Acrylic Nail: ಗರ್ಭಿಣಿಯರ ಆರೋಗ್ಯ ಹಾಳು ಮಾಡುತ್ತೆ ಉದ್ದದ ಉಗುರು
ಹೆಚ್ಚಿನ ಗರ್ಭಿಣಿಯರು (Pregnant) ಸುಂದರವಾಗಿ ಕಾಣಲು ಸಾಕಷ್ಟು ಕಸರತ್ತು ಮಾಡ್ತಾರೆ. ಹೊಸ ಕೇಶವಿನ್ಯಾಸ (Hairstyle) ಟ್ರೈ ಮಾಡ್ತಾರೆ. ಹಾಗೆ ಉಗುರಿನ (Nail) ಸೌಂದರ್ಯಕ್ಕೆ ಮಹತ್ವ ನೀಡ್ತಾರೆ. ಆದ್ರೆ ಉದ್ದದ ಉಗುರಿಗಾಗಿ ಬ್ಯೂಟಿಪಾರ್ಲರ್ ಗೆ ಹೋಗುವ ಮೊದಲು ಕೃತಕ ಉಗುರು ಎಷ್ಟು ಸೇಫ್ (Safe) ಎಂಬುದನ್ನು ಅವರು ತಿಳಿದಿರಬೇಕು.
ಉದ್ದನೆಯ ಉಗುರು (Nail ) ಕೈಗಳ ಸೌಂದರ್ಯ (Beauty) ವನ್ನು ಹೆಚ್ಚಿಸುತ್ತವೆ. ಇದೇ ಕಾರಣಕ್ಕೆ ಕೆಲವರು ಉದ್ದುದ್ದದ ಉಗುರು ಬಿಡ್ತಾರೆ. ಬರೀ ಉಗುರು ಬಿಡೋದು ಮಾತ್ರವಲ್ಲ ನೇಲ್ ಆರ್ಟ್ (Nail Art ) ಗೂ ಮಹತ್ವ ನೀಡ್ತಾರೆ. ಉಗುರುಗಳನ್ನು ಸರಿಯಾಗಿ ಆರೈಕೆ ಮಾಡಿದ್ರೆ ಮಾತ್ರ ಅದರ ಸೌಂದರ್ಯವನ್ನು ದುಪ್ಪಟ್ಟು ಮಾಡ್ಬಹುದು. ನೇಲ್ ಆರ್ಟ್ ಗೆ ಸಾವಿರಾರು ರೂಪಾಯಿ ಖರ್ಚು ಮಾಡುವವರಿದ್ದಾರೆ.
ಗರ್ಭಿಣಿ (Pregnant) ಯರ ವಿಷ್ಯಕ್ಕೆ ಬಂದ್ರೆ ಪ್ರೆಗ್ನೆನ್ಸಿ ಸಮಯದಲ್ಲಿ ದೇಹದ ಆಕಾರ ಬದಲಾಗುತ್ತದೆ. ಕೆಲವೊಮ್ಮೆ ಸುಂದರವಾಗಿ ಕಾಣುವ ಮಹಿಳೆಯರು ಮೂಡ್ ಸ್ವಿಂಗ್ ಕಾರಣಕ್ಕೆ ಕೆಲವೊಮ್ಮೆ ಎಲ್ಲರನ್ನು ಆಕರ್ಷಿಸುವುದಿಲ್ಲ. ಹಾಗಾಗಿ ಬ್ಯೂಟಿ ಬಗ್ಗೆ ಹೆಚ್ಚು ಕಾಳಜಿಯಿರುವ ಮಹಿಳೆಯರು ಗರ್ಭಿಣಿಯಾದಾಗ್ಲೂ ಸುಂದರವಾಗಿ ಕಾಣಲು ಪ್ರಯತ್ನಿಸ್ತಾರೆ. ಗರ್ಭಿಣಿಯರಿಗಾಗಿಯೇ ಮಾರುಕಟ್ಟೆಯಲ್ಲಿ ಸಿಗುವ ಡ್ರೆಸ್ ಖರೀದಿ ಮಾಡ್ತಾರೆ. ಮುಖಕ್ಕೆ ಆಗಾಗ ಫೇಷಿಯಲ್ ಮಾಡ್ತಾರೆ. ಕೂದಲು ಕಟ್ ಮಾಡಿ ಹೊಸ ಸ್ಟೈಲ್ ಪ್ರಯತ್ನಿಸ್ತಾರೆ. ಹಾಗೆಯೇ ಉಗುರಿನ ಅಂದಕ್ಕೂ ಸಮಯ ಮೀಸಲಿಡುತ್ತಾರೆ.
ತೂಕ ಹೆಚ್ಚಾದ್ರೂ ಉಳಿದ ಭಾಗಗಳು ಸುಂದರವಾಗಿ ಕಾಣಲಿ ಎನ್ನುವ ಕಾರಣಕ್ಕೆ ಗರ್ಭಿಣಿಯರು ಆಗಾಗ ಬ್ಯೂಟಿಪಾರ್ಲರ್ ಕಡೆ ಹೋಗ್ತಾರೆ. ಬರೀ ನೇಲ್ ಪಾಲಿಶ್ ಮಾತ್ರವಲ್ಲ ಉದ್ದದ ಉಗುರಿಗಾಗಿ ಗರ್ಭಿಣಿಯರು ಅಕ್ರಿಲಿಕ್ ಉಗುರು ಬಳಸುತ್ತಾರೆ. ಅಕ್ರಿಲಿಕ್ ಉಗುರು ಎಷ್ಟು ಸೇಫ್ ಎಂಬುದನ್ನು ನಾವಿಂದು ಹೇಳ್ತೇವೆ.
ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಐಸ್‌ಕ್ರೀಂ ತಿಂದ್ರೆ ಆರೋಗ್ಯ ಹದಗೆಡೋದು ಗ್ಯಾರಂಟಿ
ಉಗುರು ವಿಸ್ತರಣೆಯನ್ನು ಹೇಗೆ ಮಾಡಲಾಗುತ್ತದೆ? : ಎಲ್ಲರಿಗೂ ಉದ್ದದ ಉಗುರು ಬಿಡಲು ಸಾಧ್ಯವಿಲ್ಲ. ಹಾಗಾಗಿ ಉಗುರು ಉದ್ದವಾಗಿ ಕಾಣಲಿ ಎನ್ನುವ ಕಾರಣಕ್ಕೆ ಅಕ್ರಿಲಿಕ್ ಉಗುರುಗಳನ್ನು ನೈಜ ಉಗುರುಗಳ ಮೇಲೆ ಅಂಟಿಸಲಾಗುತ್ತದೆ. ಅದರ ನಂತರ ಅದನ್ನು ಒಂದು ಆಕಾರಕ್ಕೆ ತರಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ಲಾಸ್ಟಿಕ್ ಮತ್ತು ಬೆಳಕಿನ ಪ್ಲೇಟ್ ಬಳಸಲಾಗುತ್ತದೆ. ಅದನ್ನು ಅಂಟಿಸಲು ನಿಮ್ಮ ಉಗುರಿಗೆ ಗ್ಲು ಹಚ್ಚಲಾಗುತ್ತದೆ. ಇದರ ನಂತರ, ಇದನ್ನು ಜೆಲ್ ಕೋಟಿಂಗ್ ಮತ್ತು ಫೈಬರ್ ಗ್ಲಾಸ್ನೊಂದಿಗೆ ಹೊಳೆಯುವಂತೆ ಮಾಡಲಾಗುತ್ತದೆ.
ಗರ್ಭಿಣಿಯರು ಉದ್ದದ ಉಗುರಿಗೆ ಅಕ್ರಿಲಿಕ್ ಬಳಸುವುದು ಎಷ್ಟು ಸುರಕ್ಷಿತ? : ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಸಾಕಷ್ಟು ದೈಹಿಕ ಬದಲಾವಣೆಗಳು ಕಂಡುಬರುತ್ತವೆ. ಈ ಸಮಯದಲ್ಲಿ, ಉಗುರುಗಳಲ್ಲಿ ಬದಲಾವಣೆಗಳು ಸಹ ಕಂಡುಬರುತ್ತವೆ. ನಿಮ್ಮ ಉಗುರುಗಳು ವೇಗವಾಗಿ ಮತ್ತು ಬಲವಾಗಿ ಬೆಳೆಯುತ್ತಿದ್ದರೆ ನೀವು ಅಕ್ರಿಲಿಕ್ ಉಗುರನ್ನು ಪಡೆಯಬಹುದು. ಆದಾಗ್ಯೂ, ಉಗುರು ಈಗಾಗಲೇ ದುರ್ಬಲವಾಗಿದ್ದರೆ ಮತ್ತು ಆಗಾಗ್ಗೆ ಮುರಿಯುತ್ತಿದ್ದರೆ ಯಾವುದೇ ಕಾರಣಕ್ಕೂ ಅಕ್ರಿಲಿಕ್ ಉಗುರಿನ ಪ್ರಯತ್ನಕ್ಕೆ ಹೋಗ್ಬೇಡಿ.
ಇದು ಉಗುರುಗಳನ್ನು ಮತ್ತಷ್ಟು ಹಾನಿಗೊಳಿಸುತ್ತದೆ. ಉಗುರುಗಳನ್ನು ಅಂಟಿಸಲು ರಾಸಾಯನಿಕಗಳನ್ನು ಬಳಸುವುದರಿಂದ ಇದು ಉಗುರಿನ ಸೌಂದರ್ಯವನ್ನು ಹಾಳು ಮಾಡುತ್ತದೆ. ಇದ್ರಿಂದ ಉಗುರಿನ ಆರೋಗ್ಯ ಹಾಳಾಗುತ್ತದೆ. ಉಗುರುಗಳು ದುರ್ಬಲವಾಗಿದ್ದರೆ, ಜೆಲ್ ನೇಲ್ ಪಾಲಿಷ್ ಬಳಸುವುದನ್ನು ಕೂಡ ತಪ್ಪಿಸಿ.
ಮೊಬೈಲ್ ಬಳಕೆಯಿಂದ ಮಿದುಳು ಕ್ಯಾನ್ಸರ್ ? ಆಕ್ಸ್‌ಫರ್ಡ್ ಅಧ್ಯಯನ ಹೇಳಿದ್ದಿಷ್ಟು
ಉಗುರಿಗೆ ಸೋಂಕಿನ ಅಪಾಯ : ಕೆಲವೊಮ್ಮೆ ಅಕ್ರಿಲಿಕ್ ಉಗುರಿನಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ. ಪಾರ್ಲರ್‌ನಲ್ಲಿ ಕೊಳಕು ಉಪಕರಣಗಳನ್ನು ಬಳಸುವ ಸಾಧ್ಯತೆಯಿರುತ್ತದೆ. ಅಕ್ರಿಲಿಕ್ ಉಗುರು ಜೋಡಣೆ ವೇಳೆ ಸ್ವಚ್ಛವಾಗಿರಬೇಕು ಮತ್ತು ಸರಿಯಾಗಿರುವ ಉಪಕರಣಗಳನ್ನು ಬಳಸಬೇಕು. ಇಲ್ಲವಾದ್ರೆ ಈ ಉಪಕರಣಗಳಿಂದ ಸೋಂಕು ಹರಡುತ್ತದೆ.
ಅಕ್ರಿಲಿಕ್ ಉಗುರಿನಿಂದ ಸಮಸ್ಯೆ : ಗರ್ಭಿಣಿಯಾಗಿದ್ದು, ಅಕ್ರಿಲಿಕ್ ಉಗುರು ಜೋಡಣೆ ಮಾಡಿಸಿಕೊಳ್ತಿದ್ದರೆ ಗಾಳಿಯಾಡುವ ಕೋಣೆಯಲ್ಲಿ ಕುಳಿತುಕೊಳ್ಳಿ ರಾಸಾಯನಿಕಗಳನ್ನು ನಕಲಿ ಉಗುರುಗಳನ್ನು ಅನ್ವಯಿಸಲು ಬಳಸಲಾಗುತ್ತದೆ. ಅದರ ಬಲವಾದ ವಾಸನೆಯು ನಿಮ್ಮ ದೇಹ ಸೇರುತ್ತದೆ. ಅಲ್ಲದೆ, ರಾಸಾಯನಿಕ ಕಣಗಳು ಉಸಿರಾಟದ ಮೂಲಕ ನಿಮ್ಮ ಶ್ವಾಸಕೋಶಕ್ಕೆ ಹೋಗುವ ಸಾಧ್ಯತೆಯಿದೆ. ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಹೊಟ್ಟೆಯಲ್ಲಿರುವ ಮಗುವಿಗೆ ಹಾನಿಯುಂಟು ಮಾಡಬಹುದು. ಹಾಗಾಗಿ ಈ ಸಮಯದಲ್ಲಿ ಜಾಗರೂಕರಾಗಿರಿ.