ಉಪೇಂದ್ರ ನಟನೆ, ನಿರ್ದೇಶನ UI ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿ!
ರಿಯಲ್ ಸ್ಟಾರ್‌ಗೆ ನಾಯಕಿಯಾದ ರೀಷ್ಮಾ ನಾಣಯ್ಯ. ಕುತೂಹಲ ಹೆಚ್ಚಿಸಿದೆ ಯುಐ ಕಥೆ...........

ಕನ್ನಡ ಚಿತ್ರರಂಗದ ಓನ್ಲಿ ರಿಯಲ್ ಸ್ಟಾರ್ ಅಂದ್ರೆ ಉಪೇಂದ್ರ, ವಿಭಿನ್ನ ಕಾನ್ಸೆಪ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಿನಿ ರಸಿಕರ ಗಮನ ಸೆಳೆದಿದ್ದಾರೆ.
ಉಪ್ಪಿ ನಿರ್ದೆಶನ ಮಾಡಬೇಕು ಎಂದು ಅಭಿಮಾನಿಗಳು ತುಂಬಾನೇ ಒತ್ತಾಯ ಮಾಡುತ್ತಿದ್ದರು ಹೀಗಾಗಿ ಯುಐ ಚಿತ್ರಕ್ಕೆ ನಟನೆ ಮಾತ್ರವಲ್ಲದೆ ನಿರ್ದೆಶನ ಕೂಡ ಮಾಡಲಿದ್ದಾರೆ.
ಉಪೇಂದ್ರ ನಟನೆ, ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಯುಐಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರೀಷ್ಮಾ ಮೂರನೇ ಸಿನಿಮಾ ಇದಾಗಲಿದೆ.
ಶ್ರೀಕಾಂತ್ ಕೆಪಿ, ಜಿ ಮನೋಹರನ್ ನಿರ್ಮಾಣದ ಈ ಬಹು ನಿರೀಕ್ಷಕತ ಚಿತ್ರದ ಚಿತ್ರೀಕರಣ ಸೆಟ್‌ಗಳಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ನಾಯಕಿ ಹೆಸರು ಘೋಷಣೆ ಆಗಿದೆ.
ಏಕ್ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರೀಷ್ಮಾ ಅವರಿಗೆ ದೊಡ್ಡ ಅವಕಾಶ ಈ ಮೂಲಕ ಸಿಕ್ಕಿದೆ. ಕೆಲವು ದಿನಗಳ ಹಿಂದೆ ಸ್ಫೂಕಿ ಕಾಲೇಜ್ ಚಿತ್ರದ ಸ್ಪೆಷಲ್ ಸಾಂಗ್ ಮೆಲ್ಲುಸಿರೆ ಸವಿಗಾನದಲ್ಲಿ ರೀಷ್ಮಾ ಡ್ಯಾನ್ಸ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.