ಹೀಗೆಲ್ಲಾ ಮಾಡಿದ್ರೆ ವಯಸ್ಸಾದಂತೆ ಕಾಣ್ತೀರಿ #BeCareful

ನೀವು ಮಾಮ್ ಜೀನ್ಸ್ ಬಿಟ್ಟು ಹೊಸ ಟ್ರೆಂಡೀ ಡಿಸೈನ್ ತೆಗೆದುಕೊಂಡಿರಬಹುದು. ಆದರೂ, ನಿಮ್ಮನ್ನು ವಯಸ್ಸಾದಂತೆ ತೋರಿಸುವ ಹಲವು ಫ್ಯಾಷನ್ ಮಿಸ್ಟೇಕ್‌ಗಳನ್ನು ತಿಳಿಯದೆಯೇ ಮಾಡುತ್ತೀರಿ. ವಯಸ್ಸಾದಂತೆಲ್ಲ ಆ ವಯಸ್ಸನ್ನು ಮರೆ ಮಾಚುವ ಬಯಕೆ ನಿಮ್ಮದಾಗಿದ್ದರೆ ಈ ತಪ್ಪುಗಳನ್ನು ಮಾಡಬೇಡಿ.

Fashion mistakes that make you look older

ಯೌವನದಲ್ಲಿ ಹೇಗಿದ್ದರೂ ಚೆಂದವೇ. ಆದರೆ ವಯಸ್ಸಾದ ಮೇಲೆಯೇ ಶುರುವಾಗುವುದು ಯಂಗ್ ಕಾಣುವ ಹಪಹಪಿ. ಇದಕ್ಕಾಗಿ ನೀವು ಸ್ಚೈಲ್‌ನ ಮೊರೆ ಹೋಗಬಹುದು. ಆದರೆ, ಅದರಲ್ಲೂ ಕೆಲ ಸಣ್ಣ ಸಣ್ಣ ಸಂಗತಿಗಳಿಗೆ ಗಮನ ಹರಿಸಲಿಲ್ಲವಾದರೆ ನೀವು ಇರುವುದಕ್ಕಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತೀರಿ. ಅಂಥ ಫ್ಯಾಶನ್ ಮಿಸ್ಟೇಕ್‌ಗಳೇನು ತಿಳ್ಕೊಳಿ.

ಕಪ್ಪು ಒಂದು ವಯಸ್ಸಿನವರೆಗೆ ಮಾತ್ರ ಒಪ್ಪು
ಕಪ್ಪು ಬಣ್ಣ ನಮ್ಮನ್ನು ಸಣ್ಣ ಕಾಣುವಂತೆ ಮಾಡುತ್ತದೆ ನಿಜ. ಆದರೆ, ಅದು ವಯಸ್ಸಾದ ಮೇಲೆ ಕಾಂಟ್ರಾಸ್ಟ್ ಆಗಿ ಸುಕ್ಕುಗಳನ್ನು ಹೈಲೈಟ್ ಮಾಡುತ್ತದೆ. ಕಪ್ಪು ಬಣ್ಣದಲ್ಲಿ ಚರ್ಮದ ಬಣ್ಣ ಹೈಲೈಟ್ ಆಗುತ್ತದೆ. ಆಗ ಕಣ್ಣ ಕೆಳಗಿನ, ಕೆನ್ನೆಯ ಸುಕ್ಕುಗಳು ಎದ್ದು ಕಾಣಿಸುತ್ತವೆ. ಈ ಎಫೆಕ್ಟ್ ಕಡಿಮೆ ಮಾಡಲು ಸ್ಟೇಟ್‌ಮೆಂಟ್ ನೆಕ್ಲೇಸ್ ಧರಿಸಿ. ಇಲ್ಲವೇ ಚಾಕೋಲೇಟ್, ಬೂದು, ಆಲಿವ್ ಬಣ್ಣಗಳ ಬಟ್ಟೆ ಆಯ್ಕೆ ಮಾಡಿ. 

ಮುಚ್ಚಿಡಲು ಯತ್ನಿಸಿದರೆ
ನೀವು ನಿಮ್ಮ ಕೈ, ಹೊಟ್ಟೆ, ಬ್ಯಾಕ್ ಎಲ್ಲವನ್ನೂ ಆಕಾರರಹಿತ ಬ್ಲೇಜರ್ ಧರಿಸಿ ಮುಚ್ಚಿಡಲು ಯತ್ನಿಸಿದಷ್ಟೂ ಮತ್ತೂ ದಪ್ಪಗೆ, ಶೇಪ್‌ಲೆಸ್ ಆಗಿ ಕಾಣಿಸುತ್ತೀರಿ. ಬದಲಿಗೆ ಉತ್ತಮ ಕಟ್ ಇರುವ ಜಾಕೆಟ್ ಧರಿಸಿ. ಇದು ಸೊಂಟವನ್ನು ಸಣ್ಣಗೆ ಕಾಣುವಂತೆ ಮಾಡುವ ಜೊತೆಗೆ ಫಿಗರ್ ಚೆನ್ನಾಗಿ ಕಾಣುವಂತೆ ನೋಡಿಕೊಳ್ಳುತ್ತದೆ.

ನಿಮ್ಮ ಸ್ಕರ್ಟ್ ಲೆಂತ್ ಉದ್ದವಾಗುತ್ತಲೇ ಸಾಗಿದರೆ
ನಿಮ್ಮ ವಯಸ್ಸು ಹೆಚ್ಚಾಗುತ್ತಿದೆ ಎಂದ ಮಾತ್ರಕ್ಕೆ ಸ್ಕರ್ಟ್ ಲೆಂತ್ ಕೂಡಾ ಉದ್ದ ಆಗುತ್ತಲೇ ಹೋಗಬೇಕೆಂದೇನಿಲ್ಲ. ಕಾಲಿನ ತುದಿವರೆಗೆ ಬರುವ ಸ್ಕರ್ಟ್ ಸ್ವಲ್ಪ ನೇತು ಬಿದ್ದ ಗಂಟುಗಳನ್ನು ಮುಚ್ಚಬಹುದು. ಆದರೆ ಅದರಿಂದ ನೀವು ಅಗಲಕ್ಕೆ ಹೆಚ್ಚು ವಯಸ್ಸಾದವರಂತೆ ಕಾಣಿಸುತ್ತೀರಿ. ನಿಮ್ಮ ಕಾಲಿನ ತೆಳುವಾದ ಭಾಗ ಎಲ್ಲಿದೆಯೋ ಅಲ್ಲಿವರೆಗೆ ಕಾಣಿಸುವಂಥ ಸ್ಕರ್ಟ್ ಧರಿಸಿ. ಇದರಿಂದ ನೀವು ಸ್ಲಿಮ್ ಆಗಿಯೂ ಸ್ಟೈಲಿಶ್ ಆಗಿಯೂ ಕಾಣಿಸುವಿರಿ. 

ಬ್ರಾ ಸೈಜ್ ಸರಿಯಿಲ್ಲದಿದ್ದರೆ
ನೀವು ಲೂಸಾದ ಬ್ರಾ ಧರಿಸಿದರೆ ಅದರಿಂದ ಹೆಚ್ಚು ವಯಸ್ಸಾದಂತೆ ಕಾಣಿಸುವಿರಿ. ಬದಲಿಗೆ ಯಾವಾಗಲೂ ಮೂರನೇ ಹುಕ್‌ಗೆ ಹಾಕಿದರೆ ಸರಿಯಾಗಿ ಕೂರುವಂತಿರಬೇಕು. ನಿಧಾನವಾಗಿ ಅದು ಲೂಸಾಗುತ್ತಾ ಬರುತ್ತದೆ. ಆ ಸಮಯದಲ್ಲಿ ಅದನ್ನು ಬದಲಿಸಿ.

Fashion mistakes that make you look older

ಕನ್ನಡಕದ ಫ್ರೇಮ್
ಕಣ್ಣಿನ ಕೆಳಗಿನ ದಪ್ಪನೆಯ ಭಾಗ ಅಥವಾ ಸುಕ್ಕನ್ನು ಮುಚ್ಚುವ ಸಲುವಾಗಿ ದಪ್ಪ ಕಟ್ಟಿನ ದೊಡ್ಡ ಕನ್ನಡಕ ಮಾಡಿಸಿಕೊಂಡರೆ, ಸುಕ್ಕೇನೋ ಮುಚ್ಚುತ್ತದೆ, ಆದರೆ ವಯಸ್ಸು ಹೆಚ್ಚೇ ಕಾಣುತ್ತದೆ. ಹೀಗಾಗಿ, ವಯಸ್ಸು ಹೆಚ್ಚಾದಂತೆಲ್ಲ ತೆಳು ಕಟ್ಟಿನ ಸಣ್ಣ ಕನ್ನಡಕಗಳನ್ನು ಬಳಸಬೇಕು.ಅದರ ಮೇಲೆ ಜುವೆಲ್ಲರಿ ವರ್ಕ್ ಇಲ್ಲದಿದ್ದರೆ ಉತ್ತಮ.

ಈ ವಾಚ್, ಮೊಬೈಲ್ ಬೆಲೆ ಇಷ್ಟೆಲ್ಲಾ ದುಬಾರಿ

ಕತ್ತನ್ನು ಮುಚ್ಚಿದರೆ
ವಯಸ್ಸಾದಂತೆಲ್ಲ ಕತ್ತು ಮುಚ್ಚಿಟ್ಟುಕೊಂಡಷ್ಟೂ ಯಂಗ್ ಕಾಣಬಹುದೆಂದು ಬಹಳಷ್ಟು ಜನ ಅಂದುಕೊಳ್ಳುತ್ತಾರೆ. ಕತ್ತಿನ ಜೋತು ಬಿದ್ದ ಚರ್ಮ ಕಾಣದಿರುವಂತೆ ಮಾಡುವುದು ಅವರ ಐಡಿಯಾ. ಅದಕ್ಕಾಗಿ ಟರ್ಟಲ್ ನೆಕ್ ಟಾಪ್‌ಗಳನ್ನು ಪ್ರಯೋಗ ಮಾಡಿ ನೋಡುತ್ತಾರೆ. ಆದರೆ, ವಿ ನೆಕ್ ಅಥವಾ ಸ್ಕೂಪ್ ನೆಕ್ ಬಟ್ಟೆಗಳು ಗಮನವನ್ನು ಕತ್ತಿನಿಂದ ಸ್ವಲ್ಪ ಕೆಳ ಭಾಗಕ್ಕೆ ಎಳೆಯುವುದರಿಂದ ಯಂಗ್ ಕಾಣಿಸುವಿರಿ. ಇಂಥ ಸಂದರ್ಭದಲ್ಲಿ ಎದೆಮಟ್ಟಕ್ಕೆ ಬರುವ ಒಂದು ಸ್ಟೇಟ್‌ಮೆಂಟ್ ಸರವನ್ನು ಧರಿಸಿದರೆ ಯಾರ ಗಮನವೂ ನಿಮ್ಮ ಚರ್ಮದತ್ತ ಹೋಗದು. ಕಾಲರ್ಡ್ ಶರ್ಟ್ ಕೂಡಾ ಉತ್ತಮ ಆಯ್ಕೆ. 

ದಪ್ಪನೆಯ ಐಲೈನರ್
ಚಿಕ್ಕ ವಯಸ್ಸಿನಲ್ಲಿ ದಪ್ಪ ಐಲೈನರ್ ಓಕೆ. ಆದರೆ ವಯಸ್ಸಾದ ಮೇಲೆ ಈ ದಪ್ಪ ಐ ಲೈನರ್ ಮುಖಕ್ಕೆ ಹೆವೀ ಎನಿಸುತ್ತದೆ. ಅಲ್ಲದೆ ಅವು ನಿಮ್ಮ ಕಣ್ಣಿನತ್ತಲೇ ಎಲ್ಲರ ಗಮನ ಸೆಳೆಯುವುದರಿಂದಾಗಿ ಕಣ್ಣಿನ ಸುತ್ತ ಸುಕ್ಕುಗಳು ಎದ್ದು ತೋರುತ್ತವೆ. ವಯಸ್ಸನ್ನು ಮರೆ ಮಾಚಬೇಕೆಂದರೆ ತೆಳುವಾಗಿ ಮೇಕಪ್ ಮಾಡಿಕೊಳ್ಳಿ. ತೆಳುವಾಗಿ ಐಲೈನರ್ ಹಚ್ಚಿಕೊಳ್ಳಿ. 

ಈ ಲೇಡಿ ಡಾಕ್ಟರ್ ಮೈಯಲ್ಲಿ ಮತ್ತೆ ಟ್ಯಾಟೂ 

ಲೂಸಾದ ಬಟ್ಟೆಗಳು
ವಯಸ್ಸಾದಂತೆಲ್ಲ ಎಲ್ಲ ಓರೆಕೋರೆಗಳನ್ನು ಮುಚ್ಚಿಡುವ ಸಲುವಾಗಿ ಲೂಸಾದ ಬಟ್ಟೆಗಳನ್ನು ತೊಡುವವರು ಹೆಚ್ಚು. ಆದರೆ ಇದರಿಂದ ವಯಸ್ಸು ಸುಯ್ ಎಂದು ಏರುತ್ತದೆ. ಡ್ರಮ್‌ನಂತೆ ಕಾಣುವಿರಿ. ಎಷ್ಟೇ ವಯಸ್ಸಾಗಿಲೀ, ಬಾಡಿ ಶೇಪ್ ಹೇಗೆೇ ಇರಲಿ, ಸ್ವಲ್ಪ ಫಿಟ್ಟಿಂಗ್ ಚೆನ್ನಾಗಿರುವ ಬಟ್ಟೆ ಧರಿಸಿದರೆ ಖಂಡಿತವಾಗಿಯೂ ಯಂಗ್ ಕಾಣುವಿರಿ. ಹಾಗಂಥ ಪೂರ್ತಿ ಮೈಗಂಟುವ, ಅತಿಯಾಗಿ ಟೈಟ್ ಆದ ಬಟ್ಟೆಗಳು ಬೇಡ.

Fashion mistakes that make you look older

ಹೆಚ್ಚು ಆಭರಣಗಳು
ವಯಸ್ಸಾದ ಬಳಿಕ ಕಡಿಮೆ ಆಭರಣ, ಹೆಚ್ಚು ಗುಣಮಟ್ಟ ಎಂಬ ಸಿದ್ಧಾಂತ ಅಳವಡಿಸಿಕೊಳ್ಳಬೇಕು. ಮಾರಾಟದ ಸರ, ಬಳೆಗಳನ್ನು ಹೇರಿಕೊಳ್ಳುವುದರಿಂದ ವಯಸ್ಸಿನ ಡಿಗ್ನಿಫೈಡ್ ಲುಕ್ ಹೋಗುತ್ತದೆ. ಬದಲಿಗೆ, ಒಂದು ಬಂಗಾರದ ಬಳೆ, ಅಥವಾ ಬ್ರೇಸ್ಲೆಟ್, ಒಂದು ವಾಚ್- ಹೀಗೆ ಒಂದನ್ನೇ ಧರಿಸಿದರೂ ಅವು ಗಮನ ಸೆಳೆಯುವಂತಿರಬೇಕು. 

ಶಾರ್ಟ್ ಹೇರ್
ವಯಸ್ಸಾದಂತೆಲ್ಲ ಕೂದಲು ತೆಳುವಾಗುತ್ತಾ ಹೋಗುತ್ತದೆ. ಆಗ ಉದ್ದ ಕೂದಲಿದ್ದರೂ ಮುಖ ಬೋಳು ಬೋಳಾಗಿ ಕಾಣುತ್ತದೆ. ಇದು ಹೆಚ್ಚು ವಯಸ್ಸು ಕಾಣುವಂತೆ ಮಾಡುತ್ತದೆ. ಹೀಗಾಗಿ, 40 ವರ್ಷದ ಬಳಿಕ ಕೂದಲಿನ ವಾಲ್ಯೂಮ್ ಹೆಚ್ಚು ಕಾಣಿಸುವಂತೆ ಮಾಡುವ ಹೇರ್‌ಕಟ್ ಮಾಡಿಸಿ. ಕೂದಲು ಭುಜದವರೆಗಿರುವುದು ಕಂಫರ್ಟ್ ಆ್ಯಂಡ್ ಸ್ಟೈಲಿಶ್ ಕೂಡಾ. 

ಅವನ ಕಣ್ಣಲ್ಲಿರುವುದು ಮಿಂಚಲ್ಲ, ಹಚ್ಚೆ

Latest Videos
Follow Us:
Download App:
  • android
  • ios