- Home
- Entertainment
- Sandalwood
- ಬಾಲಿವುಡ್ ಬಾಗಿಲಲ್ಲಿ ಸಮರ್ಜಿತ್ ಲಂಕೇಶ್.. ಕನ್ನಡದ 'ಹ್ಯಾಂಡ್‌ಸಮ್' ಹುಡುಗ ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಾರಾ?
ಬಾಲಿವುಡ್ ಬಾಗಿಲಲ್ಲಿ ಸಮರ್ಜಿತ್ ಲಂಕೇಶ್.. ಕನ್ನಡದ 'ಹ್ಯಾಂಡ್‌ಸಮ್' ಹುಡುಗ ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಾರಾ?
ನಟ ಸಮರ್ಜಿತ್ ಲಂಕೇಶ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಆಕ್ಷಿಂಗ್ ತರಬೇತಿ ಪಡೆದಿದ್ದಾರೆ. 2024ರಲ್ಲಿ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ಕಾಲಿಟ್ಟ ಸಮರ್ಜಿತ್ ಅವರು ಈ ಚಿತ್ರದಲ್ಲೇ ಬಹಳಷ್ಟು ಗಮನ ಸೆಳೆದಿದ್ದಾರೆ.

ಸಮರ್ಜಿತ್ ಲಂಕೇಶ್.. ಈ ಹೆಸರು ಸದ್ಯ ಭಾರತೀಯ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸಿ ಓಡಾಡುತ್ತಿದೆ. ಕನ್ನಡದ ಈ ನಟ ಸಮರ್ಜಿತ್ ಲಂಕೇಶ್ ಸದ್ಯ ಬಾಲಿವುಡ್ ಬಾಗಿಲಲ್ಲಿ ನಿಂತು ಮಂದಹಾಸ ಬೀರುತ್ತಿದ್ದಾರೆ.
ಕನ್ನಡದ ಖ್ಯಾತ ನಿರ್ಮಾಪಕರು ಹಾಗೂ ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ (Samarjit Lankesh) ಹ್ಯಾಂಡ್‌ಸಮ್ ಹುಡುಗ ಎಂದೇ ಖ್ಯಾತಿ ಗಳಿಸಿದ್ದಾರೆ.
2024ರಲ್ಲಿ ಬಿಡುಗಡೆಯಾದ ಕನ್ನಡದ 'ಗೌರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನಾವೃತ್ತಿಯನ್ನು ಶುರುಮಾಡಿದ ಸಮರ್ಜಿತ್ ಇದೀಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟನೆಯ 'ವೃಷಭ' ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಕನ್ನಡ ನಿರ್ದೇಶಕ ನಂದಕಿಶೋರ್ ನಿರ್ದೇಶನದ 'ವೃಷಭ' ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವ ಸಮರ್ಜಿತ್ ಲಂಕೇಶ್ ಅವರು ಸದ್ಯ ಭಾರೀ ಮೆಚ್ಚಿಗೆ ಗಳಿಸಿದ್ದಾರೆ. ಹಲವು ನಿರ್ದೇಶಕರು, ನಿರ್ಮಾಪಕರು ಹಾಗೂ ಸ್ಟಾರ್ ನಟರಿಂದ ಮೆಚ್ಚುಗೆ ಪಡೆದಿರುವ ನಟ ಸಮರ್ಜಿತ್ ಅವರು ಪ್ರೇಕ್ಷಕರಿಂದಲೂ ಸಾಕಷ್ಟು ಪ್ರಶಂಸೆ ಗಿಟ್ಟಿಸುತ್ತಿದ್ದಾರೆ.
ವೃಷಭ ಚಿತ್ರದ ಮೂಲಕ ಸದ್ಯ ಮಿಂಚುತ್ತಿರುವ ನಟ ಸಮರ್ಜಿತ್ ಬಗ್ಗೆ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಕೂಡ ಚರ್ಚೆ ಶುರುವಾಗಿದೆ ಎಂಬ ಮಾಹಿತಿ ಹಬ್ಬಿದೆ.
ಬಾಲಿವುಡ್ ಬಾಗಿಲಲ್ಲಿ ನಿಂತು ಚಾನ್ಸ್‌ಗಾಗಿ ಕಾದಿರುವ ನಟ ಸಮರ್ಜಿತ್ ಅವರಿಗೆ ಈಗಾಗಲೇ ಬಾಲಿವುಡ್‌ನ ಹಲವು ನಿರ್ಮಾಪಕರು ಕಥೆ ಹೇಳಿದ್ದಾರೆ. ಆದರೆ, ಕಥೆ ಫೈನಲ್ ಆಗೋದಷ್ಟೇ ಬಾಕಿ ಇದೆ ಎಂಬ ಮಾಹಿತಿ ಇದೆ.
ನಟ ಸಮರ್ಜಿತ್ ಲಂಕೇಶ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಆಕ್ಷಿಂಗ್ ತರಬೇತಿ ಪಡೆದಿದ್ದಾರೆ. 2024ರಲ್ಲಿ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ಕಾಲಿಟ್ಟ ಸಮರ್ಜಿತ್ ಅವರು ಈ ಚಿತ್ರದಲ್ಲೇ ಬಹಳಷ್ಟು ಗಮನ ಸೆಳೆದಿದ್ದಾರೆ.
ಹೀರೋಗೆ ಬೇಕಾಗಿರೋ ಫೇಸ್, ಮೈಕಟ್ಟು, ಹೈಟ್, ವೇಟ್ ಎಲ್ಲವನ್ನೂ ಹೊಂದಿರುವ ನಟ ಸಮರ್ಜಿತ್ ಅವರು 'ಹ್ಯಾಂಡ್‌ಸಮ್' ಹುಡುಗ ಎನ್ನಲು ಯಾವುದೇ ಕೊರತೆ ಇಲ್ಲ ಎನ್ನುವಂತಿದ್ದಾರೆ. 6 ಅಡಿಗೂ ಮೀರಿದ ಹೈಟ್ ಹೊಂದಿರುವ ನಟ ಸಮರ್ಜಿತ್ ಅವರು ಡಾನ್ಸ್‌ನಲ್ಲಿ ಕೂಡ ಪಂಟರ್ ಎನ್ನುವಂತಿ ರೆಡಿಯಾಗಿದ್ದಾರೆ.
ನಟರಾದ ಕಿಚ್ಚ ಸುದೀಪ್, ಶಿವರಾಜ್‌ಕುಮಾರ್, ಮೋಹನ್‌ಲಾಲ್ ಸೇರಿದಂತೆ ಹಲವು ಸ್ಟಾರ್ ನಟರಿಂದ 'ಶಹಬ್ಬಾಸ್‌ಗಿರಿ' ಪಡೆದುಕೊಂಡಿರುವ ನಟ ಸಮರ್ಜಿತ್ ಅವರ ಮೇಲೆ ತಂದೆ ಇಂದ್ರಜಿತ್ ಸೇರಿದಂತೆ ಇಡೀ ಚಿತ್ರರಂದ ಬಹಳಷ್ಟು ಭರವಸೆ ಇಟ್ಟಿದೆ.
ತಮ್ಮ ಮೇಲಿರುವ ಅಪಾರ ಭರವಸೆಯ ಜೊತೆಗೆ ಸ್ವತಃ ತಮಗಿರುವ ಕನಸನ್ನು ನನಸಾಗಿಸಿಕೊಳ್ಳಲು ಸಮರ್ಜಿತ್ ಅವರು ಸದ್ಯ ಬಾಲಿವುಡ್ ಸಿನಿರಂಗದಲ್ಲಿ ಮಿಂಚಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ, ಕನ್ನಡದ ಈ ಹ್ಯಾಂಡ್‌ಸಮ್ ಹುಡುಗನನ್ನು ಬಾಲಿವುಡ್ ಒಪ್ಪಿಕೊಳ್ಳುತ್ತಾ?
ಬಾಲಿವುಡ್ ಸೇರಿದಂತೆ ಇಡೀ ಭಾರತೀಯ ಚಿತ್ರಗಳ ಸಿನಿಪ್ರೇಕ್ಷಕರು ಕನ್ನಡ ಮೂಲದ ಈ ನಟನನ್ನು ಹರಸಿ 'ಸ್ಟಾರ್‌ಪಟ್ಟ'ದ ಕಿರೀಟ ಕೊಟ್ಟು ಬೆಳೆಸುತ್ತಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

