'ಜೊತೆಜೊತೆಯಲಿ' ಧಾರಾವಾಹಿ ಶುರುವಾಗಿದ್ದೇ ಆಗಿದ್ದು... ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್‌ಯಿಂದಾಗಿ, ಆರ್ಯವರ್ಧನ್ ಹಾಗೂ ಅನು ಪಾತ್ರದಿಂದಾಗಿ, ಅನು ತಂದೆತಾಯಿಯ ಪಾತ್ರಗಳಿಂದಾಗಿ, ಕತೆಯಿಂದಾಗಿ, ಉಳಿದ ಧಾರಾವಾಹಿಗಳಂತೆ ಕತೆಯನ್ನು ಎಳೆಯದೆ ಮುಂದುವರಿಸುತ್ತಿರುವುದರಿಂದಾಗಿ, ಕಡೆಗೆ ಆರ್ಯವರ್ಧನ್ ಹೇರ್‌ಸ್ಟೈಲ್‌ನಿಂದಾಗಿ ಕೂಡಾ ಜನರನ್ನು ಸೆಳೆಯುತ್ತಿದೆ. ಇದರಿಂದ ಯುವಕರು ಸೇರಿದಂತೆ ಅಂಕಲ್‌ಗಳವರೆಗೆ ಎಲ್ಲರಿಗೂ ದೊಡ್ಡದೊಂದು ಪ್ರಯೋಜನವಾಗಿದೆ.

ಶೇವ್ ಮಾಡಿದ್ಮೇಲೆ ಹೀಗ್ ಮಾಡಬೇಕಾ?

ಅದೇನೆಂದರೆ ಇದುವರೆಗೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದ ಬಿಳಿಕೂದಲು ಇದೀಗ ಅವರ ಕೀಳರಿಮೆ ಕಳೆದು ಅವರ ಹೆಮ್ಮೆಯಾಗಿ ತಲೆ ಮೇಲೆ ಕುಳಿತುಕೊಳ್ಳುತ್ತಿದೆ. ಮುಂಚೆ ಒಂದೆರಡು ಬಿಳಿಕೂದಲಿಗೆ ಬೆದರಿ ಕೀಳುತ್ತಿದ್ದ, ಅವಕ್ಕೆ ಮೆಹಂದಿಯನ್ನೋ, ಕಪ್ಪು ಬಣ್ಣವನ್ನೋ ಹಚ್ಚಿಕೊಂಡು 15 ದಿನ ಕಳೆವಷ್ಟರಲ್ಲಿ ಅವು ಮತ್ತೆ ಇಣುಕುವ ಭಯದಲ್ಲಿ ಒದ್ದಾಡುತ್ತಿದ್ದ ಹುಡುಗರು, ಅಂಕಲ್‌ಗಳು ಇದೀಗ ಯಾವ ಯೋಚನೆಯಿಲ್ಲದೆ ಬೂದುಗೂದಲೇ ಬೆಸ್ಟ್ ಎಂದು ಮುಂಚೆಯೇ ಸಾಲ್ಟ್ ಆ್ಯಂಡ್ ಪೆಪ್ಪರ್ ಬಣ್ಣಕ್ಕೆ ತಿರುಗಿದ ಕೂದಲಿಗೆ ಅವೇ ಬಣ್ಣದಲ್ಲಿ ಸ್ವಲ್ಪ ಸ್ಟೈಲ್ ಮಾಡಿಸಿಕೊಂಡು ಆತ್ಮವಿಶ್ವಾಸದಿಂದ ಓಡಾಡುತ್ತಿದ್ದಾರೆ. ಇದಕ್ಕೆ ಕಾರಣ ಕನ್ನಡದ ಬೆಡಗಿಯರೆಲ್ಲ ಆರ್ಯವರ್ಧನ್ ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್‌ಸ್ಟೈಲ್‌ಗೆ ಫಿದಾ ಆಗಿರುವುದು!

ಪತ್ನಿಯಿಂದ ಪತಿ ಬಯಸುವುದೇನು ಗೊತ್ತಾ?

ಇಷ್ಟಕ್ಕೂ ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್‌ಸ್ಟೈಲ್ ಹೊಸತೇನಲ್ಲ. ಬಾಲಿವುಡ್, ಹಾಲಿವುಡ್‌ಗಳಲ್ಲಿ ಅವು ಆಗಾಗ ಪ್ರಯೋಗವಾಗಿ ಜನಮೆಚ್ಚುಗೆ ಗಳಿಸುತ್ತಲೇ ಇದ್ದವು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಒಂದು ಕಾಲದಲ್ಲಿ ಈ ಹೇರ್‌ಸ್ಟೈಲ್‌ಗಾಗಿ ಹಲವು ಅಭಿಮಾನಿಗಳನ್ನು ಹೊಂದಿದ್ದರು. ಆದರೆ, ಕನ್ನಡದ ಹುಡುಗಿಯರು ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್‌ಸ್ಟೈಲ್ ಇಷ್ಟಪಡುವಂತೆ ಮಾಡಿದ್ದು ಮಾತ್ರ 'ಜೊತೆಜೊತೆಯಲಿ' ಧಾರಾವಾಹಿಯ ಆರ್ಯವರ್ಧನ್. 

ಅದೇನೇ ಇರಲಿ, ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್‌ಸ್ಟೈಲ್‌ನಲ್ಲಿ ಎಲ್ಲರನ್ನೂ ಸೆಳೆಯುವಂಥದ್ದೇನಿದೆ ನೋಡೋಣ.

ಆತ್ಮವಿಶ್ವಾಸ

ವ್ಯಕ್ತಿಯ ಆತ್ಮವಿಶ್ವಾಸಕ್ಕಿಂತ ಹೆಚ್ಚು ಆತನ ಕಡೆಗೆ ಸೆಳೆಯುವ ಅಂಶ ಮತ್ತೊಂದಿರಲಾರದು. ವ್ಯಕ್ತಿಯು ತಾನು ಯಂಗ್ ಕಾಣದೆಯೂ ಆತ್ಮವಿಶ್ವಾಸದಿಂದ, ವಯಸ್ಸಿಗನುಗುಣವಾದ ಮೆಚ್ಯುರಿಟಿಯಿಂದ ಇರಬಲ್ಲನೆಂಬುದನ್ನು ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್‌ಸ್ಟೈಲ್‌ ತೋರಿಸುತ್ತದೆ. ಈ ಹೇರ್‌ಸ್ಟೈಲ್ ಪ್ರಬುದ್ಧತೆಯ ಪ್ರತೀಕದಂತೆ ಕಾಣಿಸುತ್ತದೆ.

ಅನುಭವ

ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್‌ಸ್ಟೈಲ್‌‌ನಿಂದಾಗಿ ವ್ಯಕ್ತಿಯು ಬಹಳಷ್ಟು ಅನುಭವಗಳನ್ನು ಪಡೆದಿರುವಂತೆ, ಅನುಭವದಿಂದ ಪಕ್ವನಾದಂತೆ, ಪರಿಪೂರ್ಣನಾದಂತೆ ಕಾಣಿಸುತ್ತಾನೆ. ಈ ಪಕ್ವತೆ ಹಾಟ್ ಅಲ್ಲದೆ ಮತ್ತೇನು?

ನಿಷ್ಠುರತೆ

ಬಿಳಿಕೂದಲನ್ನೇ ಸ್ಟೈಲ್ ಆಗಿಸಿಕೊಂಡ ವ್ಯಕ್ತಿಯನ್ನು ನೋಡುವಾಗ, ಯಾರು ಏನೆಂದುಕೊಂಡರೂ ಕೇರ್ ಮಾಡದ ನಿಷ್ಠುರ ವ್ಯಕ್ತಿತ್ವದಂತೆ ಕಾಣಿಸುತ್ತದೆ. ಮತ್ತೊಬ್ಬರ ಆಡಿಕೊಳ್ಳುವ ಮಾತುಗಳಿಗೆ ಕಿವಿಗೊಡದೆ, ತಾನು ಇರುವಂತೆಯೇ ತನ್ನನ್ನು ಆತ ಒಪ್ಪಿಕೊಂಡಿದ್ದಾನೆ ಎಂಬ ಭಾವ ಹುಟ್ಟುತ್ತದೆ.

ಬೇಡಪ್ಪಾ ಬೇಡ ಇಂಥ ಹುಡುಗರ ಸಹವಾಸ!

ಶ್ರೀಮಂತಿಕೆ

ಬಿಳಿಕೂದಲು ಎಲ್ಲರಿಗೂ ಬರುತ್ತದೆ. ಅದನ್ನು ಅದರ ಪಾಡಿಗೆ ಬಿಟ್ಟಾಗ ಏನೂ ಅನಿಸುವುದಿಲ್ಲ. ಆದರೆ, ಅದನ್ನೇ ಸ್ಟೈಲ್ ಆಗಿಸಿಕೊಂಡು ಮೆರೆಸುವಾಗ, ಅಲ್ಲೊಂದು ಶ್ರೀಮಂತಿಕೆ ಕಾಣಿಸುತ್ತದೆ. ಹಣದ ಶ್ರೀಮಂತಿಕೆಯಲ್ಲ, ಆ ವ್ಯಕ್ತಿಯ ಇರುವಿಕೆಯೇ ಶ್ರೀಮಂತವೆನಿಸುತ್ತದೆ. ಬಿಳಿಕೂದಲು ಕೂಡಾ ಫ್ಯಾಶನ್ ಆಗುತ್ತದೆ. 

ವಯಸ್ಸನ್ನು ಒಪ್ಪಿಕೊಳ್ಳಿ

ಪ್ರತಿಯೊಬ್ಬರೂ ವಯಸ್ಸನ್ನು ಮರೆಮಾಚಲು ಇನ್ನಿಲ್ಲದ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿರುವಾಗ, ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್‌ಸ್ಟೈಲ್‌ ಮಾಡಿಕೊಂಡವರು ತಮ್ಮ ವಯಸ್ಸನ್ನು ಒಪ್ಪಿಕೊಂಡು ಅದರ ಬಗ್ಗೆ ಹೆಮ್ಮೆ ಹೊಂದಿರುವಂತೆ ಕಾಣಿಸುತ್ತಾರೆ. ಬೊಲ್ಡ್ ಆ್ಯಂಡ್ ಸ್ಟ್ರಾಂಗ್ ಎನಿಸುತ್ತಾರೆ. 

ಮೊದಲ ಭೇಟಿ: ಆಕೆ ಅವನಲ್ಲಿ ಗಮನಿಸುವುದೇನು?

ಸ್ಟೈಲ್ ಮ್ಯಾಟರ್ಸ್

ಸ್ಟೈಲ್ ಎಂಬುದು ಹುಡುಗಿಯರನ್ನು ಬಹಳಷ್ಟು ಸೆಳೆಯುತ್ತದೆ. ಸ್ಪೈಕ್, ಗಡ್ಡದಲ್ಲಿ ಪ್ರಯೋಗಗಳು, ಜುಟ್ಟು ಬಿಡುವುದು ಮುಂತಾದವೆಲ್ಲ ಹುಡುಗಿಯರ ಗಮನ ಸೆಳೆಯುತ್ತದೆ. ಆದರೆ, ಅವೆಲ್ಲ ಇನ್ನೂ ಎಳಸು ಎಂಬ ಅಭಿಪ್ರಾಯ ಮೂಡಿಸುತ್ತವೆ. ಆದರೆ,  ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್‌ಸ್ಟೈಲ್‌ ಸ್ಟೈಲ್‌ನೊಂದಿಗೆ ಮೆಚ್ಯೂರಿಟಿಯನ್ನು  ಕೂಡಾ ಬಿಂಬಿಸುವುದರಿಂದ ಇದು ಯುವತಿಯರಿಗೆ ಹೆಚ್ಚು ಸೆಕ್ಸೀ ಎನಿಸುತ್ತದೆ.