Asianet Suvarna News Asianet Suvarna News

ರಿಮೂವರ್ ಇಲ್ಲದೆ Nail Polish ತೆಗೆಯೋದು ಹೇಗೆ ಗೊತ್ತಾ?

ಖುಷಿ ಖುಷಿಯಾಗಿ ಕೈ ಬೆರಳಿಗೆ ನೇಲ್ ಪಾಲಿಶ್ ಹಚ್ಚಿಕೊಂಡಿರ್ತೇವೆ. ಆದ್ರೆ ಅದು ಅರ್ಧಮರ್ಧ ಹೋದಾಗ ಬೆರಳು ಸುಂದರವಾಗಿ ಕಾಣುವುದಿಲ್ಲ. ಅದನ್ನು ತೆಗೆಯಲು ರಿಮೂವರ್ ಬಳಸೋದು ಸಾಮಾನ್ಯ. ಆದ್ರೆ ನಾವಿಂದು ಮನೆಯಲ್ಲಿರುವ ವಸ್ತುವನ್ನು ಹೇಗೆ ರಿಮೂವರ್ ಮಾಡಿಕೊಳ್ಬಹುದು ಎಂಬುದನ್ನು ಹೇಳ್ತೇವೆ. 
 

How To Remove Nail Polish Without Using A Remover
Author
Bangalore, First Published Mar 26, 2022, 2:43 PM IST

ನೇಲ್ ಪಾಲಿಶ್ (Nail Polish) ಕೈಗಳ ಸೌಂದರ್ಯ (Beauty) ವನ್ನು ಹೆಚ್ಚಿಸುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಮಾರುಕಟ್ಟೆ (Market) ಯಲ್ಲಿ ಬಗೆ ಬಗೆಯ ನೇಲ್ ಪಾಲಿಶ್ ಗಳು ಲಭ್ಯವಿದೆ. ಒಂದೊಂದು ಉಗುರಿಗೆ ಒಂದೊಂದು ಬಣ್ಣ ಹಚ್ಚಿಕೊಳ್ಳುವವರಿದ್ದಾರೆ. ನೇಲ್ ಪಾಲಿಶ್ ಹಚ್ಚಿದ್ರೆ ಸಾಲುವುದಿಲ್ಲ, ಆಗಾಗ ಅದ್ರ ಆರೈಕೆ ಮಾಡ್ಬೇಕು. ಅಂದ್ರೆ ನೇಲ್ ಪಾಲಿಶ್ ಹಚ್ಚಿದ ಕೆಲ ದಿನಗಳಲ್ಲಿಯೇ ಅಲ್ಲಲ್ಲಿ ಬಣ್ಣ ಹೋಗುತ್ತದೆ. ಇದ್ರಿಂದ ಕಾಲು –ಕೈ ಬೆರಳಿನ ಸೌಂದರ್ಯ ಹಾಳಾಗುತ್ತದೆ. ಆ ಸಂದರ್ಭದಲ್ಲಿ ಹಳೆ ನೇಲ್ ಪಾಲಿಶ್ ತೆಗೆದು ಹೊಸ ನೇಲ್ ಪಾಲಿಶ್ ಹಚ್ಚಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಜನರು ನೇಲ್ ಪಾಲಿಶ್ ತೆಗೆಯಲು ಬ್ಲೇಡ್ ಬಳಸುತ್ತಿದ್ದರು. ಬ್ಲೇಡ್ ನಿಂದ ಬಣ್ಣ ತೆಗೆಯುತ್ತಿರುವ ಸಮಯದಲ್ಲಿ ಉಗುರು ಕೂಡ ಎತ್ತಿ ಬರ್ತಿತ್ತು. ಆದ್ರೀಗ ಹಾಗಿಲ್ಲ. ನೇಲ್ ಪಾಲಿಶ್ ಜೊತೆ ಅದನ್ನು ತೆಗೆಯಲು ಅನೇಕ ಕಂಪನಿಗಳ ನೇಲ್ ರಿಮೂವರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ನೇಲ್ ರಿಮೂವರ್ ನಮ್ಮ ಕೈಗೆ ಸಿಗುವುದಿಲ್ಲ. ಆಗ ಹಳೆ ವಿಧಾನದಂತೆ ಉಗುರು ಕೆರೆಯಲು ಶುರು ಮಾಡ್ತೇವೆ. ಹಾಗೆ ಮಾಡಿದ್ರೆ ಉಗುರು ಹಾಳಾಗುತ್ತದೆ. ಒಂದು ವೇಳೆ ನೇಲ್ ರಿಮೂವರ್ ಖಾಲಿಯಾಗಿದೆ ಇಲ್ಲವೆ ಕೈಗೆ ಸಿಗ್ತಿಲ್ಲವೆಂದಾದ್ರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ನೀವು ಸುಲಭವಾಗಿ ಪಾಲಿಶ್ ತೆಗೆಯಬಹುದು. ಇಂದು ನೇಲ್ ಪಾಲಿಶ್ ತೆಗೆಯಲು ಮನೆಯ ಯಾವು ವಸ್ತು ಬಳಸಬಹುದು ಎಂದು ನಾವು ಹೇಳ್ತೇವೆ.

ನೇಲ್ ಪಾಲಿಶ್ ರಿಮೂವರ್ ಆಗಿ ಟೂತ್ಪೇಸ್ಟ್  : ಟೂತ್ಪೇಸ್ಟ್ ಬರೀ ಹಲ್ಲುಜ್ಜಲು ಮಾತ್ರವಲ್ಲ ಅನೇಕ ಕೆಲಸಕ್ಕೆ ಬರುತ್ತದೆ. ನೇಲ್ ಪಾಲಿಶ್ ತೆಗೆಯಲು ನೀವು ಇದನ್ನು ಬಳಸಬಹುದು. ನೀವು ಮನೆಯಲ್ಲಿ ಬಳಸುವ ಟೂತ್ಪೇಸ್ಟ್ ನಲ್ಲಿಯೇ ನೀವು ಬಣ್ಣ ತೆಗೆಯಬಹುದು. ಈಥೈಲ್ ಅಸಿಟೇಟ್, ಟೂತ್ಪೇಸ್ಟ್ ನಲ್ಲಿ ಕಂಡುಬರುತ್ತದೆ. ಇದು ಉಗುರುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಉಗುರುಗಳನ್ನು ಸ್ವಚ್ಛಗೊಳಿಸಲು ಟೂತ್ಪೇಸ್ಟ್ ಮತ್ತು ಹಳೆಯ ಟೂತ್ ಬ್ರಷ್ ತೆಗೆದುಕೊಳ್ಳಿ. ಉಗುರುಗಳ ಮೇಲೆ ಟೂತ್ಪೇಸ್ಟ್  ಹಚ್ಚಿ.  ಬ್ರಷ್ ಅನ್ನು ಒದ್ದೆ ಮಾಡಿ ಉಗುರುಗಳ ಮೇಲೆ ಉಜ್ಜಿ. ಉಗುರಿನ ಮೇಲೆ ಮಾತ್ರ ಬ್ರಷ್ ಹಾಕಿ. ಚರ್ಮಕ್ಕೆ ಬ್ರಷ್ ತಾಗದಂತೆ ನೋಡಿಕೊಳ್ಳಿ. ಯಾಕೆಂದ್ರೆ ಬ್ರಷ್ ನಿಂದ ಉಜ್ಜಿದ್ರೆ ಚರ್ಮಕ್ಕೆ ಹಾನಿಯಾಗಬಹುದು.

ದಪ್ಪಗಿದ್ದೇವೆಂಬ ಚಿಂತೆ ಬಿಡಿ, ಆರಾಮಾಗಿ ಈ ರೀತಿ STYLISH DRESS ಧರಿಸಿ

ನಿಂಬೆ ರಸ ಮತ್ತು ವಿನೆಗರ್ :  ನೇಲ್ ಪಾಲಿಶ್ ತೆಗೆದುಯಲು ವಿನೆಗರ್ ಮತ್ತು ನಿಂಬೆ ರಸ ಕೂಡ ತುಂಬಾ ಪರಿಣಾಮಕಾರಿ. ನೇಲ್ ಪಾಲಿಶ್ ರಿಮೂವರ್ ಆಗಿ ನೀವು ಇದನ್ನು ಬಳಸುತ್ತಿದ್ದರೆ ಮೊದಲು  ಒಂದು ಬೌಲ್  ಗೆ ಉಗುರು ಬೆಚ್ಚಗಿನ ನೀರನ್ನು ಹಾಕಿಕೊಳ್ಳಿ. 10 ರಿಂದ 15 ನಿಮಿಷಗಳ ಕಾಲ ಈ ನೀರಿನಲ್ಲಿ ಬೆರಳುಗಳನ್ನು ಅದ್ದಿ. ಇದರ ನಂತರ, ಒಂದು ಬಟ್ಟಲಿನಲ್ಲಿ ಎರಡು ಚಮಚ ನಿಂಬೆ ರಸ ಮತ್ತು ವಿನೆಗರ್ ಮಿಶ್ರಣ ಹಾಕಿ. ಇದರ ನಂತರ ಈ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಉಗುರಿನ ಮೇಲೆ ಹಚ್ಚಿ. ನಂತ್ರ ನಿಧಾನವಾಗಿ ಉಜ್ಜಿ. ನಿಮ್ಮ ಉಗುರಿನ ಬಣ್ಣ ಸುಲಭವಾಗಿ ಹೋಗುತ್ತದೆ.

ಹಳೆ jeansಗೆ ಹೊಸ ಲುಕ್ ನೀಡಿ ಎಲ್ಲರ ಮುಂದೆ ಶೈನ್ ಆಗಿ

ಹೇರ್ ಸ್ಪ್ರೇ : ಹೇರ್ ಸ್ಪ್ರೇ ಕೂಡ ನಿಮಗೆ ನೇಲ್ ಪಾಲಿಶ್ ರಿಮೂವರ್ ಆಗಿ ಬಳಕೆಗೆ ಬರುತ್ತದೆ. ಹೇರ್ ಸ್ಪ್ರೇನಲ್ಲಿ ರಬ್ಬಿಂಗ್ ಆಲ್ಕೋಹಾಲ್ ಕಂಡುಬರುತ್ತದೆ. ಇದು ನೇಲ್ ಪಾಲಿಶ್ ತೆಗೆದುಹಾಕಲು ಸಹಾಯ ಮಾಡುತ್ತದೆ. ನೇಲ್ ಪಾಲಿಶ್ ತೆಗೆಯಲು ಮೊದಲು ಉಗುರಿನ ಮೇಲೆ ಹೇರ್ ಸ್ಪ್ರೇ ಅನ್ನು ಸಿಂಪಡಿಸಿ. ನಂತರ ಅದನ್ನು ಹತ್ತಿಯ ಸಹಾಯದಿಂದ ಲಘುವಾಗಿ ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ನಂತರ ನಿಮ್ಮ ಉಗುರುಗಳು ತೊಳೆಯಿರಿ. ಉಗುರಿನ ಮೇಲಿರುವ ನೇಲ್ ಪಾಲಿಶ್ ಹೋಗಿರುತ್ತದೆ.  

ಸ್ಯಾನಿಟೈಸರ್ :  ನೇಲ್ ಪಾಲಿಶ್ ಬಣ್ಣ ಹೋಗಲು ಹ್ಯಾಂಡ್ ಸ್ಯಾನಿಟೈಸರ್  ಬಳಸಬಹುದು. ಸ್ಯಾನಿಟೈಸರ್‌ನಲ್ಲಿ ರಬ್ಬಿಂಗ್ ಆಲ್ಕೋಹಾಲ್ ಕಂಡುಬರುತ್ತದೆ. ಇದು ಉಗುರುಗಳನ್ನು ಸ್ವಚ್ಛಗೊಳಿಸಲು ತುಂಬಾ ಸಹಾಯಕವಾಗಿದೆ. ಸ್ಯಾನಿಟೈಸರ್ ನಿಂದ ನೇಲ್ ಪಾಲಿಶ್ ತೆಗೆಯಲು ಮೊದಲು ಹತ್ತಿಯನ್ನು  ತೆಗೆದುಕೊಳ್ಳಿ. ಅದರ ಮೇಲೆ ಸ್ಯಾನಿಟೈಸರ್ ಹಚ್ಚಿ ನಂತರ ಉಗುರಿಗೆ ಹಚ್ಚಿ ಉಜ್ಜಿ. ಇದನ್ನು 3 ರಿಂದ 4 ಬಾರಿ ಮಾಡಿ. 
 

Follow Us:
Download App:
  • android
  • ios