ಫಳ ಫಳ ಹೊಳೆಯುವ ಕೂದಲಿಗೆ ನಟಿ ಮಾಧುರಿ ದೀಕ್ಷಿತ್​ ಕೊಟ್ಟಿದ್ದಾರೆ ಈ ಟಿಪ್ಸ್​

ಆರೋಗ್ಯದ ರಕ್ಷಣೆಯ ಕುರಿತು ನಟಿ ಮಾಧುರಿ ದೀಕ್ಷಿತ್​ ಆಗಾಗ್ಗೆ ಕೆಲವು ಸಲಹೆಗಳನ್ನು ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ನೀಡುತ್ತಿರುತ್ತಾರೆ. ಈಗ ಅವರು ಕೂದಲಿನ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. 
 

Actress Madhuri Dixit gives some advice for hair health hair oil and hair mask suc

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ (Madhuri Dixit) ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯ ಇಲ್ಲ. ತಮ್ಮ ನಟನೆ ಮತ್ತು ಅಮೋಘ ಸೌಂದರ್ಯದ ಮೂಲಕ ಭಾರತೀಯ ಸಿನಿ ರಸಿಕರ ಹೃದಯದಲ್ಲಿ ನೆಲೆಯೂರಿದ ಅಪರೂಪದ ಸುಂದರಿ ಈಕೆ. 55ನೇ ವಯಸ್ಸಿನಲ್ಲಿಯೂ ಯುವತಿಯಂತೆ ಕಂಗೊಳಿಸುವ ಚೆಲುವೆ ಮಾಧುರಿ, ಆಗಾಗ್ಗೆ ತಮ್ಮ ಸೌಂದರ್ಯ ಮತ್ತು ಆರೋಗ್ಯ ಸಲಹೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ತ್ವಚೆಯಾಗಿರಬಹುದು ಇಲ್ಲವೇ ಕೂದಲಿನ ಕಾಳಜಿಯ ಕುರಿತು ನಟಿ ಟಿಲ್ಸ್​ ಕೊಡುತ್ತಲೇ ಇರುತ್ತಾರೆ. ಈಚೆಗಷ್ಟೇ ಅವರು ತಾವು ನಿತ್ಯ ಸೇವಿಸುವ ಪಾನೀಯಗಳ ಬಗ್ಗೆ ಒಂದರ ಹಿಂದೆ ಒಂದರಂತೆ ಮಾಹಿತಿ ಹಂಚಿಕೊಂಡಿದ್ದು, ಯುವತಿಯರನ್ನೂ  ನಾಚಿಸುವಷ್ಟು ಅವರ ಸೌಂದರ್ಯಕ್ಕೆ ಕಾರಣವಾದ ಕೆಲವು ಅಂಶಗಳನ್ನು ತಿಳಿಸಿದ್ದರು. ರಾಸಾಯನಿಕವಾದ ಕ್ರೀಂ, ಫೇಷಿಯಲ್​ಗಳನ್ನು ಹಚ್ಚಿಕೊಂಡು ತ್ವಚೆಯನ್ನು ಹಾಳು ಮಾಡಿಕೊಳ್ಳುವ ಬದಲು, ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂಗಳನ್ನು (Shampoo) ಕೂದಲಿಗೆ ಪ್ರಯೋಗ ಮಾಡಿ ಅವುಗಳನ್ನು ಹಾಳು ಮಾಡಿಕೊಳ್ಳುವ ಬದಲು ನೈಸರ್ಗಿಕವಾಗಿಯೇ ಹೇಗೆ ಸೌಂದರ್ಯವನ್ನು ಕಾಪಿಡಬಹುದು ಎನ್ನುವ ಬಗ್ಗೆ ನಟಿ ಮಾಧುರಿ ವರ್ಣಿಸಿದ್ದಾರೆ. 

ಇದಾಗಲೇ ತ್ವಚೆಯ ಕುರಿತು ಸಾಕಷ್ಟು ವಿಡಿಯೋಗಳನ್ನು ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ಅವರು ವಿವರಿಸಿದ್ದಾರೆ.  ಎಳ ನೀರನ್ನು  ಹೆಚ್ಚು ಕುಡಿಯುವುದರಿಂದ ಹೇಗೆ ಅದು ಒತ್ತಡವನ್ನು ನಿವಾರಿಸುತ್ತದೆ,  ಚರ್ಮ ಹೊಳೆಯುವಂತೆ ಮಾಡುತ್ತದೆ ಅಂತ ತಿಳಿಸಿಕೊಟ್ಟಿದ್ದರು.  ಹಾಲು ಮತ್ತು ಮೊಸರು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದ ಅವರು, ಪ್ರತಿದಿನ ಊಟದ ನಂತರ ಮಜ್ಜಿಗೆ ಕುಡಿಯಲು ಇಷ್ಟಪಡುತ್ತೇನೆ. ಚಹದ ಪ್ರೇಮಿಯಾದರೂ ಅಲ್ಪ ಚಹ ಸೇವಿಸುತ್ತೇನ ಎನ್ನುವ ಮೂಲಕ ಸೌಂದರ್ಯದ ಗುಟ್ಟು ಬಿಟ್ಟುಕೊಟ್ಟಿದ್ದರು.

ಪ್ರಸವದ ನಂತರವೂ ಫಿಟ್ ಆಗಿರೋದು ಹೇಗೆ? ವಿಡಿಯೋ ಮೂಲಕ ನಟಿ ಬಿಪಾಶಾ ಬಸು ಸೀಕ್ರೆಟ್​ ರಿವೀಲ್​
 
ಇದೀಗ ನಟಿ ತಮ್ಮ ಯುಟ್ಯೂಬ್​ ಚಾಲೆನ್​ನಲ್ಲಿ ಕೂದಲಿನ ಪೋಷಣೆಯ (Hair Care) ಬಗ್ಗೆ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ.  ಸ್ಥಿರವಾದ ಆರೋಗ್ಯಕರ ಜೀವನಶೈಲಿ (Healthy LIfetyle) ಮತ್ತು ಸಾಕಷ್ಟು ನೀರಿನ ಸೇವನೆಯು ಹೇಗೆ ಕೂದಲಿಗೆ ಪ್ರಯೋಜನಕಾರಿಯಾಗುತ್ತದೆ ಎನ್ನುವುದನ್ನು ಅವರು ತಿಳಿಸಿದ್ದಾರೆ.  'ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ (Drink Enough Water) ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಿರಿ, ಇದು ಆರೋಗ್ಯಕರ ಕೂದಲಿಗೆ ಬಹಳಷ್ಟು ಕೊಡುಗೆ ನೀಡುತ್ತದೆ' ಎಂದು ಮಾಧುರಿ ಹೇಳಿದ್ದಾರೆ.  ಇದೇ ಸಂದರ್ಭದಲ್ಲಿ ಕೂದಲಿನ ರಕ್ಷಣೆಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ನೈಸರ್ಗಿಕ ಟಿಪ್ಸ್​ಗಳನ್ನೂ (Natural Tips) ಅವರು ನೀಡಿದ್ದಾರೆ.

ಮಾಧುರಿ ದೀಕ್ಷಿತ್​ ಅವರು ಕೂದಲಿಗೆ ಎಣ್ಣೆ ಮತ್ತು ಹೇರ್​ ಮಾಸ್ಕ್​ ಕುರಿತು ಟಿಪ್ಸ್​ ನೀಡಿದ್ದಾರೆ


ಎಣ್ಣೆ ಮಾಡುವ ವಿಧಾನ (Hair Oil method)

ಎಣ್ಣೆ ತಯಾರಿಸಲು ಬೇಕಿರುವ ಸಾಮಗ್ರಿಗಳು: ಅರ್ಧ ಕಪ್ ತೆಂಗಿನ ಎಣ್ಣೆ (Coconut Oil), 15-20 ಕರಿಬೇವಿನ ಎಲೆಗಳು, 1 ಟೀ ಚಮಚ ಮೆಂತ್ಯದ  ಬೀಜಗಳು  ಹಾಗೂ 1 ಸಣ್ಣ ತುರಿದ ಈರುಳ್ಳಿ ಇವುಗಳನ್ನು ಎಲ್ಲವನ್ನೂ ಮಿಕ್ಸ್​ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಕುದಿ ಬಂದ ನಂತರ ಅದನ್ನು ತಣ್ಣಗೆ ಮಾಡಲು ಇಡಬೇಕು. ಸಂಪೂರ್ಣವಾಗಿ ಆರಿದ ಮೇಲೆ ಒಂದು ಬಾಟಲಿಯಲ್ಲಿ ಇದನ್ನು ಶೋಧಿಸಿ ಇಟ್ಟುಕೊಳ್ಳಬೇಕು. 2 ದಿನಗಳವರೆಗೆ ಹಾಗೆಯೇ ಬಿಡಬೇಕು. ಎರಡು ದಿನಗಳ ನಂತರ ಅದನ್ನು ಉಪಯೋಗಿಸಬಹುದು. ಮೂರು ದಿನಕ್ಕೊಮ್ಮೆ ಇಲ್ಲವೇ ಕೊನೆಯ ಪಕ್ಷ ವಾರಕ್ಕೆ ಒಮ್ಮೆಯಾದರೂ ರಾತ್ರಿ ಇದನ್ನು ಚೆನ್ನಾಗಿ ತಲೆಗೆ ಮಸಾಜ್​ ಮಾಡಿಕೊಂಡು ಮರುದಿನ ಬೆಳಗ್ಗೆ ತಲೆ ಸ್ನಾನ ಮಾಡಬೇಕು. 
 
ಹೇರ್​ ಮಾಸ್ಕ್​ (Hair Mask) ಮಾಡುವ ವಿಧಾನ
ಮಾಸ್ಕ್ (Face Mask) ತಯಾರಿಸಲು ಬೇಕಿರುವ ಸಾಮಗ್ರಿಗಳು:
1 ಕತ್ತರಿಸಿದ ಬಾಳೆಹಣ್ಣು, 2 ಚಮಚ ಕಪ್​ ಮೊಸರು, 2 ಚಮಚ ಸ್ವಲ್ಪ ಜೇನುತುಪ್ಪ. ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ತಲೆಸ್ನಾನ ಮಾಡುವ 30-40 ನಿಮಿಷಗಳ ಮೊದಲು ತಲೆಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಬೇಕು. ಅಪ್ಲೈ ಮಾಡಿದ ಸಾಮಗ್ರಿ ತಲೆಯ ಎಲ್ಲಾ ಕಡೆಗಳಲ್ಲಿ ಸರಿಯಾಗಿ ಇರುವಂತೆ ನೋಡಿಕೊಳ್ಳಲು ಬೇಕಿದ್ದರೆ ಹೇರ್​ ಷವರ್​ ಕ್ಯಾಪ್​ (Hair shower cap) ಹಾಕಿಕೊಳ್ಳಬಹುದು. 30-40 ನಿಮಿಷಗಳ ಬಳಿಕ ನೀವು ಬಳಸುವ ಶ್ಯಾಂಪೂವನ್ನು ಹಾಕಿ ತಲೆಗೂದಲನ್ನು ತೊಳೆದುಕೊಳ್ಳಬೇಕು. ಇದಾದ ಮೇಲೆ ಕಂಡೀಷನರ್​ ಹಾಕದೇ ಇದ್ದರೆ ಒಳ್ಳೆಯದು.  ಈ ಹೇರ್​ ಮಾಸ್ಕ್​ ಉಪಯೋಗಿಸುತ್ತಿದ್ದರೆ ಕೂದಲು ಸಾಫ್ಟ್​ ಆಗಿ ಹೊಳೆಯುತ್ತಲಿರುತ್ತದೆ.

 

 

Latest Videos
Follow Us:
Download App:
  • android
  • ios