್ಲಿ ನಾವು ಪ್ರಸಿದ್ಧ ಆಯುರ್ವೇದ ವೈದ್ಯ ರಾಬಿನ್ ಶರ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿರುವ ಪೋಸ್ಟ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಡಾ. ರಾಬಿನ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿರುವ ಈ ವಿಡಿಯೋದಲ್ಲಿ ಮುಖ್ಯವಾಗಿ
ಮುಖದ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಪರಿಹಾರವನ್ನು ಹೇಳಿದ್ದಾರೆ. ಅಲ್ಲದೆ, ಈ ಆಯುರ್ವೇದ ವಿಧಾನವು ಗುಣಮಟ್ಟದಲ್ಲಿ ಉತ್ತಮ. ದುಬಾರಿಯೇನೂ ಅಲ್ಲ, ತ್ವಚೆಯ ಯಾವುದೇ ಉತ್ಪನ್ನಕ್ಕಿಂತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಯಾವ ಸಮಸ್ಯೆಗೆ ಸಿಗಲಿದೆ ಪರಿಹಾರ?
* ಮೊಡವೆಗಳು ಕಡಿಮೆಯಾಗುತ್ತವೆ
* ಮುಖದ ಕಲೆಗಳು ಕಡಿಮೆಯಾಗುತ್ತವೆ
* Uneven skin tone ಸುಧಾರಿಸುತ್ತದೆ.
* ಚರ್ಮದ ಸುಕ್ಕುಗಳನ್ನು ನಿವಾರಿಸುತ್ತದೆ.
ಇವೇ ನೋಡಿ ಆ ಪದಾರ್ಥಗಳು
ಈ ಮನೆಮದ್ದಿನಲ್ಲಿ, ಡಾ. ರಾಬಿನ್ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಮೂಲಭೂತ ಪದಾರ್ಥಗಳನ್ನು ಬಳಸಿದ್ದಾರೆ. ಆ ಪದಾರ್ಥಗಳು ಯಾವುವು ಎಂದು ತಿಳಿದುಕೊಳ್ಳೋಣ...
ಮಣ್ಣಿನ ಪಾತ್ರೆ
ಒಂದು ಹಿಡಿ ಅಕ್ಕಿ
ಒಂದು ಚಮಚ ಮಸೂರ್ ದಾಲ್
5 ರಿಂದ 6 ಬಾದಾಮಿ
(ಗಮನಿಸಿ: ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು)
ಫೇಸ್ ಪ್ಯಾಕ್ ಮಾಡುವುದು ಹೇಗೆ?
* ಈ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಮಾಡಲು, ಮೊದಲು ನೀವು ಒಂದು ಮಣ್ಣಿನ ಪಾತ್ರೆಯನ್ನು ತೆಗೆದುಕೊಳ್ಳಬೇಕು. ಈ ಪಾತ್ರೆಯಲ್ಲಿ ಅಕ್ಕಿ, ಬೇಳೆ ಮತ್ತು ಬಾದಾಮಿಗಳನ್ನು ಒಂದೊಂದಾಗಿ ಸೇರಿಸಬೇಕು. ನಂತರ ಈ ಎಲ್ಲಾ ಪದಾರ್ಥಗಳನ್ನು ರಾತ್ರಿಯಿಡೀ ನೀರಿನಲ್ಲಿ ಚೆನ್ನಾಗಿ ನೆನೆಸಿಡಬೇಕು.
* ಈಗ ಮರುದಿನ ಬಾದಾಮಿ ಸಿಪ್ಪೆ ಸುಲಿದು, ಇವೆಲ್ಲವನ್ನೂ ರುಬ್ಬುವ ಕಲ್ಲಿನಲ್ಲಿ ರುಬ್ಬಿ. ರುಬ್ಬುವ ಕಲ್ಲು ಇಲ್ಲದಿದ್ದರೆ ಇವುಗಳನ್ನು ಮಿಕ್ಸರ್‌ನಲ್ಲಿ ಹಾಕಿಯೂ ಪೇಸ್ಟ್ ಮಾಡಬಹುದು. ಪೇಸ್ಟ್ ದಪ್ಪಗಿರಲಿ, ಈಗ ಪರಿಣಾಮಕಾರಿ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಸಿದ್ಧವಾಗುತ್ತದೆ.
* ಮನೆಯಲ್ಲಿ ತಯಾರಿಸಿದ ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ದಪ್ಪವಾಗಿ ಹಚ್ಚಿಕೊಳ್ಳಿ. ಈ ಪೇಸ್ಟ್ ಸಂಪೂರ್ಣವಾಗಿ ಒಣಗುವ ಮೊದಲು, ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಬೇಕು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಇದರೊಂದಿಗೆ, ಮುಖದ ಮೇಲೆ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ.
* ಈ ಮನೆಮದ್ದನ್ನು ಪ್ರಯತ್ನಿಸುವಾಗ, ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮಾಡಬಾರದು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಪೇಸ್ಟ್ ಅನ್ನು 1 ಅಥವಾ 2 ದಿನಗಳವರೆಗೆ ಮಾತ್ರ ಸಂಗ್ರಹಿಸಬಹುದು. ಬಹಳ ಬೇಗ ಒಳ್ಳೆಯ ಫಲಿತಾಂಶಗಳನ್ನು ಪಡೆಯಲು ಬಯಸಿದರೆ, ಈ ಪೇಸ್ಟ್ ಅನ್ನು ಪ್ರತಿ ಬಾರಿ ಹೊಸದಾಗಿ ತಯಾರಿಸಿ ಮುಖಕ್ಕೆ ಹಚ್ಚುವುದು ಪ್ರಯೋಜನಕಾರಿಯಾಗಿದೆ.