ಲೈವ್ ಕನ್ಸರ್ಟ್‌ನಲ್ಲಿ, ಮಹಿಳಾ ಅಭಿಮಾನಿಯೊಬ್ಬರು ಅವರ ಖಾಸಗಿ ಭಾಗಕ್ಕೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ವಿಚಲಿತರಾಗದ ಮಾರಿಯೋ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದು, ಅವರ ಈ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಾಷಿಂಗ್ಟನ್ ಡಿಸಿ: ಸಾರ್ವಜನಿಕ ಅಥವಾ ಜನಸಂದಣಿ ಪ್ರದೇಶದಲ್ಲಿ ತುಂಬಾನೇ ಎಚ್ಚರಿಕೆಯಿಂದಿರಬೇಕು ಎಂಬ ಮಾತಿದೆ. ಮೊದಲು ಇಂತಹ ಮಾತುಗಳನ್ನು ಮಹಿಳೆಯರಿಗೆ ಹೇಳಲಾಗುತ್ತಿತ್ತು. ಈಗ ಕಾಲ ಬದಲಾಗಿದ್ದು, ಪುರುಷರಿಗೆ ಈ ಮಾತುಗಳನ್ನು ಹೇಳುವ ಸಂದರ್ಭ ಬಂದಿದೆ. ಮ್ಯೂಸಿಕ್ ಲೈವ್ ಕನ್ಸರ್ಟ್‌ನಲ್ಲಿ ಯುವತಿಯೊಬ್ಬಳು ಯಾವುದೇ ಅಳಕು, ಭಯವಿಲ್ಲದೇ ಗಾಯಕನ ಖಾಸಗಿ ಭಾಗಕ್ಕೆ ಕೈ ಹಾಕಿದ್ದಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗಾಯಕನ ತಾಳ್ಮೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಗಾಯಕನೊಂದಿಗೆ ಮಹಿಳೆಯ ಅನುಚಿತ ವರ್ತನೆ

ಇಂದು ಸಂಗೀತ ಕಾರ್ಯಕ್ರಮಗಳಂದ್ರೆ ಗಾಯಕರು ಅಭಿಮಾನಿಗಳ ಮಧ್ಯೆ ಹೋಗಿ ಹಾಡುತ್ತಾರೆ. ಇದಕ್ಕಾಗಿ ವಿಶೇಷವಾಗಿ ಟಿ ಆಕಾರದಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿರುತ್ತದೆ. ಅಭಿಮಾನಿಗಳು ವೇದಿಕೆ ಸಮೀಪದಲ್ಲಿಯೇ ನಿಂತು ಹಾಡು ಕೇಳುತ್ತಾ ಕುಣಿದು ಕುಪ್ಪಳಿಸುತ್ತಾರೆ. ಇದೀಗ ಇಂತಹವುದೇ ಒಂದು ವೇದಿಕೆಯಲ್ಲಿ ಗಾಯಕನೊಂದಿಗೆ ಮಹಿಳೆ ಅನುಚಿತವಾಗಿ ನಡೆದುಕೊಂಡಿದ್ದಾಳೆ. ಈ ಎಲ್ಲಾ ದೃಶ್ಯವನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರೆ. ಯಾರು ಈ ಗಾಯಕ ಎಂಬುದನ್ನು ನೋಡೋಣ ಬನ್ನಿ.

ಅಮೆರಿಕದ ಗಾಯಕ ಮಾರಿಯೋ (Mario) ಹಾಡುಗಳನ್ನು ಕೇಳಲು ಜನರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಮಾರಿಯೋ ಕಾನ್ಸರ್ಟ್‌ಗಳಿಗೆ ಲಕ್ಷಾಂತರ ರೂಪಾಯಿ ಹಣ ಪಾವತಿಸಿ ಟಿಕೆಟ್ ಪಡೆದುಕೊಳ್ಳುತ್ತಾರೆ. ಮಾರಿಯೋ ಜೊತೆಯಲ್ಲಿಯೇ ಮಹಿಳಾ ಅಭಿಮಾನಿಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಹಾಡು ಹೇಳುತ್ತಾ ಮಾರಿಯೋ ವೇದಿಕೆ ಮುಂಭಾಗಕ್ಕೆ ಬರುತ್ತಾರೆ. ವೇದಿಕೆ ಕೆಳಗೆ ನಿಂತಿದ್ದ ಅಭಿಮಾನಿಗಳು ಮಾರಿಯೋ ಅವರನ್ನು ಟಚ್ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅಲ್ಲಿಯೇ ನಿಂತಿದ್ದ ಮಹಿಳೆ ನೇರವಾಗಿ ಮಾರಿಯೋ ಖಾಸಗಿ ಭಾಗ ಸ್ಪರ್ಶಿಸುತ್ತಾಳೆ.

ಗಾಯಕನ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ

ಈ ಸಂದರ್ಭದಲ್ಲಿ ಒಂದು ಕ್ಷಣವೂ ವಿಚಲಿತರಾಗದ ಮಾರಿಯೋ, ಹೀಗೆಲ್ಲಾ ಮಾಡಬಾರದು ಎಂಬಂತೆ ಸನ್ನೆ ಮಾಡಿ ಸ್ವಲ್ಪ ಹಿಂದೆ ಹೋಗಿ ಮತ್ತೆ ಹಾಡು ಆರಂಭಿಸುತ್ತಾರೆ. ಮಾರಿಯೋ ಅವರ ಈ ನಡೆಗೆ ಅಭಿಮಾನಿಗಳು ಫಿದಾ ಆಗಿದ್ದು, ಮೆಚ್ಚುಗೆ ಸೂಚಿಸಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಲು ಆರಂಭಿಸಿದ್ದಾರೆ.

ಇದನ್ನೂ ಓದಿ: Amruthadhaare: ಅಡುಗೆಮನೆಯಲ್ಲಿ ಗೌತಮ್-ಭೂಮಿಕಾ ರೊಮ್ಯಾನ್ಸ್ : ಡುಮ್ಮಾ ಸರ್ ಫುಲ್ ಸುಸ್ತು

View post on Instagram

ಗಾಯಕನೊಂದಿಗೆ ಮಹಿಳೆ ಅನುಚಿತವಾಗಿ ನಡೆದುಕೊಂಡಿರುವ ವಿಡಿಯೋವನ್ನು rnb_mais ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ಮಾರಿಯೋ ಅಭಿಮಾನಿಗಳನ್ನು ಮಹಿಳೆಯನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ. ಏನು ಕೆಲಸ ಮಾಡಲು ಬಂದಿದ್ದೇವೆ ಅದನ್ನು ಮಾಡಿಕೊಂಡು ಹೋದ್ರೆ ಚೆನ್ನಾಗಿರುತ್ತದೆ. ಮಾರಿಯೋಗೆ ಮದುವೆಯಾಗಿದೆ. ಮಹಿಳೆ ವರ್ತನೆ ನಿಜಕ್ಕೂ ಆಘಾತಕಾರಿ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಒಂದು ವೇಳೆ ಗಾಯಕಿಯೊಂದಿಗೆ ಯಾರಾದ್ರೂ ಪುರುಷರು ನಡೆದುಕೊಂಡಿದ್ರೆ ಜಾಗತೀಕಮಟ್ಟದಲ್ಲಿ ಸದ್ದು ಮಾಡುತ್ತಿತ್ತು. ಪುರುಷರನ್ನು ಏನು ಅಂತ ತಿಳಿದುಕೊಂಡಿದ್ದೀರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಅನಸೂಯ ಮೈಕ್ ಬಿಸಾಕಿ ಹೋದಳು, ರಶ್ಮಿ ಶಾಕಿಂಗ್ ಕಾಮೆಂಟ್ಸ್! ಹೋಗುವ ಮುನ್ನ ಬೇಡಿಕೊಂಡಿದ್ದೇಕೆ?

View post on Instagram