Nail Polish: ಹಲವು ಬಾರಿ, ನಮ್ಮ ನೆಚ್ಚಿನ ನೈಲ್ ಪಾಲಿಶ್ ಒಣಗಿ, ಹಣ ವ್ಯರ್ಥವಾಗಿ, ನಿರಾಶೆಯನ್ನುಂಟು ಮಾಡುತ್ತದೆ. ಇಂದು, ನಿಮ್ಮ ಒಣಗಿದ ನೈಲ್ ಪಾಲಿಶ್ ಮತ್ತೆ ಮೊದಲಿನಂತೆ ಮಾಡಿ, ಬಳಕೆ ಮಾಡುವ ಟ್ರಿಕ್ಸ್ ನಿಮಗೆ ಹೇಳ್ತೀವಿ. ಇದರಿಂದ ನಿಮ್ಮ ಫೇವರಿಟ್ ನೇಲ್ ಪಾಲಿಶನ್ನು ದೀರ್ಘಕಾಲ ಉಳಿಸಬಹುದು.
ನೇಲ್ ಪಾಲಿಶ್
ಹುಡುಗಿಯರು ನೇಲ್ ಪಾಲಿಶ್ ಹಾಕಲು ಇಷ್ಟಪಡುತ್ತಾರೆ. ಇದು ಅವರ ಕೈಗಳ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಒಮ್ಮೆ ನೇಲ್ ಪಾಲಿಶ್ ಹಚ್ಚಿಕೊಂಡರೆ ಕೈಗಳ ಅಂದವೇ ಬದಲಾಗಿ ಹೋಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹುಡುಗಿಯರು ಪಾರ್ಟಿ ಅಥವಾ ಸಮಾರಂಭಕ್ಕೆ ಹೋಗುವಾಗಲೆಲ್ಲಾ, ತಮ್ಮ ಲುಕ್ ಪರ್ಫೆಕ್ಟ್ ಆಗಲು ನೇಲ್ ಪಾಲಿಶ್ ಹಾಕೋದನ್ನ ಮರೆಯೋದಿಲ್ಲ.
ಕೆಲವು ಉಪಯುಕ್ತ ತಂತ್ರಗಳು
ಹೆಚ್ಚಾಗಿ ಎಲ್ಲಾ ಹೆಣ್ಣುಮಕ್ಕಳು ನೈಲ್ ಪಾಲಿಶ್ ಬಹಳ ಉತ್ಸಾಹದಿಂದ ಖರೀದಿಸುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ಅದು ಒಣಗಿ ಹೋಗುತ್ತೆ. ಪ್ರತಿ ಹುಡುಗಿಯೂ ತನ್ನದೇ ಆದ ನೆಚ್ಚಿನ ಶೇಡ್ ನೈಲ್ ಪಾಲಿಶ್ ಹೊಂದಿರುತ್ತಾಳೆ, ಆದರೆ ಕೆಲವು ಸಮಯದ ಬಳಿಕ, ಅವು ದಪ್ಪದಾಗಿ, ಒಣಗಿ , ಜಿಗುಟಾಗಬಹುದು. ಇದರಿಂದ ಉಗುರಿನ ಮೇಲೆ ಸರಿಯಾಗಿ ಪೈಂಟ್ ಮಾಡೋದಕ್ಕು ಆಗುವುದಿಲ್ಲ. ಇದರಿಂದ ಬೇಜಾರ್ ಆಗೋದಂತೂ ನಿಜಾ. ಆದರೆ ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ; ಕೆಲವು ಸರಳ ಟ್ರಿಕ್ ಮೂಲಕ, ನೀವು ಒಣಗಿದ ನೈಲ್ ಪಾಲಿಶ್ ನ್ನು ಮತ್ತೆ ಹೊಸ ಸ್ಥಿತಿಗೆ ತರಬಹುದು.
ಅತ್ಯುತ್ತಮ ವಿಧಾನ:
ಇದು ಅತ್ಯಂತ ಜನಪ್ರಿಯ ವಿಧಾನ, ಹೆಚ್ಚಿನ ಹುಡುಗಿಯರು ಇದನ್ನು ಬಳಸುತ್ತಾರೆ. 'ನೇಲ್ ಪಾಲಿಶ್ ಥಿನ್ನರ್' ಎಂಬ ವಿಶೇಷ ಪ್ರಾಡಕ್ಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ; ಇದು ನೈಲ್ ಪಾಲಿಶ್ ನ್ನು ಮತ್ತೆ ನೀರಾಗುವಂತೆ ಮಾಡುತ್ತೆ. ಅದನ್ನು ಖರೀದಿಸಿ. ನೇಲ್ ಪೈಂಟ್ ಗೆ 1-2 ಹನಿ ಥಿನ್ನರ್ ಸೇರಿಸಿ. ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ ಮತ್ತು ಬಾಟಲಿಯನ್ನು ನಿಮ್ಮ ಅಂಗೈಗಳ ನಡುವೆ ಇಟ್ಟು ಅಲುಗಾಡಿಸಿ. 5 ನಿಮಿಷಗಳ ನಂತರ ಅದನ್ನು ಪರಿಶೀಲಿಸಿ; ಅದು ಇನ್ನೂ ತುಂಬಾ ದಪ್ಪವಾಗಿದ್ದರೆ, ಮತ್ತೊಂದು ಹನಿ ಸೇರಿಸಿ.
ನೇಲ್ ಪಾಲಿಶ್ ರಿಮೂವರ್
ನಿಮಗೆ ನೇಲ್ ಪಾಲಿಶ್ ಥಿನ್ನರ್ ಸಿಗದೇ ಇದ್ದರೆ ನೇಲ್ ಪಾಲಿಶ್ ರಿಮೂವರ್ ಬಳಸಿ. ಇದನ್ನು ಮಾಡಲು, ನೇಲ್ ಪಾಲಿಶ್‌ಗೆ 1–2 ಹನಿ ನೇಲ್ ಪಾಲಿಶ್ ರಿಮೂವರ್ ಸೇರಿಸಿ, ಮುಚ್ಚಳವನ್ನು ಮುಚ್ಚಿ ಬಾಟಲಿಯನ್ನು ಅಲುಗಾಡಿಸಿ. ಆದರೆ ಹೆಚ್ಚು ರಿಮೂವರ್ ಬಳಸದಂತೆ ಎಚ್ಚರ ವಹಿಸಿ, ಇಲ್ಲವಾದರೆ ವೇಸ್ಟ್ ಆಗುವ ಸಾಧ್ಯತೆ ಇದೆ.
ಬೆಚ್ಚಗಿನ ನೀರನ್ನು ಬಳಸಿ
ಈ ವಿಧಾನವು ನೈಲ್ ಪಾಲಿಶ್ ನ್ನು ಮತ್ತೆ ಹೊಸದರಂತೆ ಮಾದಲು ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ; ನೀರು ತುಂಬಾ ಬಿಸಿಯಾಗಿರಬಾರದು. ಈಗ ನೈಲ್ ಪಾಲಿಶ್ ಬಾಟಲಿಯಲ್ಲಿ 5-10 ನಿಮಿಷಗಳ ಕಾಲ ನೀರಿನಲ್ಲಿ ಇರಿಸಿ, ನಂತರ ಅದನ್ನು ತೆಗೆದು ನಿಮ್ಮ ಅಂಗೈಗಳ ನಡುವೆ ಇಟ್ಟು ಚೆನ್ನಾಗಿ ಉರುಳಿಸಿ. ಇದರಿಂದ ನೇಲ್ ಪೈಂಟ್ ಮತ್ತೆ ಮೊದಲಿನಂತೆ ಆಗುತ್ತದೆ.
ಈ ಅಂಶಗಳನ್ನು ನೆನಪಿನಲ್ಲಿಡಿ:
ಒಣಗಿದ ನೀರಿನಲ್ಲಿ ಹೆಚ್ಚಾಗಿ ಬ್ರಷ್ ಮೇಲೆ ಸಂಗ್ರಹವಾಗುತ್ತದೆ; ಆ ಸಂದರ್ಭದಲ್ಲಿ ಬ್ರಶನ್ನು ರಿಮೂವರ್‌ನಲ್ಲಿ ಅದ್ದಿ ಅದನ್ನು ಸ್ವಚ್ಛಗೊಳಿಸಿ. ಪ್ರತಿ ಬಳಕೆಯ ನಂತರ ಯಾವಾಗಲೂ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ. ಬಾಟಲಿಯನ್ನು ತಂಪಾದ, ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸಿ ಮತ್ತು ಅದನ್ನು ನೇರವಾಗಿ ಇರಿಸಿ. ನೇಲ್ ಪಾಲಿಶ್ ಹಚ್ಚುವಾಗ ಫ್ಯಾನ್ ಅಥವಾ ಎಸಿಯನ್ನು ಆಫ್ ಮಾಡಿ.


