- Home
- Karnataka Districts
- ಆಗ ಬಿಜೆಪಿ, ಈಗ ಕಾಂಗ್ರೆಸ್ ಸಂಬಂಧ: ಸಚಿವ ಬೈರತಿ ಸುರೇಶ್ ಪುತ್ರಿ- ಕೈ ನಾಯಕನ ಪುತ್ರನ ಅದ್ಧೂರಿ ಮದುವೆ
ಆಗ ಬಿಜೆಪಿ, ಈಗ ಕಾಂಗ್ರೆಸ್ ಸಂಬಂಧ: ಸಚಿವ ಬೈರತಿ ಸುರೇಶ್ ಪುತ್ರಿ- ಕೈ ನಾಯಕನ ಪುತ್ರನ ಅದ್ಧೂರಿ ಮದುವೆ
ಸಚಿವ ಬೈರತಿ ಸುರೇಶ್ ಪುತ್ರಿ ಡಾ. ಸ್ವಾತಿ ಮತ್ತು ಉದ್ಯಮಿ ಸ್ಟಾರ್ ಚಂದ್ರು ಪುತ್ರ ಚಿರಂತ್ ಅವರ ವಿವಾಹ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ವಿವಿಧ ಪಕ್ಷಗಳ ಗಣ್ಯರು ಆಗಮಿಸಿ ವಧು-ವರರಿಗೆ ಶುಭಕೋರಿದರು.

ಬೈರತಿ ಸುರೇಶ್ ಪುತ್ರಿ ವಿವಾಹ
ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಪುತ್ರಿ ಡಾ. ಸ್ವಾತಿ ಮತ್ತು ಕಾಂಗ್ರೆಸ್ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪುತ್ರ ಚಿರಂತ್ ಕೆ.ವಿ. ಅವರ ಮದುವೆ ಅದ್ಧೂರಿಯಾಗಿ ಜರುಗಿದೆ. ಈ ಮೂಲಕ, ಇಬ್ಬರು ಕಾಂಗ್ರೆಸ್ ಮುಖಂಡರು ಈಗ ಬೀಗರಾಗಿದ್ದಾರೆ.
ಎಲ್ಲಾ ಪಕ್ಷಗಳ ನಾಯಕರಿಂದ ಶುಭಾಶಯ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ಶುಭ ಕಾರ್ಯಕ್ಕೆ ಎಲ್ಲಾ ಪಕ್ಷಗಳ ನಾಯಕರು ಬಂದು ಶುಭ ಹಾರೈಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಶೋಭಾ ಕರಂದ್ಲಾಜೆ, ಮಧು ಬಂಗಾರಪ್ಪ, ರಣದೀಪ್ ಸಿಂಗ್ ಸುರ್ಜೇವಾಲಾ, ನಯನಾ ಮೋಟಮ್ಮ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ಮದುವೆಗೆ ಆಗಮಿಸಿ ಶುಭ ಕೋರಿದರು. ಇವರ ಮದುವೆಯ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕಳೆದ ವರ್ಷ ಪುತ್ರನ ಮದುವೆ
ಅಂದಹಾಗೆ, ಕಳೆದ ವರ್ಷ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಅವರ ಪುತ್ರನ ಜೊತೆ ಬೈರತಿ ಸುರೇಶ್ ಅವರ ಪುತ್ರಿ ಅಪೂರ್ವ ಅವರ ಮದುವೆ ನಡೆದಿತ್ತು. ಈ ಮೂಲಕ ಎರಡು ವಿಭಿನ್ನ ಪಕ್ಷಗಳ ನಾಯಕರು ಬೀಗರಾಗಿದ್ದಾರೆ.
ವಿಭಿನ್ನ ಪಕ್ಷದ ಸಂಬಂಧ
ಅಷ್ಟಕ್ಕೂ, ರಾಜಕಾರಣದಲ್ಲಿ ವಿಭಿನ್ನ ಪಕ್ಷಗಳ ನಾಯಕರ ನಡುವೆ ದ್ವೇಷ, ಗಲಾಟೆ, ಕಿತ್ತಾಟ, ಕಿರುಚಾಟ ಎಲ್ಲವೂ ಮಾಮೂಲು. ಆದರೆ ಅದು ಕೇವಲ ಆ ಕ್ಷಣದಲ್ಲಿ ಮಾತ್ರ. ಆದರೆ, ಅದೆಷ್ಟೋ ರಾಜಕಾರಣಿಗಳು ಪಕ್ಷಬೇಧ ಮರೆತು ಸಿಕ್ಕಾಪಟ್ಟೆ ಕ್ಲೋಸ್ ಇದ್ದವರು ಇದ್ದಾರೆ. ಸ್ನೇಹಿತರಾದವರು ಇದ್ದಾರೆ. ಅದೇ ರೀತಿ ಎರಡರು ಪಕ್ಷಗಳ ನಾಯಕರು ಬೀಗರಾಗಿದ್ದಾರೆ.
ಕಾಲೇಜಿನ ಸ್ನೇಹಿತರು
ಅಪೂರ್ವ ಹಾಗೂ ಸಂಜಯ್ ಇಬ್ಬರೂ ಮಲ್ಲೇಶ್ವರದಲ್ಲಿ ಖಾಸಗಿ ಶಾಲೆಯಲ್ಲಿ ಓದುವಾಗಲೇ ಸ್ನೇಹಿತರಾಗಿದ್ದರು. ಬಳಿಕ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಮನೆಯವರನ್ನು ಮದುವೆಗೆ ಒಪ್ಪಿಸಿ ಮದುವೆಯಾಗಿದ್ದಾರೆ.











