ಲಕ್‌ (Luck) ಅನ್ನೋದೆ ಹಾಗೆ. ಅದು ಯಾವಾಗ ಬೇಕಾದ್ರೂ ಬದಲಾಗ್ಬೋದು. ಆಕೆ ಜಾತ್ರೆಯಲ್ಲಿ ಮಬ್ಬು ಬೆಳಕಿನಲ್ಲಿ, ಮಾಸಿದ ಬಟ್ಟೆ ಹಾಕಿ ಬಲೂನ್ (Balloon) ಮಾಡುತ್ತಿದ್ದ ಹುಡುಗಿ. ಆದ್ರೆ ಈಗ ಮಾಡೆಲ್ ಆಗಿ ಇಂಟರ್‌ನೆಟ್‌ ಸೆನ್ಸೇಶನ್ (Internet sensation) ಆಗಿದ್ದಾಳೆ. ಅದ್ಹೇಗೆ ಸಾಧ್ಯವಾಯ್ತು ?

ಇವತ್ತಿನ ಜಮಾನದಲ್ಲಿ ಅತ್ಯಂತ ಪವರ್‌ಫುಲ್ ಯಾವುದೆಂದು ಕೇಳಿದರೆ ಇಂಟರ್‌ನೆಟ್ (Internet) ಎಂದು ಹೇಳಬಹುದು. ಅದು ಕ್ಷಣಾರ್ಧದಲ್ಲಿ ಎಲ್ಲವನ್ನೂ ಬದಲಾಯಿಸಿಬಿಡುತ್ತದೆ. ಒಳ್ಳೆಯ ವಿಚಾರವಾಗಿರಲಿ, ಕೆಟ್ಟ ವಿಚಾರವಾಗಿರಲಿ ಇಂಟರ್‌ನೆಟ್‌ನಲ್ಲಿ ಬಹಳ ಬೇಗನೇ ವೈರಲ್ ಆಗಿ ಬಿಡುತ್ತದೆ. ಝೀರೋ ಆಗಿದ್ದವರು ಇಲ್ಲಿ ಹೀರೋ ಆಗುತ್ತಾರೆ. ಹೀರೋ ಆಗಿದ್ದವರು ಕಣ್ಣು ಮಿಟುಕಿಸುವುದರೊಳಗೆ ಝೀರೋ ಆಗುತ್ತಾರೆ. ರಾಣು ಮೊಂಡೆಲ್, ಬಚ್ಪನ್ ಕಾ ಪ್ಯಾರ್ ಬಾಯ್ ಸಹದೇವ್ ದಿರ್ಡೊ, ಕಚ್ಚಾ ಬಾದಮ್ ಗಾಯಕ ಭುವನ್ ಬದ್ಯಕರ್ ಮೊದಲಾದವರು ಇಂಟರ್ನೆಟ್ ನಿಂದ ದಿಢೀರ್ ಫೇಮ್ ಪಡೆದುಕೊಂಡವರು. ರಾತ್ರೋರಾತ್ರಿ ಯಾರನ್ನೂ ಸೆಲೆಬ್ರಿಟಿಗಳನ್ನಾಗಿಸಬಲ್ಲ ಶಕ್ತಿಶಾಲಿ ಮಾಧ್ಯಮವೆಂದರೆ ಇಂಟರ್‌ನೆಟ್ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚಿಗೆ ಕೇರಳದಲ್ಲಿ ಕೂಲಿ ಕಾರ್ಮಿಕರೊಬ್ಬರು ಮಾಡೆಲ್ (Model) ಆಗಿ ಮಿಂಚಿದ್ದರು. ಈ ಫೋಟೋ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೇ ರೀತಿ ಕೇರಳದಲ್ಲಿ ಈಗ ಇನ್ನೊಬ್ಬ ಬೀದಿ ವ್ಯಾಪಾರಿ, ಹುಡುಗಿ (Girl) ಮಾಡೆಲ್ ಆಗಿ ಸಖತ್ ಲುಕ್ ಕೊಟ್ಟು ಇಂಟರ್‌ನೆಟ್ ಸೆನ್ಸೇಶನ್ ಆಗಿದ್ದಾಳೆ.

ಎಲ್ಲಾ ಫೋಟೋಗ್ರಾಫರ್‌ ಮಹಿಮೆ : 60 ವರ್ಷದ ಕೇರಳದ ಕೂಲಿ ಕಾರ್ಮಿಕ ಈಗ ಫೇಮಸ್‌ ಮಾಡೆಲ್‌

ಬಲೂನ್ ಮಾರುವ ಹುಡುಗಿಯೀಗ ಮಾಡೆಲ್
ಹೌದು, ಸದ್ಯ ಕೇರಳ (Kerala)ದ ಜನನಿಬಿಡ ಸ್ಥಳಗಳಲ್ಲಿ ಬಲೂನ್‌ಗಳನ್ನು ಮಾರಾಟ ಮಾಡುವ ಹುಡುಗಿಯೊಬ್ಬಳು ಇಂಟರ್‌ನೆಟ್ ಸೆನ್ಸೇಶನ್ ಆಗಿದ್ದಾಳೆ. ರಾಜಸ್ಥಾನದ ಹುಡುಗಿ ಕೇರಳದ ಮದುವೆಯ ಫೋಟೋಗ್ರಾಫರ್‌ ನಡೆಸಿದ ಫೋಟೋಶೂಟ್‌ (Photoshoot)ಗೆ ಮಾಡೆಲ್ ಆಗಿ ಇಂಟರ್‌ನೆಟ್ ಸ್ಟಾರ್ ಆಗಿದ್ದಾಳೆ.

View post on Instagram

ಪಯ್ಯನ್ನೂರು ಮೂಲಕ ಅರ್ಜುನ್ ಕೃಷ್ಣನ್ ಎಂಬ ಹೆಸರಿನ ಛಾಯಾಗ್ರಾಹಕ ಕೇರಳ ಕಣ್ಣೂರಿನ ಅಂಡಲೂರ್ ಕಾವು ಉತ್ಸವದಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿಯನ್ನು ನೋಡಿದ್ದಾರೆ. ಬಲೂನ್ ಮಾರುತ್ತಿದ್ದಾಗಲೇ ಈಕೆಯ ಸುಂದರ ಚಿತ್ರವನ್ನು ಸೆರೆಹಿಡಿದಿದ್ದಾರೆ. ನಂತರ ಫೋಟೋವನ್ನು ಆಕೆಯ ತಾಯಿಗೂ ತೋರಿಸಿದ್ದು, ಆಕೆ ಮಗಳ ಫೋಟೋವನ್ನು ನೋಡಿ ಖುಷಿಪಟ್ಟಿದ್ದಾರೆ. ಬಲೂನ್ ಮಾರುವ ಆ ಹುಡುಗಿಯ ಹೆಸರು ಕಿಸ್ಬು. ಈ ಹುಡುಗಿ ರಾಜಸ್ಥಾನಿ ಕುಟುಂಬಕ್ಕೆ ಸೇರಿದವಳು ಮತ್ತು ಕೇರಳದಲ್ಲಿ ಜಾತ್ರೆಗಳಲ್ಲಿ ಮಾರಾಟ ಮಾಡುತ್ತಿದ್ದಾಳೆ.

ಮೇಕ್ಓವರ್‌ನಿಂದ ಬದಲಾಯ್ತು ಕಿಸ್ಬು ಲುಕ್
ಅರ್ಜುನ್ ಸಾಮಾಜಿಕ ಮಾಧ್ಯಮದಲ್ಲಿ ಕಿಸ್ಬು ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಅವರಿಗೆ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿತ್ತು. ಹಲವರು ಬಲೂನ್ ಮಧ್ಯೆ ನಿಂತ ಕಿಸ್ಬು ಫೋಟೋಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ, ಅದರಲ್ಲಿ ಕೆಲವರು ಕಿಸ್ಬು ಅವರ ಮೇಕ್ ಓವರ್ (Makeover) ಫೋಟೋಶೂಟ್‌ಗಾಗಿ ಅರ್ಜುನ್ ಅವರನ್ನು ಸಂಪರ್ಕಿಸಿದ್ದಾರೆ. ರಮ್ಯಾ ಎಂಬ ಸ್ಟೈಲಿಸ್ಟ್ ಸಹಾಯದಿಂದ ಕಿಸ್ಬು ಮೇಕ್ ಓವರ್ ಮಾಡಿ ಫೋಟೋ ಶೂಟ್ ಮಾಡಲಾಯಿತು.

ಯುವಕರ ಹೃದಯ ಬಡಿತ ಹೆಚ್ಚಿಸಿದ ಮಿಯಾ ಖಲೀಫಾ; Topless ಶವರ್ ಫೋಟೋ ವೈರಲ್‌!

ಕಿಸ್ಬುಗೆ ಕೇರಳದ ಸಾಂಪ್ರದಾಯಿಕ ಸೆಟ್, ಮುಂಡು ಮತ್ತು ಆಭರಣಗಳೊಂದಿಗೆ ಮತ್ತು ಮಾರ್ಡನ್ ಡ್ರೆಸ್‌ನಲ್ಲಿ ಪ್ರತ್ಯೇಕವಾಗಿ ಫೋಟೋ ಶೂಟ್ ಮಾಡಿಸಲಾಯಿತು. ಸಾಮಾನ್ಯ ಬಲೂನ್ ಮಾರುವ ಹುಡುಗಿ ಮೇಕ್ ಓವರ್‌ನಿಂದ ಅತಿ ಸುಂದರಿಯಾಗಿ ಕಾಣಿಸುತ್ತಿದ್ದು, ಫೋಟೋಗಳಿಗೂ ಅದ್ಭುತವಾಗಿ ಫೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿವೆ.

View post on Instagram

ಕಿಸ್ಬು ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಿಸ್ಬುಗೆ ಶುಭ ಹಾರೈಸುತ್ತಿದ್ದಾರೆ. ಅರ್ಜುನ್, ಫ್ರೀಲಾನ್ಸ್ ವೆಡ್ಡಿಂಗ್ ಪೋಟೋಗ್ರಾಫರ್ ಆಗಿದ್ದು, 15 ವರ್ಷಗಳಿಂದ ಈ ಫೀಲ್ಡ್ನಲ್ಲಿದ್ದಾರೆ. ಫೋಟೋಶೂಟ್‌ಗೆ ಸಿಕ್ಕ ಪ್ರತಿಕ್ರಿಯೆಯ ಬಗ್ಗೆ ಅರ್ಜುನ್ ಸಂತಸ ವ್ಯಕ್ತಪಡಿಸಿದ್ದಾರೆ. ಬೇರೆಯವರ ಜೀವನದಲ್ಲಿ ಬದಲಾವಣೆಯನ್ನು ಮಾಡಲು ಸಾಧ್ಯವಾಯಿತು ಎಂಬುದು ಖುಷಿಕೊಟ್ಟಿದೆ ಎಂದಿದ್ದಾರೆ. ಅದೇನೆ ಇರ್ಲಿ, ರಾತ್ರೋರಾತ್ರಿ ಬಲೂನ್ ಮಾರುವ ಹುಡುಗಿ ಮಾಡೆಲ್ ಆಗಿದ್ದು ಮಾತ್ರ ನೆಟ್ಟಿಗರನ್ನು ಅಚ್ಚರಿಗೊಳಿಸುತ್ತಿರೋದಂತೂ ಸುಳ್ಳಲ್ಲ.