Asianet Suvarna News Asianet Suvarna News

ಬೇಡಪ್ಪಾ ಬೇಡ ಇಂಥ ಹುಡುಗರ ಸಹವಾಸ!

ಜೀವನದಲ್ಲಿ ಸಂಗಾತಿಯನ್ನು ಹುಡುಕಿ ಕೊಳ್ಳುವಷ್ಟು ಕಠಿಣ ಪರೀಕ್ಷೆ ಬೇರೊಂದಿಲ್ಲ ಎನಿಸುತ್ತೆ. ಹೇಗೆ, ಯಾವ ಮಾನದಂಡವನ್ನು ಇಟ್ಟಿಕೊಳ್ಳಬೇಕು ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆ. ಆದರೆ, ಇಂಥ ಹುಡುಗರನ್ನು ಆರಿಸಿಕೊಳ್ಳದಿರುವುದೇ ಬೆಸ್ಟ್ ಅನ್ನುತ್ತೆ ಅಧ್ಯಯನವೊಂದು. 

Party going boys tend to be sexually aggressive
Author
Bangalore, First Published May 2, 2019, 3:58 PM IST

ಆಗಾಗ ಪಾರ್ಟಿ ಮಾಡುವ, ಬಾರಿಗೆ ಹೋಗಿ ಡ್ರಿಂಕ್ಸ್ ಮಾಡುವ ಕಾಲೇಜು ಕುಮಾರರಿಂದ ದೂರವಿರಿ ಎಂದು ಪೋಷಕರು ಹೆಣ್ಣು ಮಕ್ಕಳಿಗೆ ಹೇಳುವುದು ಸರಿಯಷ್ಟೇ. ಇದೀಗ ವಾಷಿಂಗ್ಟನ್ ವಿವಿ ಕೂಡಾ ಹುಡುಗಿಯರಿಗೆ ಇದೇ ಎಚ್ಚರಿಕೆ ನೀಡಿದೆ. ಏಕೆಂದರೆ ಇಂಥ ಹುಡುಗರು ಲೈಂಗಿಕವಾಗಿ ಹೆಚ್ಚು ಆಕ್ರಮಣ ಶೀಲರಾಗಿದ್ದು, ಹುಡುಗಿಯರ ಮೇಲೆ ಲೈಂಗಿಕ ಶೋಷಣೆ ಮಾಡುವ ಮನೋಭಾವ ಇವರಲ್ಲಿ ಜಾಸ್ತಿ ಎನ್ನುವುದು ವಿವಿ ನಡೆಸಿದ ಅಧ್ಯಯನ ವರದಿಯ ಸಾರಾಂಶ.  

ಹುಡುಗರ ಈ ಕ್ರೌರ್ಯ ಮನೋಭಾವಕ್ಕೆ ಆಲ್ಕೋಹಾಲ್ ಮಾತ್ರವಲ್ಲ. ಪಾರ್ಟಿ ನಡೆವ ಹಾಲ್‌ನ ವಾತಾವರಣವೂ ಕಾರಣ ಎನ್ನುತ್ತಾರೆ ಪ್ರೊಫೆಸರ್ ಮೈಕಲ್ ಲೀವ್‌ಲ್ಯಾಂಡ್. 

ಬ್ರೇಕಪ್ ಬಳಿಕ ಮಾಡಬಾರದ 9 ಕೆಲಸಗಳು

ವಿಶ್ವವಿದ್ಯಾಲಯ ನಡೆಸಿದ ಸರ್ವೆಯಲ್ಲಿ ಸುಮಾರು 1000 ಕಾಲೇಜು ಯುವಕರು ಭಾಗವಹಿಸಿದ್ದು, ಇವರೆಲ್ಲರೂ ಆಗಾಗ್ಗೆ ಪಾರ್ಟಿ ನಡೆಸುವ ಅಭ್ಯಾಸ ಹೊಂದಿದವರೇ. ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಬ್ರೇಕ್‌ಅಪ್ ಭಯ ಹುಟ್ಟಿಸುವುದರಿಂದ ಹಿಡಿದು, ಕುಡಿಸುವುದು, ದೈಹಿಕವಾಗಿ ತೊಂದರೆ ನೀಡುವ ಅಭ್ಯಾಸ ಹೊಂದಿರುವುದಾಗಿ ಯುವಕರು ತಿಳಿಸಿದ್ದಾರೆ. ಜೊತೆಗೆ, ಬಾರ್‌ಗೆ ಹೆಚ್ಚಾಗಿ ಹೋಗುವ ಯುವಕರು ಯುವತಿಯೊಂದಿಗೆ ಕಮಿಟ್ ಆಗದೆಯೇ ಸೆಕ್ಸ್ ನಡೆಸುವ, ಇಲ್ಲವೇ ಹಲವಾರು ಸೆಕ್ಷುವಲ್ ಪಾರ್ಟನರ್‌ಗಳನ್ನು ಹೊಂದುವ ಮನೋಭಾವದವರಾಗಿರುತ್ತಾರೆ. ಅಲ್ಲದೆ, ಲೈಂಗಿಕವಾಗಿಯೂ ಅಗ್ರೆಸಿವ್ ಆಗಿ ನಡೆದು ಕೊಳ್ಳುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 

Follow Us:
Download App:
  • android
  • ios