Tattoo Side Effects: ಹಚ್ಚೆ ಹಾಕಿಸ್ಕೊಳ್ಳೋ ಮುನ್ನ ಈ ವಿಚಾರ ಗೊತ್ತಿರಲಿ
ಫ್ಯಾಷನ್ (Fashin) ಜಮಾನ. ಎಲ್ಲರ ಕೈ, ಕಾಲು, ಕುತ್ತಿಗೆ ಎಲ್ಲಿ ನೋಡಿದ್ರೂ ಟ್ಯಾಟೂನೆ. ನಾನೇ ಔಟ್‌ಡೇಟೆಡ್ ಆಗ್ಬಿಟ್ಟೆ. ಈಗೇನಿದ್ರೂ ಒಂದು ಟ್ಯಾಟೂ (Tatoo) ಹಾಕ್ಕೊಳ್ಳೋದೆ ಅಂತ ಡಿಸೈಡ್ ಮಾಡಿದ್ರಾ. ಹಾಕಿದ್ರೆ ಟ್ಯಾಟೂ ಹಾಕೋಕು ಮುಂಚೆ ನೀವು ತಿಳ್ಕೊಳ್ಬೇಕಾದ ಕೆಲವೊಂದು ವಿಷಯ ಇಲ್ಲಿದೆ.
ವರ್ಷಗಳು ಬದಲಾಗುತ್ತಾ ಹೋಗುವ ಹಾಗೆಯೇ ಟ್ರೆಂಡ್ (Trend)ಗಳು ಸಹ ಬದಲಾಗುತ್ತಾ ಹೋಗುತ್ತವೆ. ಫ್ಯಾಷನ್, ಮೇಕಪ್, ಲೈಫ್‌ಸ್ಟೈಲ್ ಎಲ್ಲದರಲ್ಲೂ ಹೊಸ ಹೊಸ ಬದಲಾವಣೆಯಾಗುತ್ತಾ ಬರುತ್ತದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್ ಆಗಿರೋದು ಟ್ಯಾಟೂ ಫ್ಯಾಷನ್. ಕೈ, ಕಾಲು, ಬೆನ್ನು, ತೋಳು, ಸೊಂಟ ಹೀಗೆ ಹಲವೆಡೆ ಆಕರ್ಷಕವಾಗಿ ಟ್ಯಾಟೂ (Tattoo) ಹಾಕಿಕೊಳ್ಳುತ್ತಾರೆ. ಚಿಟ್ಟೆ, ಮ್ಯೂಸಿಕ್, ಸ್ಪೈಡರ್, ದೇವರ ಫೋಟೋ ಮೊದಲಾದವುಗಳನ್ನು ಟ್ಯಾಟೂ ಆಗಿ ಹಾಕಲಾಗುತ್ತದೆ. ಆದ್ರೆ ಟ್ಯಾಟೂ ಹಾಕೋದು ನೋಡೋಕೆ ಅಟ್ರ್ಯಾಕ್ಟಿವ್ ಆಗಿ ಕಂಡ್ರೂ ಆರೋಗ್ಯ (Health)ಕ್ಕೆ ಅದೆಷ್ಟು ಹಾನಿಯಿದೆ ಗೊತ್ತಾ ?
ಸ್ಟೈಲಿಶ್ ಲುಕ್ ನೀಡೋ ಟ್ಯಾಟೂ ಫ್ಯಾಷನ್ ಅಪ್‌ಡೇಟ್ ಆಗುತ್ತಲೇ ಹೋಗುತ್ತದೆ. ಬ್ಲಡ್ ಟ್ಯಾಟೂ, ಕಲರ್ ಟ್ಯಾಟೂ ಹೀಗೆ ಹಲವಾರು ರೀತಿಯಲ್ಲಿ ಟ್ಯಾಟೂವನ್ನು ಹಾಕಿಕೊಳ್ಳುತ್ತಾರೆ. ಆದರೆ, ಯಾವ ರೀತಿಯೇ ಆಗಿರಲಿ ಟ್ಯಾಟೋ ಹಾಕೋದ್ರಿಂದ ದೇಹದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತೆ. ಅದೇನು. ಟ್ಯಾಟೂ ಹಾಕಿಸ್ಕೊಳ್ಳೋಕು ಮುಂಚೆ ಏನ್ಮಾಡ್ಬೇಕು, ಏನ್ಮಾಡಬಾರದು, ಟ್ಯಾಟೂ ಹಾಕಿದ್ ಮೇಲೆ ಏನ್ಮಾಡ್ಬೇಕು, ಮಾಡ್ಬಾರ್ದು ತಿಳ್ಕೊಳ್ಳೋಣ.
ಈ ಲೇಡಿ ಡಾಕ್ಟರ್ ಮೈಯಲ್ಲಿ ಮತ್ತೆ ಟ್ಯಾಟೂ ಹಾಕಿಸಿ ಕೊಳ್ಳಲು ಇಲ್ಲವೇ ಇಲ್ಲ ಜಾಗ...
ಟ್ಯಾಟೂ ಹಾಕುವ ಮೊದಲು ಏನು ಮಾಡಬೇಕು ?
ಟ್ಯಾಟೂ ಹಾಕುವ ಮೊದಲಿನ ದಿನ ಅಥವಾ ರಾತ್ರಿ ಕೆಫೀನ್‌ಯುಕ್ತ ಪಾನೀಯವನ್ನು ತಪ್ಪಿಯೂ ಸೇವಿಸಬೇಡಿ. ಅದೇ ರೀತಿ ಮದ್ಯ ಸೇವನೆಯೂ ಒಳ್ಳೆಯದಲ್ಲ. ಇವೆರಡೂ ಟ್ಯಾಟೂ ಹಾಕಿಸುವ ಸಂದರ್ಭದಲ್ಲಿ ಬ್ಲೀಡಿಂಗ್ ಪ್ರಮಾಣವನ್ನು ಹೆಚ್ಚು ಮಾಡುತ್ತದೆ. ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತ (Blood) ಹರಿಯಲು ಕಾರಣವಾಗುತ್ತದೆ. ಟ್ಯಾಟೂ ಹಾಕುವ ಒಂದು ವಾರಕ್ಕೂ ಮೊದಲು ಅತಿ ಹೆಚ್ಚು ನೀರು (Water) ಕುಡಿಯಿರಿ. ದಿನವೊಂದಕ್ಕೆ ಎರಡು ಲೀಟರ್‌ನಷ್ಟು ನೀರು ಕುಡಿಯುವುದು ಒಳ್ಳೆಯದು. ಹೆಚ್ಚು ನೀರು ಕುಡಿಯುವುದರಿಂದ ಚರ್ಮ ಮೃದುವಾಗಿರುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. ಹೀಗಾಗಿ ಟ್ಯಾಟೂ ಹಾಕುವಾಗ ಹೆಚ್ಚು ನೋವಿನ ಅನುಭವವಾಗುವುದಿಲ್ಲ.
ಇದೆಲ್ಲಕ್ಕಿತ ಮುಖ್ಯವಾಗಿ ಟ್ಯಾಟೂ ಹಾಕಿಸಿಕೊಳ್ಳೋ ಮೊದಲು ನಿಮಗೆ ಟ್ಯಾಟೂ ಹಾಕೋ ಆರ್ಟಿಸ್ಟ್ ಹೊಸ ಸೂಜಿಯನ್ನು ಬಳಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಇನ್ನೊಬ್ಬರ ದೇಹಕ್ಕೆ ಟ್ಯಾಟೂ ಹಾಕಲು ಬಳಸಲು ಸೂಜಿಯನ್ನು ಬಳಕೆ ಮಾಡುವುದರಿಂದ ಇದು ನಿಮ್ಮ ದೇಹದಲ್ಲಿ ಅಲರ್ಜಿ (Allergy) ಯನ್ನುಂಟು ಮಾಡಬಹುದು. ಗುಳ್ಳೆ, ತುರಿಕೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಈ ಬಗ್ಗೆ ಹೆಚ್ಚು ಮುನ್ನೆಚ್ಚರಿಕೆ ವಹಿಸಿ.
ಸುಶಾಂತ್ ಬೆನ್ನ ಮೇಲಿತ್ತು ವಿಶೇಷ ಟ್ಯಾಟೂ, ಅದರಲ್ಲಿತ್ತು ನಿಗೂಢ ಸಂದೇಶ!
ಟ್ಯಾಟೂ ಹಾಕಿದ ನಂತರ ಏನು ಮಾಡಬೇಕು ?
ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಆಗುವ ಮುಖ್ಯ ಸಮಸ್ಯೆಯೆಂದರೆ ಚರ್ಮದ ಅಲರ್ಜಿ. ಹೀಗಾಗಿಯೇ ಇನ್ಫೆಕ್ಷನ್ ಆಗದಂತೆ ಅವರು ಟ್ಯಾಟೂ ಹಾಕಿದ ಕೂಡಲೇ ಬ್ಯಾಂಡೇಜ್ ಸುತ್ತಿಬಿಡುತ್ತಾರೆ. ಈ ರೀತಿ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಟ್ಯಾಟೂ ಹಾಕಿದ ಸ್ಥಳವನ್ನು ಆ್ಯಂಟಿ ಬ್ಯಾಕ್ಟಿರೀಯಲ್ ಸೋಪ್‌ನಿಂದ ಕ್ಲೀನ್ ಮಾಡಿ. ಈ ರೀತಿ ತೊಳೆಯುವಾಗ ಉಗುರು ಬೆಚ್ಚಗಿನ ನೀರನ್ನು ಮಾತ್ರ ಬಳಸಿ. ನೀರನ್ನು ತೆಗೆಯಲು ಮೆತ್ತಗಿರುವ ಕಾಟನ್ ಬಟ್ಟೆ ಬಳಸಿ. ನೀರನ್ನು ನಿಧಾನವಾಗಿ ಬಟ್ಟೆಯಿಂದ ಅದ್ದಿ ತೆಗೆಯಿರಿ. ರಭಸವಾಗಿ ಉಜ್ಜುವುದನ್ನು ಮಾಡಬೇಡಿ. ಟ್ಯಾಟೂ ಹಾಕಿದ ಜಾಗವು ಸೆನ್ಸಿಟಿವ್ ಆಗಿರುತ್ತದೆ.
ಟ್ಯಾಟೂ ಹಾಕಿದ ಮೇಲೆ ಕ್ರೀಮ್, ಲೋಶನ್ ಹಚ್ಚುವುದನ್ನು ಮರೆಯದಿರಿ. ಇದರಿಂದ ಚರ್ಮ (Skin) ಡ್ರೈ ಆಗುವ ಬದಲು ಮಾಯ್ಚಿಚರೈಸ್ ಆಗಿರುತ್ತದೆ. ಹೀಗೆ ಕ್ರೀಮ್ ಹಚ್ಚುವ ಅಭ್ಯಾಸವನ್ನು ಟ್ಯಾಟೂ ಹಾಕಿದ ನಂತರ ಕನಿಷ್ಟ ಎರಡು ವಾರಗಳ ತನಕ ಪಾಲಿಸಿ.
ಟ್ಯಾಟೂ ಹಾಕಿದ ಮೇಲೆ ಬಣ್ಣ ಮಾಸುವುದು, ಅಳಿಸಿ ಹೋಗುವುದು ಆಗುವುದಿಲ್ಲ. ಹೀಗಿದ್ದೂ ಹೆಚ್ಚು ಸೂರ್ಯನ ಶಾಖಕ್ಕೆ ದೇಹವನ್ನು ಒಡ್ಡಿಕೊಳ್ಳಬೇಡಿ. ಬಿಸಿಲಿಗೆ ಹೋಗಬೇಕಾದ ಪರಿಸ್ಥಿತಿ ಬಂದಾಗ ಸನ್ ಸ್ಕ್ರೀನ್ ಲೋಶನ್ ತಪ್ಪದೇ ಹಚ್ಚಿ. ಟ್ಯಾಟೂ ಒದ್ದೆಯಾದರೆ ಗಾಬರಿಯಾಗಬೇಕಿಲ್ಲ. ಆದರೆ ಟ್ಯಾಟೂ ಹಾಕಿದ ಮೂರು ವಾರದ ವರೆಗೆ ಹೆಚ್ಚು ಬಿಸಿಯಾದ ನೀರಿನಲ್ಲಿ ಸ್ನಾನ ಮಾಡಬೇಡಿ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಹೀಗಾಗಿ ಟ್ಯಾಟೂ ಹಾಕೋದೇನು ಚಂದ. ಆದ್ರೆ ಅದಕ್ಕಿಂತ ಮುಂಚೆ, ಟ್ಯಾಟೂ ಹಾಕಿದ ನಂತರ ಏನ್ಮಾಡ್ಬೇಕು ಅನ್ನೋದನ್ನು ಮಾತ್ರ ಖಂಡಿತಾ ತಿಳ್ಕೊಳ್ಳಿ. ಇಲ್ಲದಿದ್ರೆ ಟ್ಯಾಟೂ ಹೆಸರಿನಲ್ಲಿ ಒಂದಷ್ಟು ಆರೋಗ್ಯ ಸಮಸ್ಯೆನಾ ಮೈ ಮೇಲೆ ಎಳ್ಕೊಳ್ಳೋದು ಗ್ಯಾರಂಟಿ.