Actress Kavya Gowda Controversy: ರಾಧಾ ರಮಣ ಹಾಗೂ ಗಾಂಧಾರಿ, ಮೀರಾ ಮಾಧವ ಧಾರಾವಾಹಿ ನಟಿ ಕಾವ್ಯಾ ಗೌಡ ಅವರು ಮನೆಗೋಸ್ಕರ ಹಿಂಸೆ ಕೊಟ್ಟಿದ್ದಾರೆ ಎಂದು ಪ್ರೇಮಾ ಅವರು ಮಾಧ್ಯಮದ ಮುಂದೆ ಬಂದು ಹೇಳಿದ್ದಾರೆ. ಹಾಗಾದರೆ ನಿಜಕ್ಕೂ ಏನಾಯ್ತು? 

ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ( Kavya Gowda ) ಮನೆಯ ಜಗಳ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ನೂರು ಕೋಟಿ ರೂಪಾಯಿ ಬೆಲೆ ಬಾಳುವ ಮನೆಗೋಸ್ಕರ ಕಾವ್ಯಾ ಗೌಡ ಪತಿ ಹಾಗೂ ಅವರ ಅಣ್ಣನ ಕುಟುಂಬ ಜಗಳ ಆಡುತ್ತಿದೆ. ಈಗ ಕಾವ್ಯಾ ಗೌಡ ಪತಿಯ ಅಣ್ಣನ ಹೆಂಡತಿ ಪ್ರೇಮಾ ಅವರು ನಡೆದ ಘಟನೆಯನ್ನು ವಿವರಿಸಿದ್ದಾರೆ.

ನಿಜಕ್ಕೂ ಏನಾಗಿದೆ?

ಕಾವ್ಯಾ ಗೌಡ ಅವರ ಮನೆ ಕೆ ಆರ್‌ ಪುರಂನಲ್ಲಿದೆ. ಅವರದ್ದು ಅವಿಭಕ್ತ ಕುಟುಂಬ. ಉದ್ಯಮಿ ಸೋಮಶೇಖರ್‌ ಅವರನ್ನು ಕಾವ್ಯಾ ಮದುವೆ ಆಗಿದ್ದರು. ಸೋಮಶೇಖರ್‌ ಅಣ್ಣ ನಂದೀಶ್‌, ಅತ್ತಿಗೆ ಪ್ರೇಮಾ ಕೂಡ ಆ ಮನೆಯಲ್ಲಿಯೇ ವಾಸವಾಗಿದ್ದಾರೆ. ಕಳೆದ ಜನವರಿ 26ರಂದು ಜಗಳ ನಡೆದಿದೆ. ಆಜಗಳದಲ್ಲಿ ಪ್ರೇಮಾ ತಂಗಿ ಪ್ರಿಯಾ, ಪ್ರೇಮಾ ತಂದೆ ರವಿಕುಮಾರ್‌ ಎಂಟ್ರಿಯಾಗಿದೆ. ಕಾವ್ಯಾ ಗೌಡ ಅವರು ರವಿಕುಮಾರ್‌, ಪ್ರಿಯಾ, ಪ್ರೇಮಾ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ. ಇದಾದ ಬಳಿಕ ಪ್ರೇಮಾ ಅವರು ಕಾವ್ಯಾ ಗೌಡ ವಿರುದ್ಧ ಪ್ರತಿ ದೂರು ನೀಡಿದ್ದಾರೆ.

ಪ್ರೇಮಾ ಹೇಳಿದ್ದೇನು?

ನಂದೀಶ್‌ ಪತ್ನಿ ಪ್ರೇಮಾ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. “ನಾನು ನಂದೀಶ್‌ ಅವರನ್ನು ಮದುವೆ ಆಗಿದ್ದೇನೆ, ನಂದೀಶ್‌ ಅವರು ನಮಗೆ ಮೊದಲೇ ಸಂಬಂಧಿಕರು. ನನ್ನನ್ನು ಇಷ್ಟಪಟ್ಟು ಎರಡು ವರ್ಷ ಸಮಯ ಕಾದು, ನನ್ನನ್ನು ಮದುವೆ ಆಗಿದ್ದಾರೆ. ನಮ್ಮ ಮನೆ ತುಂಬ ದೊಡ್ಡದಿದೆ. ನಮ್ಮ ಮನೆಯಲ್ಲಿ ಒಬ್ಬರಿಗೆ ಒಬ್ಬರು ಕಾಣೋದಿಲ್ಲ. ಈ ರೀತಿ ಸಮಸ್ಯೆ ಆಗ್ತಿದೆ, ಪ್ರೈವೆಸಿ ಸಮಸ್ಯೆ ಆಗತ್ತೆ ಎಂದು ಎರಡು ಫ್ಲೋರ್‌ನಲ್ಲಿ ಅಣ್ಣ ತಮ್ಮನ ಕುಟುಂಬ ( ಅಣ್ಣ ನಂದೀಶ್-ತಮ್ಮ ಸೋಮಶೇಖರ್) ವಾಸವಿದೆ” ಎಂದು ಹೇಳಿದ್ದಾರೆ.

“‌ಈ ಮನೆಯಲ್ಲಿ ಎರಡು ಕಿಚನ್ ಇದೆ. ಒಂದು ಕಿಚನ್‌ನಲ್ಲಿ ನಾನು, ಅತ್ತೆ ಅಡುಗೆ ಮಾಡಿಕೊಳ್ತೀವಿ. ಇನ್ನೊಂದು ಕಿಚನ್‌ನಲ್ಲಿ ಕಾವ್ಯಾ ಅವರು ಅಡುಗೆ ಮಾಡಿಕೊಳ್ತಾರೆ. ಮನೆ ದೊಡ್ಡ ಇರೋದಿಕ್ಕೆ ಒಬ್ಬರು ಇನ್ನೊಂದು ಫ್ಲೋರ್‌ಗೆ ಬರುವ ಅವಶ್ಯಕತೆಯೇ ಇಲ್ಲ. ಹೀಗಾಗಿ ಯಾರೂ ಮುಖಾಮುಖಿ ಆಗೋದಿಲ್ಲ” ಎಂದು ಹೇಳಿದ್ದಾರೆ.

“ಮೊನ್ನೆ ನನ್ನ ಕಿಚನ್ ಹತ್ತಿರ ಕಾವ್ಯಾ ಗೌಡ ಅವರ ಒಬ್ಬು ವರ್ಕರ್ ಬಂದರು. ನಾನು ಆಗ ಯಾಕಮ್ಮ ಬಂದಿದ್ದೀಯಾ ಎಂದು ಪ್ರಶ್ನೆ ಕೇಳಿದೆ. ಅದಿಕ್ಕೆ ದೊಡ್ಡ ಗಲಾಟೆ ಮಾಡಿದ್ದಾರೆ. ಇದು ನನ್ನ ಮನೆ, ನೀವು ಮನೆ ಬಿಟ್ಟು ಹೋಗಿದೆ. ನೀವು ತಿರುಗಿಕೊಂಡು ಹೋಗೋರು, ನಾಯಿಗಳು ಎಂದೆಲ್ಲ ಬೈತಾರೆ. ಈ ಮನೆಯನ್ನು ನಮ್ಮ ಮಾವ ಕಟ್ಟಿದ್ದಾರೆ, ನಾವು ದುಡಿದ ಹಣದಿಂದಾಗಲೀ, ಕಾವ್ಯಾ ಗೌಡ ದುಡಿದ ಹಣದಿಂದಾಗಲೀ ಕಟ್ಟಿದ್ದಲ್ಲ” ಎಂದು ಹೇಳಿದ್ದಾರೆ.

“ನಮಗೆ ಚಪ್ಪಲಿಯನ್ನು ಎಸೆದಿದ್ದಾರೆ. ಮೀಡಿಯಾ ಮುಂದೆ ಬಂದು ಫ್ಯಾಮಿಲಿ ಬಗ್ಗೆ ಮಾತನಾಡುವ ಕಾವ್ಯಾ ಗೌಡ ಅವರಿಗೆ ಫ್ಯಾಮಿಲಿ ಎಂದರೆ ಏನು ಎಂದು ಗೊತ್ತಿದೆಯಾ? ಭಾವ ಎನ್ನೋದನ್ನು ನೋಡದೆ ಕಾವ್ಯಾ ಗೌಡ ಅವರು ಮೈಮೇಲೆ ಬೀಳ್ತಾರೆ. ಈ ಮನೆಯ ಗೃಹಪ್ರವೇಶ ಆಗಿ ಮೂರು ವರ್ಷಗಳು ಆಗಿವೆ” ಎಂದಿದ್ದಾರೆ.

“ನಾನು ಒಂದು ವಾರ ಊರಿನಲ್ಲಿ ಇರಲಿಲ್ಲ. ಆಗ ನನ್ನ ಫ್ಲೋರ್‌ನ ಲಿವಿಂಗ್‌ ಏರಿಯಾದ ಕೀ ಕದ್ದರು. ಆಮೇಲ ನನ್ನ ಫ್ಲೋರ್‌ನಲ್ಲಿ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ. ನನ್ನ ಐಟಮ್‌ಗಳು ಮಿಸ್‌ ಆಗಿವೆ. ಹೀಗಾಗಿ ನಾನು ಹಿಂದೊಮ್ಮೆ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೆ” ಎಂದಿದ್ದಾರೆ.

ನನ್ನ ತಂಗಿ ಮೇಲೆ ಸೋಮಶೇಖರ್‌ ಹೊಡೆದರು. ಮಗಳ ಮೇಲೆ ಹೊಡೆದರು ಎಂದು ನನ್ನ ತಂದೆ ಮನೆಗೆ ಬಂದಿದ್ದಾರೆ. ನಾವು ಹೆಣ್ಣು ಮಕ್ಕಳು ಇದ್ದೇವೆ ಎನ್ನೋದನ್ನು ನೋಡದೆ ಸೋಮಶೇಖರ್‌ ಅವರು ಪ್ಯಾಂಟ್ ರಿಮೂವ್ ಮಾಡಿ ಮಿಸ್ ಬಿಹೇವ್ ಮಾಡಿದ್ರು. ಇದನ್ನು ನಾನು ಪದಗಳಲ್ಲಿ ಹೇಳೋಕೆ ಆಗೋದಿಲ್ಲ. ಆಮೇಲೆ ಕಾವ್ಯಾ ಗೌಡ ಅಕ್ಕ ಭವ್ಯ ಗೌಡ ಬಂದು ಅಟ್ಯಾಕ್ ಮಾಡಿದ್ದಾರೆ. ನನ್ನ ನೂಕಿದ್ದಾರೆ, ಆಗ ತಾಳಿ ಚೈನ್‌ ಕಿತ್ತೆಸೆದಿದ್ದಾರೆ. ನನಗೆ ತಾಳಿ ಸಿಕ್ಕಿಲ್ಲ, ಚೈನ್‌ ಮಾತ್ರ ಇದೆ. ಈ ಬಗ್ಗೆ ನಾನು ಮಾವನ ಜೊತೆ ಮಾತನಾಡಿಲ್ಲ. ಇಷ್ಟುದಿನಗಳಿಂದ ಮಾವನ ಗೌರವ ಹಾಳಾಗಬಾರದು ಎಂದು ಸುಮ್ಮನಿದ್ದೆ. ಈಗ ನನ್ನ ತಂದೆಯನ್ನು ಕೊಲೆ ಮಾಡ್ತೀನಿ, ಎತ್ತು ಬಿಡ್ತೀನಿ, ಬಾರೋ ಲೇ ಎಂದು ಮಾತಾಡ್ತಾರೆ. ಕಾವ್ಯಾ ಅವರು ಯಾವಾಗಲೂ ಸೂ*ಳೆ ಎಂದು ಕರೆಯುತ್ತಾರೆ, ಇದು ಸರಿಯಾ?” ಎಂದು ಹೇಳಿದ್ದಾರೆ.

ಪ್ರೇಮಾ ತಂದೆ ರವಿಕುಮಾರ್‌ ಹೇಳಿದ್ದೇನು?

ರವಿಕುಮಾರ್‌ ಅವರು, “ಆಸ್ತಿಗೋಸ್ಕರ ಈ ಜಗಳ ನಡೆದಿದೆ. ಈ ಜಗಳ ಹೊಸತಲ್ಲ, ಕಳೆದ ಮೂರು ವರ್ಷಗಳಿಂದಲೂ ಏನಾದರೊಂದು ವಿಷಯಕ್ಕೆ ಜಗಳ ನಡೆಯುತ್ತಲೇ ಇತ್ತು. ನನ್ನ ಹಿರಿಯ ಮಗಳು ಪ್ರೇಮಾರನ್ನು ಹೊರಗಡೆ ಹಾಕಬೇಕು ಎಂದು ಕಾವ್ಯಾ ಈ ರೀತಿ ಮಾಡಿದ್ದಾರೆ. ಮೊದಲಿನಿಂದಲೂ ನಮಗೆ ಮನೆ ಬಿಟ್ಟುಕೊಡಿ ಎಂದು ಕಾವ್ಯಾ ಗೌಡ ಗಲಾಟೆ ಮಾಡಿದ್ದರು. ಹೀಗಾಗಿ ನನ್ನ ಮಗಳು-ಅಳಿಯನಿಗೋಸ್ಕರ ಶೀಟ್‌ ಮನೆ ಕಟ್ಟಿಸಲಾಗುತ್ತಿತ್ತು. ಅಲ್ಲಿಯವರೆಗೆ ಇಲ್ಲೇ ಇರೋಕೆ ಅವರ ಮಾವ ಹೇಳಿದ್ದರು. ಒಬ್ಬೊಬ್ಬರು ಒಂದೊಂದು ಫ್ಲೋರ್‌ನಲ್ಲಿದ್ದು, ಸಪರೇಟ್‌ ಆಗಿ ಎಲ್ಲರೂ ಅಡುಗೆ ಮಾಡಿಕೊಳ್ತಿದ್ದಾರೆ.

“ನಿನ್ನೆ ನನ್ನ ಮಗಳು ಮಧ್ಯಾಹ್ನ ಮನೆಯಲ್ಲಿ ಊಟ ಮಾಡುವಾಗ ಕಾವ್ಯಾ ಅವರು ಏಕಾಏಕಿ ಬಂದು ಮನೆ ಬಿಟ್ಟು ಹೋಗು ಎಂದು ಜಗಳ ಆಡಿದ್ದಾರೆ. ಕಾವ್ಯಾ ಮದುವೆ ಆದಾಗಿನಿಂದ ಈ ಜಗಳ ಶುರು ಆಗಿದೆ” ಎಂದು ರವಿ ಕುಮಾರ್‌ ಹೇಳಿದ್ದಾರೆ.

ಕಾವ್ಯಾ ಗೌಡ ಮಾವ ಯಾರು?

ರೇವಣ್ಣ ಅವರು ಈ ಹಿಂದೆ ಕಾರ್ಪೋರೇಟರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ರೇವಣ್ಣ ಹದಿನಾರು ವರ್ಷದಿಂದ ಮನೆ ಕಟ್ಟಿಸುತ್ತಿದ್ದು, ಅರಮನೆ ಥರ ಮನೆ ಕಟ್ಟಿದ್ದಾರೆ. ಆ ಮನೆ ಇಂದು ನೂರು ಕೋಟಿ ರೂಪಾಯಿ ಬೆಲೆ ಬಾಳುವುದು. ಈ ಮನೆಗೋಸ್ಕರ ಜಗಳ ಆಗಿದೆ ಎಂದು ರವಿಕುಮಾರ್‌ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.