ಆರ್. ಮಾಧವನ್ ‌21 ದಿನಗಳಲ್ಲಿ ತಮ್ಮ ತೂಕ ಇಳಿಸಿಕೊಂಡು ಫಿಟ್ ಆದದ್ದು ಒಂದು ಸೋಜಿಗದ ವಿಷಯ. ಜಿಮ್, ಶಸ್ತ್ರಚಿಕಿತ್ಸೆ ಅಥವಾ ಔಷಧಿಗಳಿಲ್ಲದೆ, ಆಹಾರ, ಶಿಸ್ತು ಮತ್ತು ಆರೋಗ್ಯಕರ ದಿನಚರಿಯ ಮೂಲಕ ಗುರಿ ಸಾಧಿಸಿದ ಬಗೆ ಇಲ್ಲಿದೆ.

ಈ ಜಗತ್ತು ಫಿಟ್‌ನೆಸ್‌ ಕಾಪಾಡಿಕೊಳ್ಳಲು ತೀವ್ರವಾದ ಜಿಮ್‌ ವರ್ಕೌಟ್‌‌, ಪ್ರೊಟೀನ್ ಸೇವನೆ ಇತ್ಯಾದಿಗಳ ಹಿಂದೆ ಬಿದ್ದಿದೆ. ಸಿಕ್ಸ್ ಪ್ಯಾಕ್ ಗೀಳು, ಕ್ರ್ಯಾಶ್ ಡಯಟ್‌ಗಳನ್ನು ಮಾಡುತ್ತಿದೆ. ಆದ್ರೆ ಲಕ್ಷಾಂತರ ಹೆಣ್ಣು ಮಕ್ಕಳ ಹೃದಯಸಾಮ್ರಾಟ ಆರ್. ಮಾಧವನ್ ಮಾತ್ರ ಅದ್ಯಾವುದೂ ಇಲ್ಲದೇ ತಮ್ಮ ತೂಕವನ್ನು 21 ದಿನಗಳಲ್ಲಿ ಎಷ್ಟು ಬೇಕೋ ಅಷ್ಟು ಇಳಿಸಿ ಮ್ಯಾಜಿಕ್ಕನ್ನೇ ಮಾಡಿದರು. ರೆಹನಾ ಹೈ ತೆರೆ ದಿಲ್ ಮೇ ಚಿತ್ರದ ಪಾತ್ರದಲ್ಲಿ ಮ್ಯಾಡಿ ಹೃದಯಗಳನ್ನು ಗೆದ್ದಿದ್ದರು. ಮತ್ತೆ ಅವರು ಅಲೆ ಸೃಷ್ಟಿಸಿದ್ದು ಈ ವಯಸ್ಸಿನಲ್ಲಿಯೂ ಫಿಟ್‌ನೆಸ್‌ ಮೂಲಕ. 2024ರಲ್ಲಿ ತಮ್ಮ ದೇಹದ ರೂಪಾಂತರದೊಂದಿಗೆ ಅಭಿಮಾನಿಗಳನ್ನು ಬೆರಗುಗೊಳಿಸಿದರು. ಅವರ ತೆಳ್ಳಗಿನ ರೂಪ ಪಡೆಯಲು ಅವರು ತೆಗೆದುಕೊಂಡದ್ದು ಕೇವಲ 21 ದಿನ. ಜಿಮ್ ಇಲ್ಲ. ಶಸ್ತ್ರಚಿಕಿತ್ಸೆ ಇಲ್ಲ. ಔಷಧಿ ಇಲ್ಲ. ಓಟವಿಲ್ಲ. ಕೇವಲ ಆಹಾರ, ಶಿಸ್ತು ಮತ್ತು ಪ್ರಚಾರಕ್ಕಿಂತ ಆರೋಗ್ಯಕ್ಕೆ ಆದ್ಯತೆ ನೀಡುವ ದೈನಂದಿನ ದಿನಚರಿ.

ಮಾಧವನ್‌ ತಮ್ಮ ರೂಪಾಂತರದ ಹಿಂದಿನ ರಹಸ್ಯವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅದು ಅಂದಿನಿಂದ ವೈರಲ್ ಆಗಿದೆ. ಅವರ ವಿಧಾನದ ವಿವರ ಇಲ್ಲಿದೆ:

1) ಮಧ್ಯಂತರ ಉಪವಾಸ

ಮಾಧವನ್ ಸಮಯ-ನಿರ್ಬಂಧಿತ ಆಹಾರ ವಿಧಾನ ಅನುಸರಿಸಿದರು. ಈ ಮಧ್ಯಂತರ ಉಪವಾಸ ತೂಕ ಇಳಿಸಲು ಸಹಾಯಕ. ಈ ವಿಧಾನದಲ್ಲಿ ನೀವು ನಿರ್ದಿಷ್ಟ ಸಮಯದಲ್ಲಿ ಮಾತ್ರ ತಿನ್ನಬಹುದು. ನಿರ್ದಿಷ್ಟ ಗಂಟೆಗಳ ಕಾಲ ಉಪವಾಸ ಮಾಡುವುದು ಅಥವಾ ಕೆಲವು ದಿನಗಳವರೆಗೆ ಒಂದೇ ಊಟವನ್ನು ಸೇವಿಸುವುದು. ಇದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

2) ಪ್ರತಿ ಸಲ 45–60 ಬಾರಿ ಅಗಿಯುವಿಕೆ

ಆಹಾರವನ್ನು ಸಂಪೂರ್ಣವಾಗಿ ಅಗಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಗರಿಷ್ಠ ಪೋಷಕಾಂಶ ಹೀರಿಕೊಳ್ಳುವಿಕೆಯನ್ನು ಖಚಿತಪಡಿಸುತ್ತದೆ. ಮಾಧವನ್ ಇದನ್ನು "ನಿಮ್ಮ ಆಹಾರವನ್ನು ಕುಡಿಯುವುದು ಮತ್ತು ನಿಮ್ಮ ನೀರನ್ನು ಅಗಿಯುವುದು" ಎಂದು ಕರೆಯುತ್ತಾರೆ.

3) ಬೆಳಗಿನ ಜಾವದ ದೀರ್ಘ ನಡಿಗೆ

ಹೆಚ್ಚಿನ ತೀವ್ರತೆಯ ವ್ಯಾಯಾಮಗಳಿಗಿಂತಲೂ ಮಾಧವನ್ ಕಡಿಮೆ ಚಲನೆಯ ವಾಕಿಂಗ್‌ ಆರಿಸಿಕೊಂಡರು. ಹೆಚ್ಚು ಕಾಲದ ನಡಿಗೆ ರಕ್ತ ಪರಿಚಲನೆಯನ್ನು ಸುಧಾರಿಸಲು, ಕ್ಯಾಲೊರಿಗಳನ್ನು ಸ್ಥಿರವಾಗಿ ಸುಡಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

4) ಮಧ್ಯಾಹ್ನ 3 ಗಂಟೆಯ ನಂತರ ಆಹಾರ ಇಲ್ಲ

ಮಧ್ಯಾಹ್ನದ ನಂತರ ಅವರು ಕಚ್ಚಾ ಆಹಾರ ಅಂದರೆ ಹಸಿರು ತರಕಾರಿ, ಹಣ್ಣುಗಳು ಅಥವಾ ಸಲಾಡ್‌ಗಳನ್ನು ತಪ್ಪಿಸಿದರು. ಉತ್ತಮ ಜೀರ್ಣಕ್ರಿಯೆಗಾಗಿ ಬೇಯಿಸಿದ ಊಟಕ್ಕೆ ಮಾತ್ರ ಬದ್ಧರಾಗಿದ್ದರು.

5) ಸಂಜೆ 6:45 ರ ಹೊತ್ತಿಗೆ ಕೊನೆಯ ಊಟ

ರಾತ್ರಿಯೂಟ ಬೇಗನೇ ಮುಗಿಸುವುದು ದೇಹವು ಮಲಗುವ ಮುನ್ನ ಆಹಾರವನ್ನು ಸಂಸ್ಕರಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ. ಉತ್ತಮ ಜೀರ್ಣಕ್ರಿಯೆ, ನಿದ್ರೆ ಮತ್ತು ಕೊಬ್ಬನ್ನು ಸುಡುವುದನ್ನು ಬೆಂಬಲಿಸುತ್ತದೆ. ಮತ್ತು ಮಾಧವನ್ ತಮ್ಮ ಕೊನೆಯ ಊಟವನ್ನು ಸಂಜೆ 7 ಗಂಟೆಯ ಮೊದಲು ಮಾಡುತ್ತಿದ್ದರು.

6) ನಿದ್ರೆಗೆ ಮೊದಲು ನೋ ಸ್ಕ್ರೀನ್‌ ಟೈಮ್‌

ಅವರು ಮಲಗುವ 90 ನಿಮಿಷಗಳ ಮೊದಲು ಎಲ್ಲಾ ಸ್ಕ್ರೀನ್‌ ಟೈಮ್‌ ಅನ್ನು ತಪ್ಪಿಸಿದರು, ನಿದ್ರೆಯ ಗುಣಮಟ್ಟವನ್ನು ಸುಧಾರಿಸಿದರು. ತೂಕ ಇಳಿಸುವ ಪ್ರಯಾಣದಲ್ಲಿ ಇದು ಹೆಚ್ಚಾಗಿ ಕಡೆಗಣಿಸಲ್ಪಡುವ ಪ್ರಮುಖ ಅಂಶ.

7) ಬಹಳಷ್ಟು ಲಿಕ್ವಿಡ್‌

ಹೆಚ್ಚು ನೀರು ಕುಡಿಯುವುದು, ಜಲೀಕರಣ ಅವರ ದಿನಚರಿಯ ಕೇಂದ್ರಬಿಂದುವಾಗಿತ್ತು. ದ್ರವ ಮೈಯಲ್ಲಿರುವ ವಿಷವನ್ನು ಹೊರಹಾಕಲು, ಜೀರ್ಣಕ್ರಿಯೆಯನ್ನು ಬೆಂಬಲಿಸಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಿನಿಮಾ ಬಿಡುಗಡೆ ತಯಾರಿ ನಡುವೆ ನಟ ವಿಜಯ್ ದೇವರಕೊಂಡ ಆಸ್ಪತ್ರೆಗೆ ದಾಖಲು

8) ಹಸಿರು ತರಕಾರಿಗಳು

ಅವರ ಊಟವು ಹಸಿರು ತರಕಾರಿಯಂಥ ಪೌಷ್ಟಿಕ-ಸಮೃದ್ಧ, ಸುಲಭವಾಗಿ ಜೀರ್ಣವಾಗುವ ಆಹಾರದ ಮೇಲೆ ಕೇಂದ್ರೀಕರಿಸಿದೆ. ಸಂಸ್ಕರಿಸಿದ ಯಾವುದೂ ಇರಲಿಲ್ಲ. ಕೃತಕವಾದದ್ದು ಮತ್ತು ಜಂಕ್ ಫುಡ್‌ ಇಲ್ಲವೇ ಇಲ್ಲ.

ಮಾಧವನ್‌ಗೆ ಈಗ 55 ವಯಸ್ಸು ಎಂದರೆ ನೀವು ನಂಬುತ್ತೀರೋ ಇಲ್ಲವೋ. ಅಷ್ಟು ಚಿಕ್ಕವರಾಗಿ ಕಾಣುತ್ತಾರೆ. ಈ ವಯಸ್ಸಿನಲ್ಲಿ ತಮ್ಮ ಯೌವನದ ನೋಟಕ್ಕೆ ಕಾರಣ ಅವರ ಸರಳ ಜೀವನಶೈಲಿ. ಸೌಂದರ್ಯವರ್ಧಕ ಚಿಕಿತ್ಸೆಗಳಲ್ಲ. ಅವರು ಮನಸ್ಸುಪೂರ್ವಕ ತಿನ್ನುವುದನ್ನು ಆನಂದಿಸುತ್ತಾರೆ - ಹಸಿವಾದಾಗ ಮಾತ್ರ ತಿನ್ನುವುದು. ಈ ಬದಲಾವಣೆಯು ಶುದ್ಧ ಅಭ್ಯಾಸಗಳೊಂದಿಗೆ ಸೇರಿ, ಅವರು ಫಿಟ್ ಆಗಿರಲು ಮತ್ತು ಹೆಚ್ಚು ತೊಡಕುಗಳಿಲ್ಲದೆ ಸುಂದರವಾಗಿ ವಯಸ್ಸಾಗಲು ಸಹಾಯ ಮಾಡಿದೆ.

ಪುನೀತ್ ಇದ್ದಾಗ್ಲೇ ನಾನು ಅವ್ರ ಬಗ್ಗೆ ತುಂಬಾ ಮಾತಾಡಿದೀನಿ; ಯಶ್ ಹೇಳಿಕೆ ಈಗ ಮತ್ತೆ ವೈರಲ್..!