Asianet Suvarna News Asianet Suvarna News

ಸೆಲೆಬ್ರಿಟಿಗಳು ದುಬೈಯಲ್ಲೇ ಯಾಕೆ ಮದ್ವೆ ಶಾಪಿಂಗ್‌ ಮಾಡ್ತಾರೆ?

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇತ್ತೀಚೆಗೆ ದುಬೈನಲ್ಲಿ ಮದ್ವೆ ಶಾಪಿಂಗ್ ಮಾಡ್ತಿರೋ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಸೆಲೆಬ್ರಿಟಿಗಳು ಮದುವೆ, ಎಂಗೇಜ್‌ಮೆಂಟ್ ಶಾಪಿಂಗ್ ಮಾಡ್ತಿರೋದು ಇದೇ ಮೊದಲಲ್ಲ. ಅಷ್ಟಕ್ಕೂ ಮದುವೆಯಾಗ್ತಿರೋ ಜೋಡಿಯನ್ನು ಆಕರ್ಷಿಸುವ ಅಂಥಾ ಆಕರ್ಷಣೆ ದುಬೈನಲ್ಲಿ ಏನಿದೆ?

Why celebrities prefer Dubai for their wedding shopping
Author
First Published Dec 2, 2022, 11:19 AM IST

ವಸಿಷ್ಠ ಸಿಂಹ ತನ್ನ ಇನ್‌ಸ್ಟಾ ಪೋಸ್ಟ್ ನಲ್ಲಿ ಬುರ್ಜ್ ಖಲೀಫಾ ಮುಂದೆ ನಿಂತಿರೋ ಫೋಟೋ ಹಾಕಿದ್ದರು. ಇದಕ್ಕೆ ಬಂದ ಕಮೆಂಟ್ಸ್ ಸಖತ್ತಾಗಿತ್ತು. ಆ ಕಮೆಂಟ್‌ಗಳಲ್ಲೆಲ್ಲ ಕಾಮನ್ ಆಗಿದ್ದ ಒಂದು ಸಂಗತಿ ಅಂದರೆ ಹರಿಪ್ರಿಯಾ. 'ಮಾಮ ನಮ್ ಅಕ್ಕ ಎಲ್ಲಿ?' ಅಂತೊಬ್ರು ಕಮೆಂಟ್ ಮಾಡಿದ್ರೆ, 'ಗುರೂ, ಅಕ್ಕನೇ ಅಲ್ವಾ ಫೋಟೋ ತೆಗ್ದಿರೋದು?' ಅಂತ ಮತ್ತೊಬ್ರು ಫನ್ನಿ ರಿಪ್ಲೈ ನೀಡಿದ್ರು. ಈ ಇಬ್ಬರು ಸ್ಟಾರ್ ನಟ ನಟಿಯ ಫ್ಯಾನ್ಸ್ ಎಲ್ಲ ಸದ್ಯ ಕೇಳೋದಿಷ್ಟೇ - ಆದಷ್ಟು ಬೇಗ ಮದ್ವೆ ಊಟ ಹಾಕಿಸಿ ಅಂತ. ಹಾಗೆ ನೋಡಿದ್ರೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಕಳೆದೊಂದು ವಾರದಿಂದ ಸಖತ್ ಸೆನ್ಸೇಶನಲ್‌ ಕಪಲ್ ಆಗಿದ್ದರು. ಎಲ್ಲೆಲ್ಲೂ ಈ ಸೆಲೆಬ್ರಿಟಿ ಜೋಡಿಗಳ ಪ್ರೇಮ, ತಿರುಗಾಟದ್ದೇ ಸುದ್ದಿ. ಅಂದ ಹಾಗೆ ಈ ಜೋಡಿ ದುಬೈನಲ್ಲಿ ಓಡಾಡ್ತಿರೋ ಸುದ್ದಿ ಅಂತೂ ಎಲ್ಲೆಡೆ ವೈರಲ್ ಆಯ್ತು. ತಮ್ಮಿಬ್ಬರ ಫೋಟೋ ಎಲ್ಲೂ ಶೇರ್ ಮಾಡದಿದ್ರೂ ಇಬ್ಬರೂ ದುಬೈನ ವಿವಿಧ ನೋಟಗಳನ್ನು ತಮ್ಮ ಫೋಟೋಗಳಲ್ಲಿ ಇನ್‌ಸ್ಟಾ ಮೂಲಕ ಅಭಿಮಾನಿಗಳಿಗೆ ಹಂಚಿದವರು. ಈಗ ಜನಸಾಮಾನ್ಯರ ಮುಂದಿರೋ ಪ್ರಶ್ನೆ ಅಂದರೆ ಈ ಸೆಲೆಬ್ರಿಟಿಗಳು ವಿಶೇಷ ಸಂದರ್ಭದ ಶಾಪಿಂಗ್‌ಗೆ ದುಬೈಗೆ ಯಾಕೆ ಹೋಗ್ತಾರೆ? ಅಂಥಾ ಆಕರ್ಷಣೆ ಅಲ್ಲೇನಿದೆ ಅನ್ನೋದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸೆಲೆಬ್ರಿಟಿಗಳು ಅಂತಲ್ಲ, ಫ್ಯಾಶನ್ ಜಗತ್ತಿನಲ್ಲಿ ಗುರುತಿಸಿಕೊಂಡಿರೋ ಹೆಚ್ಚಿನವರ ನೆಚ್ಚಿನ ಶಾಪಿಂಗ್ ಜಾಗ ದುಬೈ. ಇಲ್ಲಿನ ಡೆಸರ್ಟ್ ಸಫಾರಿ, ವಾಟರ್ ಸ್ಪೋರ್ಟ್ಸ್, ಪರ್ಲ್ ಐಲ್ಯಾಂಡ್, ವಿಶ್ವದ ಅತಿ ಪ್ರಮುಖ ಹೊಟೇಲ್ ಬುರ್ಜ್ ಅಲ್ ಅರಬ್, ಎಲ್ಲಕ್ಕಿಂತ ಹೆಚ್ಚಾಗಿ ಬುರ್ಜ್ ಖಲೀಫಾದ ಜಗತ್ತಿನ ಅತಿ ಎತ್ತರದ ಟವರ್‌ನ ಆಕರ್ಷಣೆ ಒಂದೆಡೆ ಆದರೆ ಶಾಪಿಂಗ್ ಮಾಡೋರಿಗೆ ಇದು ಬೇರೆಯೇ ಜಗತ್ತು. ಇಲ್ಲಿರೋ ದುಬೈ ಮಾಲ್ ಪ್ರಪಂಚದ ಅತಿದೊಡ್ಡ ಶಾಪಿಂಗ್ ಮಾಲ್ ಅಂತ ಗುರುತಿಸಿಕೊಂಡಿದೆ. ಇಲ್ಲಿರೋ ವಸ್ತ್ರ ವೈವಿಧ್ಯ ಫ್ಯಾಶನ್ ವೆರೈಟಿಗಳು ಜಗತ್ತಿನ ಮತ್ತೆಲ್ಲೂ ಸಿಗಲ್ಲ ಅನ್ನೋ ಮಾತಿದೆ, ಅಥವಾ ಜಗತ್ತಿನೆಲ್ಲ ಫ್ಯಾಶನೇಬಲ್ ಉಡುಗೆಗಳು ಇಲ್ಲೇ ಸಿಗುತ್ತವೆ ಅನ್ನಬಹುದೇನೋ.

Yash: ಮಗಳು ಐರಾ ಹೆಸರಲ್ಲಿ ಸಿನಿಮಾ ನಿರ್ಮಾಣ ಮಾಡ್ತಾರಾ ರಾಕಿ ಭಾಯ್?

ಇಲ್ಲಿರೋ ಐಬಿಎನ್‌ಇ - ಇ ಬತುತಾ ಥೀಮ್ ಮಾಲ್ ಸಹ ಶಾಪಿಂಗ್ ಪ್ರಿಯರ ಮೆಚ್ಚಿನ ತಾಣ. ಈಗಂತೂ ಯಿಯರ್‌ ಎಂಡ್ ಪ್ರಯುಕ್ತ ದುಬೈನಲ್ಲಿ ರಿಯಾಯಿತಿ ಬೆಲೆಯಲ್ಲಿ ಉಡುಗೆಗಳು ಸಿಗುತ್ತಿವೆ. ಶೇ.90ರವರೆಗೂ ಕೆಲವೊಂದು ಕಡೆ ರಿಯಾಯಿತಿಗಳು ಸಿಗುತ್ತವೆ. ಶೇ.15 ರಿಂದ ಶೇ.90 ರಷ್ಟು ರಿಯಾಯಿತಿಯನ್ನು ಜನ ಎನ್‌ಜಾಯ್ ಮಾಡಬಹುದು.

ಕಳೆದ ಹದಿನೈದು ದಿನಗಳಿಂದ ಅಲ್ಲಿನವರು ಆಚರಿಸುವ ಬ್ಲ್ಯಾಕ್ ಫ್ರೈ ಡೇ (Black friday), ವೈಟ್ ಫ್ರೈ ಡೇ ಪ್ರಯುಕ್ತ ಆಫರ್ ಮೇಲೆ ಆಫರ್‌(Offer)ಗಳಿದ್ದವು. ದುಬೈನ ಮಾಲ್ ಆಫ್ ದ ಎಮಿರೇಟ್ಸ್, ಸಿಟಿ ಸೆಂಟರ್, ದುಬೈ ಮಾಲ್, ಟೌನ್ ಸೆಂಟರ್, ಇಬ್ನ್ ಬತೂತ, ಸರ್ಕಲ್ ಮಾಲ್, ದಿ ಪಾಯಿಂಟ್, ನಖೀಲ್ ಮಾಲ್, ಗೇಟ್ ಅವೆನ್ಯೂ, ಫೆಸ್ಟಿವಲ್ ಪ್ಲಾಝಾ ಸೇರಿದಂತೆ ದುಬೈನ ಹೆಚ್ಚಿನೆಲ್ಲ ಮಾಲ್, ಶಾಪಿಂಗ್ ಸೆಂಟರ್‌(Shopping center) ಗಳಲ್ಲಿ ಈ ಅಮೋಘ ರಿಯಾಯಿತಿಗಳಿದ್ದವು.

ಉಪೇಂದ್ರ ನಟನೆ, ನಿರ್ದೇಶನ UI ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿ!

ಇಂಥಾ ಟೈಮಲ್ಲೇ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ತಮ್ಮ ಮದುವೆ ಖರೀದಿಗೆ ದುಬೈಗೆ ಹೋಗಿದ್ದಾರೆ. ಅಲ್ಲಿ ಅವರು ಏನೇನು ಖರೀದಿಸಿದರು, ಎಷ್ಟೆಲ್ಲ ಖರೀದಿ ಮಾಡಿದರು ಅನ್ನೋದನ್ನು ಅವರ ಎಂಗೇಜ್ ಮೆಂಟ್(Engagement) ಅಥವಾ ಮದುವೆ ದಿನ ನೋಡ್ಬೇಕಷ್ಟೇ. ಅವರ ಮದುವೆ ಸಂಭ್ರಮದ ಜೊತೆಗೆ ಆ ದಿನದ ಈ ಸ್ಟಾರ್ ಜೋಡಿಯ ಉಡುಗೆ ಬಗ್ಗೆಯೂ ಜನರಿಗೆ ಕುತೂಹಲವಿದೆ.

Follow Us:
Download App:
  • android
  • ios