Beauty Tips : ಈ ಎಳನೀರು ಹೊಟ್ಟೆ ತಣ್ಣಗಿಡೋ ಜೊತೆಗೆ ಮುಖವನ್ನೂ ಹೊಳೆಯುವಂತೆ ಮಾಡುತ್ತೆ!
ಎಳೆ ನೀರಿನಲ್ಲಿ ಸಾಕಷ್ಟು ಆರೋಗ್ಯ ಗುಣವಿದೆ. ದೇಹಕ್ಕೆ ಶಕ್ತಿ ನೀಡುವ ಈ ಎಳೆ ನೀರನ್ನು ನೀವು ಬಹುಪಯೋಗಿ ಎನ್ನಬಹುದು. ದೇಹದೊಳಕ್ಕೆ ಹೋದ್ರೆ ಆರೋಗ್ಯ ಸುಧಾರಿಸುವ ಈ ಎಳೆ ನೀರು, ದೇಹದ ಹೊರ ಭಾಗ ಚರ್ಮದ ಸೌಂದರ್ಯ ಹೆಚ್ಚಿಸುವ ಕೆಲಸವನ್ನೂ ಮಾಡುತ್ತದೆ.
ಬೇಸಿಗೆ ಕಾಲದಲ್ಲಿ ರಸ್ತೆಯ ಬದಿಯಲ್ಲಿ ಎಳೆನೀರಿನ ರಾಶಿಗಳನ್ನು ನಾವು ಕಾಣ್ತೇವೆ. ಜನರು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಹೆಲ್ದಿ ಡ್ರಿಂಕ್ ಎನಿಸಿಕೊಂಡಿರುವ ಎಳೆನೀರಿನ ಮೊರೆಹೋಗುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವವರೂ ಕೂಡ ಎಳೆನೀರನ್ನೇ ಹೆಚ್ಚು ಫ್ರಿಫರ್ ಮಾಡ್ತಾರೆ. ಕಲ್ಪವೃಕ್ಷ ಎಂದೇ ಪೂಜಿಸಲಾಗುವ ತೆಂಗಿನ ಮರದ ಕಾಯಿಗಳು, ಅದರ ನೀರು ಎಲ್ಲವೂ ದೇಹಕ್ಕೆ ಬಹಳ ಒಳ್ಳೆಯದು.
ಎಳೆ ನೀರಿ (CoconutWater) ನಲ್ಲಿರುವ ಪೌಷ್ಟಿಕಾಂಶಗಳು ಶರೀರಕ್ಕೆ ಬಹಳ ಒಳ್ಳೆಯದು. ಎಳೆನೀರಿನಲ್ಲಿ ಪೊಟ್ಯಾಸಿಯಮ್, ಸೋಡಿಯಂ, ಮೆಗ್ನೀಸಿಯಂ, ಎಲೆಕ್ಟ್ರೋಲೈಟ್ (Electrolyte) ಗಳು ಇವೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಶರೀರದ ಜೊತೆಗೆ ಇದು ತ್ವಚೆಯ ಆರೋಗ್ಯವನ್ನೂ ಕಾಪಾಡುತ್ತೆ ಎಂಬುದು ತಿಳಿದುಬಂದಿದೆ. ಇದು ಚರ್ಮ (skin) ವನ್ನು ಹೈಡ್ರೇಟ್ ಮಾಡಲು ಮತ್ತು ಕಾಂತಿಯುತಗೊಳಿಸಲು ಸಹಾಯಮಾಡುತ್ತದೆ. ಬೇಸಿಗೆಯಲ್ಲಿ ತ್ವಚೆ ಒಣಗುವುದು, ಮೊಡವೆ, ಟ್ಯಾನಿಂಗ್ ಮುಂತಾದ ಸಮಸ್ಯೆಗಳಿಗೆ ಎಳೆನೀರು ರಾಮಬಾಣವಾಗಿದೆ. ಹಾಗಾಗಿ ಇನ್ನು ನೀವು ನಿಮ್ಮ ತ್ವಚೆಯ ಆರೈಕೆಯಲ್ಲಿ ಎಳೆನೀರನ್ನು ಕೂಡ ಸೇರಿಸಿಕೊಳ್ಳಬಹುದು.
HEALTH TIPS : ಇಡೀ ಶರೀರಕ್ಕೆ ಟ್ಯಾಟೂ ಹಾಕಿಸ್ಕೊಂಡ್ಮೇಲೂ ರಕ್ತದಾನ ಮಾಡ್ಬಹುದು!
ಮೊಡವೆ ಸಮಸ್ಯೆಗೆ ಎಳೆನೀರೇ ಮದ್ದು : ಈಗಿನ ಯುವಜನತೆ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಮೊಡವೆಯೂ ಒಂದು. ಹವಾಮಾನ ಮತ್ತು ಕೆಲವು ಬ್ಯೂಟಿ ಪ್ರೊಡಕ್ಟ್ಸ್ ಗಳಿಂದ ಉಂಟಾಗುವ ಮೊಡವೆಯನ್ನು ನಿವಾರಿಸಿಕೊಳ್ಳುವುದು ಸುಲಭವಲ್ಲ. ಸೌಂದರ್ಯಕ್ಕೆ ಮಾರಕವಾದ ಮೊಡವೆಯನ್ನು ಹೋಗಲಾಡಿಸಲು ಎಳೆನೀರು ನೈಸರ್ಗಿಕ ಪರಿಹಾರವಾಗಿದೆ. ಎಳೆನೀರನ್ನು ಮುಖಕ್ಕೆ ಹಚ್ಚಿಕೊಳ್ಳುವ ವಿಧಾನ ಇಲ್ಲಿದೆ.
ಎರಡು ಚಮಚ ಎಳೆನೀರಿಗೆ ಒಂದು ಚಮಚ ಜೇನುತುಪ್ಪವನ್ನು ಬೆರಿಸಿ ಮಿಶ್ರಣಮಾಡಿ. ತಯಾರಿಸಿದ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಮೊಡವೆಯಾದ ಜಾಗಕ್ಕೆ ಹಚ್ಚಿ. ಇದರಿಂದ ಚರ್ಮವೂ ಸ್ವಚ್ಛವಾಗುತ್ತೆ ಮತ್ತು ಮೊಡವೆಯ ಸಮಸ್ಯೆಗೂ ಮುಕ್ತಿ ಸಿಗುತ್ತೆ.
ಟ್ಯಾನಿಂಗ್ ಸಮಸ್ಯೆ ದೂರ : ಬೇಸಿಗೆಕಾಲದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟ. ಬೆವರಿನ ಕಾರಣದಿಂದಾಗಿ ಹಲವಾರು ತ್ವಚೆಯ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಮಸ್ಯೆಗಳಲ್ಲಿ ಸನ್ ಟ್ಯಾನಿಂಗ್ ಕೂಡ ಒಂದು. ನೀವು ಕೂಡ ಸನ್ ಟ್ಯಾನಿಂಗ್ ಬೇಸತ್ತಿದ್ದರೆ ಎಳೆನೀರನ್ನು ಬಳಸಿ.
Weight Loss: ತೂಕ ಇಳಿಸಬೇಕಂದ್ರೆ ಬ್ಲಾಕ್ ಕಾಫಿ ಹೀಗೆ ಸೇವಿಸಿ
ಸನ್ ಟ್ಯಾನಿಂಗ್ ಹೊಂದಿರುವವರು ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಎಳೆನೀರನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮುಲ್ತಾನಿ ಮಿಟ್ಟಿ ಮತ್ತು ಎಳೆನೀರಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ನೀವು ಹಚ್ಚಿದ ಪೇಸ್ಟ ಪೂರ್ತಿಯಾಗಿ ಒಣಗಿದ ನಂತರ ಅದನ್ನು ನೀರಿನಿಂದ ತೊಳೆಯಬೇಕು. ಇದರಿಂದ ತ್ವಚೆ ಹೊಳೆಯುತ್ತದೆ ಮತ್ತು ಚರ್ಮದ ಕೋಶಗಳು ಕೂಡ ಆರೋಗ್ಯವಾಗಿರುತ್ತದೆ.
ಎಳೆನೀರಿನಿಂದ ತ್ವಚೆ ಹೊಳೆಯುತ್ತೆ : ಮುಖದ ಅಂದ ಹೆಚ್ಚಬೇಕೆಂದರೆ ಅದು ಹೊಳೆಯುತ್ತಿರಬೇಕು. ಇಂದು ಅನೇಕ ಮಂದಿ ಗ್ಲೋಯಿಂಗ್ ಸ್ಕಿನ್ ಹೊಂದಲು ಬ್ಯೂಟಿಪಾರ್ಲರ್ ಗಳ ಮೊರೆಹೋಗ್ತಾರೆ. ಹಾಗೆ ಮಾಡುವ ಬದಲು ಮನೆಯಲ್ಲಿರುವ ಎಳೆನೀರಿನಿಂದಲೇ ಸುಲಭವಾಗಿ ಗ್ಲೋಯಿಂಗ್ ಸ್ಕಿನ್ ಅನ್ನು ಪಡೆಯಬಹುದು.
ಒಂದು ಚಮಚ ಚಂದನ ಪುಡಿಗೆ 2-3 ಚಮಚ ಎಳೆನೀರನ್ನು ಸೇರಿಸಿ. ಈ ಮಿಶ್ರಣವನ್ನು ಬ್ರಶ್ ಸಹಾಯದಿಂದ ಮುಖಕ್ಕೆ ಲೇಪಿಸಿಕೊಳ್ಳಿ. ಅದು ಪೂರ್ತಿಯಾಗಿ ಒಣಗಿದಮೇಲೆ ನೀರಿನಿಂದ ತೊಳೆದುಕೊಳ್ಳಿ. ಈ ಸುಲಭವಿಧಾನದಿಂದ ನಿಮ್ಮ ಚರ್ಮಕ್ಕೆ ಹೆಚ್ಚು ಗ್ಲೋ ಬರುತ್ತೆ ಮತ್ತು ಚರ್ಮ ತಂಪಾಗುತ್ತೆ.
ಚರ್ಮದ ಸುಕ್ಕುಗಳು ದೂರ : ವಯಸ್ಸು ಹೆಚ್ಚಾದಂತೆ ಚರ್ಮ ಸುಕ್ಕುಗಟ್ಟುವುದು ಸಾಮಾನ್ಯ. ತೆಂಗಿನ ನೀರನ್ನು ಮುಖಕ್ಕೆ ಹಚ್ಚುವುದರಿಂದ ಏಜಿಂಗ್ ಸಮಸ್ಯೆ ಮತ್ತು ಚರ್ಮದ ಸುಕ್ಕುಗಳು ದೂರವಾಗುತ್ತವೆ.
ಎರಡು ಚಮಚ ಎಳೆನೀರಿಗೆ ಒಂದು ಚಮಚ ನಿಂಬೆಯ ರಸವನ್ನು ಸೇರಿಸಿ ಬ್ರಶ್ ಸಹಾಯದಿಂದ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಎಳೆನೀರಿನ ಈ ಸುಲಭ ವಿಧಾನವನ್ನು ಅನುಸರಿಸುವುದರಿಂದ ವಯೋಸಹಜ ಸುಕ್ಕುಗಳನ್ನು ಮತ್ತು ವಯಸ್ಸಿಯೂ ಮುನ್ನವೇ ಮುಖದ ಮೇಲೆ ಮೂಡುವ ನೆರಿಗೆಗಳು ನಿವಾರಣೆಯಾಗುತ್ತವೆ. ಭೂಲೋಕದ ಅಮೃತವೆಂದೇ ಹೇಳಲಾಗುವ ತೆಂಗಿನಕಾಯಿಯ ನೀರನ್ನು ತ್ವಚೆಯ ಆರೋಗ್ಯ ವರ್ಧನೆಗೆ ಬಳಸುವುದರಿಂದ ಯಾವುದೇ ಸೈಡ್ ಇಫೆಕ್ಟ್ ಕೂಡ ಇರುವುದಿಲ್ಲ.