Beauty Tips : ಬೇಸಿಗೆಯಲ್ಲಿ ಹಿಮ್ಮಡಿ ಒಡೆಯುವುದೇಕೆ?

ಚಳಿಗಾಲ ಮುಗಿದಿದೆ ಆದ್ರೂ ಹಿಮ್ಮಡಿ ಒಡೆಯೋದು ಕಡಿಮೆಯಾಗಿಲ್ಲ. ಅದಕ್ಕೆ ಏನು ಮಾಡ್ಬೇಕು ಗೊತ್ತಾಗ್ತಿಲ್ಲ ಅಂತಾ ಕೆಲವರು ಹೇಳ್ತಿರೋದನ್ನು ಕೇಳಿರಬಹುದು. ನಿಮ್ಮ ಹಿಮ್ಮಡಿಯೇ ಬಿರುಕು ಬಿಟ್ಟಿರಬಹುದು. ಅದಕ್ಕೆ ಕಾರಣವೇನು ಗೊತ್ತಾ?
 

Have Your Heels Started Cracking Even In Summer Know Here Its Causes And Remedies

ಬೇಸಿಗೆಯಲ್ಲಿ ಒಣ ಹವೆ ಇರುತ್ತೆ. ಶರೀರದ ತಾಪಮಾನದಲ್ಲಿ ಕೂಡ ವ್ಯತ್ಯಾಸವಾಗುತ್ತದೆ. ನಿರಂತರವಾಗಿ ಬೆವರುವಿಕೆಯಿಂದ ಶರೀರ ಕೂಡ ನಿಶ್ಶಕ್ತವಾಗುತ್ತದೆ. ಡೀಹೈಡ್ರೇಶನ್ ಸಮಸ್ಯೆಯಂತೂ ಬೇಸಿಗೆಯಲ್ಲಿ ಕಾಮನ್. ಚರ್ಮ ಕೂಡ ಬೇಸಿಗೆಯಲ್ಲಿ ಒರಟಾಗುತ್ತದೆ. ಚರ್ಮ ಹೀಗೆ ಒರಟಾದಾಗ ಬಿರುಕು ಮೂಡುವುದು ಸಹಜ. ಕೈ ಕಾಲುಗಳಲ್ಲಿನ ಇಂತಹ ಬಿರುಕು ಸೌಂದರ್ಯವನ್ನು ಹಾಳುಮಾಡುತ್ತದೆ.

ಶರೀರ (Body) ದ ಯಾವುದೇ ಅಂಗ ಸ್ವಲ್ಪ ಏರುಪೇರಾದರೂ ಏನೋ ಅಸಹಜ ಭಾವನೆ ಮೂಡುತ್ತದೆ. ಈಗಂತೂ ಯುವಕ, ಯುವತಿಯರೆನ್ನದೆ ಎಲ್ಲರೂ ಸೌಂದರ್ಯ (Beauty) ಪ್ರಜ್ಞೆಯನ್ನು ಹೊಂದಿರುತ್ತಾರೆ. ಮುಖ, ಕೂದಲುಗಳ ರಕ್ಷಣೆ ಹಾಗೂ ಸೌಂದರ್ಯದ ಜೊತೆ ಕೈ ಕಾಲುಗಳ ರಕ್ಷಣೆಗೂ ಹೆಚ್ಚು ಒತ್ತು ಕೊಡುತ್ತಾರೆ. ಆದರೆ ಕೆಲವೊಮ್ಮೆ ಹವಾಮಾನ (Weather) ವೈಪರಿತ್ಯದಿಂದಾಗಿ ಕೈ, ಹಿಮ್ಮಡಿಗಳಲ್ಲಿ ಬಿರುಕು ಮೂಡುತ್ತದೆ. ಚಳಿಗಾಲದಲ್ಲಂತೂ ತ್ವಚೆಯ ರಕ್ಷಣೆ ಮಾಡಲು ಹರಸಾಹಸಪಡಬೇಕು. ಚಳಿಗಾಲದ ಹಾಗೆ ಬೇಸಿಗೆಯಲ್ಲಿ ಕೂಡ ಹಿಮ್ಮಡಿಗಳು ಒಡೆಯುತ್ತವೆ. ಒಡೆದ ಹಿಮ್ಮಡಿಯಿಂದ ಅನೇಕ ಬಾರಿ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿಯೂ ಎದುರಾಗುತ್ತದೆ. ಕೆಲವರಿಗಂತೂ ಹಿಮ್ಮಡಿ ಒಡೆದು ರಕ್ತ ಕೂಡ ಬರುತ್ತದೆ. ಹಿಮ್ಮಡಿಗಳು ಹೀಗೆ ಬಿರುಕು ಬಿಟ್ಟಾಗ ನಡೆದಾಡಲು ಕೂಡ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ಹಿಮ್ಮಡಿ ಏಕೆ ಒಡೆಯುತ್ತದೆ ಹಾಗೆ ಒಡೆಯುವುದನ್ನು ತಪ್ಪಿಸಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

SUMMER HEALTH : ಮುಖ ಉರಿ, ಡ್ರೈ ಆಗ್ತಿದ್ಯಾ? ಫ್ರಿಜ್ ನಲ್ಲಿರೋ ಈ ವಸ್ತು ಬಳಸಿ

ಬೇಸಿಗೆ (Summer) ಯಲ್ಲಿ ಹಿಮ್ಮಡಿ ಒಡೆಯಲು ಇದು ಕಾರಣ : 
• ಬೇಸಿಗೆಯಲ್ಲಿ ವಿಟಮಿನ್ ಕೊರತೆಯಿಂದ ಹಿಮ್ಮಡಿಗಳು ಒಡೆಯುತ್ತದೆ. ಶರೀರದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ3 ಮತ್ತು ವಿಟಮಿನ್ ಇ ಗಳ ಕೊರತೆಯಿಂದ ಚರ್ಮ ಶುಷ್ಕವಾಗುತ್ತದೆ. ಚರ್ಮ ಹೆಚ್ಚು ಒಣಗುವುದರಿಂದ ಹಿಮ್ಮಡಿ ಒಡೆಯುತ್ತದೆ.
• ಬೇಸಿಗೆಯಲ್ಲಿ ಮೈ ಹೆಚ್ಚು ಬೆವರುವುದರಿಂದ ಶರೀರ ಡೀ ಹೈಡ್ರೇಟ್ ಆಗುತ್ತದೆ. ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಶರೀರ ಒಣಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚರ್ಮವನ್ನು ತೇವಗೊಳಿಸಬೇಕಾಗುತ್ತದೆ.
• ಬೇಸಿಗೆಯಲ್ಲಿ ಚಪ್ಪಲಿ ಧರಿಸದೇ ಓಡಾಡುವುದರಿಂದಲೂ ಹಿಮ್ಮಡಿ ಒಡೆಯುತ್ತದೆ. ಚಳಿಗಾಲದಲ್ಲಿ ಕಾಲು ತಣ್ಣಗಾಗುತ್ತದೆ ಎಂಬ ಕಾರಣಕ್ಕೆ ಚಪ್ಪಲಿ ಧರಿಸಿ ಓಡಾಡುತ್ತಾರೆ. ಆದರೆ ಬೇಸಿಗೆಯಲ್ಲಿ ವಿಪರೀತ ಸೆಕೆ ಇರುವುದರಿಂದ ಹಲವು ಮಂದಿ ಬರಿಗಾಲಲ್ಲಿ ನಡೆಯುತ್ತಾರೆ. ಹೀಗೆ ಮಾಡುವುದರಿಂದ ಹಿಮ್ಮಡಿಗೆ ಧೂಳು, ಮಣ್ಣು ಸೇರಿಕೊಂಡು ಹಿಮ್ಮಡಿ ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

Beauty Care : 30ನೇ ವರ್ಷದಲ್ಲಿ ಮುಖ ಹೊಳಿಬೇಕೆಂದ್ರೆ ಈ ತಪ್ಪು ಮಾಡ್ಬೇಡಿ

ಒಡೆದ ಹಿಮ್ಮಡಿಗಳ ರಕ್ಷಣೆ ಹೀಗೆ ಮಾಡಿ : 
• ಬೇಸಿಗೆಯಲ್ಲಿ ಒಡೆದ ಹಿಮ್ಮಡಿಗಳನ್ನು ಕಾಪಾಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಬಿಸಿಯಾದ ನೀರಿನಲ್ಲಿ ಹಿಮ್ಮಡಿಗಳನ್ನು ಇರಿಸಿಕೊಳ್ಳಿ. ಬಿಸಿ ನೀರಿಗೆ ಉಪ್ಪು ಬೆರೆಸಿದರೆ ಇನ್ನೂ ಹೆಚ್ಚಿನ ಪರಿಣಾಮ ಸಿಗುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಇನ್ಫೆಕ್ಷನ್ ಕೂಡ ದೂರವಾಗುತ್ತದೆ. ಸ್ವಲ್ಪ ಸಮಯ ನೀರಿನಲ್ಲಿ ಇಟ್ಟು ನಂತರ ಕಾಲನ್ನು ಚೆನ್ನಾಗಿ ಒಣಗಿಸಿ ನಂತರ ಗ್ಲಿಸರಿನ್, ಲ್ಯಾಕ್ಟಿಕ್ ಎಸಿಡ್ ಹೊಂದಿರುವ ಫೂಟ್ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಇದರಿಂದ ತ್ವಚೆ ಒಣಗುವುದು ನಿಲ್ಲುತ್ತದೆ.
• ಒಡೆದ ಹಿಮ್ಮಡಿಗಳಿಗೆ ಪೆಟ್ರೊಲಿಯಮ್ ಜೆಲ್ಲಿ ಉತ್ತಮ ಔಷಧವಾಗಿದೆ. ರಾತ್ರಿ ಮಲಗುವ ಮುನ್ನ ಕಾಲನ್ನು ಚೆನ್ನಾಗಿ ತೊಳೆದು ಪೆಟ್ರೊಲಿಯಮ್ ಜೆಲ್ ಗೆ ಅಲೊವೆರಾ ಜೆಲ್ ಅನ್ನು ಮಿಶ್ರಣ ಮಾಡಿ ಲೇಪಿಸಿಕೊಂಡರೆ ಹಿಮ್ಮಡಿಗಳು ನಯವಾಗುತ್ತದೆ.
• ಯಾವುದೇ ಸಸ್ಯಜನ್ಯ ಎಣ್ಣೆಗೆ ಮೆಂತ್ಯವನ್ನು ಸೇರಿಸಿ ಬಿಸಿಮಾಡಿ. ಎಣ್ಣೆ ತಣ್ಣಗಾದ ನಂತರ ಅದನ್ನು ಹಿಮ್ಮಡಿಗೆ ಹಚ್ಚುವುದರಿಂದ ಒಡಕು ದೂರವಾಗುತ್ತದೆ.
• ಹಿಮ್ಮಡಿಯ ಒಡಕನ್ನು ನಿವಾರಿಸಲು ತೆಂಗಿನ ಎಣ್ಣೆಯ ಜೊತೆ ಅಲೊವೆರಾ ಜೆಲ್ ಅನ್ನು ಮಿಶ್ರಣ ಮಾಡಿ ಹಚ್ಚಬೇಕು.
• ಹಿಮ್ಮಡಿ ಒಡೆಯದೇ ಇರಲು ಆಗಾಗ ನೀರಿಗೆ ಉಪ್ಪು, ನಿಂಬೆ ರಸ ಹಾಗೂ ರೋಸ್ ವಾಟರ್ ಅನ್ನು ಹಾಕಿ ನಿಮ್ಮ ಕಾಲನ್ನು 10-15 ನಿಮಿಷಗಳ ಕಾಲ ಅದರೊಳಗೆ ಇಟ್ಟುಕೊಳ್ಳಬೇಕು.
 

Latest Videos
Follow Us:
Download App:
  • android
  • ios