Asianet Suvarna News Asianet Suvarna News

Yash: ಮಗಳು ಐರಾ ಹೆಸರಲ್ಲಿ ಸಿನಿಮಾ ನಿರ್ಮಾಣ ಮಾಡ್ತಾರಾ ರಾಕಿ ಭಾಯ್?

ಯಶ್ ಹೊಸ ಸಿನಿಮಾ ಅನೌನ್ಸ್ ಮಾಡ್ತಾರೆ ಅಂತ ಕಾದಿದ್ದೇ ಬಂತು. ಅವರು ಯಾವ ಸುಳಿವನ್ನೂ ಬಿಟ್ಟು ಕೊಡ್ತಿಲ್ಲ. ಈ ನಡುವೆ ಇನ್ನೊಂದು ಆಶ್ಚರ್ಯಕರ ಸುದ್ದಿ ಕೇಳಿ ಬರ್ತಿದೆ. ತನಗೆ ಅದೃಷ್ಟ ತಂದ ಮಗಳು ಐರಾ ಹೆಸರಲ್ಲಿ ಯಶ್ ಸಿನಿಮಾ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ ಅಂತ.

Is Yash become producer
Author
First Published Dec 1, 2022, 12:56 PM IST

ವಿಶ್ವಮಟ್ಟದಲ್ಲಿ ರಾಕಿ ಭಾಯ್ ಅಂತಲೇ ಫೇಮಸ್ಸು ನಮ್ ಕನ್ನಡದ ನಟ ಯಶ್. ಬದುಕಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದ ಯಶ್‌ ಇದೀಗ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಮೋಸ್ಟ್ ಹ್ಯಾಪನಿಂಗ್ ಹೀರೋ. ಜಗತ್ತಿನ ಯಾವ ಏರ್‌ಪೋರ್ಟ್ ನಲ್ಲಿ ಅವರು ಕಾಣಿಸಿಕೊಂಡರೂ ಪಾಪರಾಜಿಗಳು ಅವರ ಫೋಟೋ ಕ್ಲಿಕ್ಕಿಸುತ್ತಾರೆ. ಮಾಧ್ಯಮದವ್ರು ಮಾತ್ರ ಅಲ್ಲ ಜನ ಸಾಮಾನ್ಯರೂ ಯಶ್ ಅಲ್ಲೆಲ್ಲಾದರೂ ಕಾಣಿಸಿಕೊಂಡರೆ ಕೇಳುವ ಮೊದಲ ಪ್ರಶ್ನೆಯೇ ನಿಮ್ ಮುಂದಿನ ಸಿನಿಮಾ ಯಾವುದು? ಹೊಸ ಸಿನಿಮಾ ಯಾವಾಗ ಅನೌನ್ಸ್ ಮಾಡ್ತೀರ ಅನ್ನೋ ಪ್ರಶ್ನೆ. ಅದಕ್ಕೆ ಬಹಳ ಕೂಲ್ ಆಗಿ ಯಶ್ ಉತ್ತರಿಸೋದು - ಕಾದು ನೋಡಿ ಅಂತ. ಕೆಜಿಎಫ್ ೨ ಇಂಡಿಯನ್ ಸಿನಿಮಾ ಮಾತ್ರವಲ್ಲ, ವರ್ಲ್ಡ್ ಸಿನಿಮಾದಲ್ಲೂ ತನ್ನದೇ ಛಾಪು ಮೂಡಿಸಿದಾಗ ಯಶ್ ರೇಂಜೇ ಬದಲಾಯ್ತು. ಈಗ ಯಶ್ ಅವರ ಕೆಜಿಎಫ್ ೩ ಚಿತ್ರಕ್ಕಾಗಿ ಜಗತ್ತೇ ಕಾಯುವಂತಾಗಿದೆ.

ಇದಕ್ಕೆ ಸರಿಯಾಗಿ ಕೆಜಿಎಫ್‌ ೨ ನಲ್ಲೇ ಕೆಜಿಎಫ್‌ ೩ ಸಿನಿಮಾ ಬರೋ ಬಗ್ಗೆ ಹಿಂಟ್‌ ನೀಡಲಾಗಿತ್ತು. ಯಶ್ ಮಾತ್ರವಲ್ಲ, ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಗೂ ಕೋಟ್ಯಂತರ ರು ಲಾಭ ನೀಡಿದ ಸಿನಿಮಾ ಕೆಜಿಎಫ್. ಕೆಜಿಎಫ್ ೩ ಮೂಲಕ ಈ ಯಶಸ್ಸಿನ ಯಾತ್ರೆಯನ್ನು ಹೊಂಬಾಳೆ ಫಿಲಂಸ್ ಮುಂದುವರಿಸಬಹುದು ಅಂತ ಜನ ಗೆಸ್ ಮಾಡುತ್ತಿರುವಾಗಲೇ ಯಶ್ ಸಿನಿಮಾ ನಿರ್ಮಾಣಕ್ಕಿಳಿಯುತ್ತಿರುವ ಸುದ್ದಿ ಬಂದಿದೆ.

ಯಶ್ ಕೆಜಿಎಫ್ ೨ ರಿಲೀಸ್‌ ಆಗಿ ಎಂಟು ತಿಂಗಳೇ ಆದರೂ ಯಶ್ ಯಾಕಿನ್ನೂ ಹೊಸ ಸಿನಿಮಾ ಅನೌನ್ಸ್ ಮಾಡ್ತಿಲ್ಲ ಅನ್ನೋದಕ್ಕೆ ಅವರು ನಿರ್ಮಾಣಕ್ಕೆ ಇಳಿಯುತ್ತಿರುವ ಸಂಗತಿ ಕಾರಣವಾ ಅನ್ನೋ ಮಾತು ಕೇಳಿ ಬರುತ್ತಿದೆ. ಕೆಜಿಎಫ್ ೩ ಮಾಡಲು ಇನ್ನೂ ಸಮಯವಿದೆ. ನಿರ್ದೇಶಕ ನರ್ತನ್ ಜೊತೆಗಿನ ಸಿನಿಮಾದ ಬಗ್ಗೆಯೂ ಯಶ್ ಕಮಕ್ ಕಿಮಕ್ ಅಂದಿಲ್ಲ. ಅವರು ಫೇಮಸ್ ತಮಿಳು ನಿರ್ದೇಶಕರ ಜೊತೆ ಸಿನಿಮಾ ಮಾಡ್ತಾರೆ, ಹಾಲಿವುಡ್ ರೇಂಜ್‌ನಲ್ಲಿ ಅವರ ಹೊಸ ಸಿನಿಮಾ ಬರ್ತಿದೆ ಅನ್ನೋ ಗಾಳಿ ಸುದ್ದಿಗಳು ರೆಕ್ಕೆ ಪುಕ್ಕ ಹಚ್ಚಿ ಹಾರಾಡುತ್ತಲೇ ಇವೆ. ಅದಕ್ಕೆ ಸರಿಯಾಗಿ ಯಶ್ ಹಾಲಿವುಡ್ ಡೈರೆಕ್ಟರ್, ರೇಸರ್‌ ಜೊತೆಗೆಲ್ಲ ಕಾಣಿಸಿಕೊಂಡಿದ್ದು ಕಾರಣ. ಜಸ್ಟ್ ಫೋಟೋಗಳು ಓಡಾಡಿದವೇ ಹೊರತು ಈ ಬಗ್ಗೆ ಖಚಿತ ಮಾಹಿತಿ ಏನೂ ಸಿಕ್ಕಿಲ್ಲ.

Kangana Ranaut: ಮತ್ತೊಂದು ತಮಿಳು ಚಿತ್ರದಲ್ಲಿ ಕಂಗನಾ: ಈ ಬಾರಿ ಚಂದ್ರಮುಖಿಯಾಗಿ ನಟಿ!

ಆದರೆ ಸದ್ಯಕ್ಕೀಗ ಯಶ್ ಯಾಕೆ ಸೈಲೆಂಟಾಗಿದ್ದಾರೆ(Silent) ಅನ್ನೋದಕ್ಕೆ ಉತ್ತರ ಸಿಕ್ಕಂತಾಗಿದೆ. ಅವರು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಲಿದ್ದು, ಆ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಅನ್ನೋ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಮಗಳು ಐರಾ ಹುಟ್ಟಿದ ಮೇಲೆ ಯಶ್‌ ಅವರ ಸಿನಿಮಾ ಗ್ರಾಫ್(Graph) ಊಹೆ ಮೀರಿ ಎತ್ತರೆತ್ತರಕ್ಕೆ ಏರುತ್ತಲೇ ಹೋಯ್ತು. ಮಗಳನ್ನು ಕಂಡರೆ ಸಿಕ್ಕಾಪಟ್ಟೆ ಪ್ರೀತಿ ಇರುವ ಯಶ್ ಇದೀಗ ತನ್ನ ಬದುಕಿಗೆ ಅದೃಷ್ಟ ತಂದ ಮಗಳ ಹೆಸರಿನಲ್ಲೇ ನಿರ್ಮಾಣ ಸಂಸ್ಥೆ ತೆರೆಯಲಿದ್ದಾರೆ ಎನ್ನಲಾಗುತ್ತಿದೆ. ಐರಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಯಶ್ ಹೊಸ ಸಿನಿಮಾ ನಿರ್ಮಾಣವಾಗಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಯಶ್‌ ಅವರಿಗೆ ತನ್ನದೇ ಒಂದು ಪ್ರೊಡಕ್ಷನ್ ಹೌಸ್(Production house) ತೆರೆಯಬೇಕೆಂಬ ಕನಸು ಬಹಳ ದಿನಗಳಿಂದ ಇದೆ. ಇದೀಗ ಕರೆಕ್ಟ್ ಟೈಮಲ್ಲೇ ಆ ಕನಸನ್ನು(Dream) ನನಸು ಮಾಡಲು ಯಶ್ ಮುಂದಾಗಿದ್ದಾರೆ. ಯಶ್ ಅವರ 19ನೇ ಸಿನಿಮಾ ಈ ಪ್ರೊಡಕ್ಷನ್‌ನಡಿಯೇ ಹೊರಬರಲಿದೆಯಾ ಅನ್ನೋದು ಪ್ರಶ್ನೆ. ಅದರ ಜೊತೆಗೆ ಯಶ್ ಅವರ ಈ ಚಿತ್ರವನ್ನು ಯಾರು ನಿರ್ದೇಶನ ಮಾಡ್ತಾರೆ ಅನ್ನೋದೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ.

ಫಿಫಾ ವರ್ಲ್ಡ್‌ಕಪ್‌ ಪ್ರದರ್ಶನದ ವೇಳೆ ಭಾರತದ ಧ್ವಜ ಎತ್ತಿ ಹಿಡಿದ ನೋರಾ ಫತೇಹಿ

Follow Us:
Download App:
  • android
  • ios