Health Tips : ಇಡೀ ಶರೀರಕ್ಕೆ ಟ್ಯಾಟೂ ಹಾಕಿಸ್ಕೊಂಡ್ಮೇಲೂ ರಕ್ತದಾನ ಮಾಡ್ಬಹುದು!

ರಕ್ತದಾನ ಮಾಡೋದು ಎಷ್ಟು ಒಳ್ಳೆಯ ಕೆಲಸವೋ ಅಷ್ಟೇ ಜವಾಬ್ದಾರಿ ಕೆಲಸ. ರೋಗಿಯೊಬ್ಬ ತನ್ನ ರಕ್ತವನ್ನು ಇನ್ನೊಬ್ಬರಿಗೆ ನೀಡಲು ಸಾಧ್ಯವಿಲ್ಲ. ಹಾಗೆಯೇ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ರಕ್ತದಾನ ಮಾಡುವಾಗ್ಲೂ ಕೆಲ ಸಂಗತಿ ತಿಳಿದಿರಬೇಕು. ಅದೇನು ಗೊತ್ತಾ?
 

Can You Donate Blood If You Have A Tattoo Read Full roo

ಈಗಿನ ದಿನಗಳಲ್ಲಿ ದೇಹದ ಮೇಲೆ ಒಂದೂ ಟ್ಯಾಟೂ ಇಲ್ಲದ ಜನರನ್ನು ನೋಡೋದು ಬಹಳ ಅಪರೂಪ. ಹದಿಹರೆಯದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ತಮ್ಮಿಷ್ಟದ ಚಿತ್ರವನ್ನು ಟ್ಯಾಟೂ ರೂಪದಲ್ಲಿ ಹಾಕಿಸಿಕೊಳ್ತಾರೆ. ಇಡೀ ಮೈಗೆ ಟ್ಯಾಟೂ ಹಾಕಿಸಿಕೊಳ್ಳುವವರಿದ್ದಾರೆ. ಕೈ, ಕಾಲು, ಕತ್ತು, ಬೆನ್ನು, ಸೊಂಟ ಹೀಗೆ ನಾನಾ ಕಡೆ ಟ್ಯಾಟೂ ಆಕರ್ಷಿಸುತ್ತದೆ. ಟ್ಯಾಟೂ ಹಾಕಿಕೊಳ್ಳುವ ಮುನ್ನ ಕೆಲ ಸಂಗತಿಯನ್ನು ತಿಳಿದಿರಬೇಕು. ಇಷ್ಟಬಂದಾಗ ಎಲ್ಲರೂ ಟ್ಯಾಟೂ ಹಾಕಿಕೊಳ್ಳೋದು ಸೂಕ್ತವಲ್ಲ ಎನ್ನುತ್ತಾರೆ ತಜ್ಞರು. ರಕ್ತ ಸಂಬಂಧಿ ಸಮಸ್ಯೆ ಹೊಂದಿರುವ ಜನರು ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ವೈದ್ಯರನ್ನು ಭೇಟಿಯಾಗ್ಬೇಕು. ಅಂಥವರು, ರಕ್ತ ಪರೀಕ್ಷೆ ಮಾಡಿಸಿಕೊಂಡು, ವೈದ್ಯರು ಓಕೆ ಅಂದಲ್ಲಿ ಮಾತ್ರ ಟ್ಯಾಟೂ ಹಾಕಿಸಿಕೊಳ್ಳೋದು ಸೂಕ್ತ.

ಟ್ಯಾಟೂ (Tattoo) ಹಾಗೂ ರಕ್ತ (Blood) ಕ್ಕೆ ಸಂಬಂಧಿಸಿದಂತೆ ಇನ್ನೊಂದು ಮಾತು ಚಾಲ್ತಿಯಲ್ಲಿದೆ. ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ರಕ್ತದಾನ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಹಚ್ಚೆ ಹಾಕಿಸಿಕೊಂಡ ಕೆಲ ದಿನ ನೀವು ರಕ್ತದಾನ ಮಾಡಬಾರದು ಎಂದು ಅನೇಕರು ನಂಬುತ್ತಾರೆ. ಇದ್ರ ಬಗ್ಗೆ ತಜ್ಞರು ಏನು ಹೇಳ್ತಾರೆ ಎಂಬುದನ್ನು ನಾವಿಂದು ಹೇಳ್ತೇವೆ.

Health Tips: ಈ ಲಕ್ಷಣ ಕಡೆಗಣಿಸಿದ್ರೆ ಕಿಡ್ನಿ ಕ್ಯಾನ್ಸರ್ ಅಪಾಯ ಹೆಚ್ಚು

ಟ್ಯಾಟೂ ಹಾಕಿಸಿಕೊಂಡ ನಂತ್ರ ರಕ್ತ ದಾನ (Donation) ಮಾಡಬಾರದಾ? : ಟ್ಯಾಟೂ ಹಾಕಿಸಿಕೊಂಡ ನಂತ್ರ ರಕ್ತದಾನ ಮಾಡೋದು ಅಪಾಯಕಾರಿ ಎಂದು ಕೆಲವರು ಹೇಳ್ತಾರೆ. ಟ್ಯಾಟೂ ಹಾಕಿದ ಮೇಲೆ ಎಂದಿಗೂ ರಕ್ತ ನೀಡಬಾರದು ಎಂಬ ನಂಬಿಕೆ ಅನೇಕರಲ್ಲಿ ಬಲವಾಗಿದೆ. ತಜ್ಞರು ಇದನ್ನು ತಳ್ಳಿ ಹಾಕಿದ್ದಾರೆ. ಟ್ಯಾಟೂ ಹಾಕಿಸಿಕೊಂಡ ಕೆಲ ಸಮಯ ಮಾತ್ರ ರಕ್ತದಾನ ಮಾಡಬಾರದು. ಹಾಗಂತ ಜೀವನ ಪರ್ಯಂತ ರಕ್ತದಾನ ಮಾಡಬಾರದು ಎಂದೇನಿಲ್ಲ ಎನ್ನುತ್ತಾರೆ ತಜ್ಞರು.  

ಹಚ್ಚೆ ಹಾಕಿಸಿಕೊಂಡ ಎಷ್ಟು ಸಮಯ ರಕ್ತದಾನ ಮಾಡಬಾರದು? : ಟ್ಯಾಟೂ ಹಾಕಿದ್ಮೇಲೆ ರಕ್ತದಾನ ಮಾಡ್ಬಹುದು ಎಂಬ ಸಂಗತಿ ನಿಮಗೆ ಗೊತ್ತಾಯ್ತು. ಆದ್ರೆ ಕೆಲ ಸಮಯದ ನಂತ್ರ ಮಾಡಬೇಕು ಎಂದು ತಜ್ಞರು ಹೇಳ್ತಾರೆ. ಅಂದ್ರೆ ಟ್ಯಾಟೂ ಹಾಕಿದ ಎಷ್ಟು ದಿನದ ನಂತ್ರ ರಕ್ತದಾನ ಮಾಡ್ಬೇಕು ಎಂಬ ಪ್ರಶ್ನೆ ಬಂದಾಗ ತಜ್ಞರು ಅದಕ್ಕೆ 6 ತಿಂಗಳು ಎನ್ನುತ್ತಾರೆ. ನೀವು ಟ್ಯಾಟೂ ಹಾಕಿದ ತಕ್ಷಣ ಯಾವುದೇ ಕಾರಣಕ್ಕೂ ರಕ್ತ ನೀಡಬೇಡಿ. ಆರು ತಿಂಗಳು ತಡೆಯಬೇಕು. ಟ್ಯಾಟೂ ಹಾಕಲು ಬಳಸುವ ಸೂಜಿ ಹಾಗೂ ಶಾಯಿಯಿಂದ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ಟ್ಯಾಟೂ ಹಾಕಿಸಿಕೊಂಡವರಿಗೆ  ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಮತ್ತು ಎಚ್‌ಐವಿಯಂತಹ ಅನೇಕ ರಕ್ತ ಸಂಬಂಧಿತ ಕಾಯಿಲೆ ಕಾಡುವ ಅಪಾಯವಿರುತ್ತದೆ. ಅದು ಆರು ತಿಂಗಳಲ್ಲಿ ಪತ್ತೆಯಾಗುವ ಕಾರಣ ನೀವು ಟ್ಯಾಟೂ ಹಾಕಿಕೊಂಡ ಆರು ತಿಂಗಳು ಕಾದು, ನಂತ್ರ ರಕ್ತ ನೀಡಿ.

Weight Loss: ತೂಕ ಇಳಿಸಬೇಕಂದ್ರೆ ಬ್ಲಾಕ್ ಕಾಫಿ ಹೀಗೆ ಸೇವಿಸಿ

ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಇದನ್ನು ತಿಳಿದಿರಿ : ರಕ್ತದ ಸಮಸ್ಯೆ ಇರುವವರು ಟ್ಯಾಟೂ ಹಾಕಿಸಿಕೊಳ್ಳದಂತೆ ತಜ್ಞರು ಸಲಹೆ ನೀಡ್ತಾರೆ. ರಕ್ತ ಸಂಬಂಧಿ ಖಾಯಿಲೆ ಇರುವವರು ಟ್ಯಾಟೂ ಹಾಕಿಕೊಂಡ ತಕ್ಷಣ ಸಮಸ್ಯೆ ಕಾಣಿಸದೆ ಇದ್ರೂ ನಂತ್ರದ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಹೆಚ್ಚು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಟ್ಯಾಟೂ ಹಾಕುವಾಗ ಬಳಸುವ ಸೂಜಿ ಹೊಸದಾಗಿರೋದಿಲ್ಲ. ಇದ್ರಿಂದ ರೋಗ ಹರಡುವ ಅಪಾಯ ಹೆಚ್ಚಿರುತ್ತದೆ. ಹಚ್ಚೆಗೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿ ಇಲ್ಲವಾದ್ರೂ ಟ್ಯಾಟೂ ಹಾಕಿಸಿಕೊಂಡ ನಂತ್ರ ರಕ್ತದಾನ ಮಾಡದಂತೆ ಸೂಚನೆ ನೀಡಲಾಗುತ್ತದೆ. ಟ್ಯಾಟೂ ಹಾಕಿಸಿಕೊಂಡ 6 ತಿಂಗಳ ನಂತ್ರ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಗತ್ಯವಿರುವವರಿಗೆ 6 ತಿಂಗಳ ನಂತ್ರವೇ ನೀವು ರಕ್ತ ನೀಡಬೇಕು. ಟ್ಯಾಟೂ ಹಾಕಿಸಿಕೊಳ್ಳುವ ವೇಳೆ ನೀವು ಒಳ್ಳೆಯ ಪಾರ್ಲರ್ ಗೆ ಭೇಟಿ ನೀಡಿ ಅಲ್ಲಿ ಟ್ಯಾಟೂ ಹಾಕಿಸಿಕೊಳ್ಳಬೇಕು.

Latest Videos
Follow Us:
Download App:
  • android
  • ios