Bald Hair Style ಮಾಡಿದ್ರೆ ಕೂದಲು ದಟ್ಟವಾಗುತ್ತಾ? ಏನಿದ್ರ ಲಾಭ?
ತಲೆ ಕೂದಲು ನಮ್ಮ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡುತ್ತೆ. ಹಣೆ ಮೇಲ್ಭಾಗ ಬೋಳಾಗ್ತಿದ್ದರೆ ಭಯ ಶುರುವಾಗುತ್ತೆ. ಸ್ಟೈಲ್ ಹೆಸರಿನಲ್ಲಿ ನಾವೇ ಬಾಲ್ಡ್ ಹೇರ್ ಸ್ಟೈಲ್ ಮಾಡಿಕೊಂಡ್ರೆ ಫ್ಯಾಷನ್ ಜೊತೆ ಲಾಭವೂ ಇದೆ.
ಫ್ಯಾಷನ್ ಹೆಸರಿನಲ್ಲಿ ಹುಡುಗರು ಮಾತ್ರವಲ್ಲ ಹುಡುಗಿಯರು ಕೂಡ ತಲೆ ಬೋಳಿಸಿಕೊಳ್ತಾರೆ. ಹಿಂದೆ ಕೂದಲು ಕತ್ತರಿಸೋದೇ ನಿಷೇಧವಿತ್ತು. ಆದ್ರೀಗ ಪುರುಷರಂತೆ ಸ್ಟೈಲಿಗಾಗಿ ಅನೇಕ ಹುಡುಗಿಯರು ತಮ್ಮ ತಲೆ ಮೇಲಿರುವ ಕೂದಲನ್ನು ಬೋಳಿಸಿಕೊಳ್ಳುತ್ತಾರೆ. ಬಾಲ್ಡ್ ಹೇರ್ ಸ್ಟೈಲ್ ಈಗಿನ ದಿನಗಳಲ್ಲಿ ಸಾಮಾನ್ಯವಾಗ್ತಿದೆ. ಈ ಬಾಲ್ಡ್ ಹೇರ್ ಸ್ಟೈಲ್ ನಿಂದ ಕೆಲವೊಂದು ಲಾಭವಿದೆ. ತಪ್ಪು ಕಲ್ಪನೆಯೂ ಇದೆ. ನಾವಿಂದು ಕೂದಲನ್ನು ಸಂಪೂರ್ಣ ತೆಗೆದು ತಲೆ ಬೋಳಿಸಿಕೊಳ್ಳೋದ್ರಿಂದ ಲಾಭವೇನು, ತಪ್ಪೇನು ಎಂಬುದನ್ನು ಹೇಳ್ತೇವೆ.
ಬಾಲ್ಡ್ (Bald) ಹೇರ್ ಸ್ಟೈಲ್ ನಿಂದ ಆಗುತ್ತೆ ಈ ಎಲ್ಲ ಲಾಭ :
ನೆತ್ತಿ (Scalp) ಆರೋಗ್ಯಕ್ಕೆ ಒಳ್ಳೆಯದು : ತಲೆಯಲ್ಲಿ ಹೆಚ್ಚು ಕೂದಲಿದ್ರೆ ನೆತ್ತಿ ಸ್ವಚ್ಛತೆ ಕಷ್ಟ. ಹೊರ ಪರಿಸರ ಹಾಗೂ ತಲೆಯ ಚರ್ಮಕ್ಕೆ ಕೂದಲು ತಡೆಗೋಡೆಯಾಗಿರುತ್ತದೆ. ನೆತ್ತಿ ಚರ್ಮ (Skin) ಕ್ಲೀನ್ ಆಗದ ಕಾರಣ ಕೆಲವೊಂದು ಅನಾರೋಗ್ಯ ಕಾಡುತ್ತದೆ. ಅದೇ ತಲೆ ಬೋಳಾಗಿದ್ದರೆ ನೆತ್ತಿ ಚರ್ಮದ ಸ್ವಚ್ಛತೆ ಸುಲಭ.
ಫಳ ಫಳ ಹೊಳೆಯುವ ಕೂದಲಿಗೆ ನಟಿ ಮಾಧುರಿ ದೀಕ್ಷಿತ್ ಕೊಟ್ಟಿದ್ದಾರೆ ಈ ಟಿಪ್ಸ್
ಸೆಕೆ ತಟ್ಟೋದಿಲ್ಲ : ತಲೆಯ ಕೂದಲನ್ನು ಬೋಳಿಸಿಕೊಂಡ್ರೆ ಸೆಕೆಯಾಗೋದಿಲ್ಲ. ತಲೆ ಮೇಲೆ ಕೂದಲಿದ್ದಾಗ ಬೆವರು ಹೆಚ್ಚಾಗುತ್ತದೆ. ಹೊರಗಿನ ಧೂಳಿಗೆ ಬೆವರು ನೆತ್ತಿಯ ಮೇಲೆ ಕುಳಿತುಕೊಳ್ಳುತ್ತದೆ. ಇದ್ರಿಂದ ಚರ್ಮಕ್ಕೆ ಉಸಿರಾಡುವುದು ಕಷ್ಟವಾಗುತ್ತದೆ. ತಲೆ ಕೂದಲನ್ನು ಬೋಳಿಸಿದ್ದರೆ ನೇರವಾಗಿ ಸೂರ್ಯನ ಕಿರಣಕ್ಕೆ ತಲೆಯೊಡ್ಡಬೇಡಿ. ತಲೆಯ ಮೇಲೆ ಬಟ್ಟೆ ಹಾಕುವುದನ್ನು ಮರೆಯಬಾರದು. ಸೂರ್ಯನ ಕಿರಣ ನೇರವಾಗಿ ತಾಗಿದಲ್ಲಿ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಬಿಸಿಯ ಪ್ರಭಾವ ನಿಮಗಾಗುತ್ತದೆ.
ತಲೆ ಹೊಟ್ಟಿನಿಂದ ಮುಕ್ತಿ : ತಲೆಹೊಟ್ಟು ನೆತ್ತಿಯ ಮೇಲೆ ಸತ್ತ ಚರ್ಮದ ಕೋಶಗಳ ರಚನೆಯಿಂದ ಉಂಟಾಗುತ್ತದೆ. ಇದ್ರಿಂದ ನೆತ್ತಿಯ ಮೇಲೆ ದದ್ದು ಉಂಟಾಗುತ್ತದೆ. ಇದು ಪುರುಷರು ಮತ್ತು ಮಹಿಳೆಯರನ್ನು ಬಾಧಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಅತಿಯಾದ ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿರುವವರು ಕೂದಲು ಬೋಳಿಸಿಕೊಂಡು ಅದ್ರಿಂದ ಮುಕ್ತಿ ಪಡೆಯಬಹುದು. ತಲೆ ಬೋಳಿಸಿಕೊಳ್ಳುವುದರಿಂದ ಕೂದಲಿನ ಕಿರುಚೀಲ ಇರುವುದಿಲ್ಲ. ಇದು ಸತ್ತ ಚರ್ಮದ ಕೋಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದ್ರಿಂದ ತಲೆಹೊಟ್ಟು ಮಾಯವಾಗುತ್ತದೆ.
Hair Loss: ಅತಿಯಾಗಿ ಬೆವರೋದ್ರಿಂದನೂ ಕೂದಲು ಉದುರುತ್ತಾ?
ಡಿಫರೆಂಟ್ ಲುಕ್ ಜೊತೆ ಬೇಸಿಗೆಗೆ ಬೆಸ್ಟ್ : ಎಲ್ಲರ ಮಧ್ಯೆ ನೀವು ಡಿಫರೆಂಟ್ ಆಗಿರಬೇಕೆಂದ್ರೆ ನೀವು ತಲೆ ಕೂದಲನ್ನು ಬೋಳಿಸಿಕೊಳ್ಳಬಹುದು. ಕೂದಲು ಶೇವ್ ಮಾಡುವ ಪ್ಲಾನ್ ಇದ್ದರೆ ಬೇಸಿಗೆಯಲ್ಲಿ ಮಾಡಿ. ಇದು ಬಿಸಿಲಿನಿಂದ ನಿಮ್ಮನ್ನು ಕೂಲ್ ಆಗಿಡಲು ಸಹಾಯ ಮಾಡುತ್ತದೆ.
ತಲೆ ಬೋಳಿಸಿಕೊಳ್ಳುವ ಬಗ್ಗೆ ಇದೆ ತಪ್ಪು ಕಲ್ಪನೆ : ಕೂದಲು ಉದುರುತ್ತಿದೆ ಅಥವಾ ಕೂದಲು ತಪ್ಪವಾಗಿಲ್ಲ ಎಂದಾಗ ಜನರು ಕೂದಲನ್ನು ಬೋಳಿಸುವಂತೆ ಸಲಹೆ ನೀಡ್ತಾರೆ. ತಲೆ ಬೋಳಿಸಿದ್ರೆ ದಪ್ಪದಾದ ಹಾಗೂ ದಟ್ಟವಾದ ಕೂದಲು ಬರುತ್ತದೆ ಎಂದು ಅನೇಕರು ನಂಬಿದ್ದಾರೆ. ಮಕ್ಕಳಿಗೆ ಕೂದಲನ್ನು ಸಂಪೂರ್ಣವಾಗಿ ತೆಗೆಯೋದ್ರಿಂದ ಕೂದಲು ದಟ್ಟವಾಗಿ ಬರುತ್ತದೆ ಎಂದು ನಂಬಲಾಗಿದೆ. ಆದ್ರೆ ಇದು ತಪ್ಪು. ಮಕ್ಕಳು ಹುಟ್ಟುವಾಗ ಕೂದಲು ಮೃದುವಾಗಿರುತ್ತದೆ. ಕೆಲವು ತಿಂಗಳ ನಂತರ ಕೂದಲಲ್ಲಿ ಬದಲಾವಣೆ ಕಾಣಬಹುದು. ಮೃದು ಕೂದಲು ಪ್ರಬುದ್ಧ ಕೂದಲಾಗುತ್ತದೆ. ಹಾಗಂತ ನೀವು ಕೂದಲನ್ನು ಬೋಳಿಸಿದ್ರೆ ದಟ್ಟ ಕೂದಲು ಬರೋದಿಲ್ಲ.
ನಾವು ಕೂದಲನ್ನು ಶೇವ್ ಮಾಡಿದಾಗ, ತಲೆಯ ಮೇಲೆ ಕಾಣುವ ಕೂದಲನ್ನು ಮಾತ್ರ ಶೇವ್ ಮಾಡಿರ್ತೇವೆ. ಅದನ್ನು ಬುಡದಿಂದ ಕೀಳಲು ಸಾಧ್ಯವಿರುವುದಿಲ್ಲ. ಹಾಗಾಗಿ ನಾವು ತಲೆ ಶೇವ್ ಮಾಡಿದ 10- 12 ಗಂಟೆಯಲ್ಲಿಯೇ ನೆತ್ತಿ ಮೇಲೆ ಸಣ್ಣ ಕೂದಲು ಕಾಣಿಸಲು ಶುರುವಾಗುತ್ತದೆ. ಅದು ಹೊಸ ಕೂದಲಲ್ಲ. ಕತ್ತರಿಸಿದ ಕೂದಲಿನ ಬೇರೇ ಆಗಿರುತ್ತದೆ. ಕೂದಲಿನ ರಚನೆ, ಮೃದುವಾದ ಹೊಳೆಯುವ ಕೂದಲು ನಮ್ಮ ಜೀನ್ ಮತ್ತು ಪರಿಸರವನ್ನು ಅವಲಂಬಿಸಿರುತ್ತದೆ. ಹಾಗಾಗಿ ಶೇವ್ ಮಾಡಿದ್ರೆ ಕೂದಲು ದಟ್ಟವಾಗಿ ಬರುತ್ತೆ ಎನ್ನಲು ಸಾಧ್ಯವಿಲ್ಲ.