ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಜನರು ಖರೀದಿಸಲು ಹೆದರುತ್ತಿದ್ದಾರೆ.
ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಭಯದಿಂದ ಕೆಲವರು ಈಗಲೇ ಚಿನ್ನ ಖರಿದೀಸುತ್ತಿದ್ದಾರೆ.
ಆದರೆ ಚಿನ್ನ ಖರೀದಿಸುವಾಗ ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳಿವೆ. ಇಲ್ಲದಿದ್ದರೆ ನಿಮ್ಮ ಹಣವನ್ನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ನೀವು ಚಿನ್ನವನ್ನ ಖದೀರಿಸುವ ಮೊದಲು ಅದಕ್ಕೆ ಹಾಲ್‌ಮಾರ್ಕ್ ಇದೆಯೇ ಎಂದು ಪರಿಶೀಲಿಸಿ. ಇಲ್ಲದಿದ್ದರೆ ಅದು ನಿಜವಾದ ಚಿನ್ನವಲ್ಲ ಎಂದರ್ಥ.
ಅಲ್ಲದೆ ನೀವು ಚಿನ್ನ ಖರೀದಿಸುವಾಗ ಅದರ ಕ್ಯಾರೆಟ್ ಮೌಲ್ಯವನ್ನು ತಿಳಿದುಕೊಳ್ಳಬೇಕು. ಅದರ ಹೊರತಾಗಿ ಚಿನ್ನದ ಖರೀದಿಯ ಬಿಲ್ ತೆಗೆದುಕೊಂಡು ಸುರಕ್ಷಿತವಾಗಿಡಬೇಕು.
ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಹೇಗೆ ವಿಧಿಸುತ್ತಿದ್ದಾರೆ?, ತೂಕದ ಯಂತ್ರ ಸರಿಯಾಗಿದೆಯೇ?, ಅವರೇನು ಹೇಳುತ್ತಿದ್ದಾರೆ ಎಂದು ಗಮನಿಸಬೇಕು.
ಅದೇ ರೀತಿ ನೀವು ಖರೀದಿಸಿದ ಚಿನ್ನ ಹಿಂತಿರುಗಿಸಬಹುದೇ?, ಬಾಳಿಕೆ ಬರುತ್ತದೆಯೇ? ಎಂದೆಲ್ಲಾ ಅಂಗಡಿಯವರನ್ನು ಕೇಳಿ ತಿಳಿದುಕೊಳ್ಳಬೇಕು.
ಚಿನ್ನದ ಬೆಲೆ ಹೆಚ್ಚಾಗುತ್ತಿರುವುದರಿಂದ ವಂಚನೆಯೂ ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ಚಿನ್ನ ಖರೀದಿಸುವಾಗ ಜಾಗರೂಕರಾಗಿರಬೇಕು ಎಂದು ತಜ್ಞರು ಹೇಳುತ್ತಾರೆ.