ದಿನಗೂಲಿ ಕಾರ್ಮಿಕ ಮಮ್ಮಿಕ್ಕಾನ ಮಾಡೆಲ್‌ ಮಾಡಿದ ಫೋಟೋಗ್ರಾಫರ್ 60 ವರ್ಷದ ಕೇರಳದ ಕೂಲಿ ಕಾರ್ಮಿಕ ಈಗ ಮಾಡೆಲ್‌  

ತಿರುವನಂತಪುರ(ಫೆ.15): ಕೇರಳದ ದಿನಗೂಲಿ ಕಾರ್ಮಿಕರೊಬ್ಬರು ಮಾಡೆಲ್‌ ಆಗಿದ್ದಾರೆ. ಫೋಟೋಗ್ರಾಫರ್‌ ಓರ್ವರ ಕೈಗೆ ಸಿಕ್ಕ 60 ವರ್ಷದ ಮಮ್ಮಿಕ್ಕಾನನ್ನು ಮಾಡೆಲ್‌ ಆಗಿ ರೂಪಿಸಿದ್ದು, ಈಗ ಮಮ್ಮಿಕ್ಕಾ ಸ್ಥಳೀಯ ಸಂಸ್ಥೆಯೊಂದಕ್ಕೆ ಮಾಡೆಲ್‌ ಆಗಿ ಫೋಸ್‌ ನೀಡಿದ್ದು ಎಲ್ಲರನ್ನೂ ಸೆಳೆಯುತ್ತಿದೆ. 

ಯಾವ ವಯಸ್ಸಿನಲ್ಲಿ ಯಾರಿಗೆ ಯಾವ ಯೋಗ ಕೂಡಿ ಬರುವುದೋ ಹೇಳಲಾಗದು ಹಾಗೆಯೇ ಫೋಟೋಗ್ರಾಫರ್‌ಗಳು ಹಾಗೂ ಮೇಕಪ್‌ಮ್ಯಾನ್‌ಗಳು ಕೂಡ ಹೇಗೆಗೋ ಇರುವವರನ್ನು ತುಂಬಾ ಸುಂದರವಾಗಿ ತೋರಿಸಬಲ್ಲರು. ಹಾಗಂತ ಈ ವಯಸ್ಸಾದ ದಿನಗೂಲಿ ಕಾರ್ಮಿಕ ದೈಹಿಕವಾಗಿ ಕಳೆ ಇಲ್ಲದ ವ್ಯಕ್ತಿಯೇನೋ ಅಲ್ಲ. ಆತನಿಗೆ ಇದ್ದ ಸಾಮಾನ್ಯ ಸಹಜ ಸೌಂದರ್ಯಕ್ಕೆ ಫೋಟೋಗ್ರಾಫರ್ ಮತ್ತಷ್ಟು ಕಳೆ ನೀಡಿ ರೂಪದರ್ಶಿಯಾಗಿ ಮಾಡಿದ್ದಾನೆ ಅಷ್ಟೇ.

View post on Instagram

60 ವರ್ಷ ವಯಸ್ಸಿನ ಮಮ್ಮಿಕ್ಕಾ (Mammikka) ಕೇರಳದ ಕೋಝಿಕೋಡ್ (Kozhikode) ನಿವಾಸಿ. ಇವರು ಯಾವಾಗಲೂ ತಮ್ಮ ಮಸುಕಾದ ಲುಂಗಿ ಮತ್ತು ಶರ್ಟ್‌ನಲ್ಲಿ ತಾವಿರುವ ಪ್ರದೇಶದ ಜನರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಆದರೆ ಈಗ ತನ್ನ ಸೂಪರ್ ಗ್ಲಾಮ್ ಮೇಕ್ ಓವರ್‌ನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸೆನ್ಸೇಷನ್‌ ಸೃಷ್ಟಿ ಮಾಡಿದ್ದಾರೆ. ಇವರು ಇತ್ತೀಚೆಗೆ ಸ್ಥಳೀಯ ಸಂಸ್ಥೆಯೊಂದರ ಪ್ರಚಾರದ ಫೋಟೋಶೂಟ್‌ನಲ್ಲಿ ಸೂಟ್ ಧರಿಸಿ ಐಪ್ಯಾಡ್‌ನೊಂದಿಗೆ ಪೋಸ್ ನೀಡಿದ್ದರು.

Miss Pakistan Universe 2022: ಪಾಕಿಸ್ತಾನದ ಅತಿ ಸುಂದರ ವೈದ್ಯೆ ಈಕೆ

ಈ ದಿನಗೂಲಿ ಕೆಲಸಗಾರನಲ್ಲಿ ಮಾಡೆಲಿಂಗ್ ಪ್ರತಿಭೆಯನ್ನು ಗುರುತಿಸಿದವರು ಛಾಯಾಗ್ರಾಹಕ ಶರೀಕ್ ವಯಾಲಿಲ್ (Shareek Vayalil). ಅವರು ಈ ಹಿಂದೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಮ್ಮಿಕ್ಕ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದರು,. ಆ ಫೋಟೋ ಮಲೆಯಾಳಿ ನಟ ವಿನಾಯಕನ್ (Vinayakan) ಅವರ ಹೋಲಿಕೆಯಂತೆ ಕಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ನಂತರ, ಫೋಟೋಗ್ರಾಫರ್‌ ಶರೀಕ್‌ ಅವರಿಗೆ ಈ ಮಾಡೆಲಿಂಗ್‌ ಅಸೈನ್‌ಮೆಂಟ್ ಬಂದಾಗ, ಅವರು ಮಮ್ಮಕ್ಕನನ್ನು ಹೊರತುಪಡಿಸಿ ಬೇರೆ ಯಾರನ್ನೂ ಯೋಚಿಸಲಿಲ್ಲ. ಮಮ್ಮಿಕ್ಕ ಅವರ ಮೇಕಪ್ ಮಾಡಿದ್ದು ಮೇಕಪ್‌ ಕಲಾವಿದ ಮಜ್ನಾಸ್ (Majnas), ಆಶಿಕ್ ಫುವಾದ್ (Aashiq Fuad) ಮತ್ತು ಶಬೀಬ್ ವಯಾಲಿಲ್ (Shabeeb Vayalil) ಮೇಕಪ್ ಸಹಾಯಕರಾಗಿದ್ದರು.

View post on Instagram

ಮಮ್ಮಿಕ್ಕಾ ಈಗ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, ಅಲ್ಲಿ ಅವರು ಸಾಮಾನ್ಯ ಬಟ್ಟೆ ಮತ್ತು ಮೇಕ್ ಓವರ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಮಾಡೆಲ್ ಆದ ಬಳಿಕ ಅವರು ಈಗ ತಮ್ಮ ಹುಟ್ಟೂರಾದ ವೆನ್ನಕ್ಕಾಡ್ (Vennakkad), ಕೋಜಿಕ್ಕೋಡ್‌ನ (Kozhikode) ಕೊಡಿವಳ್ಳಿ (Kodivalli) ಯಲ್ಲಿ ಹೀರೋ ಆಗಿದ್ದಾರೆ. ಈ ಯಶಸ್ಸಿನಿಂದ ಖುಷಿಯಾಗಿರುವ ಮಮ್ಮಕ್ಕ, ನಿತ್ಯದ ಕೆಲಸದ ಜೊತೆಗೆ ಆಫರ್‌ಗಳು ಬಂದರೆ ಮಾಡೆಲಿಂಗ್‌ನಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

Ramp ಮೇಲೆ ಮಾಡೆಲ್ ಉಗ್ರ ರೂಪ.. ಗ್ಯಾಲರಿಯಲ್ಲಿ ಕೂತ ಅತಿಥಿ ಮೇಲೆ ಹಲ್ಲೆ.. ವಿಡಿಯೋ ವೈರಲ್