Asianet Suvarna News Asianet Suvarna News

ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಮತ್ತೊಂದು ಮುಖವಿದು!

ಹೇ ಕೆಸರಿನ ಕಮಲಿ! ಎಂದು ಹೇಳುತ್ತಾ ಮೂಗಿನ ಮೇಲೆ ಕೋಪ ಹೊತ್ತು ಸ್ಟೈಲ್‌ ಆಗಿ ಹೇಳುವ ಡೈಲಾಗ್‌ಗೆ ಫಿದಾ ಆದವರು ಒಬ್ಬರಾ, ಇಬ್ಬರಾ? ಹೌದು ಇಟ್ಸ್‌ ಕಮಲಿ ಧಾರಾವಾಹಿಯ ಅನಿಕಾ ಅಲಿಯಾಸ್ ರಚನಾ ಸ್ಮಿತಾ. 
 

Kamali Fame Rachana Smita exclusive interview
Author
Bangalore, First Published Jul 30, 2019, 12:16 PM IST
  • Facebook
  • Twitter
  • Whatsapp

 

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಈಕೆಯದ್ದು. ಹಾಗಾಗಿ ತನ್ನ ನೆಚ್ಚಿನ ಕ್ಷೇತ್ರ ನಟನೆಯಲ್ಲೇ ಏನಾದರೂ ಸಾಧಿಸಬೇಕೆಂಬ ಕನಸಿನೊಂದಿಗೆ ನಟನಾ ಕ್ಷೇತ್ರವನ್ನು ಸೇರಿಕೊಂಡರು. ಯಾವುದೇ ಕ್ಷೇತ್ರವಾಗಲಿ ಅದರಲ್ಲಿ ನೈಪುಣ್ಯತೆ ಪಡೆಯಬೇಕೆಂದರೆ ಒಂದಷ್ಟು ಕಾಲ ಬೇಕಾಗುತ್ತದೆ. ಅಂತೆಯೇ ತನ್ನ ಗುರಿಯತ್ತ ಗಮನವಿಟ್ಟು ಮುಂದೆ ಸಾಗಿ ಇಂದು ಜನಮನಗಳಲ್ಲಿ ಪ್ರಸಿದ್ಧಿಯಾಗಿದ್ದಾರೆ ರಚನಾ ಸ್ಮಿತಾ.  

ಯಾವ ನಟಿಗೂ ಕಮ್ಮಿಇಲ್ಲ 'ಕಮಲಿ' ಧಾರಾವಾಹಿಯ 'ರಚನಾ'!

ಮೂಲತಃ ಬೆಂಗಳೂರಿನವರಾಗಿರುವ ರಚನಾಗೆ ಬಾಲ್ಯದಿಂದಲೂ ಮಾಡೆಲಿಂಗ್‌ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಇತ್ತು. ಹಾಗಾಗಿ ತನ್ನ 17 ನೇ ವಯಸ್ಸಿಗೆ ಮಾಡಲಿಂಗ್‌ ಕ್ಷೇತ್ರವನ್ನು ಪ್ರವೇಶಿಸಿದರು. "ವಿಂದಿಯಜೂಮ್ ಟಿ" ಆಯೋಜಿಸಿದ್ದ ಮಾಡಲಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನಿಂದ ಆಯ್ಕೆಯಾದ ಇಬ್ಬರು ಹುಡುಗಿಯರಲ್ಲಿ ಇವರೂ ಒಬ್ಬರು. ಮಾಡೆಲಿಂಗ್ ನಂತರ  ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರೂ  ಅದೇಕೋ ಇವರಿಗೆ ನಾನು ಜೀವನದಲ್ಲಿ ಏನೂ ಸಾಧಿಸುತ್ತಿಲ್ಲ ಎಂದೆನಿಸಿ ಸಿನಿಮಾ ಮತ್ತು ಧಾರವಾಹಿಗಳಿಗೆ ಆಡಿಷನ್‌ ಕೊಡಲು ಪ್ರಾರಂಭಿಸಿದರು.

‘ವರದನಾಯಕ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಾ ವಿಕ್ಟರಿ, ಭೂಂಭತ್ತಿ, ಗೆಸ್ಟ್‌ ಹೌಸ್‌ ಹಾಗೂ ತೆಲುಗಿನ ಮನಿ ಈಸ್ ಹನಿ, ಇನ್‌ಡೇ ಪಯಾಮ್‌ ಮುಂತಾದ ಚಿತ್ರಗಳಲ್ಲಿ ಅಭಿನಯಿಸುತ್ತಾ 'ಲೈಫ್‌ ಸೂಪರ್ ಗುರು' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದಾರೆ.

ಕಮಲಿ ಕಾಮಿಡಿ ಕಿಕ್

ಇನ್ನು ಮೂಗಿನ ತುದಿಯಲ್ಲಿ ಕೋಪ ಉಳ್ಳ ಶ್ರೀಮಂತರ ಮಗಳ ಪಾತ್ರ ನಿರ್ವಹಿಸುತ್ತಿರುವ ರಚನಾ ತಮ್ಮದೇ ಆದ ಡಿಫರೆಂಟ್‌ ಶೇಡ್‌ ಆಫ್ ಪ್ರೇಕ್ಷಕರನ್ನು ಹೊಂದಿದ್ದಾರೆ.  "ಕಮಲಿ ನನಗೆ ದೊರೆತ ಒಂದು ಉತ್ತಮ ಅವಕಾಶ. ನನ್ನನ್ನು ನಾನು ನಟನಾ ಕ್ಷೇತ್ರಕ್ಕೆ ಮತ್ತು ಹೊರಜಗತ್ತಿಗೆ ಬಿಂಬಿಸಿಕೊಳ್ಳಲು ಈ ಧಾರವಾಹಿ ತುಂಬಾ ಅನುಕೂಲ ಮಾಡಿಕೊಟ್ಟಿದೆ. ಅನಿಕಾ ಪಾತ್ರ ನನ್ನ ನಿಜ ಜೀವನದ ತದ್ವಿರುದ್ಧ. ನನಗೆ ತುಂಬಾ ಇಷ್ಟವಾದ ಪಾತ್ರ. ಅನಿಕಾ ಪಾತ್ರ ತುಂಬಾ ಅಹಂಕಾರಿ ಹೆಣ್ಣಿನ ಪಾತ್ರ. ಆದರೆ ನಾನು ನಿಜ ಜೀವನದಲ್ಲಿ ಶಾಂತಿಯನ್ನು ಬಯಸುವವಳು. ಯಾರ ಜೊತೆಯಲ್ಲೂ ಜಗಳ ಮಾಡುವವಳಲ್ಲ. ಹಾಗಾಗಿ ಜೀವನದಲ್ಲಿ ನಾನು ಮಾಡದ ಜಗಳವನ್ನು ಧಾರಾವಾಹಿ ಮೂಲಕ ಮಾಡುತ್ತಿದ್ದೇನೆ‘ ಎಂದಿದ್ದಾರೆ ರಚನಾ.  

ಧಾರಾವಾಹಿಯಲ್ಲಿ ನಟಿಸುತ್ತಾ 'Dance Karnataka Dance' ರಿಯಾಲಿಟಿ ಶೋನಲ್ಲಿ ‘ಪಾರು’ ಧಾರಾವಾಹಿ ನಟನೊಂದಿಗೆ ಜೋಡಿಯಾಗಿ ಸ್ಪರ್ಧಿಸುತ್ತಿದ್ದಾರೆ.

- ಸುಷ್ಮಾ ಸದಾಶಿವ್

Follow Us:
Download App:
  • android
  • ios