Foot care tips for dry heels : ಇಲ್ಲಿ ಉಳಿದ ಮೇಣದಬತ್ತಿ ಬಳಸಿ ನೀವು ಮನೆಯಲ್ಲಿಯೇ ತಯಾರಿಸಬಹುದಾದ ಕ್ರೀಂ ಬಗ್ಗೆ ಮಾಹಿತಿ ಕೊಡಲಾಗಿದೆ. ಕೆಲವೇ ದಿನಗಳಲ್ಲಿ ಇದರಿಂದ ಸಿಗುವ ಫಲಿತಾಂಶ ನೋಡಿ ಸರ್‌ಪ್ರೈಸ್ ಆಗ್ತಿರಿ.

ಳಿಗಾಲದಲ್ಲಿ ಹೆಚ್ಚಿನ ಜನರು ಹಿಮ್ಮಡಿ ಬಿರುಕು ಬಿಡುವ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಕೆಲವರು ಮಾತ್ರ ವರ್ಷವಿಡೀ ಈ ಸಮಸ್ಯೆಯಿಂದ ಬಳಲುತ್ತಾರೆ. ಸಾಮಾನ್ಯವಾಗಿ ಹಿಮ್ಮಡಿಗಳು ಬಿರುಕು ಬಿಡಲು ಕಾರಣ ಕೊಳಕು ಮತ್ತು ಚರ್ಮದ ಆರೈಕೆಯ ಕೊರತೆ. ಚರ್ಮವು ತುಂಬಾ ಒಣಗಿದ್ದರೂ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಸಾಮಾನ್ಯವಾಗಿ ಈ ಸಮಸ್ಯೆಯನ್ನು ತೊಡೆದುಹಾಕಲು ಜನರು ತಮ್ಮ ಪಾದಗಳಿಗೆ ಶೂಗಳನ್ನು ಧರಿಸುತ್ತಾರೆ. ಹೀಲ್ ಕ್ರೀಮ್ ಅನ್ನು ಸಹ ಹಚ್ಚುತ್ತಾರೆ. ಆದರೆ ಹೀಗೆ ಮಾಡಿದ್ರೆ ಪರಿಹಾರ ಸಿಗಲ್ಲ. ಹಾಗಾದರೆ ಅದನ್ನು ಹೇಗೆ ನಿವಾರಿಸಬಹುದು ಎಂದು ಇಲ್ಲಿ ನೋಡೋಣ..

ಚಳಿಗಾಲದಲ್ಲಿ ತಂಪಾದ ಗಾಳಿಯು ಚರ್ಮದಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದು ಶುಷ್ಕತೆಗೆ ಕಾರಣವಾಗುತ್ತದೆ. ಬಿರುಕು ಬಿಟ್ಟ ಹಿಮ್ಮಡಿಗಳು ಸಾಮಾನ್ಯ ಸಮಸ್ಯೆಯಾಗಿ ಕಾಡುತ್ತದೆ. ಕೆಲವೊಮ್ಮೆ ಚರ್ಮವು ತುಂಬಾ ಒಣಗಿ ರಕ್ತಸ್ರಾವವಾಗುತ್ತದೆ. ಇದನ್ನು ತೊಡೆದುಹಾಕಲು ಅನೇಕ ಜನರು ಮಾರುಕಟ್ಟೆಯಿಂದ ದುಬಾರಿ ಕ್ರೀಂಗಳನ್ನು ಖರೀದಿಸುತ್ತಾರೆ. ಆದರೆ ಅವರು ಬಯಸಿದ ಫಲಿತಾಂಶಗಳನ್ನು ಪಡೆಯುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕೆಲವು ಮನೆಮದ್ದುಗಳು ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇಂದು ಉಳಿದ ಮೇಣದಬತ್ತಿ ಬಳಸಿ ನೀವು ಮನೆಯಲ್ಲಿಯೇ ತಯಾರಿಸಬಹುದಾದ ಕ್ರೀಂ ಬಗ್ಗೆ ನೋಡೋಣ. ಇದರ ವಿಶೇಷವೆಂದರೆ ನೀವು ಕೆಲವೇ ದಿನಗಳಲ್ಲಿ ಪ್ರಯೋಜನಗಳನ್ನು ನೋಡುತ್ತೀರಿ. ಪೂನಂ ದೇವ್ನಾನಿ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕ್ರೀಂಗೆ ಬೇಕಾದ ಪದಾರ್ಥಗಳು

ಕೊಬ್ಬರಿ ಎಣ್ಣೆ
ಉಳಿದ ಮೇಣದಬತ್ತಿ
ಗ್ಲಿಸರಿನ್
ವಿಟಮಿನ್ ಇ ಕ್ಯಾಪ್ಸುಲ್‌ಗಳು
ಅಲೋವೆರಾ ಜೆಲ್

ಕ್ರೀಂ ತಯಾರಿಸುವುದು ಹೇಗೆ?

ಬಿರುಕು ಬಿಟ್ಟ ಹಿಮ್ಮಡಿಗಳಿಗಾಗಿ ಈ ಕ್ರೀಂ ತಯಾರಿಸುವುದು ಬಹಳ ಸುಲಭ. ಒಂದು ಪ್ಯಾನ್‌ಗೆ ಎರಡು ಮೇಣದಬತ್ತಿಗಳು, ಆ ನಂತರ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ. ನೆನಪಿಡಿ ಜ್ವಾಲೆಯನ್ನು ಕಡಿಮೆ ಇರಿಸಿ. ಮೇಣದಬತ್ತಿ ಸಂಪೂರ್ಣವಾಗಿ ಕರಗಿದ ನಂತರ ದಾರವನ್ನು ತೆಗೆದುಹಾಕಿ. ಉರಿಯನ್ನು ಆಫ್ ಮಾಡಿ ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಗ್ಲಿಸರಿನ್ ಅನ್ನು ಸೇರಿಸಿ. ಕೊನೆಯಲ್ಲಿ ಅಲೋವೆರಾ ಜೆಲ್ ಸೇರಿಸಿ. ಎಲ್ಲವನ್ನೂ ಒಂದು ಚಮಚದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಒಂದು ಡಬ್ಬಿಗೆ ವರ್ಗಾಯಿಸಿ. ತಣ್ಣಗಾಗಲು ಬಿಡಿ. ಈಗ ನಿಮ್ಮ ಕ್ರೀಮ್ ಸಿದ್ಧವಾಗಿದ್ದು, ನೀವು ಅದನ್ನು ನಿಮ್ಮ ಬಿರುಕು ಬಿಟ್ಟ ಹಿಮ್ಮಡಿಗಳ ಮೇಲೆ ಬಳಸಬಹುದು.

ಇಲ್ಲಿದೆ ನೋಡಿ ವಿಡಿಯೋ 

View post on Instagram

ಇದನ್ನು ಬಳಸುವುದು ಹೇಗೆ ?
ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದು ಒಣಗಿಸಿ. ನಂತರ ತಯಾರಿಸಿದ ಕ್ರೀಮ್ ಅನ್ನು ನಿಮ್ಮ ಹಿಮ್ಮಡಿಗಳು ಸೇರಿದಂತೆ ಸಂಪೂರ್ಣ ಅಡಿಭಾಗಕ್ಕೆ ಹಚ್ಚಿ ಮತ್ತು ನಿಧಾನವಾಗಿ ಮಸಾಜ್ ಮಾಡಿ. ಸಾಕ್ಸ್ ಧರಿಸಿ ಮಲಗಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಬಿರುಕು ಬಿಟ್ಟ ಹಿಮ್ಮಡಿಗಳು ಕೆಲವೇ ದಿನಗಳಲ್ಲಿ ಹೆಚ್ಚು ಮೃದುವಾಗುತ್ತವೆ.

ಹೀಗೂ ಮಾಡಿ..
* ಹಿಮ್ಮಡಿಗಳು ಬಿರುಕು ಬಿಟ್ಟಿದ್ದರೆ ಅವುಗಳನ್ನು ಪ್ರತಿದಿನ ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಕೊಳ್ಳಿ. ಸ್ಕ್ರಬ್ಬರ್‌ನಿಂದ ಸ್ಕ್ರಬ್ ಮಾಡುವುದರಿಂದ ನಿಮ್ಮ ಹಿಮ್ಮಡಿಯಿಂದ ಕೊಳೆ ನಿವಾರಣೆಯಾಗುತ್ತದೆ.
*ಹಿಮ್ಮಡಿಗಳನ್ನು ತೇವಗೊಳಿಸಲು ಮೇಲೆ ತಿಳಿಸಿದ ಕ್ರೀಮ್ ಹಚ್ಚಿ ಮತ್ತು ಸಿಲಿಕೋನ್ ಸಾಕ್ಸ್‌ ಧರಿಸಬಹುದು.
*ಪಾದಗಳನ್ನು 20 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ. ನಂತರ ಪ್ಯೂಮಿಕ್‌ ಸ್ಟೋನ್‌ನಿಂದ ಸ್ವಚ್ಛಗೊಳಿಸಿ.
*ಆಹಾರದಲ್ಲಿ ಸತುವು ಹೆಚ್ಚಿರುವುದರಿಂದ ಅದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
*ವಿಟಮಿನ್ 'ಇ' ಜೀವಕೋಶಗಳಿಗೆ ಹಾನಿ ಮಾಡುವ ಪ್ರಕ್ರಿಯೆಗಳನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ನಟ್ಸ್‌, ಡ್ರೈ ಫ್ರೂಟ್ಸ್‌ ಸೇರಿಸಿ.
*ಶುಷ್ಕತೆಯನ್ನು ಕಡಿಮೆ ಮಾಡಲು ವಿಟಮಿನ್ ಸಿ ಸೇವಿಸಿ. ಸಿಟ್ರಸ್ ಹಣ್ಣುಗಳನ್ನು ತಿನ್ನಲು ಮರೆಯದಿರಿ.