- Home
- Entertainment
- TV Talk
- Amruthadhaare: ಅಡುಗೆಮನೆಯಲ್ಲಿ ಗೌತಮ್-ಭೂಮಿಕಾ ರೊಮ್ಯಾನ್ಸ್ : ಡುಮ್ಮಾ ಸರ್ ಫುಲ್ ಸುಸ್ತು
Amruthadhaare: ಅಡುಗೆಮನೆಯಲ್ಲಿ ಗೌತಮ್-ಭೂಮಿಕಾ ರೊಮ್ಯಾನ್ಸ್ : ಡುಮ್ಮಾ ಸರ್ ಫುಲ್ ಸುಸ್ತು
ಸುಮಾರು ಐದು ವರ್ಷಗಳ ನಂತರ ಗೌತಮ್ ಮತ್ತು ಭೂಮಿಕಾ ಮತ್ತೆ ಒಂದಾಗಿದ್ದು, ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಅಡುಗೆಮನೆಯಲ್ಲಿ ಶುರುವಾದ ಇವರ ರೊಮ್ಯಾಂಟಿಕ್ ಕ್ಷಣಗಳು, ಇವರಿಬ್ಬರು ಒಂದಾಗಿರುವುದನ್ನು ತಿಳಿದು ಆಘಾತಗೊಂಡಿರುವ ಜೈದೇವ್‌ನ ಮುಂದಿನ ನಡೆಯೇನು ಎಂಬುದರ ಕುರಿತು ಈ ಲೇಖನ ವಿವರಿಸುತ್ತದೆ.

ಗೌತಮ್ ಮತ್ತು ಭೂಮಿಕಾ
ಸುಮಾರು ಐದು ವರ್ಷಗಳ ಬಳಿಕ ಗೌತಮ್ ಮತ್ತು ಭೂಮಿಕಾ ಒಂದಾಗಿದ್ದು, ಇದೀಗ ಇಬ್ಬರ ರೊಮ್ಯಾನ್ಸ್ ಶುರುವಾಗಿದೆ. ಗೌತಮ್ ತನ್ನ ಕುಟುಂಬದೊಂದಿಗೆ ಒಂದಾಗಿರುವ ವಿಷಯ ಕೇಳಿ ಜೈದೇವ್ ಶಾಕ್ ಆಗಿದ್ದಾರೆ.
ಪ್ರೋಮೋ
ಗೌತಮ್ ಮತ್ತು ಭೂಮಿಕಾ ಇಬ್ಬರನ್ನು ಒಂದು ಮಾಡಲು ಮಲ್ಲಿ, ಆನಂದ್ ತುಂಬಾ ಪ್ರಯತ್ನಿಸಿದ್ದರು. ಈ ಪ್ರಯತ್ನದ ಫಲವಾಗಿ ಜೋಡಿಹಕ್ಕಿಗಳು ಒಂದಾಗಿವೆ. ಇಂದು ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ಇಬ್ಬರು ಪರಸ್ಪರ ಒಬ್ಬರೊಬ್ಬರನ್ನು ಪ್ರೀತಿ ಮಾಡುತ್ತಿರುವ ದೃಶ್ಯ ತೋರಿಸಲಾಗಿದೆ.
ಭೂಮಿಕಾ ಭುಜದ ಮೇಲೆಯೇ ಗೌತಮ್ ನಿದ್ದೆ
ಭೂಮಿಕಾ ತರಕಾರಿ ಕತ್ತರಿಸುತ್ತಿರುವಾಗ ಹಿಂದಿನಿಂದ ಬರುವ ಗೌತಮ್, ಹೀಗೆಲ್ಲಾ ಕಟ್ ಮಾಡೋದು ಅಂತ ಹೇಳ್ತಾರೆ. ಹಾಗೆಯೇ ಭೂಮಿಕಾಳನ್ನು ಹಿಂದಿನಿಂದ ತಬ್ಬಿಕೊಂಡು ಪತ್ನಿ ಕೆಲಸಕ್ಕೆ ಕೈ ಜೋಡಿಸುತ್ತಾನೆ. ನಂತರ ಭೂಮಿಕಾ ಭುಜದ ಮೇಲೆಯೇ ಗೌತಮ್ ನಿದ್ದೆ ಮಾಡುತ್ತಾನೆ.
ರೊಮ್ಯಾಂಟಿಕ್ ಆದ ಗೌತಮ್ ದಿವಾನ್
ಕೂಡಲೇ ನನಗೆ ಈ ಕೆಲಸ ಬರ್ತಿಲ್ಲ ಎಂದು ತರಕಾರಿ ಕತ್ತರಿಸುವಂತೆ ಗೌತಮ್‌ಗೆ ಹೇಳಿ ಭೂಮಿಕಾ ಹಿಂದೆ ಬರುತ್ತಾಳೆ. ಇದು ಯಾಕೋ ಸೆಟ್ ಆಗ್ತಿಲ್ಲ ಎಂದು ಮತ್ತೆ ಪತ್ನಿ ಹಿಂದೆ ಗೌತಮ್ ಹೋಗುತ್ತಾನೆ. ನಿಮಗೆ ಏನಾದ್ರೂ ಸಹಾಯ ಮಾಡ್ಲಾ ಎಂದು ಗೌತಮ್ ಕೇಳುತ್ತಾನೆ.
ಇದನ್ನೂ ಓದಿ: Amruthadhaare Serial ಅಂತ್ಯ? ಜೈದೇವ್ಗೆ ಎಲ್ಲಾ ಆಸ್ತಿ ಕೊಡಲು ಗೌತಮ್ ರೆಡಿ! ಮುಂದೇನು?
ಅಂಕಲ್-ಆಂಟಿ ಲವ್ ಸ್ಟೋರಿ
ಇದಕ್ಕೆ ಮೇಲಿರುವ ಡಬ್ಬ ತೆಗೆದುಕೊಡುವಂತೆ ಭೂಮಿಕಾ ಹೇಳುತ್ತಾಳೆ. ಆದ್ರೆ ಇಲ್ಲಿಯೂ ರೊಮ್ಯಾಂಟಿಕ್ ಆದ ಗೌತಮ್, ನೇರವಾಗಿ ಡಬ್ಬ ತೆಗೆದುಕೊಡದೇ ಭೂಮಿಕಾಳನ್ನು ಎತ್ತಿಕೊಳ್ಳುತ್ತಾನೆ. ಇವರಿಬ್ಬರ ತುಂಟಾಟ ನೋಡಿದ ವೀಕ್ಷಕರು, ಅಂಕಲ್-ಆಂಟಿ ಲವ್ ಸ್ಟೋರಿ, ಆದಷ್ಟು ಬೇಗ ಸೀರಿಯಲ್ ಮುಗಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಭುಮಿಕಾ ಅವರನ್ನು ಎತ್ತಿಕೊಂಡು ಡುಮ್ಮಾ ಸರ್ ಫುಲ್ ಸುಸ್ತು ಆಗಿದ್ದಾರೆ ಎಂದು ವೀಕ್ಷಕರು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: Amruthadhaare: ಅಪ್ಪನ ತಲೆಗೆ ಹುಳು ಬಿಟ್ಟ ಮಿಂಚು- ಮಲ್ಲಿ ಸರ ಕದಿಯಲು ರೌಡಿ ಬಿಟ್ಟ ಕಿಲಾಡಿ ಪಿಎ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

