ಬಾಲಿವುಡ್ ನಟ ಯುವರಾಜ್ ಪರಾಶರ್ ಅವರು ತಮ್ಮ ಮಗ ಯಶ್ ರಾಜ್ ವಿವಾಹದ ಮೂಲಕ ಕಿರಿಯ ವಯಸ್ಸಿನಲ್ಲಿಯೇ ಎರಡನೇ ಬಾರಿಗೆ ಮಾವನಾಗಿದ್ದಾರೆ. ತಮ್ಮ 46ನೇ ವಯಸ್ಸಿನಲ್ಲಿಯೇ ಮಗಳ ಮತ್ತು ಮಗನ ಮದುವೆ ಮಾಡಿ 'ಬಾಲಿವುಡ್ನ ಅತ್ಯಂತ ಕಿರಿಯ ಮಾವ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮುಂಬೈ: ಬಾಲಿವುಡ್ ನಟ, ರೂಪದರ್ಶಿ, ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕ ಎಲ್ಲವೂ ಆಗಿರುವ ಯುವರಾಜ್ ಪರಾಶರ್ (Yuvraaj Parashar) ಬಾಲಿವುಡ್ನ ಅತ್ಯಂತ ಕಿರಿಯ ಹೆಣ್ಣುಕೊಟ್ಟ ಮಾವ ಎಂದೇ ಫೇಮಸ್ ಆಗಿರುವವರು. ಕಳೆದ ವರ್ಷ ಅರ್ಥಾತ್ 2025ರಲ್ಲಿ ತಮ್ಮ 46ನೇ ವಯಸ್ಸಿನಲ್ಲಿ ಅವರು ಮಗಳ ಮದುವೆ ಮಾಡುವ ಮೂಲಕ 'ಹಿಂದಿ ಚಿತ್ರರಂಗದ ಅತ್ಯಂತ ಕಿರಿಯ ಮಾವ' (Bollywood's youngest father-in-law) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ನಟ ಡಿಸೆಂಬರ್ 22 ರಂದು ಅವರ ಮಗ ಯಶ್ ರಾಜ್ ಪರಾಶರ್ ಅವರ ಮದುವೆ ಮಾಡಿ 2ನೇ ಬಾರಿ ಮಾವ ಆಗಿದ್ದಾರೆ.
ಡಿಸೆಂಬರ್ 11, 2025 ರಂದು ಯುವರಾಜ್ ಪರಾಶರ್ ಅವರ ಪುತ್ರಿ ಪ್ರಿಯಾ ಪರಾಶರ್ ಅವರು ಶಶಾಂಕ್ ಶರ್ಮಾ ಅವರನ್ನು ವಿವಾಹವಾದರು. ಈ ಮದುವೆಯೊಂದಿಗೆ ಯುವರಾಜ್ ಅವರು ಬಾಲಿವುಡ್ನ ಅತ್ಯಂತ ಕಿರಿಯ ಮಾವ ಎನಿಸಿಕೊಂಡರು. ಅವರ ಪುತ್ರ ಯಶ್ ರಾಜ್ ಪರಾಶರ್ (Yash Raj Parashar) ಅವರು ರಿತು ಬರುವಾ (Ritu Barua) ಅವರನ್ನು ವಿವಾಹವಾಗಿದ್ದು, ಈ ಮೂಲಕ ಯುವರಾಜ್ ಪರಾಶರ್ ಅವರು ಕಿರಿಯ ವಯಸ್ಸಿನಲ್ಲಿಯೇ ಎರಡನೇ ಬಾರಿಗೆ ಮಾವನಾಗಿ ಬಡ್ತಿ ಪಡೆದಿದ್ದಾರೆ.
“ಹೆಚ್ಚಿನ ಜನರು 12 ರಿಂದ 15 ವರ್ಷ ವಯಸ್ಸಿನ ಮಕ್ಕಳೊಂದಿಗೆ ಆಟವಾಡುವುದರಲ್ಲಿ ನಿರತರಾಗಿರುವ ಈ ವಯಸ್ಸಿನಲ್ಲಿ, ನಾನು ಎರಡು ಬಾರಿ ಮಾವನಾಗುವ ಅದ್ಭುತ ಅನುಭವವನ್ನು ಪಡೆದಿದ್ದೇನೆ! ಇದು ಅನೇಕರಿಗೆ ಅಸಾಮಾನ್ಯವೆನಿಸಬಹುದು, ಆದರೆ ನಾನು ನಿಜವಾಗಿಯೂ ಧನ್ಯ ಮತ್ತು ಸಂತೋಷವಾಗಿದ್ದೇನೆ ಎಂದು ಭಾವಿಸುತ್ತೇನೆ. ಇದನ್ನು ನನ್ನ ಜೀವನದ ಅತ್ಯಂತ ಸುಂದರವಾದ ಅನುಭವಗಳಲ್ಲಿ ಒಂದೆಂದು ನಾನು ಪರಿಗಣಿಸುತ್ತೇನೆ. ನಾನು ಸಾಧಿಸಿದ್ದೆಲ್ಲವೂ ನನ್ನ ಹೆತ್ತವರ ಆಶೀರ್ವಾದ ಮತ್ತು ನನ್ನ ಕುಟುಂಬ ಮತ್ತು ಪ್ರೀತಿಪಾತ್ರರ ಬೇಷರತ್ತಾದ ಪ್ರೀತಿ ಮತ್ತು ಬೆಂಬಲದಿಂದಾಗಿ. ಈ ಸುಂದರ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ.” ಎಂದಿದ್ದಾರೆ ಯುವರಾಜ್.
ಇದೊಂದು ಆಚರಣೆಯಲ್ಲ...
ಯುವರಾಜ್ಗೆ, ಇದು ಕೇವಲ ಮತ್ತೊಂದು ಕುಟುಂಬ ಆಚರಣೆಯಲ್ಲ, ಆದರೆ ಅಪಾರ ಸಂತೋಷ, ಕೃತಜ್ಞತೆ ಮತ್ತು ಒಗ್ಗಟ್ಟಿನ ಕ್ಷಣವಾಗಿದೆ. ಅವರು ರಿತು ಅವರನ್ನು ಕುಟುಂಬಕ್ಕೆ ಸ್ವಾಗತಿಸುತ್ತಿದ್ದಂತೆ, ಅವರು ಪ್ರೀತಿ, ಆಶೀರ್ವಾದಗಳು ಮತ್ತು ಸುಂದರ ನೆನಪುಗಳಿಂದ ತುಂಬಿದ ಹೊಸ ಅಧ್ಯಾಯವನ್ನು ಎದುರು ನೋಡುತ್ತಿದ್ದಾರೆ. ಅಂದಹಾಗೆ ಇವರ ಅಡ್ಡ ಹೆಸರು ಮುಕುತ್ ಪರಾಶರ್. ಆಗ್ರಾದ ಆರ್.ಬಿ.ಎಸ್. ಕಾಲೇಜಿನ ಪದವೀಧರರಾಗಿರುವ ನಟ, ಡನ್ನೋ ವೈ... ನಾ ಜಾನೇ ಕ್ಯೂಂ (2010), ಡನ್ನೋ ವೈ2, ಲವ್ ಲೈಫ್ ಸ್ಕ್ರೂ ಅಪ್ಸ್, ಕೇಸರ್, ಲೌಂಡಾ ನಾಚ್, ಅಥರ್ವ, ದ ಪಾಸ್ಟ್, ಲೈಟ್ಸ್ ಕ್ಯಾಮೆರಾ ಮರ್ಡರ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಬರವಣಿಗೆ / ನಿರ್ದೇಶನ / ನಿರ್ಮಾಣದ ಕುರಿತು ಹೇಳುವುದಾದರೆ ಗುಡಾಲ್ (2026), ಬಹಾರ್ (2021), ಲಾಲಿ (2022), ಮೆಹ್ರೂ (2019), ಜ್ವಾಲಾ, ಸಿತಾರಾ, ಶಕ್ತಿ: ದ ಅರೈವಲ್, ಇಶ್ಕ್ಬಾಜಿ ಮುಂತಾದ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. : ಮುಂಬೈ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (MIFF 2026), ತಸ್ವೀರ್ ಫಿಲ್ಮ್ ಫೆಸ್ಟಿವಲ್, ಎಂಬರ್ಲೈಟ್ ಸೇರಿದಂತೆ ಹಲವು ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿದ್ದು, ಗ್ಲೋಬಲ್ ತಾಜ್, ಲೇಕ್ಸಿಟಿ, ಬ್ರಜ್ ಫಿಲ್ಮ್ ಫೆಸ್ಟಿವಲ್ ಮತ್ತು ಹುನ್ಹರ್ ರತನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.












