ಪತ್ನಿಯಿಂದ ಪತಿ ಬಯಸುವುದೇನು ಗೊತ್ತಾ?

Men are from Mars, Women are from Venus ಎಂಬ ಮಾತಿದೆ. ಹೆಣ್ಣಿಗೆ ಭಾವನಾತ್ಮಕ ಸಾಂಗತ್ಯ ಮುಖ್ಯವಾದರೆ, ಗಂಡು ದೈಹಿಕ ಸಾಂಗತ್ಯಕ್ಕೆ ಹಾತೊರೆಯುತ್ತಾನೆ. ಅಂಥದ್ರಲ್ಲಿ ಹೆಣ್ಣು ಏನು ಬಯಸುತ್ತಾಳೆ ಎಂಬುದನ್ನು ಕಂಡು ಹಿಡಿಯೋ ಯತ್ನವಿದು...

Five things men want most from wife

ಮಹಿಳೆಯರು ಹಾಗೂ ಪುರುಷರ ನಡುವೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲವು ವ್ಯತ್ಯಾಸಗಳಿವೆ. ಈ ವ್ಯತಿರಿಕ್ತತೆಯೇ ಹಲವು ಬಾರಿ ಇಬ್ಬರ ನಡುವೆ ಆಕರ್ಷಣೆಗೆ ಕಾರಣವಾಗುತ್ತದೆ. ಆದರೆ ಸಂಬಂಧ ಹಳತಾದಂತೆ ಅದನ್ನು ನವೀಕರಿಸಲು ಮುಂಚೆ ಹಾಕುತ್ತಿದ್ದ ಎಕ್ಟ್ರಾ ಎಫರ್ಟ್, ರೊಮ್ಯಾನ್ಸ್ ಎಲ್ಲವೂ ಮರೆಯಾಗುತ್ತದೆ. ಹೇಗಿದ್ದರೂ ಆತ ನನ್ನನ್ನು ಬಿಟ್ಟು ಹೋಗುವುದಿಲ್ಲ ಎಂಬ ಅತಿಯಾದ ನಂಬಿಕೆಯೋ ಅಥವಾ ಆಲಸ್ಯವೋ ಒಟ್ಟಿನಲ್ಲಿ ಜೀವನ ನೀರಸವಾಗುತ್ತದೆ. ಬಹಳಷ್ಟು ಮಹಿಳೆಯರಿಗೆ ತಮ್ಮ ಪತಿ ತಮ್ಮಿಂದ ಏನು ಬಯಸುತ್ತಾನೆಂಬ ಸರಿಯಾದ ಅರಿವೇ ಇರುವುದಿಲ್ಲ. ಮುಖ್ಯವಾಗಿ ಪುರುಷರು ಈ ಐದು ಸಂಗತಿಗಳನ್ನು ಪತ್ನಿಯಿಂದ ಬಯಸುತ್ತಾರೆ.

1. ಮೆಚ್ಚುಗೆ

ಎಲ್ಲ ಯುವಕರಿಗೂ ತಾನು ತನ್ನ ಹುಡುಗಿಯ ಕಣ್ಣಲ್ಲಿ ಹೀರೋ ಆಗಿರಬೇಕೆಂದು ಇರುತ್ತದೆ. ಆದರೆ, ಹೆಂಡತಿ ತನ್ನನ್ನು ಆಡಿಕೊಳ್ಳುವುದು, ತನ್ನ ಕೆಲಸಗಳನ್ನು ಹೀಗಳೆಯುವುದು, ವ್ಯಂಗ್ಯವಾಡುವುದು ಮಾಡಿದಾಗ ಆತನ ಹೀರೋ ಇಮೇಜ್ ಬಿದ್ದು ಹೋಗಿ, ಆತ್ಮವಿಶ್ವಾಸ ಕುಗ್ಗುತ್ತದೆ. ಅದೇ ನಿಮ್ಮ ಪತಿಯ ಕೆಲಸಗಳನ್ನು ಮೆಚ್ಚಿ ಮಾತಾಡಿ ನೋಡಿ. ಇನ್ನಷ್ಟು ಸಾಧಿಸಲು ಅವರಲ್ಲಿ ಹುಮ್ಮಸ್ಸು ಬರದಿದ್ದರೆ ಕೇಳಿ. ಹೆಂಡತಿಯಾಗಿ ಗಂಡನನ್ನು 'ಸರಿ ಮಾಡುವುದು' ನಿಮ್ಮ ಕೆಲಸವಲ್ಲ. ಪತಿಯ ಯಾವುದಾದರೂ ಕೆಲಸ ಇಷ್ಟವಾಗಲಿಲ್ಲವೆಂದರೆ ನಿಧಾನವಾಗಿ ಮಾತಿನಲ್ಲಿ ತಿಳಿಸಿ. ಆದರೆ, ನೋಯಿಸಿ ಅಗೌರವ ತೋರಬೇಡಿ. ಪತ್ನಿಯ ಮೆಚ್ಚುಗೆಯ ನೋಟ ಅವರೊಳಗೆ ಸಂತೋಷದ ಬುಗ್ಗೆ ಎಬ್ಬಿಸುತ್ತದೆ.

ಋಣಾನುಬಂಧ ಗೊತ್ತು, ಸೆಕ್ಷುಯಲ್ ಡೆಸ್ಟಿನಿ ಎಂದರೆ?

2. ಸೆಕ್ಸ್

ಮಹಿಳೆಯರಿಗೆ ಭಾವನಾತ್ಮಕ ಸಾಂಗತ್ಯ ಮುಖ್ಯವಾದರೆ, ಪುರುಷರಿಗೆ ದೈಹಿಕ ಸಾಂಗತ್ಯ ಹೆಚ್ಚಿನ ಅಗತ್ಯವೆನಿಸುತ್ತದೆ. ದುರದೃಷ್ಟವೆಂದರೆ, ಬಹಳಷ್ಟು ಮಹಿಳೆಯರು ತಮ್ಮ ಪತಿಯ ದೈಹಿಕ ಬೇಡಿಕೆಗೆ ಕಿರಿಕಿರಿ ಮಾಡಿಕೊಳ್ಳುತ್ತಾರೆ. ನಿಮಗೆ ಅವರೊಂದಿಗಿನ ಸೆಕ್ಷ್ಯುವಲ್ ಸಂಬಂಧದಲ್ಲಿ ಆಸಕ್ತಿ ಇಲ್ಲ ಎಂದರೆ, ಅದು ಪತಿಯನ್ನು ಬಹಳಷ್ಟು ನೋಯಿಸುತ್ತದೆ. ತಾನು ದೈಹಿಕವಾಗಿ ಆಕರ್ಷಕವಾಗಿಲ್ಲವೇ ಎಂಬ ಗೊಂದಲ ಆತನ ಮನದಲ್ಲೇಳುತ್ತದೆ. ಇದರ ಪರೀಕ್ಷೆಗೆ ಹೊರಡುವ ಆತ ಹೊರಗಿನ ಸಂಬಂಧಗಳನ್ನು ಬಯಸುವ ಅಪಾಯ ಹೆಚ್ಚು. ನಿಮ್ಮನ್ನು ಮದುವೆಯಾಗುವಾಗ ಆತ ತನ್ನ ಈ ಅಗತ್ಯವನ್ನೂ ನೀವು ಪೂರೈಸುವ ನಂಬಿಕೆ ಹೊಂದಿದ್ದನೆಂಬುದನ್ನು ನೆನಪಿಡಿ. 

3. ಸೌಂದರ್ಯ

ಪತಿ ಪತ್ನಿ ತನಗೆ ಆಕರ್ಷಕವಾಗಿ ಕಾಣಬೇಕೆಂದು ಬಯಸುತ್ತಾನೆ. ನಾನು ಹೇಗಿದ್ದೇನೋ ಹಾಗೆ ಇಷ್ಟಪಡಬೇಕು ಎಂಬ ಆ್ಯಟಿಟ್ಯೂಡಿನಿಂದ ಸ್ವಲ್ಪ ಹೊರಬಂದು ಪತಿಗೆ ಇಷ್ಟವಾಗುವಂತೆ ತಲೆ ಬಾಚಿಕೊಳ್ಳುವುದು, ಆತನಿಷ್ಟದ ಉಡುಗೆ ತೊಡುವುದು ಇಂಥ ಸಣ್ಣ ಪುಟ್ಟ ಹೊಂದಿಕೆ ಮಾಡಿಕೊಳ್ಳುವುದು ಕಷ್ಟವೇನಲ್ಲ. ಇನ್ನು ವ್ಯಾಯಾಮ, ಯೋಗ ಡಯಟ್ ಎಂದು ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದರಿಂದ ನಿಮ್ಮ ಆರೋಗ್ಯಕ್ಕೇ ಹಿತ, ಪತಿಯನ್ನೂ ಸಂತೋಷಪಡಿಸಿದಂತಾದೀತು. 

4. ಸಮಾನ ಆಸಕ್ತಿ

ಡೇಟಿಂಗ್ ಸಮಯದಲ್ಲಿ ಬಹುತೇಕ ಯುವತಿಯರು ತಮ್ಮ ಹುಡುಗನಿಗಿಷ್ಟವಾಗುವಂಥ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಆದರೆ, ವಿವಾಹದ ಬಳಿಕ ಈ ಆಸಕ್ತಿ ಕುಂದುತ್ತದೆ. ಹೀಗಾಗಿ, ಪತಿಯ ಇಷ್ಟದ ಹವ್ಯಾಸಗಳಿಗೆ ಸಾಂಗತ್ಯ ನೀಡುವುದನ್ನು ಬಹುತೇಕರು ಬಿಟ್ಟುಬಿಡುತ್ತಾರೆ. ಅಲ್ಲಿಗೆ ಇಬ್ಬರದೂ ಸಮಾನ ಆಸಕ್ತಿ ಎಂದು ಮದುವೆಗೂ ಮುಂಚೆ ಆತನನ್ನು ನಂಬಿಸಿ ವಂಚಿಸಿದಂತಾಗುವುದಿಲ್ಲವೇ? ಇಷ್ಟವೋ ಕಷ್ಟವೋ, ಪತಿಯೊಂದಿಗೆ ಅವರ ಆಸಕ್ತಿಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಇಬ್ಬರೂ ಒಟ್ಟಿಗೆ ಸಮಯ ಕಳೆದಂತೆಯೂ ಆಗುತ್ತದೆ, ಪತಿಯನ್ನು ಸಂತೋಷಪಡಿಸಿದಂತೆಯೂ ಆಗುತ್ತದೆ.

ಅವನ ಕಣ್ಣಿಗೆ ಬಿದ್ದ ಇವಳು, ಮನಸ್ಸಿನಲ್ಲಿ ನಿಲ್ಲದ ತಳಮಳ!

5. ನೆಮ್ಮದಿಯ ಮನೆ

ಪತಿ ಸಂಜೆ ಮನೆಗೆ ಬರುತ್ತಿದ್ದಂತೆಯೇ ನೀವು ನಿಮ್ಮ ಕೆಲಸದ, ಸಹೋದ್ಯೋಗಿಗಳ ಅಥವಾ ಕುಟುಂಬದ ಇತರರ ಮೇಲೆ ದೂರಿನ ಪಟ್ಟಿ ನೀಡುತ್ತಾ ಕೂರುವುದರಿಂದ ಇಬ್ಬರ ನೆಮ್ಮದಿಯೂ ಹಾಳು. ಬದಲಿಗೆ ಪತಿಯನ್ನು ಒಂದು ಅಪ್ಪುಗೆ, ಒಂದು ಸಿಹಿಯಾದ ಮುತ್ತಿನಿಂದ ಮನೆಗೆ ಬರ ಮಾಡಿಕೊಳ್ಳಿ. ಅವರ ಹೊಟ್ಟೆ ತಣ್ಣನೆ ಮಾಡಿ ದಿನ ಹೇಗಿತ್ತೆಂದು ವಿಚಾರಿಸಿ. ಪತ್ನಿ ಕಟ್ಟುವ ನೆಮ್ಮದಿಯ ಗೂಡು ಎಲ್ಲ ಪತಿಯಂದಿರ ಕನಸು. ಮನೆಯಲ್ಲಿ ಶಾಂತಿ, ನೆಮ್ಮದಿ ಇದೆ ಎಂದಾದರೆ ಮನಸ್ಸಿನಲ್ಲಿಯೂ ಅವು ಸೇರಿಕೊಳ್ಳುತ್ತವೆ. 

Latest Videos
Follow Us:
Download App:
  • android
  • ios