ಇದು ಅಂತಿಂಥಾ ಕಣ್ಣಿನ ಕಥೆಯಲ್ಲ..!: ಅವನ ಕಣ್ಣಲ್ಲಿರುವುದು ಮಿಂಚಲ್ಲ..ಹಚ್ಚೆ..!
ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು. ಅಬ್ಬಾ... ಕಣ್ಣಿನ ಬಗ್ಗೆ ಇರುವಷ್ಟು ಹಾಡು, ಕಲ್ಪನೆ ಬೇರಾವುದರ ಬಗ್ಗೆಯೂ ಇಲ್ಲವೇನೋ. ಆದರೆ, ಈಗ ನೀವು ನೋಡೋ ಈ ಕಣ್ಣಿನ ಕಥೆ. ಅಂತಿಂಥಾ ಕಣ್ಣಿನ ಕಥೆಯಲ್ಲ. ಇಂಥಾ ಕಣ್ಣನ್ನ ನೀವೆಲ್ಲೂ ನೋಡಿರೋಕೆ ಸಾಧ್ಯವಿಲ್ಲ.
ಇದು ಸತ್ಯ. ಇವನ ಕಣ್ಣಲ್ಲಿರೋದು ಹಚ್ಚೆ. ಈ ಹಚ್ಚೆಯನ್ನ ಇವನೇ ಹಾಕಿಸಿಕೊಂಡಿದ್ದಾನೆ. ಕಣ್ಣಿನ ಒಳಗೆ, ರೆಟೀನಾದ ಸುತ್ತ. ಬಣ್ಣ ಬಳಿಸಿಕೊಂಡಿದ್ದಾನೆ. ಇವನ ಹೆಸರು ಕರಣ್ ಸಿಂಗ್, ದೆಹಲಿಯ ಹುಡುಗ. ವಯಸ್ಸಿನ್ನೂ 28 ವರ್ಷ.
ಇವನೂ ಕೂಡಾ ಟ್ಯಾಟೂ ಕಲಾವಿದ. ಬೇರೆಯವರ ಮೈಮೇಲೆ ಚಿತ್ರ ವಿಚಿತ್ರ ಕಲೆ ಸೃಷ್ಟಿಸುತ್ತಿದ್ದ ಈತ, ತನ್ನ ಕಣ್ಣಲ್ಲೇ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇವನ ಕಣ್ಣಲ್ಲಿ ಬಿಳಿಯೇ ಇಲ್ಲ. ಕಪ್ಪು ರೆಟೀನಾದ ಸುತ್ತ ಇರೋದು ನೀಲಿ ಬಣ್ಣ. ಆ ಬಣ್ಣವನ್ನು ಕಣ್ಣಿಗೆ ತುಂಬಿಸಿಕೊಡು ಕಿಂಗ್ನಂತೆ ಮೆರೆಯುತ್ತಿದ್ದಾನೆ ಕರಣ್ ಸಿಂಗ್.
ಈ ರೀತಿ ಕಣ್ಣಿಗೆ ಟ್ಯಾಟೂ ಹಾಕಿಸಿಕೊಳ್ಳೋದು ಫಾರಿನ್'ನಲ್ಲಿ ಮಾಮೂಲಿ. ಆದರೆ, ಭಾರತದಲ್ಲಿ ಇಂಥಾದ್ದೊಂದು ಟ್ರೆಂಡ್ ಇರಲಿಲ್ಲ. ಈಗ.. ಈ ರೀತಿ ಟ್ಯಾಟೂ ಹಾಕಿಸಿಕೊಂಡು ಕಣ್ಣಿಗೇ ಟ್ಯಾಟೂ ಹಾಕಿಸಿಕೊಂಡ ಮೊದಲ ಭಾರತೀಯ ಎಂಬ ಹೆಮ್ಮೆಗೆ ಪಾತ್ರನಾಗಿದ್ದಾನೆ ಕರಣ್ ಸಿಂಗ್.
ಇಂಥಾ ದುಸ್ಸಾಹಸಕ್ಕೆ ನೀವು ಕೈಹಾಕಬೇಡಿ..!
ಏಕೆಂದರೆ, ಈ ರೀತಿ ಮಾಡಿಕೊಳ್ಳೋದ್ರಿಂದ ಡಿಫರೆಂಟಾಗಿಯೇನೋ ಕಾಣಿಸಿಕೊಳ್ಳಬಹುದು. ಆದರೆ, ಕೆಲವೇ ದಿನಗಳಲ್ಲಿ ಕಣ್ಣಿನ ದೃಷ್ಟಿಯೇ ಹೋಗುತ್ತೆ. ಅಂಥಾದ್ದೊಂದು ಅನುಭವ ಈಗಾಗಲೇ ಕರಣ್ ಸಿಂಗ್ಗೆ ಆಗ್ತಾ ಇದೆ. ಬಿ ಕೇರ್ಫುಲ್.