Asianet Suvarna News Asianet Suvarna News

ದೇಸಿ ಪಾತ್ರದಲ್ಲಿ ಕ್ಲಾಸಿ ಬೆಡಗಿ 'ಕಮಲಿ'ಯ ನಿಂಗಿ!

ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚುತ್ತಾ 'DKD' ರಿಯಾಲಿಟಿ ಶೋ ಹೆಜ್ಜೆ ಹಾಕುತ್ತಿರುವ ಕಮಲಿ ಧಾರಾವಾಹಿ ಖ್ಯಾತಿಯ ನಿಂಗಿ ಅಲಿಯಾಸ್ ಅಂಕಿತಾ ಕಿರುತೆರೆ ಜರ್ನಿ.....

Zee kannada Kamali Fame Ankitha small screen journey
Author
Bangalore, First Published Aug 30, 2019, 3:21 PM IST
  • Facebook
  • Twitter
  • Whatsapp

ಬಣ್ಣದ ಲೋಕದಲ್ಲಿಇಂದು ಅವಕಾಶಗಳ ಸುರಿಮಳೆಯೇ ಪ್ರಾರಂಭವಾಗಿದೆ. ದಿನಕ್ಕೊಂದು ಬಗೆಯ ಧಾರವಾಹಿಗಳು ಇಂದು ರಾರಾಜಿಸುತ್ತಿರುವುದರಿಂದ  ಪಾತ್ರಕ್ಕೆತಕ್ಕಂತ ಹೊಸ ಮುಖಗಳಿಗೆ ಸದಾವಕಾಶ ದೊರಕುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲೂ ವಿಭಿನ್ನ ಶೈಲಿಯ ಪಾತ್ರಗಳಲ್ಲಿ ಅಭಿನುಸಿ ಜನರ ಮನ ಗೆಲ್ಲುದೆಂದರೆ ಸುಲಭದ ಮಾತಲ್ಲ. ಅಂತಹ ಪಾತ್ರದಲ್ಲಿ ಅಭಿನುಸಿ ಮನೆಮಾತಾಗಿರುವ ಬೆಡಗಿ ಅಂಕಿತಾ.

ಇವರು ಓದಿದ್ದು ಇಂಜಿನಿಯರಿಂಗ್‌ ಆದರೆ ಇವರ ಗಮನ ಸೆಳೆದಿದ್ದು ಮಾತ್ರ ಬಣ್ಣದಲೋ . ಬಾಲ್ಯದಿಂದಲೂ ಅಭಿನಯದ ಕುರಿತು ಆಸಕ್ತಿ ಹೊಂದಿದ್ದ ಇವರು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ತದ ನಂತರ ಅಭಿನಯದ ಕಡೆಗೆ ಚಿತ್ತ ಹರಿಸುವ ಆಲೋಚನೆಯಲ್ಲಿದ್ದರಂತೆ. ಹಾಗಾಗಿ ಇಂಜಿನಿಯರಿಂಗ್ ಓದಿ ಎರಡು ವರ್ಷಗಳ ಕಾಲ ಪ್ರತ್ಠಿತ ಕಂಪೆನಿಯಲ್ಲಿ ಕೆಲಸ ನಿರ್ವಹಿಸಿ ಇದೀಗ ತಮಗೆ ದೊರೆತ ಸಕಾಲ ಎಂದು ತಿಳಿದು ಧಾರವಾಹಿಗಳಿಗೆ ಆಡಿಷನ್ ನೀಡಿದರು.

ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಮತ್ತೊಂದು ಮುಖವಿದು!

ಅಂಕಿತಾ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಪಕ್ಕ ಮಾರ್ಡನ್ ಸಿಟಿ ಹುಡುಗಿ. ಆದರೆ ಕಮಲಿ ಧಾರವಾಹಿಯಲ್ಲಿಇವರದ್ದು ಗ್ರಾಮಿಣ ಪ್ರತಿಭೆ, ಹಳ್ಳಿ ಹುಡುಗಿ ಪಾತ್ರ. ರಿಯಲ್ ಮತ್ತು ರೀಲ್ ಲೈಫ್‌ಗೆ ಅಜಗಜಾಂತರ ವ್ಯತ್ಯಾಸವಿದೆ. ಅದರಲ್ಲೂ 'ನಿಂಗಿ' ಪಾತ್ರದ ಭಾಷೆ ಪ್ರಯೋಗದಲ್ಲಂತೂ ಇವರು ಸಿಟಿ ಹುಡುಗಿ ಎಂದು ಅನಿಸುವುದೇ ಇಲ್ಲ. ಅಂತಹ ಸಹಜ ಮತ್ತು ಮನಮುಟ್ಟುವಂತೆ ಆಭಿನುಸಿದ್ದಾರೆ ಅಂಕಿತಾ. 

ಇವರು ಮೂಲತಃ ತವಿಳುನಾಡಿನ ಆಯ್ಯರ್‌ ಕುಟುಂಬಕ್ಕೆ ಸೇರಿದವರು. ಹಾಗಾಗಿ ಇವರಿಗೆ ಮೊದಲು ಆಫರ್ ಬಂದದ್ದು ತಮಿಳಿನಿಂದ ಆದರೆ ಕನ್ನಡದ ಕುರಿತು ಅಪಾರ ಗೌರವಿರುವುದರಿಂದ ತಾನು ಮೊದಲು ಅಭಿನುಸಿದರೆ ಅದು ಕನ್ನಡದಲ್ಲೇ ಎಂದು ದೃಡ ಸಂಕಲ್ಪ ಮಾಡಿದ್ದರಂತೆ.

ಮೊದಲು ಇವರ ಮನೆಯಲ್ಲಿ ಚಿತ್ರರಂಗದ ಕುರಿತು ಅಷ್ಟೊಂದು ಒಳ್ಳೆಯ ಅಭಿಪ್ರಾಯವಿರಲಿಲ್ಲವಂತೆ ಹಾಗಾಗಿ ಮಗಳು ಬಣ್ಣದ ಲೋಕಕ್ಕೆ ಕಾಲಿಡುವುದು ಇವರ ತಂದೆಗೆ ಇಷ್ಟವಿರಲಿಲ್ಲ. ಆದರೆ ಅಂಕಿತಾಗೆ ನಟನೆ ಎಂದರೆ ಪಂಚಪ್ರಾಣ. ಹಾಗಾಗಿ ಮನೆಯಲ್ಲಿ ತಿಳಿಸದೆ ಸುಳ್ಳು ಹೇಳಿ ಆಡಿಷನ್‌ಗಳಿಗೆ ಹೋಗುತ್ತಿದ್ದರಂತೆ, ಅಲ್ಲಿಆಯ್ಕೆಯಾದ ನಂತರ ಮನೆಯಲ್ಲಿ ಬಂದು ತಿಳಿಸಿದಾಗ ತಂದೆ ತಾಯಿ ಖುಷಿ ಪಡುತ್ತಿದ್ದರಂತೆ ಇಂದು ಇವರ ನಟನೆಯನ್ನು ಮೆಚ್ಚಿದ ಪ್ರೇಕ್ಷಕರನ್ನುಕಂಡಾಗ ಪೋಷಕರಿಗೂ ಸಂತೋಷವಾಗುತ್ತಿದೆ. ಹಾಗಾಗಿ ಚಿತ್ರರಂಗದ ಕುರಿತು ಅವರಿಗಿರುವ ಭಾವನೆಗಳು ಇಂದು ಬದಲಾಗಿದೆ ಎಂದು ಹೇಳುತ್ತಾರೆ ಅಂಕಿತಾ.

ಯಾವ ನಟಿಗೂ ಕಮ್ಮಿಇಲ್ಲ 'ಕಮಲಿ' ಧಾರಾವಾಹಿಯ 'ರಚನಾ'!

ಅಂಕಿತಾ ಅವರ ಪೂರ್ತಿ ಕುಟುಂಬವೇ ಡಾ.ರಾಜ್‌ಕುಮಾರ್‌ ಅವರ ಆಭಿಮಾನಿಗಳು. ಹಾಗಾಗಿ ರಾಜ್‌ಕುಮಾರ್‌ರವರ ಸಾಕಷ್ಟು ಸಿನಿಮಾಗಳು ಇವರ ನಟನೆಗೆ ಪ್ರೇರಣೆಯಾಗಿದೆ. ಅದರಲ್ಲೂ 'ಬಂಗಾರದ ಪಂಜರ', 'ಶ್ರೀನಿವಾಸ ಕಲ್ಯಾಣ', 'ಸಂಪತ್ತಿಗೆ ಸವಾಲು' ಚಿತ್ರದ ಮಂಜುಳ ಪಾತ್ರಗಳು ಇವರನ್ನು ಬಹಳಷ್ಟು ಆರ್ಕಸಿದ ಚಿತ್ರಗಳು.ಇಷ್ಟುಮಾತ್ರವಲ್ಲದೇ ಬಾಲ್ಯದಿಂದಲೂ ಹೆಚ್ಚಾಗಿ ಧಾರವಾಹಿಗಳನ್ನು ವೀಕ್ಷಿಸುತ್ತಿದ್ದ ಅಂಕಿತಾಗೆ  ಪಾತ್ರಧಾರಿಗಳ ನಟನೆಯ ಪ್ರಭಾವ ಹೆಚ್ಚಾಗಿ ಬೀರಿದೆ. 

ಈಗಾಗಲೇ 'ಬಂಗಾರಿ, ಸಿಂಧೂರ, ಪತ್ತೆದಾರಿ ಪ್ರತಿಭಾ, ರಾಧರಮಣ’ ಧಾರವಾಹಿಗಳಲ್ಲಿ ಆಭಿಯಿಸಿ ಇವರು ಪ್ರಸ್ತುತ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರವಾಹಿಯಲ್ಲಿ ನಿಂಗಿ ಪಾತ್ರದಲ್ಲಿ  ಮಿಂಚುವುದರ ಮೂಲಕ ಮನೆ ಮಾತಾಗಿದ್ದಾರೆ. ಕೇವಲ ನಟನೆ ಮಾತ್ರವಲ್ಲದೇ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿರುವ ಅಂಕಿತಾ ಉದಯದಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀಕ್ಷೇತ್ರ'ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. 

ಕಮಲಿಯ ರಿಯಲ್ ಗ್ಲಾಮರಸ್ ಲುಕ್ ಇದು...

ನೃತ್ಯ, ಸಂಗೀತ, ಡ್ರಾಮಾ, ಗಿಟಾರ್‌ನ್ನು ಸಹ ನುಡಿಸಬಲ್ಲರು. ಶಾಲಾದಿನಗಳಲ್ಲಿ ತಾವೇ ನಾಟಕಗಳಿಗೆ ಸ್ಕ್ರಿಪ್ಟ್ ಬರೆದು, ಅಭಿನಯಿಸಿರುವ ಅನುಭವ ಇವರದ್ದು. ಮೊಡಲಿಂಗ್‌ ಕ್ಷೇತ್ರದಲ್ಲೂ ಹೆಸರು ಮಾಡಿರುವ ಇವರು 'ಮಿಸ್‌ ಕರ್ನಾಟಕ ಕ್ವೀನ್' ರನ್ನರ್‌ಅಪ್ ಪ್ರಶಂಸೆಗೆ ಭಾಜನರಾಗಿದ್ದಾರೆ.

"ಕಮಲಿ ನನಗೆ ದೊರೆದ ಒಂದು ಅತ್ಯುತ್ತಮವಾದ ತಂಡ. ಸಾಕಷ್ಟು ಹಿರಿಯ ಕಲಾವಿದರು ಈ ಧಾರವಾಹಿಯಲ್ಲಿದ್ದಾರೆ. ಮೊದಲು ಅವರ ಜೊತೆ ಹೇಗಪ್ಪಾ ನಟಿಸುವುದು ಎಂಬ ಭಯವಿತ್ತು. ಆದರೆ ಅವರೆಲ್ಲರು ತುಂಬಾ ಪ್ರೋತ್ಸಾಹ ನೀಡಿ ಸಲಹೆಗಳನ್ನು ನೀಡುವಾಗ ಅಂತಹ ಭಯ ಇಂದು ದೂರವಾಗಿದೆ. ನಿಂಗಿ ಹಳ್ಳಿ ಹುಡುಗಿ, ಮುಗ್ದೆ. ತನ್ನ ಗೆಳತಿ ಕಮಲಿ ಗೋಸ್ಕರ ಏನು ಬೇಕಾದರೂ ಮಾಡಲು ಸಿದ್ದವಾಗಿರುವವಳು. ಅವಳದ್ದು ಹಳ್ಳಿ ಸೊಗಡಿನ ಭಾಷೆ. ಮೊದಲು ನನಗೆ ಹಳ್ಳಿ ಪದಗಳನ್ನು ಮಾತನಾಡುವಾಗ ಮುಜುಗರ ಆಗುತ್ತಿತ್ತು. ಆದರೆ ಈಗ ಹಾಗೆ ಅನಿಸುವುದಿಲ್ಲ, ಆಕ್ಷನ್ ಹೇಳುವಾಗ ನಿಂಗಿ ಭಾಷೆ,ಕಟ್ ಹೇಳುವಾಗ ನನ್ನ ಸಹಜ ಭಾಷೆಗೆ ಬದಲಾಗುತ್ತೇನೆ. ಇಂದು ನಾನು ಅಂಕಿತಾ ಮತ್ತು ನಿಂಗಿ ನಡುವೆ ವ್ಯತ್ಯಾಸವನ್ನುಕಂಡುಕೊಂಡಿದ್ದೇನೆ. ಜನರುಕೂಡಾ ನನ್ನ ಪಾತ್ರವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ'' ಎಂದು ಹೇಳುತ್ತಾರೆ ಅಂಕಿತಾ. 

13 ನೇ ವಯಸ್ಸಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪುಟ್ಟಗೌರಿ' ಅಜ್ಜಮ್ಮ!

ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತುಇಂಗ್ಲೀಷ್ ಭಾಷೆಗಳಲ್ಲಿ ಸರಾಗವಾಗಿ ಇವರು ಮಾತನಾಡ ಬಲ್ಲರು. ಹಾಗಾಗಿ ಅನೇಕ ಆಫರ್‌ಗಳು ಇವರನ್ನು ಅರಸಿ ಬರುತ್ತಿದೆ. ಒಬ್ಬ ಕಲಾವಿದನಿಗೆ ಭಾಷೆಯ ಕುರಿತು ಯಾವುದೇ ಕಟ್ಟು ಪಾಡುಗಳು ಇರಬಾರದು ಎಂಬುದು ಅಂಕಿತಾರ ಅನಿಸಿಕೆ. ಡಾ. ರಾಜ್‌ಕುಮಾರ್ ಮತ್ತು ರಾಧಿಕಾ ಪಂಡಿತ್‌ ಇವರ ಜೀವನಕ್ಕೆ ರೋಲ್ ಮಾಡಲ್. ಬದುಕಿನಲ್ಲಿ ಸಾಧಿಸಲು ಸಾಕಷ್ಟು ಇದೆ ಮತ್ತಷ್ಟು ಚಾಲೆಂಜಿಂಗ್ ಪಾತ್ರಗಳಲ್ಲಿ ಆಭಿನಸ ಬೇಕೆಂಬುದು ಇವರ ಕನಸು.

ಸುಷ್ಮಾ ಸದಾಶಿವ್ , ಪುತ್ತೂರು
 

Follow Us:
Download App:
  • android
  • ios